Bangalore Power Cut: ಬೆಂಗಳೂರಿನ ಈ ಏರಿಯಾಗಳಲ್ಲಿ ನ. 24ರವರೆಗೆ ಪವರ್ ಕಟ್
ಬೆಂಗಳೂರು, ದಾವಣಗೆರೆಯ ಈ ಪ್ರದೇಶಗಳಲ್ಲಿ ಇಂದು ಬೆಳಿಗ್ಗೆ 10ರಿಂದ ಸಂಜೆ 4ರ ನಡುವೆ ವಿದ್ಯುತ್ ಕಡಿತವಾಗಲಿದೆ.
ಬೆಂಗಳೂರು: ಭಾರತದ ಸಿಲಿಕಾನ್ ಸಿಟಿ ಎಂದೇ ಹೆಸರಾದ ಬೆಂಗಳೂರಿನಲ್ಲಿ (Bengaluru Power Cut) ಇಂದು (ಬುಧವಾರ) ಮತ್ತು ಗುರುವಾರ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಬೆಸ್ಕಾಂ (BESCOM), ಕೆಪಿಟಿಸಿಎಲ್ನಿಂದ (KPTCL) ನಿಗದಿಪಡಿಸಲಾದ ಕೆಲವು ಯೋಜನೆಗಳಿಂದಾಗಿ ಬೆಂಗಳೂರಿನಲ್ಲಿ ಇನ್ನೆರಡು ದಿನ ಪವರ್ ಕಟ್ ಇರಲಿದೆ. ಬೆಂಗಳೂರು, ದಾವಣಗೆರೆಯ ಈ ಪ್ರದೇಶಗಳಲ್ಲಿ ಇಂದು ಬೆಳಿಗ್ಗೆ 10ರಿಂದ ಸಂಜೆ 4ರ ನಡುವೆ ವಿದ್ಯುತ್ ಕಡಿತವಾಗಲಿದೆ.
ಇಂದು (ನವೆಂಬರ್ 23) ದಾವಣಗೆರೆ ವೃತ್ತದ ಹೊಂಡದ ಸರ್ಕಲ್, ಜಾಲಿ ನಗರ, ಶಿವಾಜಿ ನಗರ, ಎಂ ಬಿ ಕೆರೆ ಮತ್ತು ಚಲುವಾದಿ ಕೆರೆಯಲ್ಲಿ ಪವರ್ ಕಟ್ ಇರಲಿದೆ.
ಗುರುವಾರ (ನವೆಂಬರ್ 24) ಬೆಂಗಳೂರಿನ ಮಂಡಿಪೇಟೆ, ಬಿನ್ನಿ ಕಂಪನಿ ರಸ್ತೆ, ಚಾಮರಾಜ ಪೇಟೆ ವೃತ್ತ, ಗಡಿಯಾರ ಗೋಪುರ ಮತ್ತು ಮಹಾವೀರ್ ರಸ್ತೆಯಲ್ಲಿ ಪವರ್ ಕಟ್ ಇರಲಿದೆ. ಹಾಗೇ, ದಾವಣಗೆರೆ ವೃತ್ತದ ಹೊಂಡದ ಸರ್ಕಲ್, ಜಾಲಿ ನಗರ, ಶಿವಾಜಿ ನಗರ, ಎಂಬಿ ಕೆರೆ ಮತ್ತು ಚಲುವಾದಿ ಕೆರೆ ಸುತ್ತಮುತ್ತ ವಿದ್ಯುತ್ ವ್ಯತ್ಯಯವಾಗಲಿದೆ.