AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆಯೇ ಬಿಬಿಎಂಪಿ ಎಲೆಕ್ಷನ್ ಡೇಟ್ ಫಿಕ್ಸ್? ಯಾವಾಗ?

ಬಿಬಿಎಂಪಿ ಕಾರ್ಪೊರೇಟರ್​ಗಳ ಅಧಿಕಾರಾವಧಿ ಮುಗಿದು ಎರಡು ವರ್ಷಗಳೆ ಕಳೆದಿದೆ. ಅದ್ರೆ ಬಿಜೆಪಿ ಸರ್ಕಾರ ಒಂದಲ್ಲ ಒಂದು ನೆಪ ಹೊಡ್ಡಿ ಬಿಬಿಎಂಪಿ ಚುನಾವಣೆಯನ್ನೂ ಮುಂದೂಡುತ್ತ ಬಂದಿದೆ.

ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆಯೇ ಬಿಬಿಎಂಪಿ ಎಲೆಕ್ಷನ್ ಡೇಟ್ ಫಿಕ್ಸ್? ಯಾವಾಗ?
ಬಿಬಿಎಂಪಿ
Follow us
ಆಯೇಷಾ ಬಾನು
|

Updated on: May 16, 2023 | 7:20 AM

ಬೆಂಗಳೂರು: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ್ರೆ ಬೆಂಗಳೂರಿನ ಜನರ ಸಮಸ್ಯೆ ದೂರ ಮಾಡಲು ಬಿಬಿಎಂಪಿ ಚುನಾವಣೆ(BBMP Elections) ಮಾಡ್ತಿವಿ ಅಂತ ಭರವಸೆ ನೀಡಲಾಗಿತ್ತು, ಪ್ರಣಾಳಿಕೆ ಕೂಡಾ ನೀಡಿದ್ರು. ಈಗ ಆ ಭರವಸೆ ಇಡೋರಿಸಕ್ಕೆ ಕಾಂಗ್ರೆಸ್(Congress) ಮುಂದಾಗಿದ್ದು. ಬಿಬಿಎಂಪಿ ಚುನಾವಣೆಗೆ ಮುನ್ಸೂಚನೆ ಸಿಕ್ಕಿದೆ.

ಕಳೆದ ಎರಡು ವರ್ಷಗಳಿಂದ ಚುನಾವಣೆ ಕಾಣದ ಬಿಬಿಎಂಪಿಯಲ್ಲೀಗ ಚುನಾವಣೆಗೆ ಸಮಯ ಕೂಡಿ ಬಂದಿದೆ. ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ್ರೆ ಬಿಬಿಎಂಪಿ ಚುನಾವಣೆ ಮಾಡ್ತಿವಿ ಅಂತಾ ಕಾಂಗ್ರಸ್ ಪಕ್ಷ ಹೇಳಿತ್ತು ಈಗ ಅದರಂತೆ ಚುನಾವಣೆ ನಡೆಸಲು ಸಕಲ ಸಿದ್ದತೆ ನಡೆಸ್ತಿದೆ ಅನ್ನೊ ಚರ್ಚೆ ಶುರುವಾಗಿದೆ. ಈ ನಡುವೇ ಕಾಂಗ್ರೆಸ್ ಪಕ್ಷದ ಬೆಂಗಳೂರು ನಾಯಕರು ಕೂಡ ರಾಜ್ಯ ನಾಯಕರ ಮೇಲೆ ಒತ್ತಡ ಹಾಕಲು ಮುಂದಾಗಿದ್ದಾರೆ. ಸದ್ಯ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಇದೆ. ಈ ಟೈಮ್ನಲ್ಲಿ ಚುನಾವಣೆ ನಡೆಸಿದ್ರೆ ಬಿಬಿಎಂಪಿ ಚುನಾವಣೆಯಲ್ಲಿ ನಮ್ಗೆ ಪ್ಲಸ್ ಆಗುತ್ತೆ ಹೆಚ್ಚು ಸ್ಥಾನ ಬರುತ್ತೆ ಅಂತ ಮಾನವಿ ಮಾಡ್ತೀದ್ದಾರೆ.

ಹೈ ಕೋರ್ಟ್ ಚುನಾವಣೆಗೆ ಸೂಚಿಸಿದ್ರೂ ನಡೆಸಿದ್ದ ಚುನಾವಣೆ

ಬಿಬಿಎಂಪಿ ಕಾರ್ಪೊರೇಟರ್​ಗಳ ಅಧಿಕಾರಾವಧಿ ಮುಗಿದು ಎರಡು ವರ್ಷಗಳೆ ಕಳೆದಿದೆ. ಅದ್ರೆ ಬಿಜೆಪಿ ಸರ್ಕಾರ ಒಂದಲ್ಲ ಒಂದು ನೆಪ ಹೊಡ್ಡಿ ಬಿಬಿಎಂಪಿ ಚುನಾವಣೆಯನ್ನೂ ಮುಂದೂಡುತ್ತ ಬಂದಿದೆ. ಬಿಬಿಎಂಪಿಯ 198 ವಾರ್ಡ್‍ಗಳನ್ನು ಆಡಳಿತ ದೃಷ್ಟಿಯಿಂದ 243 ವಾರ್ಡ್‍ಗಳನ್ನಾಗಿ ಪರಿವರ್ತಿಸಲು ತೀರ್ಮಾನಿಸಲಾಗಿದೆ ಎಂಬ ನೆಪ ನೀಡಿ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸದೆ ಪಾಲಿಕೆಯಲ್ಲಿ ಅಧಿಕಾರಿಗಳದ್ದೆ ದರ್ಬಾರು ಶುರು ಮಾಡಿದ್ದಾರೆ. ಈ ಬಗ್ಗೆ ಹೈಕೋರ್ಟ್ ಕೂಡ ಚುನಾವಣೆ ನಡೆಸಿ ಅಂತ ಅದೇಶ ನೀಡಿದ್ರು, ಮತ್ತೆ ಮೀಸಲಾತಿ ಹೆಸರಲ್ಲಿ 6 ತಿಂಗಳ ಗಡುವು ಕೇಳಿತ್ತು ಬಿಜೆಪಿ ಸರ್ಕಾರ. ಇತ್ತ ಸರ್ಕಾರದ ನಡೆಗೆ ಬಿಜೆಪಿ ಮಾಜಿ ಕಾರ್ಪೊರೇಟರ್​ಗಳೆ ಅಸಮಾದಾನ ವ್ಯಕ್ತಪಡಿಸಿದ್ರು, ಇನ್ನೂ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದ್ರೆ ಬಿಬಿಎಂಪಿ ಚುನಾವಣೆ 6 ತಿಂಗಳಲ್ಲಿ ಮಾಡ್ತಿವಿ ಎಂದು ಹೇಳಿಕೆ ನೀಡಿದ್ರು, ಇನ್ನೂ ಈ ಸಂಬಂಧ ಕಾಂಗ್ರೆಸ್ ಪಕ್ಷದ ಪಾಲಿಕೆ ಮಾಜಿ ಅಡಳಿತ ಪಕ್ಷದ ನಾಯಕ ಅಬ್ದುಲ್ ವಾಜೀದ್ ಕೂಡ ಇದೆ ಅಕ್ಟೋಬರ್ ಅಥವಾ ನವಂಬರ್ ಒಳಗೆ ಬಿಬಿಎಂಪಿ ಚುನಾವಣೆ ನಡೆಸ್ತಿವಿ ಈ ಬಗ್ಗೆ ನಮ್ಮ ನಾಯಕರಿಗೆ ಮನವಿ ಮಾಡ್ತೀವಿ ಎಂದಿದ್ದಾರೆ.

ಇದನ್ನೂ ಓದಿ: ಕೆಹೆಚ್​​​​ಬಿ ಬಂಡೇಮಠ ಲೇಔಟ್​​​: ಮುಂದೆ ಸಾಗದ ಕಾಮಗಾರಿ, ಬಿಬಿಎಂಪಿ ಅಧಿಕಾರಿಗಳ ಬೇಜವಾಬ್ದಾರಿ, ನಾಗರಿಕರಿಗೆ ನಿತ್ಯ ನರಕಯಾತನೆ

ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು, ಮಾಜಿ ಸದಸ್ಯರು ಕೂಡ ರಾಜ್ಯ ನಾಯಕರಿಗೆ ಮಾನವಿ ಮಾಡಿ ಕೂಡಲೇ ಬಿಬಿಎಂಪಿ ಚುನಾವಣೆ ನಡೆಸಿ, ಸದ್ಯ ರಾಜಧಾನಿಯಲ್ಲಿ ಕಾಂಗ್ರೆಸ್ ಅಲೆ ಇದೆ, ರಾಜ್ಯದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಹಾಗು ಬಹುಮತ ಹೊಂದಿದೆ. ಚುನಾವಣೆ ನವೆಂಬರ್ ಒಳಗೆ ನಡೆಸುದ್ರೆ ಹೆಚ್ಚು ಸ್ಥಾನ ಗಳಿಸಬಹುದು. ಕೋರ್ಟ್‌ನಲ್ಲಿರೋ ಪ್ರಕರಣವನ್ನು ಆದಷ್ಟು ಬೇಗ ಇತ್ಯರ್ಥ ಮಾಡಿಕೊಂಡು ಚುನಾವಣೆ ಮಾಡಿ ಅಂತ ಬೆಂಗಳೂರಿನ ಕಾಂಗ್ರೆಸ್ ನಾಯಕರು ಹೈಕಮಾಂಡ್ ಗೆ ಮನವಿ ಮಾಡಲು ಮುಂದಾಗ್ತೀದ್ದಾರೆ

ಚುನಾವಣೆ ನಡೆಸಲು ಮೊದಲಿನಿಂದಲೂ ಒತ್ತಾಯ ಮಾಡುತ್ತಿದ್ದದ್ದು ಕೈ ನಾಯಕರೇ ಈಗ ಚುನಾವಣೆಗೆ ಮುಂದಾಗಿರೋದು ಕಾಂಗ್ರೆಸ್ ಪಕ್ಷದ ಪಾಲಿಕೆ ಆಕಾಂಕ್ಷಿಗಳಿಗೆ ಒಂದು ರೀತಿಯಲ್ಲಿ ವರವಾಗಿದೆ. ಇತ್ತ ಪಾಲಿಕೆ ಚುನಾವಣೆ ನಡೆದ್ರೆ ಸ್ವಲ್ಪ ಮಾಟ್ಟಿಗೆ ವಾರ್ಡ್​ಗಳ ಅಭಿವೃದ್ಧಿ ಹಾಗೂ ಸಾರ್ವಜನಿಕರ ತೊಂದ್ರೆ ನಿರ್ವಣೆ ಅಗಬಹುದು ಅಂತ ಜನರು ಕೂಡಾ ಪಾಲಿಕೆಯ ಚುನಾವಣೆಯನ್ನ ಎದುರು ನೋಡ್ತೀದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ