Bangalore, Karnataka News Highlights: ಅಧಿಕಾರಕ್ಕೆ ಬಂದು 4 ವರ್ಷ ಆಯ್ತು, ಏನಾದ್ರು ಸಹಾಯ ಮಾಡಿದ್ದೀರಾ? ನಿರಾಣಿಗೆ ಪ್ರಶ್ನೆ ಮಾಡಿದ ಸಿದ್ಧರಾಮಯ್ಯ
Karnataka Assembly Elections 2023 Highlights News Updates: ಇಂದು ಬಾಗಲಕೋಟೆ ಜಿಲ್ಲೆ ಬೀಳಗಿ ವಿಧಾನಸಭಾ ಕ್ಷೇತ್ರದ ಕಲಾದಗಿಯಲ್ಲಿ ಹಾಗೂ ಮೈಸೂರಿನಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶ ನಡೆಯಲಿದೆ. ಹಾಗೂ ಮತ್ತೊಂದೆಡೆ ಇಂದು ಸಂಜೆ 7 ಗಂಟೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ವಿದಾನಸಭೆ ಎಲೆಕ್ಷನ್ಗೆ ಕೆಲ ತಿಂಗಳುಗಳು ಬಾಕಿ ಇವೆ. ಇಂತಹ ಹೊತ್ತಲ್ಲಿ ಮತದಾರರನ್ನು ಸೆಲೆಯಲು ನಾನಾ ತಯಾರಿಗಳು ನಡೆಯುತ್ತಿವೆ. ಬಜೆಪಿ ಕೇಂದ್ರ ನಾಯಕರು ಆಗಾಗ ರಾಜ್ಯದ ಮೇಲೆ ದಂಡೆತ್ತಿ ಬರುತ್ತಿದ್ದಾರೆ. ಅಲ್ಲದೆ ಪೇಸಿಎಂ ಪೋಸ್ಟರ್ ಮೂಲಕ ಬಿಜೆಪಿಗೆ ಟಾಂಗ್ ಕೊಟ್ಟು ನಕ್ಕಿದ್ದ ಕಾಂಗ್ರೆಸ್ ವಿಶ್ವ ಪ್ರೇಮಿಗಳ ದಿನ ಟ್ವೀಟ್ ಮೂಲಕ ಮತ್ತೊಮ್ಮೆ ಟಾಂಗ್ ಕೊಟ್ಟಿತ್ತು. ಬಿಜೆಪಿ ಕಾಂಗ್ರೆಸ್ ನಡುವೆಯೂ ವ್ಯಾಲೆಂಟೈನ್ಸ್ ಡೇ ದಿನ ಲವ್ ಮೆಸೇಜ್ಗಳು ಹಂಚಿಕೆಯಾಗಿವೆ. ಸಿಎಂ ಬೊಮ್ಮಾಯಿ ಚಿತ್ರವಿರುವ ಪೋಸ್ಟರ್ ಮೇಲೆ ಬಿಜೆಪಿಗರು ಶುದ್ಧ 40% ಪ್ರೇಮಿಗಳು, 40% ಕಮಿಷನ್ ಮೇಲಿನ ಅವರ ಪ್ರೀತಿ ರೋಮಿಯೋ ಜ್ಯುಲಿಯೆಟ್ ಪ್ರೀತಿಗಿಂತಲೂ ಉತ್ಕಟವಾದುದು, ಪ್ರಿಯಕರನ ಕನಸು, ಮನಸಲ್ಲೂ ಪ್ರಿಯತಮೆ ಕಾಣುವಂತೆ, ಬಿಜೆಪಿಗರ ಕನಸು ಮನಸ್ಸಿನಲ್ಲೂ 40 ಪರ್ಸೆಂಟಿನದ್ದೇ ಧ್ಯಾನ ಅಂತಾ ಕಾಂಗ್ರೆಸ್ ಟ್ವೀಟ್ ಮೂಲಕ ಟಾಂಗ್ ಕೊಟ್ಟಿತ್ತು. ಸದ್ಯ ಸದಾಶಿವನಗರದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿವಾಸದಲ್ಲಿ ಬೆಳಗ್ಗೆ 8.30ಕ್ಕೆ ತುರ್ತು ಸುದ್ದಿಗೋಷ್ಠಿ ಕರೆಯಲಾಗಿದೆ. ಹಾಗೂ ಇಂದು ಬಾಗಲಕೋಟೆ ಜಿಲ್ಲೆ ಬೀಳಗಿ ವಿಧಾನಸಭಾ ಕ್ಷೇತ್ರದ ಕಲಾದಗಿಯಲ್ಲಿ ಹಾಗೂ ಮೈಸೂರಿನಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶ ನಡೆಯಲಿದೆ. ಹಾಗೂ ಮತ್ತೊಂದೆಡೆ ಇಂದು ಸಂಜೆ 7 ಗಂಟೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಹಮ್ಮಿಕೊಳ್ಳಲಾಗಿದೆ. ರಾಜಕೀಯ ವಲಯದಲ್ಲಾಗುತ್ತಿರುವ ಕ್ಷಣ ಕ್ಷಣದ ಮಾಹಿತಿ ಇಲ್ಲಿ ಪಡೆಯಿರಿ.
LIVE NEWS & UPDATES
-
Bangalore, Karnataka News Live: ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿ ಎಂದ ಸಿದ್ಧರಾಮಯ್ಯ
ಬಾಗಲಕೋಟೆ: ರಾಜ್ಯದಲ್ಲಿ ಪ್ರವಾಹ, ಕೊರೊನಾ ವೇಳೆ ಪ್ರಧಾನಿ ಮೋದಿ ಬರಲಿಲ್ಲ. ಚುನಾವಣೆ ಹಿನ್ನೆಲೆ ಈಗ ಮೇಲಿಂದ ಮೇಲೆ ಮೋದಿ ಬರುತ್ತಿದ್ದಾರೆ. ಉದ್ಯಮಿಗಳಾದ ಅಂಬಾನಿ, ಅದಾನಿಯ ಕೋಟಿ ಕೋಟಿ ಸಾಲವನ್ನು ಪ್ರಧಾನಿ ಮೋದಿ ಮನ್ನಾ ಮಾಡಿದ್ದಾರೆ. ಬಿಜೆಪಿಯವರು ಅಂಬಾನಿ, ಅದಾನಿಯಿಂದಲೇ ಮತ ಹಾಕಿಸಿಕೊಳ್ಳಲಿ. ನೀವು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿ ಎಂದು ಸಿದ್ದರಾಮಯ್ಯ ಹೇಳಿದರು.
-
Bangalore, Karnataka News Live: ಐದು ಕಾರ್ಯಕ್ರಮಗಳ ಪ್ರಗತಿ ಮಾಹಿತಿ ಪಡೆದ ಬಿ.ಎಲ್.ಸಂತೋಷ್
ಬೆಂಗಳೂರು: ರಾಜಭವನ ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಐದು ಕಾರ್ಯಕ್ರಮಗಳ ಪ್ರಗತಿ ಮಾಹಿತಿಯನ್ನು ಬಿ.ಎಲ್.ಸಂತೋಷ್ ಪಡೆದುಕೊಂಡರು. ಮೋರ್ಚಾ ಸಮಾವೇಶ, ರಥಯಾತ್ರೆ, ಎಲ್‌ಇಡಿ ವಾಹನ, ಪ್ರಣಾಳಿಕೆ ಮಾಹಿತಿ ಸಂಗ್ರಹ, ಫಲಾನುಭವಿಗಳ ಸಮಾವೇಶದ ಬಗ್ಗೆ ಮಾಹಿತಿ ಪಡೆಯಲಾಗಿದೆ.
-
Bangalore, Karnataka News Live: ಸಚಿವ ನಿರಾಣಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಬಾಗಲಕೋಟೆ: ಕಬ್ಬಿನ ತೂಕದಲ್ಲಿ ಮೋಸಮಾಡಿ ಸಚಿವ ನಿರಾಣಿ ಲೂಟಿ ಹೊಡೆದಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು. ಜಿಲ್ಲೆಯ ಕಲಾದಗಿಯಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿ, ಲೂಟಿ ಹೊಡೆದ ಹಣದಲ್ಲಿ ಮತದಾರರಿಗೆ 5 ಕೆಜಿ ಸಕ್ಕರೆ ಕೊಡ್ತಿದ್ದಾರೆ. ಈ ಮೂಲಕ ನಿರಾಣಿ ಮತ ಪಡೆಯುವ ಕೆಟ್ಟ ಪ್ರಯತ್ನ ಮಾಡುತ್ತಿದ್ದಾರೆ. ಸೋಲುವುದು ಗೊತ್ತಾಗಿ ಮತದಾರರಿಗೆ ಆಮಿಷವೊಡ್ಡುತ್ತಿದ್ದಾರೆ. ಅಧಿಕಾರಕ್ಕೆ ಬಂದು 4 ವರ್ಷ ಆಯ್ತು, ಏನಾದ್ರು ಸಹಾಯ ಮಾಡಿದ್ದೀರಾ ಎಂದು ಪ್ರಶ್ನಿಸಿದರು.
Bangalore, Karnataka News Live: ಬಿಪಿಎಲ್ ಕಾರ್ಡ್ ಇನ್ನೂ ಕೂಡ ಕೊಡುತ್ತಿಲ್ಲ: ಯು.ಟಿ. ಖಾದರ್
ಬೆಂಗಳೂರು: ಕಾಂಗ್ರೆಸ್ 7 ಕೆಜಿ ಅಕ್ಕಿ ಕೊಡುತ್ತಿದ್ದಿದ್ದನ್ನು 5 ಕೆಜಿಗೆ ತಂದು ನಿಲ್ಲಿಸಿದ್ದಾರೆ. ಸರಿಯಾದ ಟೈಮ್ನಲ್ಲಿ ಅಕ್ಕಿ ಕೂಡ ಬರಲ್ಲ, ಕ್ವಾಲಿಟಿ ನೋಡಲ್ಲ. ಬಿಪಿಎಲ್ ಕಾರ್ಡ್ ಇನ್ನೂ ಕೂಡ ಕೊಡುತ್ತಿಲ್ಲ. ಆಸ್ಪತ್ರೆಗೆ ಬಿಪಿಎಲ್ ಕಾರ್ಡ್ ಕಡ್ಡಾಯ ಮಾಡಿದರು ಕಾರ್ಡ್ ಇಲ್ಲದವರು ಎಲ್ಲಿಗೆ ಹೋಗಬೇಕು? ಆಸ್ಪತ್ರೆಯ ಬಿಲ್ ಕಟ್ಟೋದು ಎಲ್ಲಿಂದ? ಕರಾವಳಿಯಲ್ಲಿ ಇದುವರೆಗೂ ಕುಚ್ಚಲಕ್ಕಿ ಕೊಡುತ್ತಿಲ್ಲ ಎಂದು ಯು.ಟಿ. ಖಾದರ್ ಪ್ರಶ್ನಿಸಿದರು.
Bangalore, Karnataka News Live: ವಿಧಾನಸಭೆಯಲ್ಲಿ ಚರ್ಚೆ ಮುಂದುವರಿಸಿದ ಯು.ಟಿ.ಖಾದರ್
ಬೆಂಗಳೂರು: ಯುನಿವರ್ಸಿಟಿಯಲ್ಲಿ ಮಕ್ಕಳಿಗೆ ಮಾರ್ಕ್ಸ್ ಕಾರ್ಡ್ ಸಿಗಲ್ಲ. ಜನ ಸಾಮಾನ್ಯರಿಗೆ ಒಂದು ಬಿಪಿಎಲ್ ಕಾರ್ಡ್ ಕೊಡಲ್ಲ. ಗರ್ಭಿಣಿಯರಿಗೆ ತಾಯಿ ಕಾರ್ಡ್ ಕೊಡಲ್ಲ. ಇವರು ರಿಪೋರ್ಟ್ ಕಾರ್ಡ್ ಹಿಡಿದಿಕೊಂಡು ಹೋಗುತ್ತಾರಂತೆ ಎಂದು ವಿಧಾನಸಭೆಯಲ್ಲಿ ಯು.ಟಿ.ಖಾದರ್ ಚರ್ಚೆ ಮುಂದುವರಿಸಿದರು.
Bangalore, Karnataka News Live: ಜಡ್ಜ್ ಹುದ್ದೆಗೆ ರಾಜೀನಾಮೆ ನೀಡಿ ಚುನಾವಣೆ ಸ್ಪರ್ಧೆಗೆ ತಯಾರಿ
ಗದಗ: ರಾಜಕೀಯ ಎಂದರೆ ನಮಗೇಕೆ ಅದರ ಉಸಾಬರಿ ನಮ್ಮ ಪಾಡಿಗೆ ನಾವು ಇರೋಣ ಎಂದು ಹೇಳುವ ಜನರೇ ಜಾಸ್ತಿ. ವಿದ್ಯಾವಂತರು, ಪ್ರಾಮಾಣಿಕರು ಮತ್ತು ಯುವಸಮೂಹ ರಾಜಕೀಯ ಕ್ಷೇತ್ರಕ್ಕೆ ಬರಬೇಕು ಎಂದು ಹೇಳುವವರು ಇನ್ನೊಂದೆಡೆ. ಇಂತಹ ಪರಿಸ್ಥಿತಿಯಲ್ಲಿ ಇಲ್ಲೊಬ್ಬರು ವ್ಯಕ್ತಿ ತಾವು ಕರ್ತವ್ಯ ನಿರ್ವಹಿಸುತ್ತಿದ್ದ ಜಡ್ಜ್ ಹುದ್ದೆಗೆ ರಾಜಿನಾಮೆ ನೀಡಿ ಜ್ಯಾತ್ಯಾತೀತ ಜನತಾ ದಳ ಪಕ್ಷ ಸೇರ್ಪಡೆಗೊಂಡಿದ್ದಾರೆ. ರಾಜಕೀಯವಾಗಿ ಮತ್ತು ರಾಜ್ಯದಲ್ಲಿ ಬದಲಾವಣೆ ತರಬೇಕು ಎನ್ನುವ ದೊಡ್ಡ ಕನಸಿನೊಂದಿಗೆ ಸುಭಾಷ್ಚಂದ್ರ ರಾಠೋಡ ಅವರು ರಾಕಜೀಯ ಕ್ಷೇತ್ರಕ್ಕೆ ಎಂಟ್ರಿ ಕೊಡುವ ಮೂಲಕ ಎಲ್ಲರಲ್ಲಿ ಆಶ್ಚರ್ಯ ಮೂಡಿಸಿದ್ದಾರೆ.
Bangalore, Karnataka News Live: ಕಾಂಗ್ರೆಸ್ ಈ ದೇಶದ ಶಕ್ತಿ: ಡಿ.ಕೆ ಶಿವಕುಮಾರ್
ಮೈಸೂರು: ರಾಷ್ಟ್ರ ಮತ್ತು ರಾಜ್ಯಕ್ಕೆ ದೊಡ್ಡ ನಾಯಕರನ್ನ ಕೊಟ್ಟ ಪುಣ್ಯ ಭೂಮಿ. ದೇವರಾಜ ಅರಸು ಅವರ ಆದರ್ಶ ನಮಗೆಲ್ಲ ಸ್ಪೂರ್ತಿ ಎಂದು ಪ್ರಜಾಧ್ವನಿ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭಾಷಣ ಮಾಡಿದರು. ನಾನು ಉಪ ಚುನಾವಣೆಗೆ ಹುಣಸೂರಿಗೆ ಬಂದಿದ್ದೆ. ವಿಶ್ವನಾಥ್ ಅವರ ವಿರುದ್ಧ ಮಂಜುನಾಥ್ ಗೆಲ್ಲಿಸಿ ದೊಡ್ಡ ಶಕ್ತಿಯನ್ನ ಕೊಟ್ಟಿದ್ದೀರಾ. ವಿಶ್ವನಾಥ್ ಅವರು ಈ ಭಾಗದ ಶಾಸಕರಾಗಿದ್ದವರು. ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಹೋದರು. ನನ್ನ ಝಂಡಾ ಬದಲಾವಣೆ ಆಗಿದೆ ಅಜೆಂಡಾ ಬದಲಾವಣೆ ಆಗಿಲ್ಲ ಅಂದರು. ನನ್ನ ಬಳಿ ಮೂರು ಭಾರಿ ಭೇಟಿಯಾಗಿ ಸಾಯುವ ಮುನ್ನ ಕಾಂಗ್ರೆಸಿಗನಾಗಿ ಸಾಯುತ್ತೇನೆ ಅಂದರು. ಇಡೀ ಜಿಲ್ಲೆಯಲ್ಲಿ ಪ್ರಜ್ಞಾವಂತ ನಾಯಕ. ಕಾಂಗ್ರೆಸ್ ಈ ದೇಶದ ಶಕ್ತಿ. ಕಾಂಗ್ರೆಸ್ ಕಾರ್ಯಕ್ರಮಗಳನ್ನ ಜನರು ನೆನಪು ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.
Bangalore, Karnataka News Live: ಡಬಲ್ ಇಂಜಿನ್‌ನ ಇಂಧನ ಕೋಮುವಾದದ ಇಂಧನ: ಯು.ಟಿ.ಖಾದರ್
ಬೆಂಗಳೂರು: ಜನರಿಗೆ ಕಷ್ಟ ಬರುವಾಗ ಇಂಜಿನ್ ಆಫ್ ಆಗುತ್ತದೆ. ಇದು ಡಬಲ್ ಇಂಜಿನ್ ಸರ್ಕಾರದ ಸಮಸ್ಯೆ ಎಂದು ವಿಪಕ್ಷ ಉಪನಾಯಕ ಯು.ಟಿ.ಖಾದರ್ ಕಿಡಿಕಾರಿದ್ದಾರೆ. ಯಾರದ್ದೂ ಇಂಜಿನ್ ವರ್ಕ್ ಆಗಲ್ಲವೆಂದು. ನರಳಾಡಿ ಸತ್ತವನು ಸತ್ತ, ಬದುಕಿದವನು ಬದುಕಿದ. ಡಬಲ್ ಇಂಜಿನ್‌ನ ಇಂಧನ ಕೋಮುವಾದದ ಇಂಧನ. ಇಂಜಿನ್‌ನಿಂದ ಬರುವ ಹೊಗೆ ಸಮಾಜ ಒಡೆಯುವ ವಿಷಕಾರಿ ಹೊಗೆ. ಭ್ರಷ್ಟಾಚಾರದಿಂದಲೇ ಇಂಜಿನ್ ತಯಾರು ಮಾಡಲಾಗಿದೆ ಯು.ಟಿ.ಖಾದರ್ ವಾಗ್ದಾಳಿ ಮಾಡಿದರು.
Bangalore, Karnataka News Live: ಶುಕ್ರವಾರ ಬೆಳಗ್ಗೆ 9.45ಕ್ಕೆ ವಿಶೇಷ ಸಂಪುಟ ಸಭೆ
ಫೆಬ್ರವರಿ 17ರಂದು ರಾಜ್ಯ ಬಜೆಟ್ ಮಂಡನೆ ಹಿನ್ನೆಲೆ ಶುಕ್ರವಾರ ಬೆಳಗ್ಗೆ 9.45ಕ್ಕೆ ವಿಶೇಷ ಸಂಪುಟ ಸಭೆ ನಡೆಯಲಿದ್ದು ಸಂಪುಟ ಸಭೆಯಲ್ಲಿ ಸಿಎಂ ಬೊಮ್ಮಾಯಿ ಬಜೆಟ್ಗೆ ಅನುಮೋದನೆ ಪಡೆಯಲಿದ್ದಾರೆ. ಶುಕ್ರವಾರ ಬೆಳಗ್ಗೆ 10.15ಕ್ಕೆ ಬಜೆಟ್ ಮಂಡಿಸಲಿದ್ದಾರೆ.
Bangalore, Karnataka News Live: ಬಿ.ಎಸ್.ಯಡಿಯೂರಪ್ಪಗೆ ವಯಸ್ಸಿನಿಂದ ಅರಳು ಮರುಳಾಗಿದೆ -ಸಿದ್ದರಾಮಯ್ಯ
ಬಿ.ಎಸ್.ಯಡಿಯೂರಪ್ಪಗೆ ವಯಸ್ಸಿನಿಂದ ಅರಳು ಮರುಳಾಗಿದೆ ಎಂದು ಚಿತ್ರದುರ್ಗದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಹಣ ತೆಗೆದುಕೊಳ್ಳುವುದನ್ನು ಫೋಟೋ ತೆಗೆದು ತೋರಿಸಬೇಕಾ? ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಪತ್ರ ಬರೆದಿದ್ದಾರೆ. ನೀರಾವರಿ ಯೋಜನೆ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ. ತರಾತುರಿ ಟೆಂಡರ್ ಕರೆದು ಭ್ರಷ್ಟಾಚಾರ ನಡೆದಿದೆ ಎಂದು ಪತ್ರ ಬರೆದಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ ನಡೆದಿದ್ದರೆ ತನಿಖೆ ನಡೆಸಲಿ. ನಮ್ಮ ಆಡಳಿತದ ಅವಧಿಯಲ್ಲಿ ಬಿಜೆಪಿಯವರು ಕಡ್ಲೆಪುರಿ ತಿಂತಿದ್ರಾ? ಸರ್ಕಾರ ಅಲ್ಪಾವಧಿಯಲ್ಲಿ ಟೆಂಡರ್ ನೀಡುತ್ತಿರುವ ಉದ್ದೇಶ ಏನು? ಹಣ ನೀಡಿದವರಿಗೆ ಮಾತ್ರ ಬಿಲ್ ಮಂಜೂರು ಮಾಡುತ್ತಿದ್ದಾರೆ ಎಂದರು.
Bangalore, Karnataka News Live: ಕಾಕೋಳ ಗ್ರಾಮಕ್ಕೆ ಆಗಮಿಸಿದ ಮಾಜಿ ಸಿಎಂ ಕುಮಾರಸ್ವಾಮಿ
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಕಾಕೋಳ ಗ್ರಾಮದ ಸರ್ಕಾರಿ ಶಾಲೆಗೆ ಕುಮಾರಸ್ವಾಮಿ ಭೇಟಿ ನೀಡಿದ್ದಾರೆ. ಶಾಲಾ ಮಕ್ಕಳೊಂದಿಗೆ ಕುಮಾರಸ್ವಾಮಿ ಮಕ್ಕಳಾಗಿದ್ದಾರೆ. ಗ್ರಾಮಸ್ಥರು ಶಾಲಾಭಿವೃದ್ದಿ ಸಮಿತಿಯಿಂದ ಸರ್ಕಾರಿ ಶಾಲೆಯಲ್ಲಿ ಕುಮಾರಸ್ವಾಮಿ ಅವರಿಗೆ ಸನ್ಮಾನಿಸಲಾಗಿದೆ.
Bangalore, Karnataka News Live: JDS ಅಭ್ಯರ್ಥಿ ಪ್ರಭಾಕರ್ ರೆಡ್ಡಿ ಮನೆ, ಕಚೇರಿ ಮೇಲೆ ಐಟಿ ದಾಳಿ
JDS ಅಭ್ಯರ್ಥಿ ಪ್ರಭಾಕರ್ ರೆಡ್ಡಿ ಅವರ ಮೈಲಸಂದ್ರದಲ್ಲಿರುವ ನಿವಾಸ, HSR ಲೇಔಟ್ನಲ್ಲಿರುವ ಕಚೇರಿ ಮೇಲೆ ಐಟಿ ದಾಳಿ ನಡೆದಿದೆ. ಕಳೆದ 6 ಗಂಟೆಗಳಿಂದ ಐಟಿ ಅಧಿಕಾರಿಗಳಿಂದ ಕಡತ ಪರಿಶೀಲನೆ ನಡೆಸಲಾಗುತ್ತಿದೆ. ಹಣ ವರ್ಗಾವಣೆ ಬಗ್ಗೆ 9 ಐಟಿ ಅಧಿಕಾರಿಗಳಿಂದ ಪರಿಶೀಲನೆ ನಡೆಯುತ್ತಿದೆ. ಮನೆ, ಕಚೇರಿಗೆ KSRP ತುಕಡಿ, ಸ್ಥಳೀಯ ಪೊಲೀಸರಿಂದ ಭದ್ರತೆ ಕೈಗೊಳ್ಳಲಾಗಿದೆ.
Bangalore, Karnataka News Live: ಕಾರ್ಕಳದಲ್ಲಿ ಸುನಿಲ್ ಕುಮಾರ್ ವರ್ಸಸ್ ಪ್ರಮೋದ್ ಮುತಾಲಿಕ್
ಪ್ರಮೋದ್ ಮುತಾಲಿಕ್ ಚುನಾವಣೆಯ ಖರ್ಚಿಗೆ ಜನರಿಂದ ಹಣ ಕೇಳಿದ್ದಾರೆ. ಈ ಸಂಬಂಧ ಮಾತನಾಡಿರುವ ಸುನಿಲ್ ಕುಮಾರ್ ನೀವು ಹಣ ಮಾಡಲು ಕಾರ್ಕಳಕ್ಕೆ ಬಂದಿದ್ದ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಸಚಿವ ಸುನಿಲ್ ಕುಮಾರ್ ಗೆ ಪ್ರಮೋದ್ ಮುತಾಲಿಕ್ ತಿರಗೇಟು ನೀಡಿದ್ದಾರೆ. ಸುನಿಲ್ ಕುಮಾರ್ ಆತಂಕಕ್ಕೆ ಒಳಗಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ. ದುಡ್ಡಿಗೋಸ್ಕರ ನಾನು ಬೆಳಗಾವಿಯಿಂದ ಕಾರ್ಕಳಕ್ಕೆ ಬರಬೇಕಾಗಿಲ್ಲ. ದುಡ್ಡೇ ಗಳಿಸಬೇಕಾಗಿದ್ದರೆ ನನಗೆ 45 ವರ್ಷ ಬೇಕಾಗಿರಲಿಲ್ಲ. ನಾನು ದುಡ್ಡಿಗೋಸ್ಕರ ಕಾರ್ಕಳಕ್ಕೆ ಬಂದಿಲ್ಲ ಸುನಿಲ್ ಕುಮಾರ್ ಅವರೇ. ಸುನಿಲ್ ಕುಮಾರ್ ಎಲ್ಲಿದ್ದರು? ಈಗ ಎಲ್ಲಿ ತಲುಪಿದ್ದಾರೆ. ಏನು ಆಗಿದ್ರಿ ಈಗೇನು ಆಗಿದ್ದೀರಿ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಿ. ನೀವು ಹತಾಶೆಯ ಮನೋಭಾವನೆಯನ್ನು ವ್ಯಕ್ತಪಡಿಸಿದ್ದೀರಿ ಎಂದು ಸಚಿವ ಸುನಿಲ್ ಕುಮಾರ್ ಗೆ ಪ್ರಮೋದ್ ಮುತಾಲಿಕ್ ತಿರಗೇಟು ನೀಡಿದ್ದಾರೆ.
Bangalore, Karnataka News Live: ಆಧಾರವಿಲ್ಲದೇ ಕಾಂಗ್ರೆಸ್ ನಾಯಕರು ಆರೋಪ ಮಾಡ್ತಿದ್ದಾರೆ -ಸಿ.ಟಿ.ರವಿ
ರಾಜ್ಯ ಸರ್ಕಾರ ತರಾತುರಿ ಟೆಂಡರ್ ಕರೆದ ಆರೋಪ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ. ಆಧಾರವಿಲ್ಲದೇ ಕಾಂಗ್ರೆಸ್ ನಾಯಕರು ಆರೋಪ ಮಾಡ್ತಿದ್ದಾರೆ. ಇದು ಸತ್ಯವಾಗಿದ್ರೆ ವಿಧಾನಸಭೆಯಲ್ಲಿ ಯಾಕೆ ಮಾತನಾಡಲಿಲ್ಲ. ಹೊರಗಡೆ ಹೋಗಿ ಆರೋಪ ಮಾಡ್ತಿದ್ದಾರೆ ಅಷ್ಟೇ. ದಾಖಲೆ ಇಟ್ಟುಕೊಂಡು ಕಾಂಗ್ರೆಸ್ ನಾಯಕರು ದೂರು ನೀಡಲಿ. ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯುವ ಹೇಳಿಕೆ ಸರಿಯಲ್ಲ ಎಂದು ಕಾಂಗ್ರೆಸ್ ಆರೋಪಕ್ಕೆ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.
Bangalore, Karnataka News Live: ಕಾಂಗ್ರೆಸ್ ನಾಯಕರು ಹುಚ್ಚರು, ತಲೆ ತಿರುಕರು
ಬೆಂಗಳೂರಿನಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ನಾಯಕರು ಹುಚ್ಚರು, ತಲೆ ತಿರುಕರು. ತಲೆ ತಿರುಕರು ಹೀಗೆ ಮಾತಾಡೋದು. ತಲೆ ಸರಿ ಇದ್ದವರು ಯಾರೂ ಕೂಡ ಈ ರೀತಿ ಮಾತಾಡಲ್ಲ. ಅಧಿಕಾರದ ಭ್ರಮೆಯಿಂದ ನಾವು ಅಧಿಕಾರಕ್ಕೆ ಬಂದೆ ಬಿಟ್ಟಿದ್ದೇವೆಂದು ಹೀಗೆ ಹುಚ್ಚುಚ್ಚಾಗಿ ಮಾತಾಡ್ತಿದ್ದಾರೆ. ಇವರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಇದನ್ನು ಸದನದಲ್ಲಿ ಅವರು ಮಾತಾಡಲಿ. ಅದಕ್ಕೆ ನಾವು ತಕ್ಕ ಉತ್ತರವನ್ನು ಕೊಡುತ್ತೇವೆ ಎಂದರು.
Bangalore, Karnataka News Live: ಶೃಂಗೇರಿ ಮಠದ ಜಗದ್ಗುರುಗಳ ಭೇಟಿಗೆ ಕಾಲಾವಕಾಶ ಕೇಳಿರುವ ಜೆಪಿ ನಡ್ಡಾ
ಜೆಪಿ ನಡ್ಡಾ ಶೃಂಗೇರಿ ಮಠಕ್ಕೆ ಭೇಟಿ ವಿಚಾರ ಭಾರಿ ಕುತೂಹಲ ಮೂಡಿಸಿದೆ. ಫೆ 20ರ ರಾತ್ರಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾ ಮಠಕ್ಕೆ ಜೆಪಿ ನಡ್ಡಾ ಆಗಮಿಸಲಿದ್ದಾರೆ. ಶೃಂಗೇರಿ ಶಾರದೆಯ ದರ್ಶನದ ನಂತರ ಜಗದ್ಗುರುಗಳ ಭೇಟಿ ಮಾಡಲಿದ್ದಾರೆ.
Bangalore, Karnataka News Live:ಹೊಸಕೋಟೆಯಲ್ಲಿ ಜೋರಾಯ್ತು ಗಿಫ್ಟ್ ಪಾಲಿಟಿಕ್ಸ್
ಹೊಸಕೋಟೆಯಲ್ಲಿ ಚುನಾವಣೆಗಾಗಿ ಜನರಿಗೆ ಗಿಫ್ಟ್ಗಳ ಸುರಿಮಳೆಯಾಗ್ತಿದೆ. ಮತದಾರರ ಮನವೊಲಿಕೆಗೆ ಕಾಂಗ್ರೆಸ್-ಬಿಜೆಪಿ ಕಸರತ್ತು ಮಾಡ್ತಿವೆ. ಈ ಹಿಂದೆ ಮುಸ್ಲಿಂ ಮತಗಳ ಒಲೈಕೆಗೆ ಕವ್ವಾಲಿ ಮಾಡಿಸಿದ್ದ ಸಚಿವ ಎಂಟಿಬಿ ನಾಗರಾಜ್. ಶಿವರಾತ್ರಿಗೆ 60 ಅಡಿ ಲಿಂಗ ಪ್ರತಿಷ್ಠಾಪಿಸಲು ಕಾರ್ಯಕ್ರಮ ರೂಪಿಸುತ್ತಿದ್ದಾರೆ.
Bangalore, Karnataka News Live: ದಾಖಲೆ ಬಜೆಟ್ ಮಂಡನೆಗೆ ಸಿಎಂ ಬೊಮ್ಮಾಯಿ ತಯಾರಿ
ಇಲಾಖಾವಾರು ಸಾಲು ಸಾಲು ಸಭೆ ನಡೆಸಿ ಸಿಎಂ ಬೊಮ್ಮಾಯಿ ಬಜೆಟ್ ತಯಾರಿ ಮಾಡಿದ್ದಾರೆ. ಚುನಾವಣಾ ವರ್ಷದಲ್ಲಿ ಜನರಿಗೆ ತುಂಬಾ ಹತ್ತಿರವಾಗುವಂತ ಬಜೆಟ್ ಮಂಡಿಸಲು ಸಿದ್ದತೆ ಮಾಡಿಕೊಂಡಿದ್ದಾರೆ. ಬಡವರು, ಮಧ್ಯಮ ವರ್ಗ, ದೀನ ದಲಿತರು ಹಾಗೂ ರೈತರು ಮನಗೆಲ್ಲುವಂತ ಬಜೆಟ್ ನೀಡಲು ಮುಂದಾಗಿದ್ದಾರೆ. ಬಿಜೆಪಿ ಸರ್ಕಾರದ ಕೊನೆಯ ಹಾಗೂ ವೈಯಕ್ತಿಕವಾಗಿ ಎರಡನೇ ಬಜೆಟ್ ಮಂಡನೆ ಮಾಡಲಿರುವ ಬೊಮ್ಮಯಿ.
Bangalore, Karnataka News Live: 500 ಕೋಟಿ ಇದ್ದರೇ 1,000 ಕೋಟಿಗೆ ಟೆಂಡರ್ ಮಾರಾಟ, ರಾಜ್ಯ ಸರ್ಕಾರ ಮತ್ತೆ ಗೋಲ್ಮಾಲ್ನಲ್ಲಿ ತೊಡಗಿದೆ-ಡಿಕೆಶಿ
ಸರ್ಕಾರದ ಅವಧಿ ಕೆಲವೇ ದಿನಗಳಿರುವುದರಿಂದ ಎಲ್ಲಾ ಇಲಾಖೆಗಳಲ್ಲಿ ತರಾತುರಿಯಾಗಿ ಟೆಂಡರ್ ಕರೆಯುತ್ತಿದೆ. 500 ಕೋಟಿ ರೂ ಟೆಂಡರ್ ಅನ್ನು 1000 ಕೋಟಿಗೆ ಮಾರಾಟ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಟೆಂಡರ್ ಗೋಲ್ಮಾಲ್ನಲ್ಲಿ ತೊಡಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ನಿವಾಸದಲ್ಲಿ ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ವಿವಿಧ ಇಲಾಖೆಗಳಲ್ಲಿ ಟೆಂಡರ್ ಗೋಲ್ಮಾಲ್ ಹೇಗೆ ನಡೆಯುತ್ತಿದೆ ಎಂಬ ವಿವರ ನೀಡಿದ್ದಾರೆ.
ಸರ್ಕಾರದಿಂದ ಟೆಂಡರ್ ಗೋಲ್ಮಾಲ್: ಡಿಕೆಶಿ ನಿವಾಸದಲ್ಲಿ ಬಾಂಬ್ ಸಿಡಿಸಿದ ಕೈ ನಾಯಕರು@BJP4Karnataka @INCKarnataka @siddaramaiah @DKShivakumar @KPCCPresident #Congress #BJPGovernment #kpcckarnatakahttps://t.co/jpgli6zLA3
— TV9 Kannada (@tv9kannada) February 15, 2023
Bangalore, Karnataka News Live: ಪಂಚಮಸಾಲಿ ಮೀಸಲಾಯಿ ಹೋರಾಟದಲ್ಲಿ ರಾಜಕೀಯ ಚರ್ಚೆ
ಬೆಂಗಳೂರಿನಲ್ಲಿ ಬೆಳಗಾವಿ ಮುಖಂಡರು ಜಯಮೃತ್ಯುಂಜಯ ಶ್ರೀಗಳನ್ನು ಭೇಟಿಯಾಗಿದ್ದಾರೆ. ಗೋಕಾಕ್, ಅರಬಾವಿ ಕ್ಷೇತ್ರದ ಎಲ್ಲಾ ಮುಖಂಡರು ಶ್ರಿಗಳ ಭೇಟಿ ಮಾಡಿದ್ದಾರೆ. ಗೋಕಾಕ್ ನಿಂದ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪರ್ಧೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಗೋಕಾಕ್ ಕ್ಷೇತ್ರದಲ್ಲಿ ಅನೇಕ ಆಕಾಂಕ್ಷಿಗಳು ಸ್ಪರ್ಧಿಸಲು ಪೈಪೋಟಿ ಇದೆ. ಲಕ್ಷ್ಮೀ ಹೆಬ್ಬಾಳ್ಕರ್ ಅಕ್ಕಳನ್ನು ಗೋಕಾಕ್ ತಂದು ನಿಲ್ಲಿಸೋಣ. ನಿಮ್ಮ ಪಾದಕ್ಕೆ ಈ ಮನವಿಯನ್ನು ಅರ್ಪಣೆ ಮಾಡುತ್ತೇನೆ. ಲಕ್ಷ್ಮೀ ಹೆಬ್ಬಾಳ್ಕರ್ ಸ್ಪರ್ಧಿಸಿದ್ರೆ ಎಲ್ಲರೂ ಸೇರಿ ಚುನಾವಣೆ ಮಾಡುತ್ತೇವೆ. ಈ ಪ್ರಸ್ತಾವನೆಯನ್ನು ನೀವೆ ನಿರ್ಧರಿಸಬೇಕು. ದೊಡ್ಡ ದೊಡ್ಡ ಸಾಮ್ರಾಜ್ಯಗಳನ್ನು ಹೆಣ್ಣುಮಗಳೆ ಸೋಲಿಸಿದ ಉದಾಹಣೆ ಇದೆ. ದುಷ್ಟ ಸಾಮ್ರಾಜ್ಯಕ್ಕೆ ಬೆಳಗಾವಿಯ ಚನ್ನಮ್ಮಳೇ ಸೋಲಿಸಲಿ ಎನ್ನುವುದು ನಮ್ಮ ಬಯಕೆ. ಗೋಕಾಕ್, ಮೂಡಲಗಿ ಪಂಚಮಸಾಲಿ ಬಂಧುಗಳು ನಾನು ಹೇಳಿದ್ದು ಸರಿ ಇದ್ದರೆ. ಈ ಕಾರ್ಯಕ್ಕೆ ಶ್ರೀಗಳು ಅಣಿಯಾಗಬೇಕು ಎಂದು ಮನವಿ ಮಾಡುತ್ತೇನೆ ಎಂದು ಗೋಕಾಕ್ ಜೆಡಿಎಸ್ ಮುಖಂಡ ಚಂದನ್ನ ಗಿಡ್ಡಣ್ಣವರ್ ಮನವಿ ಮಾಡಿದ್ದಾರೆ.
Bangalore, Karnataka News Live: ಉತ್ತರ ಕರ್ನಾಟಕದ ಹೆಬ್ಬಾಗಿಲು ಪ್ರವೇಶಿಸಲಿರುವ ಜೆಡಿಎಸ್ ಪಂಚರತ್ನ ಯಾತ್ರೆ
ಇಂದು ರಾಣೆಬೆನ್ನೂರಿಗೆ ಜೆಡಿಎಸ್ ಪಂಚರತ್ನ ಯಾತ್ರೆ ಪ್ರವೇಶಿಸಲಿದೆ. ರಾಣೆಬೆನ್ನೂರು ತಾಲೂಕು ಹಲಗೇರಿ ಗ್ರಾಮಕ್ಕೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಆಗಮಿಸಲಿದ್ದಾರೆ. ಬಳಿಕ ರಾಣೆಬೆನ್ನೂರು ಕ್ಷೇತ್ರದ ಪ್ರಮುಖ ಹಳ್ಳಿ, ಹೋಬಳಿಗಳಿಗೆ ಸಂಚರಿಸಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ಹಲಗೇರಿಯಿಂದ ಪಂಚರತ್ನ ಯಾತ್ರೆ ಪ್ರಾರಂಭವಾಗಲಿದೆ. ರಾತ್ರಿ ರಾಣೆಬೆನ್ನೂರು ತಾಲೂಕು ಮೆಡ್ಲೇರಿ ಗ್ರಾಮದಲ್ಲಿ ಮಾಜಿ ಸಿಎಂ ಹೆಚ್ಡಿಕೆ ವಾಸ್ತವ್ಯ ಹೂಡಲಿದ್ದಾರೆ. 30 ರಿಂದ 40 ಗ್ರಾಮಗಳಿಗೆ ಖುದ್ದಾಗಿ ಭೇಟಿ ನೀಡಲಿದ್ದಾರೆ.
Bangalore, Karnataka News Live: ರಾಜ್ಯ ಕಾಂಗ್ರೆಸ್ ನಾಯಕರಿಂದ ಸುದ್ದಿಗೋಷ್ಠಿ
ಸದಾಶಿವನಗರದ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರಿಂದ ಸುದ್ದಿಗೋಷ್ಠಿ ನಡೆಯುತ್ತಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ.
Bangalore, Karnataka News Live: ಇಂದು ಕೋಲಾರ ಜಿಲ್ಲೆಗೆ ರಣದೀಪ್ ಸುರ್ಜೆವಾಲ ಭೇಟಿ
ಇಂದು ಕೋಲಾರ ಜಿಲ್ಲೆಗೆ ರಣದೀಪ್ ಸುರ್ಜೆವಾಲ ಭೇಟಿ ನೀಡಲಿದ್ದಾರೆ. ಕಾಂಗ್ರೆಸ್ ನ ಗ್ಯಾರಂಟಿ ಕಾರ್ಡ್ ವಿತರಣೆ ಮಾಡಲಿದ್ದಾರೆ. ಮನೆಯ ಗೃಹಿಣಿಗೆ ಮಾಸಿಕ 2 ಸಾವಿರ ಹಾಗೂ 200 ಯೂನಿಟ್ ವಿದ್ಯುತ್ ಉಚಿತ ನೀಡುವ ಕಾಂಗ್ರೆಸ್ ನ ಗ್ಯಾರಂಟಿ ಕಾರ್ಡ್ ಇದಾಗಿದೆ. ಮಧ್ಯಾಹ್ನ 1.30 ರ ವೇಳೆಗೆ ನಗರದ ಖಾಬಾ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಕೆ.ಹೆಚ್ ಮುನಿಯಪ್ಪ, ವೀರಪ್ಪ ಮೊಯ್ಲಿ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.
Bangalore, Karnataka News Live: ಬಿಜೆಪಿ ಪೋಸ್ಟರ್ ಹರಿದು ದುರ್ವರ್ತನೆಯ ವಿಡಿಯೋ ವೈರಲ್
ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ನಳೀನ್ ಕುಮಾರ್ ಕಟೀಲ್, ಪ್ರಧಾನಿಯವರ ಫೊಟೋಗಳಿಗೆ ಮಸಿ ಬಳಿದು ಪೋಸ್ಟರ್ ಗಳಿಗೆ ಬೆಂಕಿ ಹಚ್ಚಿ ದುರ್ವತನೆ ತೋರಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಕಾಂಗ್ರೆಸ್ ಮುಖಂಡ ರಾಮಲಿಂಗರೆಡ್ಡಿ ಹಿಂಬಾಲಕರಿಂದ ಕೃತ್ಯ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಕೃತ್ಯ ನಡೆಸಿದವರನ್ನ ಬಂಧಿಸಬೇಕೆಂದು ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಬಿಸಿಪಿ ಪೊಲೀಸ್ ಪೇಜ್ ಗೆ ಟ್ಯಾಗ್ ಮಾಡಿ ದೂರು ನೀಡಲಾಗಿದೆ.
Bangalore, Karnataka News Live: ಫೆಬ್ರವರಿ 23ಕ್ಕೆ ಸಂಡೂರಿಗೆ ಅಮಿತ್ ಶಾ ಭೇಟಿ
ಕೇಂದ್ರ ಗೃಹ ಸಚಿವ ಅಮಿತ್ ಶಾ ಫೆಬ್ರವರಿ 23ಕ್ಕೆ ಬಳ್ಳಾರಿಯ ಸಂಡೂರಿಗೆ ಭೇಟಿ ನೀಡಿ ರೋಡ್ ಶೋ ಮಾಡಲಿದ್ದಾರೆ. ಹಾಗೂ ಬೃಹತ್ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಫೆಬ್ರವರಿ 22 ರಂದು ರಾತ್ರಿ ಜಿಂದಾಲ್ನಲ್ಲಿರುವ ಹಯಾತ್ ಹೋಟೆಲ್‌ನಲ್ಲಿ ಶಾ ತಂಗಲಿದ್ದಾರೆ.
Bangalore, Karnataka News Live: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದಿನಿಂದ ಪ್ರಜಾಧ್ವನಿ ಯಾತ್ರೆ
ಫೆ. 15, 16 ಎರಡು ದಿನಗಳ ಕಾಲ ಪ್ರಜಾಧ್ವನಿ ಯಾತ್ರೆ ನಡೆಯಲಿದೆ. ಶಿರಸಿಯ ಗಣೇಶ ನಗರದ ಅಕ್ಷಯ್ ಗಾಡ್೯ನಿಂದ ಬೆಳಿಗ್ಗೆ 10 ಗಂಟೆಗೆ ಯಾತ್ರೆ ಆರಂಭವಾಗುತ್ತೆ. ಪ್ರಜಾಧ್ವನಿ ಯಾತ್ರೆಯಲ್ಲಿ ಬಿ.ಕೆ.ಹರಿಪ್ರಸಾದ್, ಸ್ಥಳೀಯ ಕಾಂಗ್ರೆಸ್ ನಾಯಕರು ಭಾಗಿಯಾಗಲಿದ್ದಾರೆ. ಶಿರಸಿ – ಸಿದ್ದಾಪುರ, ಕುಮಟಾ – ಹೊನ್ನಾವರದಲ್ಲಿ ಯಾತ್ರೆ ನಡೆಯಲಿದೆ.
Bangalore, Karnataka News Live: ಮತದಾರರನ್ನು ಸೆಳೆಯಲು 6 ಕೋಟಿ ಮೌಲ್ಯದ ಜಮೀನು ಗಿಫ್ಟ್
ಚುನಾವಣೆಯಲ್ಲಿ ಸಮುದಾಯವನ್ನ ಸೆಳೆಯಲು ಶಾಸಕ ಶರತ್ ಬಚ್ಚೇಗೌಡ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಒಕ್ಕಲಿಗ ಸಮುದಾಯದ ಮತ ಸೆಳೆಯಲು ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಅವರು 6 ಕೋಟಿ ಮೌಲ್ಯದ ಜಮೀನು ಗಿಫ್ಟ್ ಮಾಡಿದ್ದಾರೆ. ಹೊಸಕೋಟೆ ತಾಲೂಕು ಒಕ್ಕಲಿಗರ ಸಂಘಕ್ಕೆ ಅರಳೆಮಾಕನಹಳ್ಳಿ ಬಳಿ 3 ಎಕರೆ 10 ಗುಂಟೆ ಜಮೀನು ದಾನ ಮಾಡಿದ್ದಾರೆ.
Bangalore, Karnataka News Live: ಇಂದಿನಿಂದ 2 ದಿನ ಮೈಸೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ
ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನೇತೃತ್ವದಲ್ಲಿ ಇಂದಿನಿಂದ 2 ದಿನ ಮೈಸೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ನಡೆಯಲಿದೆ. ಬೆಳಗ್ಗೆ 11ಕ್ಕೆ ಹುಣಸೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶ ನಡೆಯಲಿದ್ದು ಮಧ್ಯಾಹ್ನ 3ಕ್ಕೆ ಹೆಚ್.ಡಿ.ಕೋಟೆಯಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶ ನಡೆಯಲಿದೆ. ಹಾಗೂ ನಾಳೆ ಕೆ.ಆರ್.ನಗರ, ಪಿರಿಯಾಪಟ್ಟಣದಲ್ಲಿ ಪ್ರಜಾಧ್ವನಿ ಸಮಾವೇಶ ನಡೆಯಲಿದೆ.
Bangalore, Karnataka News Live: ಬೀಳಗಿ ವಿಧಾನಸಭಾ ಕ್ಷೇತ್ರದ ಕಲಾದಗಿಯಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶ
ಇಂದು ಬಾಗಲಕೋಟೆ ಜಿಲ್ಲೆ ಬೀಳಗಿ ವಿಧಾನಸಭಾ ಕ್ಷೇತ್ರದ ಕಲಾದಗಿಯಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶ ನಡೆಯಲಿದೆ. ಕಲಾದಗಿ ಗುರುಲಿಂಗೇಶ್ವರ ಹೈಸ್ಕೂಲ್ ಮೈದಾನದಲ್ಲಿ ಮಧ್ಯಾಹ್ನ 12.20ಕ್ಕೆ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶಕ್ಕೆ ಚಾಲನೆ ನೀಡಲಾಗುತ್ತೆ. ಸಮಾವೇಶದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಜಮೀರ್ ಅಹ್ಮದ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಈಶ್ವರ ಖಂಡ್ರೆ, ಹೆಚ್.ಕೆ.ಪಾಟೀಲ್, ಹೆಚ್.ಸಿ.ಮಹದೇವಪ್ಪ ಸೇರಿ ಪ್ರಮುಖರು ಭಾಗಿಯಾಗಲಿದ್ದಾರೆ.
Bangalore, Karnataka News Live: ಇಂದು ಸಂಜೆ 7 ಗಂಟೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ
ರಾಜಭವನ ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ಇಂದು ಸಂಜೆ 7 ಗಂಟೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಅರುಣ್ ಸಿಂಗ್ ಭಾಗಿಯಾಗಲಿದ್ದಾರೆ. ಕ್ಷೇತ್ರ ಉಸ್ತುವಾರಿಗಳ ಸಭೆಯಲ್ಲೂ ಅರುಣ್ ಸಿಂಗ್ ಭಾಗಿಯಾಗಲಿದ್ದಾರೆ.
Published On - Feb 15,2023 9:05 AM