ಮೆಟ್ರೋ ಹೊಸ ನಿಯಮಗಳು: ಪ್ರಯಾಣಿಕರೇ ಇನ್ಮುಂದೆ ರೀಲ್ಸ್ ನೋಡುವ ಮುನ್ನ ಎಚ್ಚರ
ನಮ್ಮ ಮೆಟ್ರೋದಲ್ಲಿ ಇನ್ನುಮುಂದೆ ಜೋರಾಗಿ ಮೊಬೈಲ್ ಬಳಕೆ, ರೀಲ್ಸ್ ನೋಡುವುದು, ಊಟ-ತಿಂಡಿ ಅಥವಾ ತಂಬಾಕು ಸೇವನೆ ಮಾಡುವಂತಿಲ್ಲ. ನಿಯಮ ಮೀರಿದರೆ ದಂಡದ ಜೊತೆಗೆ ಪ್ರಕರಣ ದಾಖಲಾಗಲಿದೆ. ಸಹ ಪ್ರಯಾಣಿಕರಿಗೆ ತೊಂದರೆಯಾಗುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಕಳೆದ 20 ದಿನಗಳಲ್ಲಿ 7,429 ಪ್ರಕರಣಗಳು ದಾಖಲಾಗಿದ್ದು, ಪ್ರಯಾಣಿಕರು ಈ ಹೊಸ ನಿಯಮಗಳನ್ನು ಸ್ವಾಗತಿಸಿದ್ದಾರೆ.

ಬೆಂಗಳೂರು, ಡಿ.31: ಪ್ರಯಾಣಿಕರು ಇನ್ಮುಂದೆ ಮೆಟ್ರೋದಲ್ಲಿ (Bangalore Metro rules) ಈ ಕೆಲಸಗಳನ್ನು ಮಾಡುವಂತಿಲ್ಲ, ಒಂದು ವೇಳೆ ಮಾಡಿದ್ರೆ ಕೇಸ್ ದಾಖಲು ಮಾಡಲಾಗುತ್ತದೆ. ಮೆಟ್ರೋದಲ್ಲಿ ರೀಲ್ಸ್ ನೋಡುವುದು, ಫೋನ್ನಲ್ಲಿ ಜೋರಾಗಿ ಮಾತನಾಡುವುದು, ತಿಂಡಿ ಊಟ ಮಾಡಿದ್ರೆ ದಂಡದ ಜತೆಗೆ ಪ್ರಕರಣ ಕೂಡ ದಾಖಲು ಮಾಡಲಾಗುತ್ತದೆ. ಕಳೆದ 20 ದಿನದಲ್ಲಿ ಮೆಟ್ರೋ ಪ್ರಯಾಣಿಕರ ವಿರುದ್ಧ 7,429 ಕೇಸ್ ದಾಖಲಾಗಿದೆ. ಈ ಕ್ರಮವನ್ನು ತರಲು ಒಂದು ಕಾರಣವಿದೆ. ಹೌದು ಮೆಟ್ರೋದಲ್ಲಿ ಇತ್ತೀಚೆಗೆ ಜೋರಾಗಿ ಸೌಂಡ್ ಇರುವುದನ್ನು ತಡೆಯಲು ಹಾಗೂ ಇತರ ಸಹ ಪ್ರಯಾಣಿಕರಿಗೆ ತೊಂದರೆ ಆಗುವುದನ್ನು ತಡೆಯಲು ವಿಭಿನ್ನ ಕ್ರಮವನ್ನು ತರಲಾಗಿದೆ. ಒಂದು ವೇಳೆ ಈ ನಿಮಯವನ್ನು ಮೀರಿದ್ರೆ ದಂಡಾಸ್ತ್ರ ಪ್ರಯೋಗ ಮಾಡಲಾಗುವುದು.
ಮೆಟ್ರೋವನ್ನು ಲಕ್ಷಾಂತರ ಜನ ಓಡಾಡುತ್ತಾರೆ. ಒಂದು ಕಡೆಯಿಂದ ಇನ್ನೊಂದು ಕಡೆ ವೇಗವಾಗಿ ಹೋಗಲು ಮೆಟ್ರೋವನ್ನು ಬಳಸುತ್ತಾರೆ. ಈ ಹೊತ್ತಿನಲ್ಲಿ ಸುಮ್ಮನೆ ಕೂರುವ ಬದಲು ಟೈಮ್ ಪಾಸ್ ಮಾಡಲು ಬಹುತೇಕ ಜನ ಮೊಬೈಲ್ ಬಳಕೆ ಮಾಡುತ್ತಾರೆ. ಹೆರ್ ಪೋನ್ ಹಾಕಿಕೊಳ್ಳದೇ ರಿಲ್ಸ್ ಯೂಟ್ಯೂಬ್ ನೋಡುತ್ತಾರೆ. ಈ ಹಿಂದೆಯೇ ಮೆಟ್ರೋ ಈ ರೀತಿ ಮಾಡಬಾರದು ಎಂಬ ರೂಲ್ಸ್ ಮಾಡಿತ್ತು. ಆದರೆ ಇದನ್ನು ಮೀರಿ ಅನೇಕರ ಈ ತಪ್ಪುಗಳನ್ನು ಮಾಡುತ್ತಿದ್ದಾರೆ. ಅದಕ್ಕಾಗಿ ದಂಡಾಸ್ತ್ರ ಪ್ರಯೋಗ ಚಿಂತನೆ ಮಾಡಲಾಗಿದೆ.
ಇದನ್ನೂ ಓದಿ: ಹೊಸ ವರ್ಷಕ್ಕೆ ಕೌಂಟ್ಡೌನ್: ಖಾಕಿ ಅಲರ್ಟ್; ಎಣ್ಣೆ ಏಟಲ್ಲಿ ಎಲ್ಲಾದ್ರೂ ಮಲಗಿದ್ರೆ ಪೊಲೀಸರೇ ಮನೆಗೆ ಬಿಡ್ತಾರೆ!
ಮೊಬೈಲ್ ಅಲ್ಲಿ ಗಟ್ಟಿಯಾಗಿ ವಾಲ್ಯೂಮ್ ಜಾಸ್ತಿ ಕೊಡುವುದು, ಬ್ಲೂ ಟೂತ್ ಬಳಕೆ ಮಾಡಿ ಗಟ್ಟಿಯಾಗಿ ಮಾತನಾಡಿ ಇತರೆ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುವುದು , ಅಲ್ಲಲ್ಲಿ ಊಟ-ತಿಂಡಿ ಮಾಡುವುದು, ತಂಬಾಕು ಸೇವನೆ ಮಾಡುವ ದೂರುಗಳು ಬರುತ್ತಿದೆ. ಡಿಸೆಂಬರ್ 5 ರಿಂದ 25ರ ವರೆಗಿನ ಡಾಟಾ ಪ್ರಕಾರ 6 ಸಾವಿರದ 520 ಮಂದಿ ವಿರುದ್ಧ ಲೌಡ್ ಸೌಂಡ್ ಕೇಸ್ ದಾಖಲಾಗಿದೆ. ಮೆಟ್ರೋದಲ್ಲಿ ತಿಂಡಿ ತಿಂದವರ ವಿರುದ್ಧ 268 ಕೇಸ್ ದಾಖಲಾಗಿದ್ದು, ತಂಬಾಕು ಸೇವನೆಯ ಅಡಿ 641 ದೂರು ರಿಜಿಸ್ಟರ್ ಆಗಿದೆ. 20 ದಿನದಲ್ಲಿ ಒಟ್ಟು 7,429 ಕೇಸ್ ಗಳು ದಾಖಲು ಮಾಡಲಾಗಿದೆ ಎಂದು ಮೆಟ್ರೋ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶ್ವಂತ್ ಚೌವ್ಹಾಣ್ ಹೇಳಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ಮೆಟ್ರೋ ಪ್ರಯಾಣಿಕರು ಅಧಿಕಾರಿಗಳ ನಿರ್ಧಾರವನ್ನು ಸ್ವಾಗತ ಮಾಡುತ್ತೇವೆ ಎಂದು ಹೇಳಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



