ಏರ್ ಶೋ: ಬೆಂಗಳೂರಿನಲ್ಲಿ ಐದು ದಿನಗಳ ಕಾಲ ರೂಮ್, ಕ್ಯಾಬ್ ಸಿಗೋದು ಕಷ್ಟ!

Aero India 2025: ಬೆಂಗಳೂರು ಏರ್ ಶೋಗೆ ದಿನಗಣನೆ ಆರಂಭವಾಗಿದ್ದು, ನಗರದಲ್ಲಿರುವ ಟ್ರಾವೆಲ್ಸ್​ಗಳಲ್ಲಿ ಐಷಾರಾಮಿ ಕಾರುಗಳು ಸೇರಿದಂತೆ ಎಲ್ಲಾ ಮಾದರಿಯ ಕಾರುಗಳನ್ನು ಕಾಯ್ದಿರಿಸಲಾಗಿದೆ. ಏರ್ ಶೋ ನಡೆಯುವ ಪ್ರದೇಶದ ಸುತ್ತಮುತ್ತಲಿನ ಫೈವ್ ಸ್ಟಾರ್, ಥ್ರೀ‌ ಸ್ಟಾರ್ ಸೇರಿದಂತೆ ಎಲ್ಲಾ ಮಾದರಿಯ ಹೋಟೆಲ್ ಲಾಡ್ಜ್, ರೂಮ್​ಗಳನ್ನೆಲ್ಲ ಈಗಾಗಲೇ ಕಾಯ್ದಿರಿಸಲಾಗಿದೆ.

ಏರ್ ಶೋ: ಬೆಂಗಳೂರಿನಲ್ಲಿ ಐದು ದಿನಗಳ ಕಾಲ ರೂಮ್, ಕ್ಯಾಬ್ ಸಿಗೋದು ಕಷ್ಟ!
ಬೆಂಗಳೂರು ಏರ್ ಶೋ (ಸಂಗ್ರಹ ಚಿತ್ರ)
Follow us
Kiran Surya
| Updated By: Ganapathi Sharma

Updated on: Feb 04, 2025 | 7:36 AM

ಬೆಂಗಳೂರು, ಫೆಬ್ರವರಿ 4: ಯಲಹಂಕ ವಾಯುನೆಲೆಯಲ್ಲಿ ನಡೆಯುವ ಏರ್ ಶೋ ಕಾರಣದಿಂದಾಗಿ ಬೆಂಗಳೂರು ನಗರದಲ್ಲಿ ಮತ್ತು ಏರ್ ನಡೆಯುವ ಸುತ್ತಮುತ್ತಲಿನ ಪ್ರದೇಶದಲ್ಲಿ ರೂಮ್ಸ್ ಬಾಡಿಗೆ ಸಿಗದಂತಾಗಿದೆ. ರೂಮ್ಸ್ ಬೇಕು ಅಂದರೆ ದುಪ್ಪಟ್ಟು ಹಣ ಕೊಡಲೇಬೇಕು. ಏರ್ ಶೋ ಹೆಸರಲ್ಲಿ ಓನ್ ಟು ಡಬಲ್ ಹಣಕ್ಕೆ ಡಿಮ್ಯಾಂಡ್ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಏರ್ ಶೋ ಹಿನ್ನೆಲೆ ಸಿಲಿಕಾನ್ ಸಿಟಿಯಲ್ಲಿ ರೂಮ್ಸ್, ಟ್ಯಾಕ್ಸಿ, ಕ್ಯಾಬ್ಸ್ ಬುಕ್ಕಿಂಗ್ ಜೋರಾಗಿದೆ. ಫೆಬ್ರವರಿ 10 ರಿಂದ 14 ರ ವರೆಗೆ ಏರ್ ಶೋ ನಡೆಯಲಿದ್ದು, ನಗರದ ಹೆಚ್ಚಿನ ಫೈ ಸ್ಟಾರ್, ಥ್ರೀ ಸ್ಟಾರ್ ಸೇರಿದಂತೆ ಬಹುತೇಕ ಹೋಟೆಲ್​ಗಳು, ಲಾಡ್ಜ್​​ಗಳನ್ನು ಈಗಾಗಲೇ ಕಾಯ್ದಿರಿಸಲಾಗಿದೆ.

ಬೇರೆ ರಾಜ್ಯಗಳಿಂದಲೂ ಬರಲಿವೆ ಕ್ಯಾಬ್​ಗಳು!

ಏರ್ ಶೋ ವೀಕ್ಷಣೆಗೆ, ವಿದೇಶಗಳಿಂದ ಜನರು ಆಗಮಿಸಲಿದ್ದು, ಟ್ರಾವೆಲ್ಸ್​ಗಳ ಬಳಿ ಇರುವ ಬಿಎಂಡಬ್ಲೂ, ಆಡಿ, ಬೆನ್ಜ್ ಸೇರಿದಂತೆ ಎಲ್ಲಾ ಮಾದರಿಯ ಕಾರುಗಳನ್ನು ಈಗಾಗಲೇ ಕಾಯ್ದಿರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಏರ್ ಶೋ ನಡೆಯುವ ಐದು ದಿನಗಳ ಕಾಲ ನಗರದಲ್ಲಿ ರೂಮ್ಸ್, ಕ್ಯಾಬ್ ಸಿಗುವುದು ಕಷ್ಟಕರವಾಗಿದೆ. ಈ ಬಗ್ಗೆ ಆರೆಂಜ್ ಟ್ರಾವೆಲ್ಸ್ ಮಾಲೀಕ ಪ್ರಶಾಂತ್ ಪ್ರತಿಕ್ರಿಯಿಸಿದ್ದು, ನಮ್ಮ ಮತ್ತು ನಮ್ಮ ಸ್ನೇಹಿತರ ಎಲ್ಲಾ ಟ್ರಾವೆಲ್ಸ್​​ಗಳಲ್ಲೂ ಕಾರುಗಳು ಬುಕ್ಕಿಂಗ್ ಆಗಿವೆ. ಬೇರೆ ರಾಜ್ಯದಿಂದ ಕ್ಯಾಬ್​ಗಳನ್ನು ಕರೆಸಿಕೊಂಡು ಕ್ಯಾಬ್ ಸೇವೆ ಒದಗಿಸಲು ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದಿದ್ದಾರೆ.

ಏರ್ ಶೋ ನಡೆಯುವ ಸುತ್ತಮುತ್ತಲಿನ ಹುಣಸೇಮಾರನಹಳ್ಳಿ, ಯಲಹಂಕ, ದೇವನಹಳ್ಳಿ, ಹೆಬ್ಬಾಳ ಸುತ್ತಲಿನ ಹೋಟೆಲ್​ಗಳಲ್ಲಿ ಒಂದೇ ಒಂದು ರೂಮ್ ಕೂಡ ಸಿಗದ ಪರಿಸ್ಥಿತಿ ಸೃಷ್ಟಿಯಾಗಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಆರ್‌ಟಿಒ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ತೆರಿಗೆ ಪಾವತಿಸದ 30 ಐಷಾರಾಮಿ ಕಾರುಗಳು ಸೀಜ್‌

ಒಟ್ಟಿನಲ್ಲಿ, ನಗರದಲ್ಲಿ ಐದು ದಿನಗಳ ಕಾಲ ನಡೆಯಲಿರುವ ಏರ್ ಶೋ ಹಿನ್ನೆಲೆ ಐದು ದಿನಗಳ ಕಾಲ ರೂಮ್ಸ್, ಹೋಟೆಲ್, ಕ್ಯಾಬ್​ಗಳು ಭರ್ಜರಿಯಾಗಿ ಬುಕ್ಕಿಂಗ್ ಆಗಿವೆ. ಹೀಗಾಗಿ ಏನಾದರೂ ತುರ್ತು ಕೆಲಸ ಇದ್ದರೆ ಮೊದಲೇ ಕ್ಯಾಬ್, ರೂಮ್ಸ್ ಬುಕ್ಕಿಂಗ್ ಮಾಡಿಕೊಳ್ಳುವುದು ಒಳಿತು.

ಮತ್ತೊಂದೆಡೆ, ಏರ್ ಶೋ ನಡೆಯುವ ಸಮಯದಲ್ಲಿ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸಂಚಾರದಲ್ಲಿಯೂ ವ್ಯತ್ಯಯವಾಗಲಿದ್ದು, ವಿಮಾನ ಪ್ರಯಾಣಿಕರ ಮೇಲೂ ಪರಿಣಾಮ ಬೀರಲಿದೆ. ಏರ್ ಶೋ ನಡೆಯುವ ನಿರ್ದಿಷ್ಟ ಸಮಯದಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಹಾಗೂ ಟೇಕಾಫ್​ಗಳು ನಡೆಯುವುದಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸೆಲೆಬ್ರಿಟಿಗಳಿಲ್ಲದೆ ಸರಳವಾಗಿ ಮದುವೆಯಾದ ಬಿಲಿಯನೇರ್ ಮಗ ಜೀತ್ ಅದಾನಿ
ಸೆಲೆಬ್ರಿಟಿಗಳಿಲ್ಲದೆ ಸರಳವಾಗಿ ಮದುವೆಯಾದ ಬಿಲಿಯನೇರ್ ಮಗ ಜೀತ್ ಅದಾನಿ
ದೆಹಲಿ ನಾಯಕರ ಭೇಟಿ ಬಳಿಕ ಶಾಸಕ ಯತ್ನಾಳ್​ ಹೇಳಿದ್ದಿಷ್ಟು
ದೆಹಲಿ ನಾಯಕರ ಭೇಟಿ ಬಳಿಕ ಶಾಸಕ ಯತ್ನಾಳ್​ ಹೇಳಿದ್ದಿಷ್ಟು
ರಕ್ಷಿತಾರನ್ನು ಮದುವೆಯಾದಾಗ ಅಂಬರೀಶ್ ಹೇಳಿದ್ದನ್ನು ಮೆಲಕು ಹಾಕಿದ ಪ್ರೇಮ್
ರಕ್ಷಿತಾರನ್ನು ಮದುವೆಯಾದಾಗ ಅಂಬರೀಶ್ ಹೇಳಿದ್ದನ್ನು ಮೆಲಕು ಹಾಕಿದ ಪ್ರೇಮ್
ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಜನ ಸಾವು
ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಜನ ಸಾವು
ಅಪ್ಪನನ್ನು ಇಷ್ಟಪಡುವ ಕಾರಣಕ್ಕೆ ಮಗನನ್ನೂ ಇಷ್ಟಪಡುವ ಅಗತ್ಯವಿಲ್ಲ: ನಿರಾಣಿ
ಅಪ್ಪನನ್ನು ಇಷ್ಟಪಡುವ ಕಾರಣಕ್ಕೆ ಮಗನನ್ನೂ ಇಷ್ಟಪಡುವ ಅಗತ್ಯವಿಲ್ಲ: ನಿರಾಣಿ
ಆಯತಪ್ಪಿ ಬಿದ್ದಿದ್ದ ಬೈಕ್​ ಸವಾರ: ಗಾಯಾಳುಗೆ ನೆರವಾದ ಸಂತೋಷ್ ಲಾಡ್
ಆಯತಪ್ಪಿ ಬಿದ್ದಿದ್ದ ಬೈಕ್​ ಸವಾರ: ಗಾಯಾಳುಗೆ ನೆರವಾದ ಸಂತೋಷ್ ಲಾಡ್
ವಿರೋಧಪಕ್ಷಗಳ ಟೀಕೆಗೆ ಗುರಿಯಾಗದ ಬಜೆಟ್ ಮಂಡನೆ ಮುಖ್ಯಮಂತ್ರಿಗೆ ಸಾಧ್ಯವೇ?
ವಿರೋಧಪಕ್ಷಗಳ ಟೀಕೆಗೆ ಗುರಿಯಾಗದ ಬಜೆಟ್ ಮಂಡನೆ ಮುಖ್ಯಮಂತ್ರಿಗೆ ಸಾಧ್ಯವೇ?
ದೇವೇಗೌಡ ತಮ್ಮ ಮಕ್ಕಳ ಬಗ್ಗೆ ಮಾತಾಡಿದ್ದೆಲ್ಲ ಗೊತ್ತಿದೆ: ಚಲುವರಾಯಸ್ಚಾಮಿ
ದೇವೇಗೌಡ ತಮ್ಮ ಮಕ್ಕಳ ಬಗ್ಗೆ ಮಾತಾಡಿದ್ದೆಲ್ಲ ಗೊತ್ತಿದೆ: ಚಲುವರಾಯಸ್ಚಾಮಿ
ಜಯಮಾಲಾ ಪುತ್ರಿ ಸೌಂದರ್ಯಾ ಮದುವೆಗೆ ಆಗಮಿಸಿದ ಯಶ್, ರಾಧಿಕಾ ಪಂಡಿತ್
ಜಯಮಾಲಾ ಪುತ್ರಿ ಸೌಂದರ್ಯಾ ಮದುವೆಗೆ ಆಗಮಿಸಿದ ಯಶ್, ರಾಧಿಕಾ ಪಂಡಿತ್
ಇನ್ನೆರಡು ವಾರಗಳಲ್ಲಿ ವರಿಷ್ಠರು ಎಲ್ಲವನ್ನೂ ಸರಿಮಾಡಲಿದ್ದಾರೆ: ಆರ್ ಅಶೋಕ
ಇನ್ನೆರಡು ವಾರಗಳಲ್ಲಿ ವರಿಷ್ಠರು ಎಲ್ಲವನ್ನೂ ಸರಿಮಾಡಲಿದ್ದಾರೆ: ಆರ್ ಅಶೋಕ