ಬೆಂಗಳೂರಲ್ಲಿ ಆರ್‌ಟಿಒ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ತೆರಿಗೆ ಪಾವತಿಸದ 30 ಐಷಾರಾಮಿ ಕಾರುಗಳು ಸೀಜ್
ಬೆಂಗಳೂರಿನ ಆರ್‌ಟಿಒ ಅಧಿಕಾರಿಗಳು ತೆರಿಗೆ ಪಾವತಿಸದೆ ಅನಧಿಕೃತವಾಗಿ ಸಂಚರಿಸುತ್ತಿದ್ದ 30 ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಿದ್ದಾರೆ. ಫೆರಾರಿ, ಪೋರ್ಷೆ, ರೇಂಜ್ ರೋವರ್ ಸೇರಿದಂತೆ ಹಲವು ಲಕ್ಷುರಿ ಕಾರುಗಳು ಜಪ್ತಿಯಾಗಿವೆ. ಈ ಕಾರುಗಳಿಂದ ಸುಮಾರು ಮೂರು ಕೋಟಿ ರೂಪಾಯಿ ತೆರಿಗೆ ವಸೂಲಿ ಮಾಡಲು ನೋಟಿಸ್ ಜಾರಿ ಮಾಡಲಾಗಿದೆ.

ಬೆಂಗಳೂರು, ಫೆಬ್ರವರಿ 03: ತೆರಿಗೆ (tax) ಪಾವತಿ ಮಾಡದೆ ಅನಧಿಕೃತವಾಗಿ ನಗರದಲ್ಲಿ ಸಂಚಾರ ಮಾಡುತ್ತಿದ್ದ ಫೆರಾರಿ, ಪೋರ್ಷೆ ಮತ್ತು ರೇಂಜ್ ರೋವರ್ ಸೇರಿದಂತೆ 30 ಐಷಾರಾಮಿ ಸ್ಪೋರ್ಟ್ಸ್ ಕಾರುಗಳನ್ನು ಆರ್‌ಟಿಒ ಅಧಿಕಾರಿಗಳು ಸೋಮವಾರ ಸೀಜ್ ಮಾಡಿದ್ದಾರೆ. ಜಪ್ತಿಯಾದ ಕಾರುಗಳಿಂದ 3 ಕೋಟಿ ರೂ. ತೆರಿಗೆ ವಸೂಲಿ ಆಗಬೇಕಿದೆ.
ನಿನ್ನೆ ನಗರದಲ್ಲಿ ಕಾರ್ಯಚರಣೆ ಮಾಡಿದ ಆರ್‌ಟಿಒ ಅಧಿಕಾರಿಗಳು ಮಾಸೆರಾಟಿ, ಫೆರಾರಿ, ಪೋರ್ಷೆ, ರೇಂಜ್ ರೋವರ್, ಬಿಎಂಡಬ್ಲ್ಯು ಸೇರಿ 30 ಲಕ್ಸುರಿ ಕಾರುಗಳನ್ನು ಜಪ್ತಿ ಮಾಡಲಾಗಿದೆ. ದೆಹಲಿ, ಪುದುಚೇರಿ, ಮಹಾರಾಷ್ಟ್ರ, ಉತ್ತರ ಪ್ರದೇಶ, ಜಾರ್ಖಂಡ್ ಸೇರಿ ಹಲವು ರಾಜ್ಯಗಳಲ್ಲಿ ಐಷಾರಾಮಿ ಕಾರು ನೋಂದಣಿ ಮಾಡಿಸಿದ್ದರು. ಕರ್ನಾಟಕದಲ್ಲಿ ಅನಧಿಕೃತವಾಗಿ ಸಂಚಾರ ಮಾಡುತ್ತಿದ್ದ ಹಿನ್ನೆಲೆ ಸೀಜ್ ಮಾಡಲಾಗಿದೆ.
ಇದನ್ನೂ ಓದಿ: ಸ್ಕೂಟರ್ ಬೆಲೆಗಿಂತ ದಂಡದ ಮೊತ್ತವೇ ಅಧಿಕ: ಸವಾರನಿಗೆ 1.61 ಲಕ್ಷ ರೂ. ದಂಡ ವಿಧಿಸಿದ ಪೊಲೀಸ್
ಮಾಹಿತಿ ಪ್ರಕಾರ ಸಾರಿಗೆ ಉಪ ಆಯುಕ್ತ ಸಿ.ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಬಿ.ಶ್ರೀನಿವಾಸ್ ಪ್ರಸಾದ್, ದೀಪಕ್, ಶ್ರೀನಿವಾಸಪ್ಪ, ರಂಜಿತ್ ಸೇರಿದಂತೆ 41 ಅಧಿಕಾರಿಗಳ ತಂಡದಿಂದ ಕಾರ್ಯಾಚರಣೆ ಮಾಡಲಾಗಿದೆ.
ಜಪ್ತಿ ಮಾಡಲಾಗಿರುವ ಕಾರುಗಳು ರಾಜ್ಯದಲ್ಲಿ ತೆರಿಗೆ ಪಾವತಿಸದೆ ಸಂಚರಿಸುತ್ತಿದ್ದವು. ಸದ್ಯ ಸೀಜ್ ಆಗಿರುವ ವಾಹನಗಳಿಂದ ಸುಮಾರು ಮೂರು ಕೋಟಿ ರೂಪಾಯಿ ತೆರಿಗೆ ವಸೂಲಿ ಮಾಡಲು ನೋಟಿಸ್ ನೀಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ: 80 ಲಕ್ಷ ರೂ. ದಂಡ ಸಂಗ್ರಹ
ಡ್ರಂಕ್ ಆ್ಯಂಡ್ ಡ್ರೈವ್ ವಿರುದ್ಧ ಸಂಚಾರಿ ಪೊಲೀಸರು ಕಾರ್ಯಾಚರಣೆ ಮಾಡಿದ್ದು, ತಪಾಸಣೆಯಲ್ಲಿ 80 ಲಕ್ಷ ರೂ. ದಂಡ ಸಂಗ್ರಹ ಮಾಡಲಾಗಿದೆ. ಜನವರಿ 27ರಿಂದ ಫೆ.2ರವರೆಗೆ ಬೆಂಗಳೂರಿನ 50 ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ಮಾಡಲಾಗಿದೆ.
ಇದನ್ನೂ ಓದಿ: ಇನ್ನು 1 ತಿಂಗಳು ಬೆಂಗಳೂರಿನ ಕಬ್ಬನ್ ರಸ್ತೆ ಬಂದ್; ಪರ್ಯಾಯ ಮಾರ್ಗದ ಮಾಹಿತಿ ಇಲ್ಲಿದೆ
ಬೆಂಗಳೂರು ನಗರದಲ್ಲಿ ಕಳೆದ 1 ವಾರದಲ್ಲಿ 800 ವಾಹನ ಸೀಜ್ ಮಾಡಲಾಗಿದೆ ಎಂದು ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಮಾಹಿತಿ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:55 pm, Mon, 3 February 25