ISKCON: ಗೀತಾ ದಾನ ಯಜ್ಞ ಕಾರ್ಯಕ್ರಮದ ಮೂಲಕ ಒಂದು ಲಕ್ಷ ಭಗವದ್ಗೀತೆ ಪ್ರತಿಗಳ ವಿತರಣೆ
ಗೀತಾ ದಾನ ಯಜ್ಞ ಕಾರ್ಯಕ್ರಮದ ಮೂಲಕ ಇಸ್ಕಾನ್ ಬೆಂಗಳೂರು ದೇವಾಲಯಗಳ ಸಮೂಹವು ಒಂದು ಲಕ್ಷ ಭಗವದ್ಗೀತೆಗಳನ್ನು ವಿತರಿಸುವ ಮಹತ್ತರವಾದ ಗುರಿಯನ್ನು ಹೊಂದಿದೆ.

ಬೆಂಗಳೂರು: ತಿಂಗಳ ಅವಧಿಯ ‘ಗೀತಾ ದಾನ ಯಜ್ಞ’ (Gita Daan Yagna) ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಡಿ.3ರಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಇಸ್ಕಾನ್ (ISKCON) ಬೆಂಗಳೂರು ದೇವಾಲಯಗಳ ಸಮೂಹ ಒಂದು ಲಕ್ಷ ಭಗವದ್ಗೀತೆ (Bhagavad Gita)ಗಳನ್ನು ವಿತರಿಸುವ ಗುರಿಯನ್ನು ಹೊಂದಿದೆ. ಈ ಅವಧಿಯಲ್ಲಿ ಭಗವದ್ಗೀತೆ ಆಧಾರಿತ ವಿಚಾರ ಸಂಕಿರಣಗಳು ಮತ್ತು ತಾತ್ವಿಕ ಚರ್ಚೆಗಳನ್ನೂ ಆಯೋಜಿಸಲಾಗುವುದು ಎಂದು ಇಸ್ಕಾನ್ ಬೆಂಗಳೂರು ಪ್ರಕಟಣೆಯಲ್ಲಿ ತಿಳಿಸಿದೆ.
ನಗರದ ವಸಂತಪುರದಲ್ಲಿರುವ ಇಸ್ಕಾನ್ (ಇಂಟರ್‌ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್‌ನೆಸ್) ಶ್ರೀ ರಾಜಾಧಿರಾಜ ಗೋವಿಂದ ದೇವಸ್ಥಾನದಲ್ಲಿ ಗೀತಾ ಜಯಂತಿಯ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಆರ್ ಅಶೋಕ ಮತ್ತು ಕೆ.ಸುಧಾಕರ್, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಹಲವರು ಉಪಸ್ಥಿತರಿರಲಿದ್ದಾರೆ.
ಇದನ್ನೂ ಓದಿ: Bangalore Power Cut: ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್, ಕೋರಮಂಗಲ ಮುಂತಾದೆಡೆ ಇನ್ನೆರಡು ದಿನ ಪವರ್ ಕಟ್
ದೇವಾಲಯದ ಸಂಕೀರ್ಣದಲ್ಲಿ ಮಕ್ಕಳು ಮತ್ತು ವಯಸ್ಕರ ವಿವಿಧ ಗುಂಪುಗಳಿಂದ ಗೀತೆಯ 700 ಶ್ಲೋಕಗಳನ್ನು ಪಠಿಸಲಾಗುತ್ತದೆ. ಖ್ಯಾತ ಭಕ್ತಿ ಗಾಯಕ ವಿದ್ಯಾಭೂಷಣ ಅವರಿಂದ ಭಗವದ್ಗೀತೆ ಪಠಣದ ಮಲ್ಟಿಮೀಡಿಯಾ ವೀಡಿಯೋ ಪ್ರಸ್ತುತಿ ಜೊತೆಗೆ ಆರು ಭಾಷೆಗಳಲ್ಲಿ ಅನುವಾದವನ್ನು ಬಿಡುಗಡೆ ಮಾಡಲಾಗುವುದು ಎಂದು ಇಸ್ಕಾನ್ ತಿಳಿಸಿದೆ. “ಭಗವದ್ಗೀತೆಯ ಸಂದೇಶವು ದೇಶ ಅಥವಾ ಧರ್ಮವನ್ನು ಲೆಕ್ಕಿಸದೆ ಎಲ್ಲರಿಗೂ ಸಾರ್ವತ್ರಿಕವಾಗಿ ಅನ್ವಯಿಸುತ್ತದೆ ಮತ್ತು ಭಾರತ ಮತ್ತು ವಿದೇಶಗಳಲ್ಲಿನ ಮಹಾನ್ ವ್ಯಕ್ತಿಗಳಿಂದ ಹೆಚ್ಚು ಮೆಚ್ಚುಗೆ ಪಡೆದಿದೆ” ಎಂದು ಹೇಳಿಕೆಯಲ್ಲಿ ತಿಳಿಸಿದೆ
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:15 pm, Tue, 29 November 22




