AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bangalore Power Cut: ಬೆಂಗಳೂರಿನ ಹೆಚ್​ಎಸ್​ಆರ್​ ಲೇಔಟ್, ಕೋರಮಂಗಲ ಮುಂತಾದೆಡೆ ಇನ್ನೆರಡು ದಿನ ಪವರ್ ಕಟ್

ಇಂದು ಬೆಳಿಗ್ಗೆ 10ರಿಂದ ಸಂಜೆ 4ರ ನಡುವೆ ಬೆಂಗಳೂರಿನ ಬಹುತೇಕ ಏರಿಯಾಗಳಲ್ಲಿ ಪವರ್ ಕಟ್ ಇರಲಿದೆ. ಇಂದು HSR ಲೇಔಟ್, ಕೋರಮಂಗಲ, ಯಲಹಂಕ ಹೊಸ ಪಟ್ಟಣದಲ್ಲಿ ಪವರ್ ಕಟ್ ಇರಲಿದೆ.

Bangalore Power Cut: ಬೆಂಗಳೂರಿನ ಹೆಚ್​ಎಸ್​ಆರ್​ ಲೇಔಟ್, ಕೋರಮಂಗಲ ಮುಂತಾದೆಡೆ ಇನ್ನೆರಡು ದಿನ ಪವರ್ ಕಟ್
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Nov 29, 2022 | 12:30 PM

Share

ಬೆಂಗಳೂರು: ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಇಂದು (ಮಂಗಳವಾರ) ಮತ್ತು ಬುಧವಾರ ವಿದ್ಯುತ್ ಕಡಿತ (Power Cut) ಉಂಟಾಗಲಿದೆ. ಕಳೆದೊಂದು ವಾರದಿಂದ ಬೆಂಗಳೂರಿನ ಹಲವೆಡೆ ವಿದ್ಯುತ್ ವ್ಯತ್ಯಯವಾಗುತ್ತಲೇ ಇದೆ. ಇನ್ನೆರಡು ದಿನ ಪೈಪ್ ಹಾಕುವುದು, ಜಲಶ್ರೀ ನೀರು ಸರಬರಾಜು ಕೆಲಸ, ಇಂಟರ್‌ಲಿಂಕಿಂಗ್, ತ್ರೈಮಾಸಿಕ ನಿರ್ವಹಣೆ ಕೆಲಸಗಳಿಂದಾಗಿ ಪವರ್ ಕಟ್ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ತಿಳಿಸಿದೆ.

ಇಂದು ಬೆಳಿಗ್ಗೆ 10ರಿಂದ ಸಂಜೆ 4ರ ನಡುವೆ ಬೆಂಗಳೂರಿನ ಬಹುತೇಕ ಏರಿಯಾಗಳಲ್ಲಿ ಪವರ್ ಕಟ್ ಇರಲಿದೆ. ಇಂದು (ಮಂಗಳವಾರ) HSR ಲೇಔಟ್, ಕೋರಮಂಗಲ, ಯಲಹಂಕ ಹೊಸ ಪಟ್ಟಣದಲ್ಲಿ ಪವರ್ ಕಟ್ ಇರಲಿದೆ.

ಹಾಗೇ, ಎಸ್ ಎಸ್ ಲೇಔಟ್ ಎ ಬ್ಲಾಕ್, ಗ್ಲಾಸ್ ಹೌಸ್ ಏರಿಯಾ, ಬಟ್ಟಲಿ ಕಟ್ಟಡ, ಮಹಾನಂದಿ ಪೆಟ್ರೋಲ್ ಬಂಕ್ ಮತ್ತು ಸುತ್ತಮುತ್ತ, ಎವಿಕೆ ಕಾಲೇಜು ರಸ್ತೆ, ಕೋರ್ಟ್ ರಸ್ತೆ, ರತ್ನಮ್ಮ ಹೊಸೆಲ್, ಮುಸ್ಲಿಂ ಕಾಂಪ್ಲೆಕ್ಸ್, ಹಳೆಯ ಬಸ್ ನಿಲ್ದಾಣ, ಮಹಿಳಾ ಕಾಂಪ್ಲೆಕ್ಸ್, ಬಿಗ್ ಬಜಾರ್, ಜಾಯ್ ಅಲ್ಲುಕಾಸ್, ಮಹಾನಗರಪಾಲಿಕೆ, ಪೌಂಡ್ ವಿಭಾಗ, ಪಂಚಾಯತ್ ರಾಜ್, ಶಾಂತಿ ಕಂಫರ್ಟ್ಸ್, ಪಿಜೆ ವಿಸ್ತರಣೆ 1 ನೇ 2 ನೇ ಮುಖ್ಯ, ರಾಮ್ & ಕೋ ಸರ್ಕಲ್, ಪೊಲೀಸ್ ಕ್ವಾರ್ಟರ್ಸ್ ಎಂಎಸ್ ಬಿಲ್ಡಿಂಗ್, ಅರುಣಾ ಥಿಯೇಟರ್, ಪಶು ಆಸ್ಪತ್ರೆ, ಸಿತಾರಾ ಹೋಟೆಲ್, ಪಿಸಾಲೆ ಕಾಂಪೌಂಡ್ ಪ್ರದೇಶಗಳು, ಗುಂಡಿ ಚೌಟ್ರಿ ​​ಪಕ್ಕದ ರಸ್ತೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು, ಬೆಳ್ಳಂದೂರು, ಆರ್​ಎಂಜೆ, ದೇವರಬೀಸನಹಳ್ಳಿ, ಕರಿಯಮ್ಮನಪಾಳ್ಯ, ಟೋಟಲ್ ಮಾಲ್, ಶೋಭಾ ಐರಿಸ್, ಅಲ್ಲಿಮಾರನಹಳ್ಳಿ, ಚಿಕ್ಕೇನಹಳ್ಳಿ ಸ/ರು ಮತ್ತು ಸುತ್ತಮುತ್ತಲಿನ ಗ್ರಾಮಗಳು, ಮಲ್ಲಘಟ್ಟ, ಚೆಂಡೂರು, ಕಲ್ಕೆರೆ, ಲೊಕ್ಕಮ್ಮನಹಳ್ಳಿ, ತೊರೆಮಾವ್ನಹಳ್ಳಿ, ಹುಲಿಕೆರೆ, ಗೊಟ್ಟಿಕೆರೆ, ಕಲ್ಲಂಕೆರೆ, ಗೋಣಿ ತುಮಕೂರು ಮತ್ತು ತಾವರೆಕೆರೆ ಭಾಗಗಳಲ್ಲಿ ವಿದ್ಯುತ್ ಕಡಿತವಾಗಲಿದೆ.

ಇದನ್ನೂ ಓದಿ: Bengaluru Power Cut: ಬೆಂಗಳೂರಿನ ಈ ಏರಿಯಾಗಳಲ್ಲಿ ಇಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಪವರ್ ಕಟ್

ಬುಧವಾರ ಕನಕಪುರ, HSR ಲೇಔಟ್​ನಲ್ಲಿ ಪವರ್ ಕಟ್ ಇರಲಿದೆ. ಹಾಗೇ, ಎಸ್ ಎಸ್ ಲೇಔಟ್ ಎ ಬ್ಲಾಕ್, ಎಂಬಿಎ ಕಾಲೇಜು ರಸ್ತೆ, ಅಥಣಿ ಕಾಲೇಜು, ಆಫೀಸರ್ಸ್ ಕ್ಲಬ್ ಮತ್ತು ಬಸವನಗುಡಿ ದೇವಸ್ಥಾನ ಸುತ್ತಮುತ್ತಲಿನ ಪ್ರದೇಶಗಳು, ಸೋಮನಹಳ್ಳಿ ಮತ್ತು ಟಿ.ಕೆ.ಹಳ್ಳಿಯ ಕೆಲವು ಪ್ರದೇಶಗಳು, ವಿಶ್ವಪ್ರಿಯ ಲೇಔಟ್, ಬೇಗೂರು ಕೊಪ್ಪ ರಸ್ತೆ, ದೇವರಚಿಕ್ಕನಹಳ್ಳಿ, ಅಕ್ಷಯನಗರ, ದಕ್ಷಿಣದ ಪ್ರತಿಷ್ಠಿತ ಹಾಡು, ತೇಜಸ್ವಿನಿ ನಗರ. ಅಪಾರ್ಟ್ಮೆಂಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.

ಇನ್ನಷ್ಟು ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:58 am, Tue, 29 November 22

ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ