Bangalore Air Pollution: ಬೆಂಗಳೂರಿನ ಗಾಳಿಯಮಟ್ಟ ಕಳಪೆ, ಉಸಿರಾಟದ ತೊಂದರೆ ಕಾಡುವುದು

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಆತಂಕಕಾರಿಯಾಗಿ ಹೆಚ್ಚಿದ್ದು, AQI 'ಅನಾರೋಗ್ಯಕರ' ಮಟ್ಟ ತಲುಪಿದೆ. ಒಣ ಹವೆ ಮತ್ತು ವಾಹನ ದಟ್ಟಣೆ ಇದಕ್ಕೆ ಪ್ರಮುಖ ಕಾರಣ. PM 2.5 ಕಣಗಳು ಅಪಾಯಕಾರಿ ಪ್ರಮಾಣದಲ್ಲಿವೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಉತ್ತಮ ಗುಣಮಟ್ಟವಿದೆ. ನಿವಾಸಿಗಳು ಮಾಸ್ಕ್ ಧರಿಸುವುದು, ಹೊರಾಂಗಣ ವ್ಯಾಯಾಮ ತಪ್ಪಿಸುವುದು ಉತ್ತಮ. ಉಳಿದ ಜಿಲ್ಲೆಗಳಲ್ಲಿ ಮಿಶ್ರ ಗುಣಮಟ್ಟ ಕಂಡುಬಂದಿದೆ.

Bangalore Air Pollution: ಬೆಂಗಳೂರಿನ ಗಾಳಿಯಮಟ್ಟ ಕಳಪೆ, ಉಸಿರಾಟದ ತೊಂದರೆ ಕಾಡುವುದು
ಸಾಂದರ್ಭಿಕ ಚಿತ್ರ
Edited By:

Updated on: Mar 02, 2026 | 7:30 AM

ಬೆಂಗಳೂರು, ಮಾ.2: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಾಯು ಮಾಲಿನ್ಯದ ಮಟ್ಟ ಆತಂಕಕಾರಿಯಾಗಿ ಏರಿಕೆಯಾಗಿದೆ. ಕಳೆದ ಕೆಲವು ದಿನಗಳಿಂದ ಒಣ ಹವೆ ಮತ್ತು ವಾಹನಗಳ ದಟ್ಟಣೆಯಿಂದಾಗಿ ಬೆಂಗಳೂರಿನ ಗಾಳಿಯ ಗುಣಮಟ್ಟ ‘ಅನಾರೋಗ್ಯಕರ’ (Unhealthy) ಹಂತಕ್ಕೆ ತಲುಪಿದೆ. ಆದರೆ, ಕರಾವಳಿ ಮತ್ತು ಮಲೆನಾಡಿನ ಕೆಲವು ಭಾಗಗಳಲ್ಲಿ ವಾಯು ಗುಣಮಟ್ಟವು ತಕ್ಕಮಟ್ಟಿಗೆ ಸುಧಾರಣೆ ಕಂಡಿದೆ. ಬೆಂಗಳೂರಿನ ಬಿಟಿಎಂ ಲೇಔಟ್, ಸಿಲ್ಕ್ ಬೋರ್ಡ್ ಮತ್ತು ಜಯನಗರ ಭಾಗಗಳಲ್ಲಿ AQI 160 ದಾಟಿದ್ದು, ಇದು ಶ್ವಾಸಕೋಶದ ಸಮಸ್ಯೆ ಇರುವವರಿಗೆ ಮತ್ತು ಮಕ್ಕಳಿಗೆ ಅಪಾಯಕಾರಿಯಾಗಿದೆ. ಅತಿಸೂಕ್ಷ್ಮ ಕಣಗಳಾದ PM 2.5 ಪ್ರಮಾಣವು ನಿಗದಿತ ಮಟ್ಟಕ್ಕಿಂತ ಹೆಚ್ಚಿರುವುದು ಕಂಡುಬಂದಿದೆ.

ಬೆಂಗಳೂರು ನಿವಾಸಿಗಳು ಬೆಳಿಗ್ಗೆ ಮತ್ತು ಸಂಜೆಯ ವೇಳೆ ಹೊರಗಡೆ ವ್ಯಾಯಾಮ ಮಾಡುವುದನ್ನು ತಪ್ಪಿಸಿ. ಹೊರಗೆ ಹೋಗುವಾಗ ಮಾಸ್ಕ್ ಧರಿಸುವುದು ಉತ್ತಮ. ಮೈಸೂರು ಮತ್ತು ಮಂಗಳೂರಿ ಭಾಗದಲ್ಲಿ ಗಾಳಿಯ ಗುಣಮಟ್ಟ ಸಾಧಾರಣವಾಗಿದ್ದು, ಹೊರಾಂಗಣ ಚಟುವಟಿಕೆಗಳಿಗೆ ಪೂರಕವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಗಾಳಿಯು ಅತ್ಯಂತ ಶುದ್ಧವಾಗಿದ್ದು (AQI 65), ‘ಉತ್ತಮ’ ಶ್ರೇಣಿಯಲ್ಲಿದೆ.

ಉಡುಪಿಯಲ್ಲಿ AQI 100ರ ಗಡಿ ದಾಟಿದ್ದು, ಅತಿ ಸೂಕ್ಷ್ಮ ವ್ಯಕ್ತಿಗಳಿಗೆ ಸ್ವಲ್ಪ ಮಟ್ಟಿನ ಉಸಿರಾಟದ ತೊಂದರೆ ಉಂಟಾಗುವ ಸಾಧ್ಯತೆ ಇದೆ.ಕಲಬುರ್ಗಿ, ವಿಜಯಪುರ ಮತ್ತು ಬೆಳಗಾವಿಯಲ್ಲಿ ಬಿಸಿಲು ಹೆಚ್ಚಿದ್ದರೂ ಗಾಳಿಯ ಗುಣಮಟ್ಟವು 100ಕ್ಕಿಂತ ಕೆಳಗಿರುವುದು ಸಮಾಧಾನಕರ ವಿಷಯವಾಗಿದೆ. ಧೂಳಿನ ಅಲರ್ಜಿ ಅಥವಾ ಉಸಿರಾಟದ ಸಮಸ್ಯೆ ಇರುವವರು ಮಧ್ಯಾಹ್ನದ ವೇಳೆ ರಸ್ತೆಬದಿಯ ಸಂಚಾರವನ್ನು ಕಡಿಮೆ ಮಾಡುವುದು ಒಳಿತು. ಗಾಳಿಯ ಗುಣಮಟ್ಟ ‘ತೃಪ್ತಿಕರ’ವಾಗಿದ್ದರೂ, ಮಾಸ್ಕ್ ಧರಿಸುವುದು ದೂಳಿನಿಂದ ರಕ್ಷಣೆ ನೀಡುತ್ತದೆ.

ಇದನ್ನೂ ಓದಿ: ರಾಜ್ಯದಲ್ಲಿ ಹೆಚ್ಚುತ್ತಿದೆ ಬೇಸಿಗೆ: ಮುಂದಿನ 7 ದಿನ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲು ಹೆಚ್ಚು

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

ಉತ್ತಮ- 0-50

ಮಧ್ಯಮ – 50-100

ಕಳಪೆ – 100-150

ಅನಾರೋಗ್ಯಕರ – 150-200

ಗಂಭೀರ – 200 – 300

ಅಪಾಯಕಾರಿ – 300 -500+

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us