“ಬೆಂಗಳೂರನ್ನು ಮತ್ತೆ ಶ್ರೇಷ್ಠ ನಗರವನ್ನಾಗಿಸೋಣ”: ಈ ಬದಲಾವಣೆಯಾದರೆ ಸಿಲಿಕಾನ್ ಸಿಟಿ ವಿಶ್ವ ದರ್ಜೆಯ ನಗರ ಆಗುವುದು ಖಂಡಿತ

ಸಿಲಿಕಾನ್ ಸಿಟಿ ಬೆಂಗಳೂರಿನ ಹವಾಮಾನದ ಬಗ್ಗೆ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟ್ ಚರ್ಚೆಗೆ ಕಾರಣವಾಗಿದೆ. ವಿಶ್ವದರ್ಜೆಯ ವಾತಾವರಣವನ್ನು ಹೊಂದಿರುವ ಬೆಂಗಳೂರು ಮಾಲಿನ್ಯ, ಕಳಪೆ ರಸ್ತೆಗಳು ಮತ್ತು ಮೂಲಸೌಕರ್ಯ ಸವಾಲುಗಳನ್ನು ಎದುರಿಸುತ್ತಿದೆ. 'ಮೇಕ್ ಬೆಂಗಳೂರು ಗ್ರೇಟ್ ಅಗೈನ್' ಎಂಬ ಕರೆಯು ನಾಗರಿಕರ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದ್ದು, ನಗರದ ಅಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆ ಕುರಿತು ಗಂಭೀರ ಚಿಂತನೆಗೆ ಹಚ್ಚಿದೆ.

ಬೆಂಗಳೂರನ್ನು ಮತ್ತೆ ಶ್ರೇಷ್ಠ ನಗರವನ್ನಾಗಿಸೋಣ: ಈ ಬದಲಾವಣೆಯಾದರೆ ಸಿಲಿಕಾನ್ ಸಿಟಿ ವಿಶ್ವ ದರ್ಜೆಯ ನಗರ ಆಗುವುದು ಖಂಡಿತ
ಬೆಂಗಳೂರು
Image Credit source: Tv9 kannada

Updated on: Feb 23, 2026 | 10:54 AM

ಬೆಂಗಳೂರು, ಫೆ. 23: ಸಿಲಿಕಾನ್​​ ಸಿಟಿಯ ಹವಾಮಾನ ( Bangalore infrastructure) ದಿನದಿಂದ ದಿನಕ್ಕೆ ಬದಲಾವಣೆ ಆಗುತ್ತ ಇರುತ್ತದೆ. ಅದರಲ್ಲೂ ಗಾಳಿಯ ಮಟ್ಟದಲ್ಲಿ ಪ್ರತಿದಿನ ಬದಲಾವಣೆಗಳು ಇರುತ್ತದೆ. ಒಂದು ವೇಳೆ ಕೆಲವು ಬದಲಾವಣೆಗಳನ್ನು ತಂದರೆ ಖಂಡಿತ ಬೆಂಗಳೂರಿನ ಹವಾಮಾನ ಉತ್ತಮವಾಗಿರುತ್ತದೆ ಎಂದು ಹೇಳಿರುವ ಪೋಸ್ಟ್​​ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಇದೀಗ ಬೆಂಗಳೂರಿನ ಹವಮಾನದ ಬಗ್ಗೆ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. “ನೀವೇನಾದರೂ ವಿದೇಶಗಳಲ್ಲಿ ವಾಸವಿದ್ದರೆ, ಬೆಂಗಳೂರಿನ ಹವಾಮಾನ ಎಷ್ಟು ಶ್ರೇಷ್ಠ ಎಂಬುದು ನಿಮಗೆ ಅರಿವಾಗುತ್ತದೆ. ಇದು ನಿಜಕ್ಕೂ ವಿಶ್ವದರ್ಜೆಯ ಹವಾಮಾನ,” ಎಂದು ಬೆಂಗಳೂರಿನ ನಿವಾಸಿ ಅಮರನಾಥ್ ಶಿವಶಂಕರ್ ಅವರು ಎಕ್ಸ್ (X) ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಸೋಶಿಯಲ್​​ ಮೀಡಿಯಾದಲ್ಲಿ ನೆಟ್ಟಿಗರ ಕೂಡ ಕಮೆಂಟ್​​ ಮಾಡಿದ್ದಾರೆ.

ಅಮರನಾಥ್ ಅವರು ತಮ್ಮ ವಿದೇಶಿ ಜೀವನದ ಅನುಭವವನ್ನು ಬೆಂಗಳೂರಿನ ಜೀವನಕ್ಕೆ ಹೋಲಿಸುತ್ತಾ, “ನಾವು ಮಾಲಿನ್ಯವನ್ನು ನಿಯಂತ್ರಿಸಿ, ರಸ್ತೆಗಳನ್ನು ಸರಿಪಡಿಸಿ, ಸಾರ್ವಜನಿಕ ಸಾರಿಗೆಯನ್ನು ಹೆಚ್ಚಿಸಿ ಮತ್ತು ಮಳೆನೀರು ಕಾಲುವೆಗಳನ್ನು ಸರಿಪಡಿಸಿದರೆ, ಬೆಂಗಳೂರು ಜಗತ್ತಿನ ಅತ್ಯುತ್ತಮ ನಗರಗಳಲ್ಲಿ ಒಂದಾಗಲಿದೆ. ‘ಮೇಕ್ ಬೆಂಗಳೂರು ಗ್ರೇಟ್ ಅಗೈನ್’ (ಬೆಂಗಳೂರನ್ನು ಮತ್ತೆ ಶ್ರೇಷ್ಠ ನಗರವನ್ನಾಗಿಸೋಣ),” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಚಾಮುಂಡಿ ಬೆಟ್ಟದ ಮೂಲ ದೇವರು ಯಾರು? ಮಹಾಬಲೇಶ್ವರ ದೇವಾಲಯದ ನಿಗೂಢ ಸತ್ಯ ಇಲ್ಲಿದೆ ನೋಡಿ

ವೈರಲ್​​ ಪೋಸ್ಟ್​:

ಈ ಪೋಸ್ಟ್​​ ಸುಮಾರು 29,000ಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಈ ಪೋಸ್ಟ್‌ಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಬೆಂಗಳೂರಿನಲ್ಲಿ 5 ವರ್ಷ ಜೀವನ ಮಾಡಿದ್ದೇನೆ. ಇದೀಗ ಮತ್ತೆ ಬರಬೇಕು ಎಂದು ಅನ್ನಿಸುತ್ತಿದೆ ಎಂದು ಒಬ್ಬರು ಕಮೆಂಟ್​ ಮಾಡಿದ್ದಾರೆ. ಹವಾಮಾನ ಸರಿ ಇದೆ, ಆದರೆ ಫುಟ್‌ಪಾತ್‌ಗಳ ಕಥೆಯೇನು? ಪಾದಚಾರಿ ಮಾರ್ಗಗಳನ್ನು ಮೊದಲು ಸರಿಪಡಿಸಬೇಕು ಎಂದು ಒಬ್ಬರು ಮೂಲಸೌಕರ್ಯದ ಬಗ್ಗೆ ಮಾತನಾಡಿದ್ದಾರೆ. ಮರಗಳನ್ನು ಕಡಿದು ಕಾಂಕ್ರೀಟ್ ಜಂಗಲ್ ಮಾಡುತ್ತಿದ್ದರೆ, ಹವಾಮಾನ ಶೀಘ್ರವೇ ಹದಗೆಡಲಿದೆ. ಕಡಿದ ಮರಗಳ ಬದಲಿಗೆ ಹೊಸ ಗಿಡಗಳನ್ನು ನೆಡಲೇಬೇಕು ಎಂದು ಮತ್ತೊಬ್ಬರು ಹೇಳಿದ್ದಾರೆ. ಬೆಂಗಳೂರಿನ ಹಳೆಯ ಕಾಲದ ಆಕರ್ಷಣೆಯನ್ನು ಮರಳಿ ತರುವುದು ಬಹಳ ಕಷ್ಟ. ಅಭಿವೃದ್ಧಿಯ ಹೆಸರಿನಲ್ಲಿ ನಗರವನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಮತ್ತೊಬ್ಬರು ಹೇಳಿದ್ದಾರೆ.

ಬೆಂಗಳೂರಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ