ಎಸಿ ಹಾಕಿ ಎಂದಿದಕ್ಕೆ ಉಬರ್ ಕಾರು ಚಾಲಕನಿಂದ ಪ್ರಯಾಣಿಕನಿಗೆ ಬೆದರಿಕೆ; ಚಾಲಕನ ದರ್ಪಕ್ಕೆ ಪ್ರಯಾಣಿಕ ಬೇಸರ
ಉಬರ್ ಚಾಲಕ ಎಸಿ ಆನ್ ಮಾಡಲು ತಕರಾರು ಮಾಡಿದ್ದು ಪ್ರಯಾಣಿಕನಿಗೆ ಕನ್ನಡದಲ್ಲಿ ಮಾತನಾಡುವಂತೆ ಬೆದರಿಕೆ ಹಾಕಿದ್ದಾನೆ. ಘಟನೆ ಸಂಬಂಧ ಪ್ರಯಾಣಿಕ ಬೇಸರ ಹೊರ ಹಾಕಿದ್ದು ಕನ್ನಡ ಭಾಷೆ ಬರಲಿಲ್ಲವೆಂದರೆ ಬೆಂಗಳೂರಿನಲ್ಲಿ ಅವಮಾನ, ಬೆದರಿಕೆ ಹೆದರಿಸಬೇಕು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು, ಜುಲೈ.16: ಕಾರಿನ ಎಸಿ ಆನ್ ಮಾಡಲು ಹೇಳಿದಕ್ಕೆ ಉಬರ್ ಕಾರು (Uber Drivers) ಚಾಲಕ ಪ್ರಯಾಣಿಕನ ಮೇಲೆ ರೇಗಾಡಿದ್ದು ನನಗೆ ನಿನ್ನ ಪಿಕ್ ಅಪ್ ಲೊಕೇಷನ್ ತಿಳಿದಿದೆ ಎಂದು ಬಹಿರಂಗವಾಗಿ ಬೆದರಿಕೆ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಘಟನೆ ಸಂಬಂಧ ಪ್ರಯಾಣಿಕ Reddit ವೆಬ್ ಸೈಟ್ನಲ್ಲಿ ಆತಂಕ ವ್ಯಕ್ತಪಡಿಸಿ ಬರೆದುಕೊಂಡಿದ್ದಾರೆ. ಹಾಗೂ ಕನ್ನಡ ಭಾಷೆ ಬರದ ಕಾರಣ ಹೀಗೆಲ್ಲ ನಡೆದುಕೊಳ್ಳುವುದು ಎಷ್ಟು ಸರಿ ಎಂದು ಬೇಸರ ಹೊರ ಹಾಕಿದ್ದಾರೆ.
ನಾನು ಕಾರನ್ನು ಹತ್ತಿದ ನಂತರ ಧೂಳನ್ನು ತಪ್ಪಿಸಲು ಎಸಿ ಆನ್ ಮಾಡುವಂತೆ ಉಬರ್ ಚಾಲಕನಿಗೆ ಹೇಳಿದೆ. ಇದಕ್ಕೆ ಕನ್ನಡದಲ್ಲಿ ಉತ್ತರಿಸಿದ ಚಾಲಕ ಏಕೆ ಎಸಿ ಆನ್ ಮಾಡಬೇಕು? ನೀವು ಬೇಕಾದ್ರೆ ಬೇರೆ ರೈಡ್ ಬುಕ್ ಮಾಡಿ. ಈ ರೈಡನ್ನು ಕ್ಯಾನ್ಸಲ್ ಮಾಡಿ ಎಂದರು. ಅದಕ್ಕೆ ನಾನು ನಯವಾಗಿ, “ದಯವಿಟ್ಟು ನನ್ನನ್ನು ಇಲ್ಲೇ ಡ್ರಾಪ್ ಮಾಡಿ. ನಾನು ನಿಮ್ಮ ಕಾರಿನಲ್ಲಿ ಹೋಗಲು ಬಯಸುವುದಿಲ್ಲ ಎಂದೆ. ಇದಕ್ಕೆ ಕೋಪಗೊಂಡ ಚಾಲಕ ಏನನ್ನೂ ಹೇಳದೆ ಎಸಿ ಆನ್ ಮಾಡಿ ಚಾಕು ಚಲಾಯಿಸಲು ಆರಂಭಿಸಿದ.
Uber driver threatened me and told I know your pickup location byu/nerdy-oged inbangalore
ಇದನ್ನೂ ಓದಿ: ಹೇಗಿದೆ ನೋಡಿ ವಿಷ್ಣುವರ್ಧನ್ ಬಳಸುತ್ತಿದ್ದ ವಿಂಟೇಜ್ ಕಾರ್; ಈ ಮ್ಯೂಸಿಯಂಗೆ ಭೇಟಿ ನೀಡಲೇಬೇಕು
ಆದರೆ ಚಾಲಕ ಸರಿಯಾಗಿ ಕಾರು ಚಲಾಯಿಸುತ್ತಿರಲಿಲ್ಲ. ತುಂಬಾ ರ್ಯಾಷ್ ಆಗಿ, ಸಡನ್ ಬ್ರೇಕ್ಗಳನ್ನು ಹಾಕುತ್ತ, ಭಯ ಹುಟ್ಟಿಸುವಂತೆ ಕಾರಿಉ ಚಾಲನೆ ಮಾಡುತ್ತಿದ್ದ. ಇದರಿಂದ ನನಗೆ ಭಯವಾಗಿ ನಾನು ರೆಡ್ಡಿಟರ್ ಉಬರ್ ಸೇಫ್ಟಿಗೆ ಕರೆ ಮಾಡಲು ನಿರ್ಧರಿಸಿದೆ. ಅವರು ಸುರಕ್ಷಿತ ಸ್ಥಳದಲ್ಲಿ ಇಳಿಯಲು ಸಲಹೆ ನೀಡಿದರು. ಆದರೆ ಚಾಲಕ ಅಲ್ಲಿ ನಿಲ್ಲಿಸಲಿಲ್ಲ. “ಹೇಗೋ ಈ ಚಾಲಕನು ನಾನು ದೂರು ನೀಡಿದ್ದೇನೆ ಎಂದು ಅರ್ಥಮಾಡಿಕೊಂಡು. ಅವನು ನನ್ನ ಹೆಸರು ಮತ್ತು ವಸತಿ ವಿವರಗಳನ್ನು ಕಾಗದದ ಮೇಲೆ ಬರೆಸಿಕೊಂಡರು. ಮತ್ತು ನಿನ್ನ ಪಿಕ್-ಅಪ್ ಲೊಕೇಷನ್ ನನಗೆ ತಿಳಿದಿದೆ ಎಂದು ಸನ್ನೆ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಪ್ರಯಾಣಿಕ ತಿಳಿಸಿದ್ದಾರೆ.
ಕಾರು ಚಾಲಕ ನನಗೆ ಹೇಗೆ ಬಹಿರಂಗವಾಗಿ ಬೆದರಿಕೆ ಹಾಕಬಹುದು? ಚಾಲಕ ಕನ್ನಡದಲ್ಲಿ ಮಾತನಾಡುತ್ತಿದ್ದನು. ನಾನು ಹಿಂದಿ ಅಥವಾ ಇಂಗ್ಲಿಷ್ನಲ್ಲಿ ಮಾತನಾಡಿದರೆ ಕನ್ನಡದಲ್ಲೇ ಮಾತನಾಡಲು ಹೇಳುತ್ತಿದ್ದನು. “ಭಾಷೆ ಬರದಿದ್ದರೆ ನಮ್ಮನ್ನು ಇಲ್ಲಿ ಹೇಗೆ ನಡೆಸಿಕೊಳ್ಳುತ್ತಿದ್ದಾರೆಂದು ನನಗೆ ಬೇಸರವಾಗಿದೆ”. ನನಗೆ ತುಂಬಾ ಒಳ್ಳೆಯ ಕನ್ನಡ ಸ್ನೇಹಿತರಿದ್ದಾರೆ ಮತ್ತು ಭಾಷೆ ಬರೊಲ್ಲ ಎಂದು ಅವರು ಹೀಗೆ ನಡೆದಿಕೊಂಡಿಲ್ಲ. ಆದರೆ ಈ ಆಟೋ, ಟ್ಯಾಕ್ಸಿ ಚಾಲಕರು ಬೆಂಗಳೂರಿನ ಬಗ್ಗೆ ಅನ್ಯ ಊರಿನ ಜನರಿಗೆ ಭಯ ಹುಟ್ಟಿಸುವಂತೆ ಮಾಡುತ್ತಾರೆ ಎಂದು ಪ್ರಯಾಣಿಕ ಬೇಸರ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:10 am, Tue, 16 July 24