ಬೆಂಗಳೂರು: ವಿಶ್ವವಿದ್ಯಾಲಯದ ಅನುಮತಿ ಇಲ್ಲದೆ ಡಿ ಫಾರ್ಮಾ ಕೋರ್ಸ್: ಖಾಸಗಿ ಕಾಲೇಜಿನ ಆಟ, ವಿದ್ಯಾರ್ಥಿಗಳಿಗೆ ಸಂಕಷ್ಟ
ರೊಚ್ಚಿಗೆದ್ದ ವಿದ್ಯಾರ್ಥಿಗಳು, ಪೋಷಕರನ್ನು ಸಮಾಧಾನಪಡಿಸುವ ಕೈಕಂರ್ಯದಲ್ಲಿ ಚಿಕ್ಕಬಾಣವಾರದಲ್ಲಿರುವ ಆರ್.ಆರ್. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಆಡಳಿತ ಮಂಡಳಿ ತೊಡಗಿದ್ದು, ವಿದ್ಯಾರ್ಥಿಗಳಿಗೆ ಸಬೂಬು ಹೇಳುತ್ತಿದೆ. ಮುಂದಿನ ತಿಂಗಳು ಪರೀಕ್ಷೆಗೆ ನೀಡುವುದಾಗಿ ಭರವಸೆ ನೀಡುತ್ತಿದೆ.
ಬೆಂಗಳೂರು: ವಿಶ್ವವಿದ್ಯಾಲಯದ ಅನುಮತಿ ಇಲ್ಲದೆ ಹೆಸರಘಟ್ಟ ರಸ್ತೆಯಲ್ಲಿರುವ ಆರ್.ಆರ್. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂಬ ಖಾಸಗಿ ಕಾಲೇಜು ಡಿ-ಫಾರ್ಮಾ ಕೋರ್ಸ್ (RR College of Pharmacy -RRCP, Bangalore) ಗೆ ಅವಕಾಶ ನೀಡಿದ್ದು, ಇದರಿಂದ ವಿದ್ಯಾರ್ಥಿಗಳು (Students) ಈಗ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ವಿದ್ಯಾರ್ಥಿಗಳಿಂದ ಲಕ್ಷ ಲಕ್ಷ ವಸೂಲಿ ಮಾಡಿರುವ ಆರ್.ಆರ್. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾರ್ಥಿಗಳಿಗೆ ಇದೀಗ ಪರೀಕ್ಷೆ (Exams) ಬರೆಯಲು ಅವಕಾಶ ಇಲ್ಲವಾಗಿದ್ದು, ವಿದ್ಯಾರ್ಥಿಗಳು ಪೋಷಕರು ಕಂಗಾಲಾಗಿದ್ದಾರೆ.
ಕಾಲೇಜು ಗೇಟಿಗೆ ಬೀಗ ಹಾಕಿದ ವಿದ್ಯಾರ್ಥಿಗಳು, ಗಲಾಟೆ: ಬೆಂಗಳೂರು ಉತ್ತರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ RR ಕಾಲೇಜು ಡಿ-ಫಾರ್ಮಾ ಕೋರ್ಸ್ಗಾಗಿ ಕರ್ನಾಟಕದ ವಿದ್ಯಾರ್ಥಿಗಳಿಂದ ಒಂದು ವರ್ಷಕ್ಕೆ 51 ಸಾವಿರ ರೂ ಶುಲ್ಕ ಪಡೆದಿದೆ. ಅದೇ ರೀತಿ ಹೊರ ರಾಜ್ಯದ ವಿದ್ಯಾರ್ಥಿಗಳಿಂದ 1.5 ಲಕ್ಷ ರೂಪಾಯಿ ಪಡೆದಿದೆ. ಹೀಗೆ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಲಕ್ಷ ಲಕ್ಷ ರೂಪಾಯಿ ಫೀಸ್ ವಸೂಲಿ ಮಾಡಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರಿನ್ಸಿಪಲ್ ಕಚೇರಿಗೆ ಮುತ್ತಿಗೆ ಹಾಕಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಾಂಶುಪಾಲರು ಹಾಗೂ ಪೋಷಕರ ನಡುವೆ ವಾಗ್ವಾದವೂ ನಡೆದಿದೆ. ಈ ಕಾಲೇಜು ಎಲ್ಲೂ ರಿಜಿಸ್ಟರ್ ಆಗಿಯೇ ಇಲ್ಲ. ನಾವು ಪಾವತಿಸಿದ ಶುಲ್ಕ ವಾಪಸ್ ಕೊಡ್ತೀವಿ ಅಂತಾ ಈಗ ಹೇಳ್ತಿದ್ದಾರೆ. ನಮಗೆ ಫೀಸ್ ಬೇಡ, ಪರೀಕ್ಷೆ ಬೇಕು. ಕೂಡಲೇ ಅನ್ಯಾಯ ಸರಿಪಡಿಸುವಂತೆ ವಿದ್ಯಾರ್ಥಿಗಳು, ಪೋಷಕರು ಆಗ್ರಹಿಸಿದ್ದಾರೆ. ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿದ್ದಾರೆ.
ವಿದ್ಯಾರ್ಥಿಗಳಿಗೆ ಸಬೂಬು ಹೇಳುತ್ತಿರುವ ಕಾಲೇಜು ಆಡಳಿತ ಮಂಡಳಿ:
ರೊಚ್ಚಿಗೆದ್ದ ವಿದ್ಯಾರ್ಥಿಗಳು, ಪೋಷಕರನ್ನು ಸಮಾಧಾನಪಡಿಸುವ ಕೈಕಂರ್ಯದಲ್ಲಿ ಚಿಕ್ಕಬಾಣವಾರದಲ್ಲಿರುವ ಆರ್.ಆರ್. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಆಡಳಿತ ಮಂಡಳಿ ತೊಡಗಿದ್ದು, ವಿದ್ಯಾರ್ಥಿಗಳಿಗೆ ಸಬೂಬು ಹೇಳುತ್ತಿದೆ. ಮುಂದಿನ ತಿಂಗಳು ಪರೀಕ್ಷೆಗೆ ನೀಡುವುದಾಗಿ ಭರವಸೆ ನೀಡುತ್ತಿದೆ.
ಕಳೆದ ವರ್ಷ ನಮ್ಮ ಸೀನಿಯರ್ಸ್ ಗೂ ಸಹ ಹೀಗೆ ಆಗಿತ್ತು. ಇವತ್ತು ನಮಗೂ ಅದೇ ಪರಿಸ್ಥಿತಿ ಆಗಿದೆ. ಆಡಳಿತ ಮಂಡಳಿಯ ಮೇಲೆ ನಮಗೆ ನಂಬಿಕೆಯೇ ಇಲ್ಲವಾಗಿದೆ. ನಮಗೆ ಶುಲ್ಕ ವಾಪಸ್ ಬೇಡ, ಪರೀಕ್ಷೆ ಕೊಡಿ. ಮುಂದಿನ ತಿಂಗಳು ವ್ಯವಸ್ಥೆ ಮಾಡ್ತೀವಿ ಅಂತಿದೀರಿ. ನಮಗೆ ಇವತ್ತೇ ಪರೀಕ್ಷೆ ಕೊಡಬೇಕು ಅಂತಾ ಪಟ್ಟು ಹಿಡಿದ ವಿದ್ಯಾರ್ಥಿಗಳು ಪ್ರಾಂಶುಪಾಲರ ಕಚೇರಿಯಲ್ಲೇ ಧರಣಿಗೆ ಮುಂದಾಗಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ