AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುವೈತ್​​ನಲ್ಲಿ ಅರಳಿದ್ದ ಪ್ರೀತಿ ವಿಜಯಪುರದಲ್ಲಿ ಅಂತ್ಯ: ಪ್ರೇಮಿಯನ್ನೇ ನಂಬಿ ಮೋಸ ಹೋದ ಆಂಧ್ರ ಬೆಡಗಿ

ವಿಜಯಪುರದ ಯುವಕ ಮತ್ತು ಕುವೈತ್‌ನಲ್ಲಿ ಕೆಲಸ ಮಾಡುತ್ತಿದ್ದ ಆಂಧ್ರ ಪ್ರದೇಶದ ಯುವತಿ ಪ್ರೇಮಕಥೆ ದುರಂತಾಂತ್ಯ ಕಂಡಿದೆ. ಮದುವೆಯಾದ ನಂತರ ಯುವಕ ಯುವತಿಗೆ ಕಿರುಕುಳ ನೀಡಿ, ಹಣ ಮತ್ತು ಮೊಬೈಲ್ ಕದ್ದು ಪರಾರಿಯಾಗಿದ್ದಾರೆ. ಸದ್ಯ ಯುವತಿ ಪೊಲೀಸರಲ್ಲಿ ದೂರು ದಾಖಲಿಸಿದ್ದು, ನ್ಯಾಯಕ್ಕಾಗಿ ಹೋರಾಟ ನಡೆಸಿದ್ದಾಳೆ.

ಕುವೈತ್​​ನಲ್ಲಿ ಅರಳಿದ್ದ ಪ್ರೀತಿ ವಿಜಯಪುರದಲ್ಲಿ ಅಂತ್ಯ: ಪ್ರೇಮಿಯನ್ನೇ ನಂಬಿ ಮೋಸ ಹೋದ ಆಂಧ್ರ ಬೆಡಗಿ
ಕುವೈತ್​​ನಲ್ಲಿ ಅರಳಿದ್ದ ಪ್ರೀತಿ ವಿಜಯಪುರದಲ್ಲಿ ಅಂತ್ಯ: ಪ್ರೇಮಿಯನ್ನೇ ನಂಬಿ ಮೋಸ ಹೋದ ಆಂಧ್ರ ಬೆಡಗಿ
ಅಶೋಕ ಯಡಳ್ಳಿ, ವಿಜಯಪುರ
| Edited By: |

Updated on: Feb 02, 2025 | 5:58 PM

Share

ವಿಜಯಪುರ, ಫೆಬ್ರವರಿ 02: ಪ್ರೀತಿ, ಪ್ರೇಮ (love) ಅಂತಾ ಹೆತ್ತ ತಂದೆ ತಾಯಿ, ಅಣ್ಣ ತಮ್ಮಂದಿರು, ಅಕ್ಕ ತಂಗಿಯರನ್ನ ಹಾಗೂ ಸಂಬಂಧಿಕರನ್ನು ದೂರ ಮಾಡಿ ಬಿಡುವ ಪ್ರಕರಣಗಳನ್ನು ನಿತ್ಯ ನೋಡುತ್ತೇವೆ. ಮನಸಾರೆ ಪ್ರೀತಿಸಿದ ಯುವಕ ಒಳ್ಳೆಯವನಾದರೆ ಎಲ್ಲವೂ ಸರಿ. ಇಲ್ಲವಾದರೆ ಪ್ರೀತಿ ಪ್ರೇಮವೆಂದು ಎಲ್ಲವನ್ನೂ ತ್ಯಜಿಸಿ ಬಂದ ಯುವತಿಯ ಕಥೆ ಏನಾಗಬೇಡಾ? ಇದೀಗ ಜಿಲ್ಲೆಯ ಯುವಕನನ್ನೇ ನಂಬಿ ದೂರದ ಕುವೈತ್​ನಿಂದ ಬಂದಿದ್ದ ಆಂಧ್ರ ಪ್ರದೇಶದ ಮೂಲದ ಯುವತಿಯೋರ್ವಳ ಪಾಲಿಗೆ ಆಕೆ ನಂಬಿದ್ದ ಪ್ರೀತಿಯೇ ಮುಳ್ಳಾಗಿದೆ.

ಮದುವೆಯಾಗಿ 20 ದಿನದಲ್ಲೇ ತಲಾಕ್ 

ಕೆಲಸಕ್ಕೆಂದು ವಿಜಯಪುರದ ಯುವಕ ಆರೀಫ್ ಕುವೈತ್​ಗೆ ತೆರಳಿದ್ದ. ಆಂಧ್ರ ಪ್ರದೇಶದ ಚಿತ್ತಾಪುರ ಜಿಲ್ಲೆಯ ಬೆಡಗಿ ಶಾಹೀನ ಕೂಡ ಅಲ್ಲೇ ಕೆಸಲ್ಕಕೆ ಬಂದಿದ್ದಳು. ಶಾಹೀನ ಕಳೆದ ನಾಲ್ಕು ವರ್ಷದ ಹಿಂದೆ ದುಬೈನ್ ಕತಾರನಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲಿಯೇ ಆರೀಫ್ ಕೂಡ ಕೆಲಸಕ್ಕೆ ಸೇರಿಕೊಂಡಿದ್ದ. ಅಲ್ಲಿ ಇಬ್ಬರಿಗೂ ಪರಿಚಯವಾಗಿ ನಂತರ ಪ್ರೇಮಾಂಕುರವಾಗಿ ಮೂರು ವರ್ಷ ಒಟ್ಟಿಗೆ ಸಂಸಾರ ನಡೆಸಿದ್ದಾರೆ. ನಂತರ ಕರ್ನಾಟಕಕ್ಕೆ ಸ್ವಗ್ರಾಮಕ್ಕೆ ತೆರಳಿ ಸೆಟ್ಲ್ ಆಗೋಣ ಅಂತಾ ಹೇಳಿ ಆರೀಫ್ ತಾಳಿಕೊಟೆಗೆ ಶಾಹೀನಳನ್ನ ಕರೆ ತಂದಿದ್ದಾನೆ. ನಂತರ ಆರೀಫ್ ಕುಟುಂಬಸ್ಥರ ಸಮ್ಮುಖದಲ್ಲಿ ಕಳೆದ ತಿಂಗಳು ಜನವರಿ 9 ರಂದು ಮುಸ್ಲಿಂ ಪದ್ದತಿ ಪ್ರಕಾರ ನಿಖಾಃ ಮಾಡಿಕೊಂಡಿದ್ದಾರೆ. ಆದರೆ ಮದುವೆಯಾದ 20 ದಿನದಲ್ಲೇ ಆರೀಫ್ ಹಾಗೂ ಕುಟುಂಬಸ್ಥರು ತಲಾಕ್ ಕೊಡಲು ಶಾಹೀನಗೆ ಒತ್ತಾಯಿಸಿದರಂತೆ.

ಇದನ್ನೂ ಓದಿ: ಮಂಡ್ಯದಲ್ಲೊಂದು ಪೈಶಾಚಿಕ ಕೃತ್ಯ: 8 ವರ್ಷದ ಬಾಲಕಿ ಮೇಲೆ ಹಾಡಹಗಲೇ ಮೂವರಿಂದ ಗ್ಯಾಂಗ್​ರೇಪ್

ಅಲ್ಲದೆ ಆರೀಫ್ ಕುಟುಂಬಸ್ಥರು ಶಾಹೀನಗೆ ಕಿರುಕುಳ ನೀಡಿತ್ತಿದ್ದಾರಂತೆ. ಇದರಿಂದ ಬೇಸತ್ತ ಶಾಹೀನ ಪೊಲಿಸ್ ಠಾಣೆಯ ಮೆಟ್ಟಿಲು ಏರಿದ್ದಾಳೆ. ಆಗ ಆರೀಫ್ ಶಾಹೀನ ಜೊತೆ ಸರಿಯಾಗಿ ಸಂಸಾರ ಮಾಡುವುದಾಗಿ ಹೇಳಿ ಕರೆದುಕೊಂಡು ಬಂದಿದ್ದಾನೆ. ನಂತರ ಆರೀಫ್ ಕೆಲ ದಿನ ಸರಿಯಾಗಿದ್ದು, ನಂತರ ಶಾಹೀನ ಮೇಲೆ ಹಲ್ಲೆ ಕೂಡ ಮಾಡಿದ್ದಾನಂತೆ. ನಂತರ ಇಬ್ಬರು ವಿಜಯಪುರದ ಬುರಣಾಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರಂತೆ. ಅಲ್ಲಿಯೂ ಕೂಡ ಇಬ್ಬರ ಮಧ್ಯೆ ಗಲಾಟೆ ನಡೆದಿದೆ. ಆಗ ಆರೀಫ್ ತನ್ನ ಇಬ್ಬರು ಸಂಬಂಧಿಕರೊಟ್ಟಿಗೆ ಬಂದು ಚಾಕು ತೋರಿಸಿ, ಜೀವ ಬೆದರಿಕೆ ಹಾಕಿ ಶಾಹೀನ ಬಳಿ ಇದ್ದ ಹಣ, ಮೊಬೈಲ್ ಸೇರಿದಂತೆ ಎಲ್ಲ ದಾಖಲಾತಿಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ. ಸದ್ಯ ಶಾಹೀನ ಬೀದಿ ಪಾಲಾಗಿದ್ದು, ನನ್ನ ಗಂಡನನ್ನ ಹುಡುಕಿ ಕೊಡಿ ಅಂತಾ ವಿಜಯಪುರ ಗ್ರಾಮೀಣ ಪೊಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಯಾವಾಗ ಕುವೈತ್​ನಿಂದ ಆರೀಫ್ ಹಾಗೂ ಶಾಹೀನ ತಾಳಿಕೋಟೆಗೆ ಬಂದರೋ ಆಗಿನಿಂದಲೇ ಸಮಸ್ಯೆ ಶುರುವಾಗಿದೆ. ಆರೀಫ್ ಮನೆಯವರು ಶಾಹೀನನನ್ನು ಒಪ್ಪಿಕೊಂಡಿಲ್ಲ. ಆಕೆ ತಮ್ಮ ಕುಟುಂಬದ ಸೊಸೆ ಆಗೋದು ಯಾರಿಗೂ ಇಷ್ಟವಿಲ್ಲ. ಈ ಕಾರಣದಿಂದ ಇಬ್ಬರ ಮಧ್ಯೆ ಗೋಡೆಯಾಗಿದ್ದಾರೆ. ಒಂದೂ ಮೂಲದ ಪ್ರಕಾರ ಕುವೈತ್​ನಲ್ಲಿ ಒಟ್ಟಿಗೆ ಇದ್ದ ಆರೀಫ್ ತನ್ನ ಅವಶ್ಯಕತೆಗಳಿಗೆ ಮಾತ್ರ ಬಳಕೆ ಮಾಡಿಕೊಂಡಿದ್ದಾನೆ. ಆಕೆ ದುಡಿದ ಹಣದಲ್ಲಿ ಮಜಾ ಮಾಡಿದ್ಧಾನೆ. ಆತನನ್ನೇ ನಂಬಿದ್ದ ಶಾಹೀನ್ ದುಡಿದ ಹಣವನ್ನು ಆತನಿಗೆ ನೀಡಿದ್ದಾಳೆ.

ಆಕೆಗೆ ಆರೀಫ್ ಮದುವೆಯಾಗುವ ಭರವಸೆ ನೀಡಿದ್ದಾನೆ. ಆಕೆಯೂ ಆತನನ್ನು ನಂಬಿ ಬಂದಿದ್ದಾಳೆ. ಯಾವಾಗ ಮನೆಯಲ್ಲಿ ಶಾಹೀನಗೆ ವಿರೋಧ ವ್ಯಕ್ತವಾಗಿಯೋ ಆಗ ಆರೀಫ್ ಸಹ ಆಕೆಯ ವಿರುದ್ದವಾಗಿ ನಡೆದು ಕೊಳ್ಳತೊಡಗಿದ್ದ. ಆಕೆಗೆ ಹಲ್ಲೆ ಮಾಡಿದ ಬಳಿಕ ಹಿಂಸೆ ನೀಡಿದ ಕಾರಣ ದಾರಿ ಕಾಣದೇ ಆಕೆ ತಾಳಿಕೋಟೆ ಪೊಲೀಸ್ ಠಾಣೆಗೆ ತೆರಳಿದ್ದಳು. ಅಲ್ಲಿ ನ್ಯಾಯ ಪಂಚಾಯತಿ ಮಾಡಿದ ಬಳಿಕ ಶಾಹೀನ್ ಜೊತೆಗೆ ವಿಜಯಪುರ ತಾಲೂಕಿನ ಬುರಣಾಪೂರದಲ್ಲಿದ್ದ. ಬಳಿಕ ಆಕೆಯಿಂದ ಮುಕ್ತಿ ಪಡೆಯೋಕೆ ಶಾಹೀನ ಬಳಿಯಿದ್ದದ್ದೆಲ್ಲವನ್ನೂ ತೆಗೆದುಕೊಂಡು ಆಕೆಗೆ ಜೀವ ಬೆದರಿಕೆ ಹಾಕಿ ಮನೆ ಬಿಟ್ಟು ಪರಾರಿಯಾಗಿದ್ದಾನೆ. ಪ್ರೀತಿಯನ್ನು ನಂಬಿ ಬಂದವಳಿಗೆ ಅನ್ಯಾಯವಾಗಿದೆ. ಆಕೆಗೆ ನ್ಯಾಯ ನೀಡಬೇಕೆಂದು ಸ್ಥಳಿಯರು ಪೊಲೀಸರಿಗೆ ಮನವಿ ಮಾಡಿದ್ಧಾರೆ.

ಇದನ್ನೂ ಓದಿ: ಬೆಂಗಳೂರು: ವಧು ತೋರಿಸುವ ನೆಪದಲ್ಲಿ ಹನಿಟ್ರ್ಯಾಪ್, ಸುಲಿಗೆ

ಸದ್ಯ ಶಾಹೀನಗೆ ಹಾಗೂ ಶಾಹೀನ ಸಂಬಂಧಿಕರಿಗೆ ಪೋನ್ ಮಾಡಿ ಆರೀಫ್ ಸಂಬಂಧಿಕರು ಜೀವ ಬೆದರಿಕೆ ಹಾಕುತ್ತಿದ್ದಾರಂತೆ. ಸದ್ಯ ನನಗೆ ಯಾರಿಂದಲ್ಲೂ ನ್ಯಾಯ ಸಿಗುತ್ತಿಲ್ಲ. ನ್ಯಾಯ ಸಿಗಲಿಲ್ಲವಾದರೆ ಆರೀಫ್ ಕುಟುಂಬಸ್ಥರು, ನನ್ನ ಮದುವೆ ಮಾಡಿಸಿದವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳೊದಾಗಿ ಎಚ್ಚರಿಕೆ ನೀಡಿದ್ದಾಳೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ತನಿಖೆ ನಡೆಸಿ ಯುವತಿಗೆ ಕಾನೂನು ಪ್ರಕಾರ ನ್ಯಾಯ ಕೊಡಿಸಬೇಕಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಲಕ್ಕುಂಡಿಯಲ್ಲಿ 3 ತಲೆಯ ನಾಗರಕಲ್ಲು ಪ್ರಾಚ್ಯಾವಶೇಷ ಪತ್ತೆ!
ಲಕ್ಕುಂಡಿಯಲ್ಲಿ 3 ತಲೆಯ ನಾಗರಕಲ್ಲು ಪ್ರಾಚ್ಯಾವಶೇಷ ಪತ್ತೆ!