AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬನ್ನೇರುಘಟ್ಟ ಉದ್ಯಾನದಲ್ಲಿ ಕ್ಯಾನ್ಸರ್ ಇನ್ಫೆಕ್ಷನ್​ನಿಂದ ಹುಲಿ ಸಾವು, ಹುಲಿಗಳ ಸಂಖ್ಯೆ 15ಕ್ಕೆ ಕುಸಿತ

ಕಿರಣ್ ಗೆ ಕಳೆದ ಮೂರು ತಿಂಗಳಿನಿಂದ ಚಿಕಿತ್ಸೆ ನೀಡಲಾಗ್ತಿತ್ತು. ಇದರೊಂದಿಗೆ ಬನ್ನೇರುಘಟ್ಟ ಜೈವಿನ ಉದ್ಯಾನದಲ್ಲಿ ಹುಲಿಗಳ ಸಂಖ್ಯೆ 15ಕ್ಕೆ ಕುಸಿದಿದೆ. ಈ ಹಿಂದೆಯೂ ಇನ್ಫೆಕ್ಷನ್​ನಿಂದ ಮತ್ತೊಂದು ಹುಲಿ ಮೃತಪಟ್ಟಿತ್ತು.

ಬನ್ನೇರುಘಟ್ಟ ಉದ್ಯಾನದಲ್ಲಿ ಕ್ಯಾನ್ಸರ್ ಇನ್ಫೆಕ್ಷನ್​ನಿಂದ ಹುಲಿ ಸಾವು, ಹುಲಿಗಳ ಸಂಖ್ಯೆ 15ಕ್ಕೆ ಕುಸಿತ
ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಕ್ಯಾನ್ಸರ್ ಇನ್ಫೆಕ್ಷನ್​ನಿಂದ ಹುಲಿ ಸಾವು, ಹುಲಿಗಳ ಸಂಖ್ಯೆ 15ಕ್ಕೆ ಕುಸಿತ
TV9 Web
| Edited By: |

Updated on:Aug 26, 2022 | 8:23 PM

Share

ಆನೇಕಲ್: ಬೆಂಗಳೂರು ನಗರ ಜಿಲ್ಲೆ ಆನೇಕಲ್​ ತಾಲೂಕಿನ ಬನ್ನೇರುಘಟ್ಟ ಉದ್ಯಾನದಲ್ಲಿ (ಬನ್ನೇರುಘಟ್ಟ ಬಯಲಾಜಿಕಲ್‌ ಪಾರ್ಕ್ –Bannerghatta zoological park) ಮೂರೂವರೆ ವರ್ಷದ ಹುಲಿ (tiger) ಸಾವನ್ನಪ್ಪಿದೆ. ಕ್ಯಾನ್ಸರ್ ಮತ್ತು ಇನ್ಫೆಕ್ಷನ್​ನಿಂದ (cancer and infection) ಬಳಲುತ್ತಿದ್ದ ಕಿರಣ್ ಹೆಸರಿನ ಹುಲಿ ಚಿಕಿತ್ಸೆ ಫಲಿಸದೇ ಇಂದು ಬೆಳಿಗ್ಗೆ ಮೃತಪಟ್ಟಿದೆ. ಕಿರಣ್ ಗೆ ಕಳೆದ ಮೂರು ತಿಂಗಳಿನಿಂದ ಚಿಕಿತ್ಸೆ ನೀಡಲಾಗ್ತಿತ್ತು. ಇದರೊಂದಿಗೆ ಬನ್ನೇರುಘಟ್ಟ ಜೈವಿನ ಉದ್ಯಾನದಲ್ಲಿ ಹುಲಿಗಳ ಸಂಖ್ಯೆ 15ಕ್ಕೆ ಕುಸಿದಿದೆ. ಈ ಹಿಂದೆಯೂ ಇನ್ಫೆಕ್ಷನ್​ನಿಂದ ಮತ್ತೊಂದು ಹುಲಿ ಮೃತಪಟ್ಟಿತ್ತು.

ಮರಿ ಆನೆ‌ ಆಗಮನ, ಇಡೀ ಪಾರ್ಕ್ ನಲ್ಲಿ ‌ಸಂಭ್ರಮದ ವಾತಾವರಣ 

ಆನೇಕಲ್​ ತಾಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 15 ವರ್ಷದ ಆನೆ ವನಶ್ರೀ 3ನೇ ಮರಿಗೆ ಜನ್ಮನೀಡಿದೆ. ಈ ಹೆಣ್ಣಾನೆ ಜನನದೊಂದಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಆನೆಗಳ ಸಂಖ್ಯೆ 26ಕ್ಕೇ ಏರಿದೆ. ಮರಿ ಆನೆ ಆರೋಗ್ಯವಾಗಿದ್ದು, ಮರಿ ಆನೆ‌ ಆಗಮನದಿಂದ ಇಡೀ ಪಾರ್ಕ್ ನಲ್ಲಿ ‌ಸಂಭ್ರಮದ ವಾತಾವರಣ ಮನೆ ಮಾಡಿದೆ.

ವೈದ್ಯರ ನಿರ್ಲಕ್ಷ್ಯ: ಧ್ವನಿಪೆಟ್ಟಿಗೆ ಶಸ್ತ್ರಚಿಕಿತ್ಸೆ ವೇಳೆ ಬಾಲಕಿ ಸಾವು

ರಾಯಚೂರಿನಲ್ಲಿ ಧ್ವನಿಪೆಟ್ಟಿಗೆ ಶಸ್ತ್ರಚಿಕಿತ್ಸೆ ವೇಳೆ ಬಾಲಕಿ ಮೃತಪಟ್ಟಿದ್ದಾಳೆ. ವೈದ್ಯರ ನಿರ್ಲಕ್ಷ್ಯದಿಂದ ಸಾಯಿಕೀರ್ತನಾ ಎಂಬ 6 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಲಾಗಿದೆ. ರಾಯಚೂರಿನ ಡಾ .ಪಠಾಣ್ ENT ನರ್ಸಿಂಗ್​ ಹೋಮ್​ನಲ್ಲಿ ಘಟನೆ ನಡೆದಿದೆ. ರಾಯಚೂರು ತಾಲೂಕಿನ ಕೊಸಗಿ ಗ್ರಾಮದ ಆಂಜಿ ಮತ್ತು ಜ್ಯೋತಿ ದಂಪತಿ ಪುತ್ರಿ ಸಾಯಿಕೀರ್ತನಾ. ಆಂಜಿ, ಜ್ಯೋತಿ ದಂಪತಿ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಸಾಯಿಕೀರ್ತನಾಗೆ ಮಾತು ಬಾರದಿದ್ದರಿಂದ ಕಳೆದ ವರ್ಷ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆದರೆ ಮತ್ತೆ, ಧ್ವನಿ ಹೋಗಿದ್ದರಿಂದ ಸಾಯಿಕೀರ್ತನಾಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆ ವೇಳೆ ಸಾಯಿಕೀರ್ತನಾ ಸಾವನ್ನಪ್ಪಿದ್ದಾಳೆ. ಇದೀಗ ಡಾ. ಪಠಾಣ್ ENT ನರ್ಸಿಂಗ್​ ಹೋಮ್ ವಿರುದ್ಧ ಮೃತ ಸಾಯಿಕೀರ್ತನಾ ಸಂಬಂಧಿಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Published On - 6:06 pm, Fri, 26 August 22

Follow Us
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ