ಬೆಂಗಳೂರು, ಫೆಬ್ರವರಿ 02: ಧೂಮಪಾನ ಆರೋಗ್ಯಕ್ಕೆ ಹಾನಿಕರ ಅಂತಾ ಗೊತ್ತಿದ್ದರೂ ಜನ ಮಾತ್ರ ಅದನ್ನು ಬಿಡಲ್ಲ. ಜನರ ಈ ಚಟವನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಕಿರಾತಕರು ಸಿಗರೇಟ್‌ಗಳನ್ನು (Cigarette) ಸಹ ನಕಲಿ ಮಾಡಿ ಮಾರಾಟ ಮಾಡುತ್ತಿದ್ದಾರೆ. ಈಗ ಪೊಲೀಸರು ಇಂತಹ ಒಂದು ಜಾಲವನ್ನು ಭೇದಿಸಿ ಆರೋಪಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಇತ್ತೀಚೆಗೆ ಯಾವುದು ನಕಲಿ, ಯಾವುದು ಅಸಲಿ ಅನ್ನೋದೆ ಗೊತ್ತಾಗ್ತಿಲ್ಲ. ತಿನ್ನೋ ಆಹಾರದಿಂದ ಹಿಡಿದು ವಾಶ್ ರೂಂ ತೊಳೆಯೋ ವಸ್ತುಗಳು ಸಹ ಕಲಬೆರಕೆಯಾಗುತ್ತಿವೆ. ಅದರಲ್ಲೂ ಸಿಲಿಕಾನ್ ಸಿಟಿಯಲ್ಲಿ ನಕಲಿ ವಸ್ತುಗಳ ಹಾವಳಿ ಜೋರಾಗಿದೆ. ಅನೇಕ ಬಾರಿ ಬೆಂಗಳೂರು ಪೊಲೀಸರು ನಕಲಿ ವಸ್ತುಗಳನ್ನು ಸೀಜ್ ಮಾಡ್ತಾನೆ ಇರ್ತಾರೆ. ಈಗ ಅಂತಹದ್ದೇ ಒಂದು ನಕಲಿ ಪ್ರಾಡಕ್ಟ್ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ವಿಲ್ಸನ್ ಗಾರ್ಡನ್ ಪೊಲೀಸರು ಭೇದಿಸಿದ್ದಾರೆ.
ಇದನ್ನೂ ಓದಿ: ಕುವೈತ್ನಲ್ಲಿ ಅರಳಿದ್ದ ಪ್ರೀತಿ ವಿಜಯಪುರದಲ್ಲಿ ಅಂತ್ಯ: ಪ್ರೇಮಿಯನ್ನೇ ನಂಬಿ ಮೋಸ ಹೋದ ಆಂಧ್ರ ಬೆಡಗಿ
ಯೆಸ್. ಸಿಲಿಕಾನ್ ಸಿಟಿ ಬೆಂಗಳೂರಿಗೆ ರಾಷ್ಟ್ರ ರಾಜಧಾನಿ ದೆಹಲಿಯಿಂದ ನಕಲಿ ಸಿಗರೇಟ್ ಸ್ಮಗ್ಲಿಂಗ್ ಮಾಡಲಾಗುತ್ತಿತ್ತು. ಐಟಿಸಿ ಕಂಪನಿಯ ಸಿಗರೇಟ್ ಮಾದರಿಯಲ್ಲಿ ಅಸಲಿ ಸಿಗರೇಟ್ ತಲೆ ಮೇಲೆ ಹೊಡೆದ ಹಾಗೆ ನಕಲಿ ಸಿಗರೇಟ್ ತಯಾರಿಸಲಾಗುತ್ತಿತ್ತು. ಜ್ಯೂಸ್ ಪ್ಯಾಕೆಟ್ಗಳು ತುಂಬಿರುವ ಬಾಕ್ಸ್ ಅಂತಾ ಹೇಳಿಕೊಂಡು ನಕಲಿ ಸಿಗರೇಟ್ ಸಪ್ಲೈ ಮಾಡಲಾಗುತ್ತಿತ್ತು. ಇದರಿಂದ ಐಟಿಸಿ ಕಂಪನಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿತ್ತು.
ಇನ್ನೂ ನಕಲಿ ಸಿಗರೇಟ್ ಮಾರಾಟ ಮಾಡುತ್ತಿರುವ ಆರೋಪಿಗಳ ಕಳ್ಳಾಟ ಐಟಿಸಿ ಕಂಪನಿಗೆ ಗೊತ್ತಾದ ಕೂಡಲೇ ವಿಲ್ಸಲ್ ಗಾರ್ಡನ್ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ. ಪೊಲೀಸರು ಅಷ್ಟೇ ಕ್ಷಿಪ್ರ ಗತಿಯಲ್ಲಿ ಕಾರ್ಯಾಚರಣೆ ನಡೆಸಿ ಕೇರಳ ಮೂಲದ ಯೂಸಫ್ ಎಂಬಾತನನ್ನು ಬಂಧಿಸಿ 27 ಲಕ್ಷ ರೂ. ಮೌಲ್ಯದ ನಕಲಿ ಸಿಗರೇಟ್ ಸೀಜ್ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ವಧು ತೋರಿಸುವ ನೆಪದಲ್ಲಿ ಹನಿಟ್ರ್ಯಾಪ್, ಸುಲಿಗೆ
ಜೊತೆಗೆ ನಕಲಿ ಸಿಗರೇಟ್ ಸಾಗಿಸಲು ಬಳಸಿದ್ದ ಒಂದು ಗೂಡ್ಸ್ ವಾಹನ, ಆರೋಪಿ ಬಳಸುತ್ತಿದ್ದ ಕಾರನ್ನು ಸೀಜ್ ಮಾಡಿ ತನಿಖೆ ಮುಂದುವರೆಸಿದ್ದಾರೆ. ಒಟ್ಟಾರೆ ಒಂದೇ ದಿನ ಬೆಂಗಳೂರಿಗೆ ಇಷ್ಟೊಂದು ಮೌಲ್ಯದ ನಕಲಿ ಸಿಗರೇಟ್ ಬರುತ್ತಿದೆ ಅಂದರೆ ತಿಂಗಳಲ್ಲಿ ಎಷ್ಟು ಸಪ್ಲೈ ಆಗುತ್ತಿದೆ ಎಂಬುದನ್ನು ಊಹೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಇನ್ನಾದರೂ ಸಂಬಂಧಪಟ್ಟವರು ಈ ನಕಲಿ ವಸ್ತುಗಳ ಹಾವಳಿ ತಡೆಯಬೇಕಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.