ಬೆಂಗಳೂರಿನಲ್ಲಿ ಸಿಲಿಂಡರ್ ಕಳ್ಳತನ, ಇಬ್ಬರ ಬಂಧನ: ಮಾದರಿಯಾಗಿ ಬದುಕು ಎಂದ ಪೊಲೀಸರು, ಅದು ಬಿಟ್ಟು ಗೆಳಯನನ್ನೂ ಕಳ್ಳನನ್ನಾಗಿಸಿದ ಖದೀಮ!

ಜೈಲ್​ ರಿಟರ್ನ್ಡ್​​ ಲೋಕೇಶ್ ಈ ಹಿಂದೆ ಜೈಲಿಂದ ಹೊರ ಬಂದವನೆ ಮತ್ತದೇ ಕುಕೃತ್ಯದಲ್ಲಿ ತೊಡಗಿದ್ದ. ಜೊತೆಗೆ ಗೆಳೆಯ ಹೇಮಂತನನ್ನೂ ಸೇರಿಸಿಕೊಂಡಿದ್ದಾನೆ ಲೋಕೇಶ. ಬೈಕ್ ನಲ್ಲಿ ಬಂದು ಮತ್ತದೇ ಸಾಲು ಸಾಲು ಕುಕೃತ್ಯ ನಡೆಸುವುದನ್ನೇ ರೂಢೀ ಮಾಡಿಕೊಂಡಿದ್ದಾನೆ. ಸಿಸಿಟಿವಿ ಆಧರಿಸಿ ತನಿಖೆ ಕೈಗೊಂಡ ಪೊಲೀಸರು ಬೈಕ್ ನಂಬರ್ ನೋಡಿ, ಆರೋಪಿಗಳನ್ನು ಇದೀಗ ಲಾಕ್ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸಿಲಿಂಡರ್ ಕಳ್ಳತನ, ಇಬ್ಬರ ಬಂಧನ: ಮಾದರಿಯಾಗಿ ಬದುಕು ಎಂದ ಪೊಲೀಸರು, ಅದು ಬಿಟ್ಟು ಗೆಳಯನನ್ನೂ ಕಳ್ಳನನ್ನಾಗಿಸಿದ ಖದೀಮ!
ಬೆಂಗಳೂರಿನಲ್ಲಿ ಸಿಲಿಂಡರ್ ಕಳ್ಳತನ: ಬಂಧಿತ ಲೋಕೇಶ್ ಮತ್ತು ಹೇಮಂತ್
Follow us
Jagadisha B
| Updated By: ಸಾಧು ಶ್ರೀನಾಥ್​

Updated on: Aug 25, 2023 | 12:51 PM

ಬೆಂಗಳೂರಿನಲ್ಲಿ (Bangalore) ಸಿಲಿಂಡರ್ ಕಳ್ಳತನ (cylinder thief) ಮಾಡುತ್ತಿದ್ದ ಲೋಕೇಶ್ ಮತ್ತು ಹೇಮಂತ್ ಎಂಬಿಬ್ಬರನ್ನು ಗೊವಿಂದರಾಜನಗರ ಪೊಲೀಸರು (Govindaraja nagar police) ಅರೆಸ್ಟ್ ಮಾಡಿದ್ದಾರೆ. ಮನೆಗಳ ಹೊರಭಾಗದಲ್ಲಿ ಅಳವಡಿಸಿದ್ದ ಸಿಲಿಂಡರ್ ಗಳನ್ನ ಈ ಇಬ್ಬರೂ ಕದಿಯುತ್ತಿದ್ದರು. ಬೆಂಗಳೂರಿನ ಗೊವಿಂದರಾಜನಗರ, ರಾಜಾಜಿನಗರ, ಕಾಮಾಕ್ಷಿಪಾಳ್ಯ, ಮಾಗಡಿ ರಸ್ತೆ ಸೇರಿದಂತೆ ಹಲವು ಕಡೆ ಆರೋಪಿಗಳು ಕಳ್ಳತನ ಮಾಡಿದ್ದರು. ಪೊಲೀಸರು ಆರೋಪಿಗಳಿಂದ 20 ಸಿಲಿಂಡರ್​ಗಳು ವಶಪಡಿಸಿಕೊಂಡಿದ್ದಾರೆ. ಮೊದಲು ಬೈಕ್​ನಲ್ಲಿ ಬಂದು, ಏರಿಯಾಗಳಲ್ಲಿ ಆರೋಪಿಗಳು ಓಡಾಡ್ತಿದ್ದರು. ಕೊನೆಗೆ, ಬೈಕ್ ನಂಬರ್ ಆಧರಿಸಿ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಇನ್ನು ಬಂಧಿತರಲ್ಲಿ ಒಬ್ಬನಾದ ಲೋಕೇಶ್ ಈ ಹಿಂದೆ ಕಳ್ಳತನ ಕೇಸ್​ನಲ್ಲಿ ಜೈಲಿಗೆ ಹೋಗಿ ಬಂದಿದ್ದ. ಮುಂದೆ, ಸ್ನೇಹಿತ ಹೇಮಂತನನ್ನೂ ಜತೆ ಸೇರಿಕೊಂಡು ಮತ್ತೆ ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿದ್ದಾನೆ.

ಯಾರೂ ಇಲ್ಲದ ವೇಳೆ ಆರೋಪಿಗಳು ಸಿಲಿಂಡರ್ ಗಳ ಕದ್ದು ಎಸ್ಕೇಪ್ ಆಗುತಿದ್ದರು. ಈ ಬಗ್ಗೆ ಸಾಲು ಸಾಲಾಗಿ ದೂರುಗಳು ದಾಖಲಾಗಿದ್ದವು. ದೂರುಗಳು ಬಂದ ಹಿನ್ನೆಲೆ ಪೊಲೀಸರು ತನಿಖೆಗೆ ಇಳಿದಾಗ ಕಳ್ಳರ ಸಾಲು ಸಾಲು ಕೃತ್ಯ ಪತ್ತೆಯಾಗಿದೆ. ಸದ್ಯ ಇಬ್ಬರು ಆರೋಪಿಗಳ ಬಂಧಿಸಿ ೨೦ ಸಿಲಿಂಡರ್ ವಶಕ್ಕೆ ಪಡೆಯಲಾಗಿದೆ. ಗೊವಿಂದರಾಜನಗರ ಪೊಲೀಸರಿಂದ ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ಮಿಸ್​ ಮಾಡದೆ ನೋಡಿ! ಚಂದ್ರನ ಮೇಲೆ ಇಳಿಯೋಕು ಮುನ್ನ ವಿಕ್ರಮ್ ಲ್ಯಾಂಡರ್ ಸೆರೆಹಿಡಿದ್ದ ವಿಡಿಯೋ ರಿಲೀಸ್ ಮಾಡಿದ ಇಸ್ರೋ

ಈ ಹಿಂದೆ, ಏಕಾಂಗಿಯಾಗಿ ಕಳ್ಳತನ ನಡೆಸುತ್ತಿದ್ದ ಲೋಕೇಶನನ್ನು ಇದೇ ರೀತಿ ಸಿಲಿಂಡರ್ ಗಳ ಕಳ್ಳತನ ಮಾಡುತ್ತಿದ್ದಾಗ ಪೊಲೀಸರು ಬಂಧಿಸಿದ್ದರು. ಈ ವೇಳೆ ಇದೆಲ್ಲ ಬಿಟ್ಟು ಬದಲಾಗು ಎಂದು ಲೋಕೇಶನಿಗೆ ಪೊಲೀಸರು ಬುದ್ಧಿವಾದ ಹೇಳಿದ್ದರು. ಇತರರಿಗೆ ಮಾದರಿಯಾಗುವಂತೆ ಬದುಕು ಎಂದು ಪೊಲೀಸರು ಕಿವಿಮಾತು ಹೇಳಿದ್ದರು. ಆದರೆ ಸಿಲಿಂಡರ್ ಕದಿಯೋದೆ ಕಾಯಕ ಮಾಡಿಕೊಂಡಿದ್ದ ಲೋಕೇಶ ತಾನು ಬದಲಾಗೊದು ಬಿಟ್ಟು ಗೆಳಯನೊಬ್ಬನನ್ನೂ ( ಹೇಮಂತ್ ) ಕಳ್ಳನಾಗಿ ಬದಲಾಯಿಸಿದ್ದಾನೆ.

ಈ ಹಿಂದೆ ಜೈಲಿನಿಂದ ಹೊರ ಬಂದವ ಮತ್ತದೇ ಕುಕೃತ್ಯದಲ್ಲಿ ತೊಡಗಿದ್ದ. ಜೊತೆಗೆ ಗೆಳೆಯ ಹೇಮಂತನನ್ನೂ ಸೇರಿಸಿಕೊಂಡಿದ್ದಾನೆ ಲೋಕೇಶ. ಬೈಕ್ ನಲ್ಲಿ ಬಂದು ಮತ್ತದೇ ಸಾಲು ಸಾಲು ಕುಕೃತ್ಯ ನಡೆಸುವುದನ್ನೇ ರೂಢೀ ಮಾಡಿಕೊಂಡಿದ್ದಾನೆ. ಸಿಸಿಟಿವಿ ಆಧರಿಸಿ ತನಿಖೆ ಕೈಗೊಂಡ ಪೊಲೀಸರು ಬೈಕ್ ನಂಬರ್ ನೋಡಿ, ಆರೋಪಿಗಳನ್ನು ಇದೀಗ ಲಾಕ್ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ