Shawarma: ಗೋಬಿ, ಕಬಾಬ್, ಪಾನಿಪುರಿಯಂತೆ ಶವರ್ಮಾದಲ್ಲೂ ಅಪಾಯಕಾರಿ ಬಾಕ್ಟೀರಿಯಾ ಪತ್ತೆ, ಬ್ಯಾನ್ಗೆ ಚಿಂತನೆ
ಆಹಾರ & ಗುಣಮಟ್ಟ ಇಲಾಖೆಯು ರಾಜ್ಯದ ವಿವಿಧೆಡೆಯಿಂದ ಶವರ್ಮಾ ಮಾದರಿ ಪರೀಕ್ಷೆ ನಡೆಸಿದ್ದು ಅದರಲ್ಲಿ ಬ್ಯಾಕ್ಟೀರಿಯಾ ಈಸ್ಟ್ ಪತ್ತೆಯಾಗಿದೆ. ಇದು ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. ಹೀಗಾಗಿ ಎಲ್ಲಾ ಶವರ್ಮಾ ಮಾರಾಟಗಾರರಿಗೆ FSSAI ನೋಂದಣಿ ಕಡ್ಡಾಯಗೊಳಿಸಲಾಗಿದೆ.
ಬೆಂಗಳೂರು, ಜೂನ್.30: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಡೆಸಿದ ಟೆಸ್ಟ್ನಲ್ಲಿ ಗೋಬಿ ಮಂಚೂರಿ (Gobi Manchuri), ಕಬಾಬ್ (Kabab), ಪಾನಿಪುರಿ (panipuri)ಯಲ್ಲಿ ಕ್ಯಾನ್ಸರ್ (Cancer) ಕಾರಕ ಅಂಶಗಳು ಪತ್ತೆಯಾಗಿದ್ದವು. ಇದೀಗ ಈ ಪಟ್ಟಿಯಲ್ಲಿ ಶವರ್ಮಾ (Shawarma) ಕೂಡ ಸೇರಿಕೊಂಡಿದೆ. ಗೋಬಿ, ಕಬಾಬ್, ಪಾನಿಪುರಿ ಬಳಿಕ ಶವರ್ಮಾಗೂ ಕಂಟಕ ಎದುರಾಗಿದೆ. ಶವರ್ಮಾ ಬ್ಯಾನ್ಗೆ ಆಹಾರ & ಗುಣಮಟ್ಟ ಇಲಾಖೆ (FASSAI) ಚಿಂತನೆ ನಡೆಸಿದೆ.
ಆರೋಗ್ಯದ ದೃಷ್ಟಿಯಿಂದ ಶವರ್ಮಾ ನಿಷೇಧಿಸಲು ಚಿಂತನೆ ನಡೆದಿದೆ. ಆಹಾರ & ಗುಣಮಟ್ಟ ಇಲಾಖೆಯು ರಾಜ್ಯದ ವಿವಿಧೆಡೆಯಿಂದ 17 ಶವರ್ಮಾ ಮಾದರಿ ಪರೀಕ್ಷೆ ನಡೆಸಿದ್ದು. 17ರ ಪೈಕಿ 8 ಮಾದರಿಯಲ್ಲಿ ಬ್ಯಾಕ್ಟೀರಿಯಾ ಈಸ್ಟ್ ಪತ್ತೆಯಾಗಿದೆ. ಸರಿಯಾದ ರೀತಿಯಲ್ಲಿ ಆಹಾರ ತಯಾರಿಸದ ಕಾರಣ ಬಾಕ್ಟೀರಿಯಾಗಳು ಪತ್ತೆಯಾಗಿವೆ. ಈಗಾಗಲೇ ಅಸುರಕ್ಷಿತ ಶವರ್ಮಾ ನೀಡಿರುವ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಶವರ್ಮಾ ಮಾರಾಟಗಾರರಿಗೆ FSSAI ನೋಂದಣಿ ಕಡ್ಡಾಯಗೊಳಿಸಲಾಗಿದೆ. ನೋಂದಣಿ ಪತ್ರ ಪ್ರದರ್ಶನ ಮಾಡದಿದ್ರೆ ಮಾರಾಟಕ್ಕೆ ಬ್ಯಾನ್ ಮಾಡುವ ಎಚ್ಚರಿಕೆ ನೀಡಲಾಗಿದೆ. ಶವರ್ಮಾ ತಯಾರಿಕೆ ವೇಳೆ ಶುಚಿತ್ವ ಕಾಪಾಡುವಂತೆ ಸೂಚನೆ ನೀಡಲಾಗಿದ್ದು ಶುಚಿತ್ವ ನಿರ್ವಹಣೆ, ನೋಂದಣಿ ಮಾಡಿಸದಿದ್ರೆ ಕ್ರಮದ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ: ಗೋಬಿ, ಕಬಾಬ್ ಬಳಿಕ ಪಾನಿಪುರಿಯಲ್ಲೂ ಕ್ಯಾನ್ಸರ್ ಕಾರಕ ಅಂಶ ಪತ್ತೆ! ಬ್ಯಾನ್ ಆಗುತ್ತಾ ಪಾನಿಪುರಿ?
ಕಬಾಬ್ ತಯಾರಿಕೆಯಲ್ಲಿ ಬಳಸಲಾಗುವ ಕೃತಕ ಬಣ್ಣದಲ್ಲಿ ಅಪಾಯಕಾರಿ ಅಂಶ ಪತ್ತೆಯಾದ ಹಿನ್ನೆಲೆ ಬಣ್ಣ ಬಳಸಬಾರದು ಎಂದು ಕರ್ನಾಟಕ ಆರೋಗ್ಯ ಇಲಾಖೆ ಇತ್ತೀಚಿಗೆ ಆದೇಶ ಹೊರಡಿಸಿದೆ. ಅಲ್ಲದೆ ಗೋಬಿ ಮಂಚೂರಿ, ಕಾಟನ್ ಕ್ಯಾಂಡಿಗೂ ಬಣ್ಣ ಬಳಸದಂತೆ ಸೂಚಿಸಿದೆ. ಅದರ ನಂತರ ಈಗ ಶವರ್ಮಾದಲ್ಲೂ ಆರೋಗ್ಯಕ್ಕೆ ಹಾನಿಯುಂಟುಮಾಡುವ ಅಂಶ ಇರುವುದು ಬಹಿರಂಗವಾಗಿದೆ. ಬೆಂಗಳೂರಿನ ಎಫ್‌ಎಸ್‌ಎಸ್‌ಎಐ ಪರೀಕ್ಷೆಯಲ್ಲಿ ಶವರ್ಮಾಗಳಲ್ಲಿ ಬ್ಯಾಕ್ಟೀರಿಯಾ ಮತ್ತು ಯೀಸ್ಟ್ ಅಂಶವಿರೋದು ಪತ್ತೆಯಾಗಿದೆ.
ಈ ಹಿಂದೆಯೂ ಶವರ್ಮಾ ಸೇವಿಸಿ ಮೃತಪಟ್ಟ ಹಾಗೂ ಆರೋಗ್ಯ ಹಾಳು ಮಾಡಿಕೊಂಡು ಆಸ್ಪತ್ರೆ ಸೇರಿರುವಂತಹ ಅದೇಷ್ಟೋ ಘಟನೆಗಳು ವರದಿ ಆಗಿವೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ