Bangalore Power Cut: ಬೆಂಗಳೂರಿನ ಹಲವು ಏರಿಯಾಗಳಲ್ಲಿ ಇಂದು ಸಂಜೆ 4ರವರೆಗೆ ಪವರ್ ಕಟ್
Bengaluru News: ಬೆಂಗಳೂರಿನ ಹಲವು ಏರಿಯಾಗಳಲ್ಲಿ ಇಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ.
ಬೆಂಗಳೂರು: ಅಕಾಲಿಕ ಮಳೆಯಿಂದಾಗಿ ಬೆಂಗಳೂರಿನಲ್ಲಿ ಬಹಳ ಸಮಯದಿಂದ ಬಾಕಿ ಉಳಿದಿದ್ದ ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳನ್ನು ಬೆಸ್ಕಾಂ (BESCOM) ಅಧಿಕಾರಿಗಳು ಈಗ ಕೈಗೆತ್ತಿಕೊಳ್ಳುತ್ತಿದ್ದಾರೆ. ಹೀಗಾಗಿ, ಇಂದು ಬೆಳಗ್ಗೆಯಿಂದ ಸಂಜೆಯವರೆಗೆ ಬೆಂಗಳೂರಿನ ಕೆಲವು ಏರಿಯಾಗಳಲ್ಲಿ ಪವರ್ ಕಟ್ (Power Cut) ಇರಲಿದೆ. ಬೆಂಗಳೂರಿನ ವಿದ್ಯುಚ್ಛಕ್ತಿ ಮಂಡಳಿಯಾದ ಬೆಸ್ಕಾಂ ಇಂದು ಕೆಲವು ಬಾಕಿ ಉಳಿದಿರುವ ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವುದರಿಂದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ.
ಬೆಂಗಳೂರಿನ ಹಲವು ಏರಿಯಾಗಳಲ್ಲಿ ಇಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಶಂಕರ್ ವಿಹಾರ್ ಲೇಔಟ್, ಪಿ.ಬಿ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, BSNL ಕಚೇರಿ, ಸಬ್ ರಿಜಿಸ್ಟ್ರಾರ್ ಕಚೇರಿ, ವಿನಾಯಕ ನಗರ, ಸಾಯಿ ಇಂಟರ್‌ನ್ಯಾಶನಲ್ ಹೋಟೆಲ್, ಪೂಜಾ ಇಂಟರ್‌ನ್ಯಾಶನಲ್ ಹೋಟೆಲ್, ದೇವರಾಜ್ ಅರಸ್ ಲೇಔಟ್ ಬಿ ಬ್ಲಾಕ್, ಗಿರಿಯಪ್ಪ ಲೇಔಟ್ ಮತ್ತು ಜಿಎಂಐಟಿ ಕಾಲೇಜು ಏರಿಯಾಗಳಲ್ಲಿ ಇಂದು ಸಂಜೆಯವರೆಗೆ ಕರೆಂಟ್ ಇರುವುದಿಲ್ಲ.
ಇದನ್ನೂ ಓದಿ: Bangalore Power Cut: ಬೆಂಗಳೂರಿನ ಈ ಏರಿಯಾಗಳಲ್ಲಿ ನ. 24ರವರೆಗೆ ಪವರ್ ಕಟ್
ಇತ್ತೀಚೆಗೆ ಬೆಸ್ಕಾಂ ತನ್ನ 8 ಜಿಲ್ಲೆಗಳಲ್ಲಿ ಗ್ರಾಹಕರಿಗೆ ವಾಟ್ಸ್ಆ್ಯಪ್ ಸಹಾಯವಾಣಿ ಸಂಖ್ಯೆಗಳನ್ನು ಪರಿಚಯಿಸಿತ್ತು. ವಿದ್ಯುತ್ ಗ್ರಾಹಕರು ತಮ್ಮ ಜಿಲ್ಲೆಯ ಆಯಾ ವಾಟ್ಸಾಪ್ ಸಹಾಯವಾಣಿ / ಗ್ರಾಹಕ ಸೇವಾ ಸಂಖ್ಯೆಗೆ ತಮ್ಮ ವಿದ್ಯುತ್ ಸಮಸ್ಯೆಗಳ ಕುರಿತು ಚಿತ್ರ ಕಳುಹಿಸಬಹುದು. ಹಾಗೇ, ವೀಡಿಯೊವನ್ನು ಕೂಡ ಹಂಚಿಕೊಳ್ಳಬಹುದು ಅಥವಾ ಸಂದೇಶವನ್ನು ಕಳುಹಿಸಬಹುದು ಎಂದು ತಿಳಿಸಲಾಗಿತ್ತು.
ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಿಗೆ ಮೀಸಲಾದ ವಾಟ್ಸಾಪ್ ಸಂಖ್ಯೆಗಳು ಇಲ್ಲಿವೆ:
1. ಬೆಂಗಳೂರು ನಗರ- 82778 84011, 82778 84012, 82778 84013, 82778 84014 2. ಕೋಲಾರ – 82778 84015 3. ಚಿಕ್ಕಬಳ್ಳಾಪುರ – 82778 84016 4. ಬೆಂಗಳೂರು ಗ್ರಾಮಾಂತರ – 82778 84017 5. ರಾಮನಗರ – 82778 84019 6. ತುಮಕೂರು – 82778 84018 7. ಚಿತ್ರದುರ್ಗ – 82778 84020 8. ದಾವಣಗೆರೆ – 82778 84021