ಬೆನ್ನು ನೋವೆಂದು ಬಾಸ್ಗೆ ಮೆಸೇಜ್ ಹಾಕಿ ಹತ್ತೇ ನಿಮಿಷಕ್ಕೆ ಹೃದಯಾಘಾತದಿಂದ ಬೆಂಗಳೂರಿನ ವ್ಯಕ್ತಿ ಸಾವು
40 year old youth dies of cardiac arrest: ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 40 ವರ್ಷದ ಯುವಕರೊಬ್ಬರು ಹೃದಯಸ್ತಂಭನದಿಂದ ನಿಧನರಾಗಿದ್ದಾರೆ. ಸಾಯುವ ಹತ್ತು ನಿಮಿಷ ಮುನ್ನವಷ್ಟೇ ತನಗೆ ವಿಪರೀತ ಬೆನ್ನು ನೋವಿದೆ. ರಜೆ ಕೊಡಿ ಎಂದು ಬಾಸ್ಗೆ ಮೆಸೇಜ್ ಹಾಕಿದ್ದರು. ತಮ್ಮ ಸಹೋದ್ಯೋಗಿಯ ದಿಢೀರ್ ಸಾವು ಕಂಡು ಶಾಕ್ ಆದ ಮ್ಯಾನೇಜರ್, ಲೈಫ್ ಎಷ್ಟು ಅನಿಶ್ಚಿತ ಎಂದು ಸೋಷಿಯಲ್ ಮೀಡಿಯಾದಲ್ಲಿ ವ್ಯಥೆ ಪಟ್ಟಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್ 14: ಯುವಜನರಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಹೆಚ್ಚುತ್ಲೇ ಇದೆ. 30-40 ವರ್ಷ ವಯಸ್ಸಿನ ಯುವಕರು ದಿಢೀರ್ ಹೃದಯಸ್ತಂಭನದಿಂದ (cardiac arrest) ನಿಧನ ಹೊಂದುತ್ತಿರುವುದು ಹೆಚ್ಚಾಗಿದೆ. ಬೆಂಗಳೂರಿನಲ್ಲಿ 40 ವರ್ಷದ ವ್ಯಕ್ತಿಯೊಬ್ಬರು ತಮ್ಮ ಮ್ಯಾನೇಜರ್ಗೆ ಬೆನ್ನು ನೋವಿದೆ ಎಂದು ಮೆಸೇಜ್ ಹಾಕಿ ಹತ್ತೇ ನಿಮಿಷಕ್ಕೆ ಹೃದಯಸ್ತಂಭನಗೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ವ್ಯಕ್ತಿಯ ತಂಡದ ಮ್ಯಾನೇಜರ್ ಈ ಘಟನೆಯನ್ನು ತಮ್ಮ ಎಕ್ಸ್ ಅಕೌಂಟ್ನಲ್ಲಿ ಹಂಚಿಕೊಂಡಿದ್ದಾರೆ. ಮೃತ ಉದ್ಯೋಗಿಯ ಹೆಸರು ಶಂಕರ್ ಎಂದೆನ್ನಲಾಗಿದೆ.
‘ಸರ್, ತುಂಬಾ ಬೆನ್ನು ನೋವಿದೆ. ಇವತ್ತು ಬರೋಕ್ಕಾಗಲ್ಲ. ದಯವಿಟ್ಟು ರಜೆ ಕೊಡಿ ಎಂದು ನನ್ನ ಸಹೋದ್ಯೋಗಿ ಶಂಕರ್ ಬೆಳಗ್ಗೆ 8:37ಕ್ಕೆ ನನಗೆ ಮೆಸೇಜ್ ಮಾಡಿದರು. ಇಂಥ ರಜೆ ಮನವಿಗಳು ಸಾಮಾನ್ಯವಾದ್ದರಿಂದ ರೆಸ್ಟ್ ತಗೊಳ್ಳಿ ಎಂದು ನಾನೂ ಸಹಜವಾಗಿ ಉತ್ತರಿಸಿದೆ…
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ನಿವಾಸದ ಬಳಿ ಧಗಧಗನೆ ಹೊತ್ತಿ ಉರಿದ ಕಾರು
‘ಬೆಳಗ್ಗೆ 11 ಗಂಟೆಗೆ ನನಗೆ ಆಘಾತ ಕೊಡುವಂಥ ಕರೆ ಬಂತು. ಶಂಕತ್ ನಿಧನರಾದರು ಎಂದು ಕರೆ ಮಾಡಿದವರು ತಿಳಿಸಿದರು. ಮೊದಲಿಗೆ ನಂಬಲಾಗಲಿಲ್ಲ. ಮನೆಯ ವಿಳಾಸ ಪಡೆದು ಹೋದೆವು. ಆತ ಬದುಕಿರಲಿಲ್ಲ’ ಎಂದು ಕೆ.ವಿ. ಅಯ್ಯರ್ ತಮ್ಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಕೆವಿ ಅಯ್ಯರ್ ಅವರ ಪೋಸ್ಟ್
DEVASTATING INCIDENT WHICH HAPPENED TODAY MORNING :-
One of my colleague, Shankar texted me today morning at 8.37 am with a message “Sir, due to heavy backpain I am unable to come today. So please grant me leave.” Such type of leave requests, being usual, I replied “Ok take…
— KV Iyyer – BHARAT 🇮🇳🇮🇱 (@BanCheneProduct) September 13, 2025
ಸಿಗರೇಟ್, ಹೆಂಡ ಮುಟ್ಟುತ್ತಿರಲಿಲ್ಲ…
ಶಂಕರ್ಗೆ 40 ವರ್ಷ ವಯಸ್ಸಾಗಿತ್ತು. ಬಹಳ ಆರೋಗ್ಯವಂತರಾಗಿದ್ದರು. ಫಿಟ್ನೆಸ್ ಕಾಯ್ದುಕೊಂಡಿದ್ದರು. ಸ್ಮೋಕಿಂಗ್ ಮಾಡುತ್ತಿರಲಿಲ್ಲ. ಹೆಂಡದಿಂದ ದೂರ ಇದ್ದರು. ಅವರಿಗೆ ಹೃದಯ ಸ್ತಂಭನ ಆಗಿರುವುದು ಅಚ್ಚರಿ ಎನಿಸಬಹುದು. ನಟ ಪುನೀತ್ ರಾಜಕುಮಾರ್ ಸೇರಿದಂತೆ ಸಾಕಷ್ಟು ಫಿಟ್ ಅಂಡ್ ಫೈನ್ ಯುವಜನರು ಈ ರೀತಿ ಕಾರ್ಡಿಯಾಕ್ ಅರೆಸ್ಟ್, ಹಾರ್ಟ್ ಅಟ್ಯಾಕ್ಗಳಿಂದ ಮೃತಪಡುತ್ತಿರುವುದು ಸರ್ವೇಸಾಮಾನ್ಯ ಎಂಬಂತಾಗಿದೆ.
ಇದನ್ನೂ ಓದಿ: ಪಾನಿಪೂರಿ ತಿನ್ನೋ ವೇಳೆ ಗಲಾಟೆ: ಸಲ್ಮಾನ್ ಕೊಟ್ಟ ಒಂದೇ ಪಂಚ್ಗೆ ಉಸಿರು ಚೆಲ್ಲಿದ ಭೀಮ
‘ಚೆನ್ನಾಗಿ ಪ್ರಜ್ಞೆ ಇರುವ ವ್ಯಕ್ತಿ ಮೆಸೇಜ್ ಮಾಡಿ ಕೇವಲ ಹತ್ತೇ ನಿಮಿಷದಲ್ಲಿ ಕೊನೆಯುಸಿರು ಎಳೆಯುತ್ತಾರೆ ಎಂದರೆ ಶಾಕ್ ಎನಿಸುತ್ತದೆ. ಜೀವನ ಅದೆಷ್ಟು ಅನಿಶ್ಚಿತ. ನಿಮ್ಮ ಜೀವನದಲ್ಲಿ ಮುಂದಿನ ಕ್ಷಣ ಏನಾಗುತ್ತೆ ಎಂದು ನಿಮಗೆ ಗೊತ್ತೇ ಇರುವುದಿಲ್ಲ. ನಿಮ್ಮ ಸುತ್ತಲಿನ ಜನರ ಮೇಲೆ ದಯೆ ಇರಲಿ. ಜೀವನ ಇರುವವರೆಗೂ ಖುಷಿ ಖುಷಿಯಾಗಿರಿ’ ಎಂದು ಅಯ್ಯರ್ ಹೇಳಿಕೊಂಡಿದ್ದಾರೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




