1.50 ಲಕ್ಷ ರೂ. ಲಂಚ ಸ್ವೀಕರಿಸುತ್ತಿರುವಾಗ ಲೋಕಾಯುಕ್ತ ಬಲೆಗೆ ಬಿದ್ದ ಆಹಾರ ನಿರೀಕ್ಷಕ, ಮ್ಯಾನೇಜರ್
ಬೆಂಗಳೂರಿನ ಉತ್ತರಹಳ್ಳಿ ಮತ್ತು ಕೆಂಗೇರಿ ಫುಡ್ ಇನ್ಸ್ಪೆಕ್ಟರ್ ಶ್ರೀಧರ್ ಮತ್ತು ಮ್ಯಾನೇಜರ್ ಉಮೇಶ್ ನ್ಯಾಯಬೆಲೆ ಅಂಗಡಿಗೆ ಲೈಸೆನ್ಸ್ ನೀಡಲು 2.50 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಮುಂಗಡವಾಗಿ 1.50 ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿರುವಂತಹ ಘಟನೆ ನಡೆದಿದೆ. ಸದ್ಯ ಇಬ್ಬರನ್ನು ಬಂಧಿಸಿ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಬೆಂಗಳೂರು, ಫೆಬ್ರವರಿ 12: ₹1.50 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಆಹಾರ ನಿರೀಕ್ಷಕ ಮತ್ತು ಮ್ಯಾನೇಜರ್ ಲೋಕಾಯುಕ್ತ (Lokayukta Raid) ಬಲೆಗೆ ಬಿದ್ದಿರುವಂತಹ ಘಟನೆ ನಗರದ ಉತ್ತರಹಳ್ಳಿ ಮತ್ತು ಕೆಂಗೇರಿ ಫುಡ್ ನಡೆದಿದೆ. ಫುಡ್ ಇನ್ಸ್ಪೆಕ್ಟರ್ ಶ್ರೀಧರ್ ಮತ್ತು ಮ್ಯಾನೇಜರ್ ಉಮೇಶ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು. ನ್ಯಾಯಬೆಲೆ ಅಂಡಗಿಗೆ ಲೈಸೆನ್ಸ್ ನೀಡಲು 2.5 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಈ ಮೊದಲು 1 ಲಕ್ಷ ರೂ. ಲಂಚ ಪಡೆದಿದ್ದ ಫುಡ್ ಇನ್ಸ್ಪೆಕ್ಟರ್ ಶ್ರೀಧರ್. ಮುಂಗಡವಾಗಿ ಇಂದು 1 ಲಕ್ಷ ರೂ. ಪಡೆಯುತ್ತಿದ್ದಾಗ ಸಿಕ್ಕಿಬಿದಿದ್ದಾರೆ. ಈ ಕುರಿತಾಗಿ ಲೋಕಾಯುಕ್ತಕ್ಕೆ ರಫೀಕ್ ಎಂಬುವವರು ದೂರು ನೀಡಿದ್ದರು. ಸದ್ಯ ಶ್ರೀಧರ್, ಉಮೇಶ್ನನ್ನು ಬಂಧಿಸಿ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಕರ್ನಾಟಕ ಒನ್ ಸೆಂಟರ್ನಲ್ಲಿ 250-300 ರೂ. ವಸೂಲಿ ಆರೋಪ: ತಹಶೀಲ್ದಾರ್ ದಾಳಿ
ಕೋಲಾರ: ಜಿಲ್ಲೆಯ ಕೆಜಿಎಫ್ನ ನಗರದ ರಾಬರ್ಟ್ಸನ್ಪೇಟೆಯ ಕರ್ನಾಟಕ ಒನ್ ಸೆಂಟರ್ನಲ್ಲಿ 250-300 ರೂ. ವಸೂಲಿ ಆರೋಪ ಕೇಳಿಬಂದ ಹಿನ್ನೆಲೆ ತಹಶೀಲ್ದಾರ್ ದಾಳಿ ಮಾಡಿದ್ದಾರೆ. ಕೆಜಿಎಫ್ ತಹಶೀಲ್ದಾರ್ ನಾಗವೇಣಿ ನೇತೃತ್ವದಲ್ಲಿ ಕಾರ್ಯಚರಣೆ ಮಾಡಿದ್ದು, ಜನರಿಗೆ ಉಚಿತ ಸೇವೆ ಬದಲು ಹಣ ವಸೂಲಿ ಮಾಡುತ್ತಿದ್ದು ಪತ್ತೆ ಆಗಿದೆ. ಕರ್ನಾಟಕ ಒನ್ಗೆ ಬೀಗ ಹಾಕಿ ಡಿಸಿಗೆ ವರದಿ ನೀಡಲಾಗಿದೆ.
ಕೋಲಾರ ತಾಲೂಕು ಕಚೇರಿ ಮೇಲೆ ಲೋಕಾಯುಕ್ತ ದಾಳಿ
ಕೋಲಾರ ತಾಲ್ಲೂಕು ಕಚೇರಿಗೆ ಕೋಲಾರ ಲೋಕಾಯುಕ್ತ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಲೋಕಾಯುಕ್ತ ಎಸ್ಪಿ ಉಮೇಶ್ ಅವರ ನೇತೃತ್ವದ ಲೋಕಾಯುಕ್ತ ಅಧಿಕಾರಿಗಳ ತಂಡ ಬೇಟಿ ನೀಡಿ ಸುಮಾರು ಆರು ಗಂಟೆಗಳ ಕಾಲ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಕೋಲಾರ ತಾಲೂಕು ಕಚೇರಿ ವಿರುದ್ಧ ಸಾರ್ವಜನಿಕರಿಂದ ಸರಣಿ ದೂರು: ಲೋಕಾಯುಕ್ತ ದಿಢೀರ್ ದಾಳಿ
ಕೋಲಾರ ತಾಲ್ಲೂಕು ಕಚೇರಿಯ ಮೇಲೆ ಮೇಲಿಂದ ಮೇಲೆ ದೂರು ಗಳು ಬಂದ ಹಿನ್ನೆಲೆ, ಜೊತೆಗೆ ತಾಲ್ಲೂಕು ಕಚೇರಿಯಲ್ಲಿ ಹಣ ನೀಡದೆ ಯಾವುದೇ ಕೆಲಸಗಳು ನಡೆಯೋದಿಲ್ಲ ಅನ್ನೋ ಸಾರ್ವಜನಿಕರ ದೂರಿನ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಧಿಕಾರಿಗಳು ಅನಗತ್ಯವಾಗಿ ಜನರ ಕೆಲಸವನ್ನು ಬಾಕಿ ಉಳಿಸಿಕೊಳ್ಳುವುದು, ಅಥವಾ ಹಣಕ್ಕಾಗಿ ಬೇಡಿಕೆ ಇಡುವ ಕುರಿತು ಪರಿಶೀಲನೆ ಮಾಡಿದ್ದಾರೆ.
ಸೀಜ್ ಆಗಿದ್ದ ಬೈಕ್ ಪಡೆಯಲು ಲಂಚ: ಸಿಕ್ಕಿಬಿದ್ದ ಅಧಿಕಾರಿಗಳು
ಮಂಡ್ಯ: ಅಪಘಾತದ ವೇಳೆ ಸೀಜ್ ಆಗಿದ್ದ ಎಲೆಕ್ಟ್ರಿಕ್ ಬೈಕ್ನ್ನು ಠಾಣೆಯಿಂದ ಬಿಡುಗಡೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮಂಡ್ಯದ ಸಂಚಾರಿ ಠಾಣೆ ಪೊಲೀಸರು ಎಂಟು ಸಾವಿರ ರೂ. ಲಂಚ ಪಡೆಯುವಾಗ ಲೋಕಯುಕ್ತ ಬಲೆಗೆ ಬಿದ್ದಿರುವಂತಹ ಘಟನೆ ಇತ್ತೀಚೆಗೆ ನಡೆದಿತ್ತು.
ಇದನ್ನೂ ಓದಿ: Lokayukta Raid: ಲೋಕಾಯುಕ್ತ ದಾಳಿಗೆ ಬೆಸ್ಕಾಂ ಇಇ ಚನ್ನಕೇಶವ ಶಾಕ್: ಬಿಪಿಯಲ್ಲಿ ಏರುಪೇರು
ಮಂಡ್ಯದ ಸಂಚಾರಿ ಠಾಣೆ ಪೇದೆಗಳಾದ ರಾಜಕುಮಾರ್ ಹಾಗೂ ಮಹದೇವ್ ಲೋಕಯುಕ್ತ ಬಲೆಗೆ ಬಿದ್ದಿದ್ದು, ಮಂಡ್ಯದ ಸಾದತ್ ಪಾಷ ಎಂಬಾತನಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದು, ಮಂಡ್ಯ ಎಸ್ ಪಿ ಸಜೀತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.