ವರ್ಕ್ ಫ್ರಮ್ ಹೋಮ್ ಕ್ಯಾನ್ಸಲ್ ಮಾಡಿದ ಕಂಪನಿಗಳು; 10 ದಿನದಲ್ಲಿ 25 ಕೋಟಿ ಆದಾಯ ಕಂಡ ಬಿಎಂಆರ್​ಸಿಎಲ್

ಮಹಾಮಾರಿ ಕೊರೊನಾ ಸಮಯದಲ್ಲಿ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ನೀಡಲಾಗಿತ್ತು. ಸದ್ಯ ಈಗ ಅದು ಕ್ಯಾನ್ಸಲ್ ಮಾಡಲಾಗಿದ್ದು ಉದ್ಯೋಗಿಗಳು ಕಂಪನಿಗಳತ್ತ ಮುಖ ಮಾಡಿದ್ದಾರೆ. ಇದರಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು ಮೆಟ್ರೋ ಆದಾಯ ಕೂಡ ಹೆಚ್ಚಾಗಿದೆ.

ವರ್ಕ್ ಫ್ರಮ್ ಹೋಮ್ ಕ್ಯಾನ್ಸಲ್ ಮಾಡಿದ ಕಂಪನಿಗಳು; 10 ದಿನದಲ್ಲಿ 25 ಕೋಟಿ ಆದಾಯ ಕಂಡ ಬಿಎಂಆರ್​ಸಿಎಲ್
ನಮ್ಮ ಮೆಟ್ರೋ
Follow us
Kiran Surya
| Updated By: ಆಯೇಷಾ ಬಾನು

Updated on: Jul 16, 2024 | 9:26 AM

ಬೆಂಗಳೂರು, ಜುಲೈ.16: 2019ರ ಅಂತ್ಯದಲ್ಲಿ ಕಾಣಿಸಿಕೊಂಡಿದ್ದ ಮಹಾಮಾರಿ ಕೊರೊನಾ (Coronavirus) 2 ವರ್ಷಗಳ ಕಾಲ ಜನರ ಜೀವನವನ್ನೇ ಹಿಂಡಿ ಹಿಪ್ಪೆ ಮಾಡಿತ್ತು. ದೇಶದಲ್ಲಿ ಕೊರೊನಾ ಹೆಚ್ಚಾದ ಹಿನ್ನೆಲೆ ಐಟಿ,ಬಿಟಿ ಕಂಪನಿಗಳು ಸೇರಿದಂತೆ ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ (Work From Home) ನೀಡಿದ್ದವು. ಸದ್ಯ ಈಗ ಕೊರೊನಾ ಮಾಯವಾಗಿದ್ದು ಕಂಪನಿಗಳು ಉದ್ಯೋಗಿಗಳನ್ನು ಕಂಪನಿಗೆ ಕರೆಸಿಕೊಳ್ಳುತ್ತಿವೆ. ಈ ಪರಿಣಾಮ ಮೆಟ್ರೋ ರೈಲು ಸಂಚಾರಕ್ಕೆ ಭಾರೀ ಡಿಮ್ಯಾಂಡ್ ಎದುರಾಗಿದೆ. ಮೆಟ್ರೋ (Namma Metro) ರೈಲು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದೆ.

ವರ್ಕ್ ಫ್ರಮ್ ಹೋಮ್​ನಲ್ಲಿದ್ದ ಉದ್ಯೋಗಿಗಳು ಈಗ ತಮ್ಮ ತಮ್ಮ ಕಂಪನಿಗಳತ್ತ ಹೆಜ್ಜೆ ಹಾಕಿದ್ದಾರೆ. ಬಸ್ಸು, ಕಾರು, ಬೈಕ್ ಅಂತ ಹೋದ್ರೆ ಟ್ರಾಫಿಕ್ ಸಮಸ್ಯೆ ಎದುರಾಗುತ್ತೆ. ಕೆಲಸಕ್ಕೆ ಲೇಟ್ ಆಗುತ್ತೆ ಎಂದು ಟೆಕ್ಕಿಗಳು ಮೆಟ್ರೋನತ್ತ ಮುಖ ಮಾಡಿದ್ದಾರೆ. ಇದರ ಪರಿಣಾಮ ಐಟಿ ಕಂಪನಿಗಳಿರುವ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಡಬ್ಬಲ್ ಆಗಿದೆ. ಮೆಟ್ರೋದಲ್ಲಿ ದಾಖಲೆಯ ಪ್ರಮಾಣದಲ್ಲಿ ಪ್ರಯಾಣಿಕರು ಸಂಚರಿಸುತ್ತಿದ್ದಾರೆ.

ಕಳೆದ ಹತ್ತು ದಿನಗಳಿಂದ ಪ್ರತಿದಿನ ಎಂಟು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಮೆಟ್ರೋ ಮೂಲಕ ಓಡಾಡುತ್ತಿದ್ದಾರೆ. ಈ ಹಿಂದೆ ಪ್ರತಿದಿನ ಆರೂವರೆ ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಸದ್ಯ ಈಗ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು ಪ್ರತಿದಿನ ಎರಡು ಕೋಟಿ ರುಪಾಯಿಗೂ ಹೆಚ್ಚು ಕಲೆಕ್ಷನ್ ಆಗುತ್ತಿದೆ. 10 ದಿನಗಳಲ್ಲಿ ಮೆಟ್ರೋಗೆ ಬರೋಬ್ಬರಿ 25 ಕೋಟಿಯಷ್ಟು ಆದಾಯ ಹರಿದು ಬಂದಿದೆ. ಮೆಟ್ರೋ ರೈಲುಗಳಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿದ್ದಾರೆ.

ಇದನ್ನೂ ಓದಿ: ವಿಧಾನಮಂಡಲ ಕಲಾಪ: ವಿಧಾನಸೌಧದಲ್ಲಿ ಶಾಸಕರ ಹಾಜರಾತಿ ದಾಖಲು ಮಾಡುತ್ತೆ ಎಐ ಕ್ಯಾಮರಾ!

ಇನ್ನು ನೇರಳೆ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ ಹೆಚ್ಚುವರಿ ರೈಲುಗಳನ್ನು ಬಿಡಲಾಗಿದೆ. ನೇರಳೆ ಮಾರ್ಗದಲ್ಲಿ ಈ ಹಿಂದೆ ಪ್ರತಿದಿನ 9 ರೈಲುಗಳು ಸಂಚಾರ ಮಾಡುತ್ತಿದ್ದವು. ಕಳೆದ ಹತ್ತು ದಿನಗಳಿಂದ 15 ರೈಲುಗಳು ಸಂಚರಿಸುತ್ತಿವೆ. ಸದ್ಯ ಪ್ರತಿ ಮೂರುವರೆ ನಿಮಿಷಕ್ಕೆ ಒಂದು ‌ರೈಲು ಸಂಚಾರ ಮಾಡ್ತಿದೆ. ಚೆಲ್ಲಘಟ್ಟ ಟೂ ವೈಟ್ ಫೀಲ್ಡ್ (ನೇರಳೆ ಮಾರ್ಗದಲ್ಲಿ) ಮಾರ್ಗದಲ್ಲಿ ಹೆಚ್ಚಿನ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ.

ಕಂಪನಿಗಳು ವರ್ಕ್ ಫ್ರಮ್ ಹೋಮ್​ ಕ್ಯಾನ್ಸಲ್ ಮಾಡಿದ್ದು ಮೆಟ್ರೋ ಆದಾಯ ಹೆಚ್ಚಳಕ್ಕೆ ಕಾರಣ ಎನ್ನಲಾಗುತ್ತಿದೆ. ಈ ಹಿಂದೆ 6.5 ಲಕ್ಷ ಪ್ರಯಾಣಿಕರು ಪ್ರತಿ ದಿನ ಮೆಟ್ರೋದಲ್ಲಿ ಸಂಚರಿಸುತ್ತಿದ್ದರು. ಇದೀಗ ಪ್ರತಿ ದಿನ 8.11 ಲಕ್ಷ ಜನ ಓಡಾಡುತ್ತಿದ್ದಾರೆ. ಒಂದು ವಾರದ ಅಂತರದಲ್ಲಿ ಪ್ರಯಾಣಿಕರ ಓಡಾಟ ಹೆಚ್ಚಾಗಿದೆ. ಕೆಂಪೇಗೌಡ ಮೆಟ್ರೋ ಸ್ಟೇಷನ್ ನಲ್ಲಿ ಅತಿ ಹೆಚ್ಚು ಪ್ರಯಾಣಿಕರು ಸಂಚಾರ ಮಾಡುತ್ತಿದ್ದಾರೆ. ಐಟಿಪಿಎಲ್ ಮಾರ್ಗದಲ್ಲಿ ಟೆಕ್ಕಿಗಳ ಸಂಚಾರ ಏರಿಕೆಯಾಗಿದೆ. ವಿಶ್ವೇಶ್ವರಯ್ಯ ಮೆಟ್ರೋ ಸ್ಟೇಷನ್ ನಲ್ಲಿ ಪ್ರಯಾಣಿಕರ ಸಂಖ್ಯೆ ಡಬಲ್ ಆಗಿದೆ. ಹೀಗಾಗಿ ಬಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ ಹೊರಡುವ ಟ್ರೈನ್ 10 ನಿಮಿಷ ಮುಂಚಿತವಾಗಿ ಶುರುವಾಗಲಿದೆ. ಮಾರ್ನಿಂಗ್ ಪೀಕ್ ಅವರ್ ನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದ್ದು ಮೆಟ್ರೋ ರೈಲು ತುಂಬಿ ತುಳುಕುತ್ತಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ