ಬಕ್ರೀದ್​​ ಹಬ್ಬ: ಬೆಂಗಳೂರಿನ ಈ ಮಾರ್ಗಗಳಲ್ಲಿ ನಾಳೆ ವಾಹನಗಳ ಸಂಚಾರ ತಾತ್ಕಾಲಿಕ ನಿಷೇಧ

ಬಕ್ರೀದ್ ಹಬ್ಬದ ಪ್ರಯುಕ್ತ ಜೂನ್ 7 ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಈ ಕಾರಣಕ್ಕಾಗಿ ಮೈಸೂರು ರಸ್ತೆಯಲ್ಲಿ ಬೆಳಿಗ್ಗೆ 8 ಗಂಟೆಯಿಂದ ಪ್ರಾರ್ಥನೆ ಮುಗಿಯುವವರೆಗೆ ತಾತ್ಕಾಲಿಕವಾಗಿ ಸಂಚಾರ ನಿರ್ಬಂಧಿಸಲಾಗಿದೆ. ವಾಹನಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಪರ್ಯಾಯ ಮಾರ್ಗಗಳು ಹೀಗಿವೆ.

ಬಕ್ರೀದ್​​ ಹಬ್ಬ: ಬೆಂಗಳೂರಿನ ಈ ಮಾರ್ಗಗಳಲ್ಲಿ ನಾಳೆ ವಾಹನಗಳ ಸಂಚಾರ ತಾತ್ಕಾಲಿಕ ನಿಷೇಧ
ಬಕ್ರೀದ್​​ ಹಬ್ಬ ಹಿನ್ನೆಲೆ ಸಂಚಾರ ಸಲಹೆ

Updated on: Jun 06, 2025 | 7:56 AM

ಬೆಂಗಳೂರು, ಜೂನ್​ 06: ‘ಬಕ್ರೀದ್’​​ (Bakrid) ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ಬಂದು. ಶನಿವಾರ (ಜೂನ್​ 07) ರಂದು ರಾಜ್ಯದೆಲ್ಲೆಡೆ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಅದ್ಧೂರಿಯಾಗಿ ಆಚರಿಸುತ್ತಾರೆ. ಹೀಗಾಗಿ ಪ್ರಾರ್ಥನೆ ಸಲ್ಲಿಸುವ ಮೂಲಕ ಹಬ್ಬ ಆಚರಣೆ ಹಿನ್ನೆಲೆ ಇತ್ತ ಚಾಮರಾಜಪೇಟೆ (Chamrajpet) 1ನೆ ಮುಖ್ಯರಸ್ತೆಯ ಬಿಬಿಎಂಪಿ ಆಟದ ಮೈದಾನ ಹಾಗೂ ಬಿಬಿ ಜಂಕ್ಷನ್​ನಲ್ಲಿ ಪ್ರಾರ್ಥನೆ ನಡೆಯುವುದರಿಂದ ಮೈಸೂರು ರಸ್ತೆಯ ಬಿಜಿಎಸ್​ ಪ್ಲೈಓವರ್ ಬೆಳಿಗ್ಗೆ 8:00 ಗಂಟೆಯಿಂದ ಪ್ರಾರ್ಥನೆ ಮುಗಿಯುವವರೆಗೆ ತಾತ್ಕಾಲಿಕವಾಗಿ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ಈ ಬಗ್ಗೆ ಚಾಮರಾಜಪೇಟೆ ಸಂಚಾರ ಪೊಲೀಸ್​​ ಠಾಣೆ ಟ್ವೀಟ್ ಮಾಡಿದ್ದು, ಪ್ರತಿ ವರ್ಷದಂತೆ ಬೆಂಗಳೂರು ನಗರದ ಚಾಮರಾಜಪೇಟೆ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಮೈಸೂರು ರಸ್ತೆಯ ಬಿ.ಬಿ ಜಂಕ್ಷನ್ ಹತ್ತಿರದ ಮಸೀದಿ ಮತ್ತು ಚಾಮರಾಜಪೇಟೆ 1ನೇ ಮುಖ್ಯ ರಸ್ತೆಯ 7ನೇ ಅಡ್ಡರಸ್ತೆ ಬಳಿಯ ಬಿಬಿಎಂಪಿ ಆಟದ ಮೈದಾನದಲ್ಲಿ ನಾಳೆ ಬಕ್ರೀದ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಲು ಅಪಾರ ಸಂಖ್ಯೆಯಲ್ಲಿ ಸೇರುವುದರಿಂದ ಮೈಸೂರು ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ, ಕೆಳಕಂಡಂತೆ ವಾಹನಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಇದನ್ನೂ ಓದಿ
ಕರ್ನಾಟಕದಾದ್ಯಂತ ಒಣಹವೆ, ಕೆಲವೇ ಕೆಲವು ಕಡೆ ಮಳೆ, ಜೂನ್ 10ರ ಬಳಿಕ ಹೆಚ್ಚಳ
ಎಡಿಜಿಪಿ ದರ್ಜೆ ಅಧಿಕಾರಿ ಸಸ್ಪೆಂಡ್, ಕರ್ನಾಟಕ ಪೊಲೀಸ್ ಇತಿಹಾಸದಲ್ಲೇ ಮೊದಲು
ಬೆಂಗಳೂರಿಗೆ ನೂತನ ಪೊಲೀಸ್​ ಕಮಿಷನರ್​ ಆಗಿ ಸೀಮಂತ್​ ಕುಮಾರ್ ಸಿಂಗ್ ನೇಮಕ
ತ್ಯಾಗದ ಪ್ರತೀಕವಾಗಿರುವ ಬಕ್ರೀದ್‌ ಹಬ್ಬ

ಚಾಮರಾಜಪೇಟೆ ಸಂಚಾರ ಪೊಲೀಸ್​​ ಠಾಣೆ ಟ್ವೀಟ್

ನಾಳೆ ಬೆಳಿಗ್ಗೆ 08 ಗಂಟೆಯಿಂದ ಪ್ರಾರ್ಥನೆ ಮುಗಿಯುವವರೆಗೆ ನಿಷೇಧ

  • ಮೈಸೂರು ರಸ್ತೆಯ ಟೋಲ್​ ಗೇಟ್ ಜಂಕ್ಷನ್​ನಿಂದ ಬಿಬಿ ಜಂಕ್ಷನ್ ಮೂಲಕ ಬಿಜಿಎಸ್ ಪ್ರೈಓವರ್ ಮೇಲ್ಬಾಗದಿಂದ ಟೌನ್‌ಹಾಲ್‌ವರೆಗೆ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

ಇದನ್ನೂ ಓದಿ: ಸಸ್ಪೆಂಡ್ ಮಾಡಿದ ಕೆಲವೇ ಗಂಟೆಗಳಲ್ಲಿ ಬೆಂಗಳೂರು ನಗರಕ್ಕೆ ಹೊಸ ಪೊಲೀಸ್ ಕಮಿಷನರ್ ನೇಮಕ

  • ಟೌನ್​​ಹಾಲ್ ಕಡೆಯಿಂದ ಮೈಸೂರು ಕಡೆಗೆ ಬಿಜಿಎಸ್ ಪ್ರೈಓವರ್ ಮೇಲ್ಬಾಗದಿಂದ ಬಿಬಿ ಜಂಕ್ಷನ್ ಮಾರ್ಗವಾಗಿ ಟೋಲ್‌ಗೇಟ್ ಜಂಕ್ಷನ್​ವರೆಗೆ ಎಲ್ಲಾ ಮಾದರಿಯ ವಾಹನಗಳ ಸಂಚಾರ ತಾತ್ಕಾಲಿಕವಾಗಿ ನಿಷೇಧ.

ಪರ್ಯಾಯ ಮಾರ್ಗಗಳು

  • ಮೈಸೂರು ಕಡೆಯಿಂದ ಟೌನ್ ಹಾಲ್ ಕಡೆಗೆ ಹೋಗುವ ವಾಹನಗಳು ಬ್ಯಾಟರಾಯನಪುರ ಸಂಚಾರ ರಾಣಾ ಸರಹದ್ದಿನ ಕಿಮ್ಕೋ ಜಂಕ್ಷನ್​ನಲ್ಲಿ ಎಡತಿರುವು ಪಡೆದುಕೊಂಡು ವಿಜಯನಗರ ಮೂಲಕ ಸಾಗಬಹುದಾಗಿದೆ.
  • ಟೌನ್​​ಹಾಲ್ ಕಡೆಯಿಂದ ಮೈಸೂರು ಕಡೆಗೆ ಹೋಗುವ ವಾಹನಗಳು ಬಿಜಿಎಸ್ ಪ್ರೈಓವ‌ರ್ ಕೆಳಗಡೆ ಸರ್ವಿಸ್ ರಸ್ತೆಯನ್ನು ಬಳಸಿಕೊಂಡು ಭಾರಿ ವಾಹನಗಳು ವೆಟರ್ನರಿ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಗೂ‌ಡ್​​ಶೆಡ್ ರಸ್ತೆ ಮೂಲಕ ಮತ್ತು ಲಘು ವಾಹನಗಳು ಸಿರಸಿ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದುಕೊಂಡು ಜಿಜಿ ನಗರ-ಟ್ಯಾಕ್​ಬಂಡ್​ ರಸ್ತೆ ಬಿನ್ನಿಮಿಲ್​ ಜಂಕ್ಷನ್​ ​ಹುಣಸೇಮರ ಮೂಲಕ ಸಾಗುವುದು.

ಇದನ್ನೂ ಓದಿ: Karnataka Rains: ಕರ್ನಾಟಕದಾದ್ಯಂತ ಒಣಹವೆ, ಕೆಲವೇ ಕೆಲವು ಕಡೆ ಮಳೆ, ಜೂನ್ 10ರ ಬಳಿಕ ಮಳೆ ಹೆಚ್ಚಳ

3) ಬಸವನಗುಡಿ ಮತ್ತು ಚಾಮರಾಜಪೇಟೆ ಕಡೆಯಿಂದ ಮೆಜೆಸ್ಟಿಕ್​​ ಕಡೆಗೆ ಹೋಗುವಂತಹ ವಾಹನಗಳು ಚಾಮರಾಜಪೇಟೆ 1ನೇ ಮುಖ್ಯರಸ್ತೆ, 6ನೇ ಅಡ್ಡ ರಸ್ತೆ ಮೂಲಕ ಮೈಸೂರು ರಸ್ತೆ, ಸಿರ್ಸಿ ಸರ್ಕಲ್​​, ಬಿನ್ನಿಮಿಲ್​​ ರಸ್ತೆಯ ಮೂಲಕ ಸಾಗುವುದು ಇದಕ್ಕೆ ಸಾರ್ವಜನಿಕರು ಸಂಚಾರ ಪೊಲೀಸರೊಂದಿಗೆ ಸಹಕರಿಸಲು ಕೋರಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:54 am, Fri, 6 June 25