ಕ್ಯೂಆರ್ ಕೋಡ್​ನಲ್ಲೇ ಸಿಗಲಿದೆ ನಮ್ಮ ಕ್ಲಿನಿಕ್ ಮಾಹಿತಿ: ಬಿಬಿಎಂಪಿ ಹೊಸ ಪ್ಲಾನ್

ಇತ್ತೀಚೆಗಷ್ಟೇ ಬೆಂಗಳೂರಿನ ‘ನಮ್ಮ ಕ್ಲಿನಿಕ್’ಗಳು ಸರಿಯಾದ ರೀತಿಯಲ್ಲಿ ಸೇವೆ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು. ನಮ್ಮ ಕ್ಲಿನಿಕ್​ಗಳ ಬಗ್ಗೆ ಜನರಿಗೆ ಅರಿವು ಕೂಡ ಕಡಿಮೆ ಇರುವುದರಿಂದ ಅವುಗಳತ್ತ ಜನ ಹೋಗುವುದು ಕೂಡ ಕಡಿಮೆಯಾಗಿತ್ತು. ಸದ್ಯ ನಮ್ಮ ಕ್ಲಿನಿಕ್ ವಿರುದ್ಧ ಕೇಳಿಬಂದಿರೋ ಆರೋಪಗಳಿಗೆ ಫುಲ್ ಸ್ಟಾಪ್ ಇಡಲು ಬಿಬಿಎಂಪಿ ಹೊಸ ಪ್ಲಾನ್ ಜಾರಿಗೊಳಿಸಲು ಮುಂದಾಗಿದೆ.

ಕ್ಯೂಆರ್ ಕೋಡ್​ನಲ್ಲೇ ಸಿಗಲಿದೆ ನಮ್ಮ ಕ್ಲಿನಿಕ್ ಮಾಹಿತಿ: ಬಿಬಿಎಂಪಿ ಹೊಸ ಪ್ಲಾನ್
ನಮ್ಮ ಕ್ಲಿನಿಕ್
Follow us
ಶಾಂತಮೂರ್ತಿ
| Updated By: Ganapathi Sharma

Updated on: Feb 04, 2025 | 9:17 AM

ಬೆಂಗಳೂರು, ಫೆಬ್ರವರಿ 4: ‘ನಮ್ಮ ಕ್ಲಿನಿಕ್’ಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದರ ಜತೆಗೆ, ಅವುಗಳ ಸೇವೆ ಸುಧಾರಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಂದಾಗಿದೆ. ಇದಕ್ಕಾಗಿ ಹೊಸ ತಂತ್ರವನ್ನೂ ಪಾಲಿಕೆ ಅನುಸರಿಸಲಿದೆ. ಸದ್ಯ ಬೆಂಗಳೂರಿನ ಎಂಟು ವಲಯಗಳಲ್ಲಿ ನಮ್ಮ ಕ್ಲಿನಿಕ್​ಗಳನ್ನ ಜನರ ಬಳಕೆಗೆ ಸಿಗುವಂತೆ ಮಾಡಲು ಚಿಂತನೆ ನಡೆಸಿರುವ ಬಿಬಿಎಂಪಿಯ ಆರೋಗ್ಯ ವಿಭಾಗ, ಪ್ರತಿ ವಾರ್ಡ್​ನಲ್ಲೂ ಕ್ಯೂಆರ್ ಕೋಡ್ ಅಳವಡಿಸಲು ಸಜ್ಜಾಗಿದೆ.

ಕ್ಯೂಆರ್ ಕೋಡ್ ಮೂಲಕ ಆಯಾ ವಾರ್ಡ್​ಗಳಲ್ಲಿ ನಮ್ಮ ಕ್ಲಿನಿಕ್ ಎಲ್ಲಿದೆ, ಅಲ್ಲಿ ಸಿಗೋ ಸೌಲಭ್ಯಗಳೇನು ಎಂಬ ಬಗ್ಗೆ ಜನರಿಗೆ ಮಾಹಿತಿ ಒದಗಿಸಲು ಪಾಲಿಕೆ ಸಿದ್ಧತೆ ನಡೆಸಿದೆ.

ಕ್ಯೂಆರ್ ಕೋಡ್​ನಲ್ಲಿ ಏನೇನು ಮಾಹಿತಿ ಸಿಗಲಿದೆ?

ರಾಜಧಾನಿಯ ವಾರ್ಡ್​ಗಳಲ್ಲಿರುವ ನಮ್ಮ ಕ್ಲಿನಿಕ್​ಗಳಲ್ಲಿ ಏನೆಲ್ಲ ಸೌಲಭ್ಯ ಸಿಗಲಿದೆ ಎಂಬ ಬಗ್ಗೆ ಪಾಲಿಕೆ ಜನರಿಗೆ ಮಾಹಿತಿ ಒದಗಿಸಲಿದೆ. ಕ್ಯೂಆರ್ ಕೋಡ್ ಜೊತೆಗೆ ಆಯಾ ವಲಯದಲ್ಲಿರುವ ನಮ್ಮ ಕ್ಲಿನಿಕ್​ಗಳಲ್ಲಿ ಇರುವ ವೈದ್ಯರ ಮಾಹಿತಿ, ವೈದ್ಯರ ಫೋಟೋವನ್ನು ಕೂಡ ಪ್ರಕಟಿಸುವ ಮೂಲಕ ಜನರಿಗೆ ನಮ್ಮ ಕ್ಲಿನಿಕ್ ಬಳಕೆ ಮಾಡಿಕೊಳ್ಳುವಂತೆ ಜಾಗೃತಿ ನೀಡಲು ಮುಂದಾಗಿದೆ.

ಬಿಬಿಎಂಪಿ ವಿಶೇಷ ಆಯುಕ್ತರು ಹೇಳಿದ್ದೇನು?

ಜನರಲ್ಲಿ ನಮ್ಮ ಕ್ಲಿನಿಕ್​ಗಳ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಆರೋಗ್ಯ ಸೌಲಭ್ಯಗಳನ್ನು ಜನರಿಗೆ ತಲುಪಿಸುವುದು ಬಿಬಿಎಂಪಿ ಆರೋಗ್ಯ ವಿಭಾಗದ ಉದ್ದೇಶವಾಗಿದೆ ಎಂದು ವಿಶೇಷ ಆಯುಕ್ತ ಸೂರಲ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.

ಈಗಾಗಲೇ ನಮ್ಮ ಕ್ಲಿನಿಕ್​ಗಳಲ್ಲಿ ವಾರಕ್ಕೊಮ್ಮೆ ಯೋಗ ನಡೆಸುವ ಮೂಲಕ ಜನರ ಗಮನ ಸೆಳೆಯಲು ಕೂಡ ಪಾಲಿಕೆ ಯೋಜನೆ ರೂಪಿಸಿತ್ತು. ಇದಾದ ಬಳಿಕ ಇದೀಗ ಕ್ಯೂಆರ್ ಕೋಡ್ ಮೂಲಕ ನಮ್ಮ ಕ್ಲಿನಿಕ್​ಗಳನ್ನ ಸಮರ್ಪಕವಾಗಿ ಜನರ ಬಳಕೆಗೆ ಸಿಗುವಂತೆ ಮಾಡಲು ಪಾಲಿಕೆ ಹೆಜ್ಜೆ ಇಟ್ಟಿದೆ. ಬಿಬಿಎಂಪಿಯ ಈ ಹೊಸ ಪ್ಲಾನ್ ಎಷ್ಟರಮಟ್ಟಿಗೆ ಫಲ ನೀಡಲಿದೆ ಎಂಬುದನ್ನು ಕಾದುನೋಡಬೇಕಿದೆ.

ನಮ್ಮ ಕ್ಲಿನಿಕ್​ಗಳು ಎಂದರೇನು?

ಬಡವರು, ದಿನಗೂಲಿ ಕಾರ್ಮಿಕರು, ಕೊಳಗೇರಿ ನಿವಾಸಿಗಳು ಮತ್ತು ಸಮಾಜದ ಇತರ ದುರ್ಬಲ ವರ್ಗಗಳಿಗೆ ಸುಲಭವಾಗಿ ವೈದ್ಯಕೀಯ ಸೇವೆ ಒದಗಿಸಬೇಕು ಎನ್ನುವ ಉದ್ದೇಶದೊಂದಿಗೆ 2022ರ ಡಿಸೆಂಬರ್ 14 ರಂದು ಕರ್ನಾಟಕದಾದ್ಯಂತ ನಮ್ಮ ಕ್ಲಿನಿಕ್​ಗಳನ್ನು ಆರಂಭಿಸಲಾಗಿತ್ತು. ಅದರಂತೆ, ಬೆಂಗಳೂರಿನ ವಾರ್ಡ್​ಗಳಲ್ಲಿಯೂ ನಮ್ಮ ಕ್ಲಿನಿಕ್​ಗಳು ಕಾರ್ಯಾಚರಿಸುತ್ತಿವೆ.

ಇದನ್ನೂ ಓದಿ: ನಮ್ಮ ಕ್ಲಿನಿಕ್ ಎಂದರೇನು? ಆರೋಗ್ಯ ಕೇಂದ್ರಗಳ ಬಗ್ಗೆ ಇಲ್ಲಿದೆ ಮಾಹಿತಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನೀರಿನ ಕೊಡ ಉರಡತಲೇ, ತುಪ್ಪದ ಕೊಡ ಉಕ್ಕತಲೇ ಪರಾಕ್:ಮೈಲಾರಲಿಂಗೇಶ್ವರ ಕಾರ್ಣಿಕ
ನೀರಿನ ಕೊಡ ಉರಡತಲೇ, ತುಪ್ಪದ ಕೊಡ ಉಕ್ಕತಲೇ ಪರಾಕ್:ಮೈಲಾರಲಿಂಗೇಶ್ವರ ಕಾರ್ಣಿಕ
ವಿಮಾನ ನಿಲ್ದಾಣದಲ್ಲಿ ಮೋದಿಯನ್ನು ತಬ್ಬಿ ಬೀಳ್ಕೊಟ್ಟ ಫ್ರಾನ್ಸ್​ ಅಧ್ಯಕ್ಷ
ವಿಮಾನ ನಿಲ್ದಾಣದಲ್ಲಿ ಮೋದಿಯನ್ನು ತಬ್ಬಿ ಬೀಳ್ಕೊಟ್ಟ ಫ್ರಾನ್ಸ್​ ಅಧ್ಯಕ್ಷ
ಬಾಗಪ್ಪ ಹರಿಜನ್ ಅಂತ್ಯಕ್ರಿಯೆಯಲ್ಲಿ ನೂರಾರು ಜನ ಭಾಗಿ
ಬಾಗಪ್ಪ ಹರಿಜನ್ ಅಂತ್ಯಕ್ರಿಯೆಯಲ್ಲಿ ನೂರಾರು ಜನ ಭಾಗಿ
ಬಾಗಪ್ಪನನ್ನು ಪ್ರೀತಿಸಿ ವರಿಸಿದ ಮಹಿಳೆ ಸರ್ಕಾರೀ ವಕೀಲೆಯಾಗಿದ್ದರು: ಮಹಾಂತೇಶ
ಬಾಗಪ್ಪನನ್ನು ಪ್ರೀತಿಸಿ ವರಿಸಿದ ಮಹಿಳೆ ಸರ್ಕಾರೀ ವಕೀಲೆಯಾಗಿದ್ದರು: ಮಹಾಂತೇಶ
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ತನಿಖೆ ಪದದ ವ್ಯಾಖ್ಯಾನ ಬದಲಾದಂತಿದೆ!
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ತನಿಖೆ ಪದದ ವ್ಯಾಖ್ಯಾನ ಬದಲಾದಂತಿದೆ!
ಉಡುಪಿಗೆ ಬಂದು ದೈವಕ್ಕೆ ಕೈ ಮುಗಿದ ತಮಿಳು ನಟ ವಿಶಾಲ್
ಉಡುಪಿಗೆ ಬಂದು ದೈವಕ್ಕೆ ಕೈ ಮುಗಿದ ತಮಿಳು ನಟ ವಿಶಾಲ್
ಮಾರ್ಸಿಲ್ಲೆಯಲ್ಲಿ ಭಾರತೀಯ ಕಾನ್ಸುಲೇಟ್ ಉದ್ಘಾಟನೆ; ಮೋದಿ, ಮೋದಿ ಘೋಷಣೆ
ಮಾರ್ಸಿಲ್ಲೆಯಲ್ಲಿ ಭಾರತೀಯ ಕಾನ್ಸುಲೇಟ್ ಉದ್ಘಾಟನೆ; ಮೋದಿ, ಮೋದಿ ಘೋಷಣೆ
ಜನರಿಂದ ಬಡ್ಡಿ ಪೀಕಿ ಪೀಕಿಯೇ ಯಲ್ಲಪ್ಪ ಮಿಸ್ಕಿನ್,  ಬಡ್ಡಿ ಯಲ್ಲಪ್ಪನಾದ!
ಜನರಿಂದ ಬಡ್ಡಿ ಪೀಕಿ ಪೀಕಿಯೇ ಯಲ್ಲಪ್ಪ ಮಿಸ್ಕಿನ್,  ಬಡ್ಡಿ ಯಲ್ಲಪ್ಪನಾದ!
ಪತ್ನಿಗೆ ಸಿಲ್ಕ್​ ಸೀರೆ ಖರೀದಿಸಿದ ಡಿಕೆ ಶಿವಕುಮಾರ್: ಬೆಲೆ ಎಷ್ಟು ಗೊತ್ತಾ?
ಪತ್ನಿಗೆ ಸಿಲ್ಕ್​ ಸೀರೆ ಖರೀದಿಸಿದ ಡಿಕೆ ಶಿವಕುಮಾರ್: ಬೆಲೆ ಎಷ್ಟು ಗೊತ್ತಾ?
ಫ್ರಾನ್ಸ್​ ಮಹಾಯುದ್ಧದಲ್ಲಿ ಹುತಾತ್ಮರಾದ ಸೈನಿಕರಿಗೆ ಪ್ರಧಾನಿ ಮೋದಿ ನಮನ
ಫ್ರಾನ್ಸ್​ ಮಹಾಯುದ್ಧದಲ್ಲಿ ಹುತಾತ್ಮರಾದ ಸೈನಿಕರಿಗೆ ಪ್ರಧಾನಿ ಮೋದಿ ನಮನ