ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ವಿಚಾರ; ವಕ್ಫ್ ಬೋರ್ಡ್​ಗೆ ಬಿಬಿಎಂಪಿಯಿಂದ ಮತ್ತೊಂದು ನೋಟಿಸ್

| Updated By: sandhya thejappa

Updated on: Jun 29, 2022 | 10:34 AM

ದಾಖಲೆ ಸಲ್ಲಿಸಲು 7 ದಿನ ಕಾಲಾವಕಾಶ ನೀಡಲಾಗಿದೆ. 1954 ಗೆಜೆಟ್ ನೋಟಿಫಿಕೇಷನ್ ಕೊಟ್ಟು, ಇದರ ಆಧಾರದ ಮೇಲೆ ಖಾತೆ ಮಾಡಿಕೊಡಿ ಎಂದು ವರ್ಕ್ಫ್ ಬೋರ್ಡ್ ಮನವಿ ಮಾಡಿತ್ತು.

ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ವಿಚಾರ; ವಕ್ಫ್ ಬೋರ್ಡ್​ಗೆ ಬಿಬಿಎಂಪಿಯಿಂದ ಮತ್ತೊಂದು ನೋಟಿಸ್
ಬಿಬಿಎಂಪಿ ಕಚೇರಿ
Follow us on

ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನ (Idgah Maidan) ವಿವಾದ ವಿಚಾರಕ್ಕೆ ಸಂಬಂಧಿಸಿ ಬಿಬಿಎಂಪಿ (BBMP) ವಕ್ಫ್ ಬೋರ್ಡ್​ಗೆ ಮತ್ತೊಂದು ನೋಟಿಸ್ ನೀಡಿದೆ. ಪಶ್ಚಿಮ ಜಂಟಿ ಆಯುಕ್ತ ಶ್ರೀನಿವಾಸ್ ಮತ್ತಷ್ಟು ದಾಖಲೆ ನೀಡುವಂತೆ ವಕ್ಫ್ ಬೋರ್ಡ್​ಗೆ ನೋಟಿಸ್ ಜಾರಿ ಮಾಡಿದ್ದಾರೆ. ದಾಖಲೆ ಸಲ್ಲಿಸಲು 7 ದಿನ ಕಾಲಾವಕಾಶ ನೀಡಲಾಗಿದೆ. 1954 ಗೆಜೆಟ್ ನೋಟಿಫಿಕೇಷನ್ ಕೊಟ್ಟು, ಇದರ ಆಧಾರದ ಮೇಲೆ ಖಾತೆ ಮಾಡಿಕೊಡಿ ಎಂದು ವರ್ಕ್ಫ್ ಬೋರ್ಡ್ ಮನವಿ ಮಾಡಿತ್ತು. ಆದರೆ ಮಾಲಿಕತ್ವ ಸಾಬೀತು ಮಾಡಲು ಇನ್ನಷ್ಟು ದಾಖಲೆಗಳುಬೇಕು. ಒಂದು ವೇಳೆ ಮಾಲಿಕತ್ವ ಸಾಬೀತು ಮಾಡಲು ಬೇಕಾದ ದಾಖಲೆ ಸಲ್ಲಿಸದೇ ಹೋದರೆ ಬಿಬಿಎಂಪಿ ಮುಂದಿನ ನಿರ್ಧಾರ ಕೈಗೊಳ್ಳಲಿದೆ.

ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಪಶ್ಚಿಮ ವಲಯದ ಜಂಟಿ ಆಯುಕ್ತ ಶ್ರೀನಿವಾಸ್‌, ವಕ್ಫ್‌ ಬೋರ್ಡ್‌ಗೆ ಬಿಬಿಎಂಪಿಯಿಂದ ಖಾತೆ ಮಾಡಿಕೊಟ್ಟಿಲ್ಲ. ವಕ್ಫ್‌ ಬೋರ್ಡ್‌ ನೀಡಿರುವ ದಾಖಲೆ ಪರಿಶೀಲಿಸಲಾಗುತ್ತಿದೆ. 1965ರ ಅಧಿಸೂಚನೆಯಂತೆ ಖಾತೆ ಮಾಡಿಕೊಡಲು ವಕ್ಫ್‌ ಬೋರ್ಡ್‌ ಮನವಿ ಮಾಡಿಕೊಂಡಿದೆ. ಆದರೆ ಖಾತೆ ಮಾಡಿಕೊಟ್ಟಿಲ್ಲ. 2 ಎಕರೆ 5 ಗುಂಟೆ ಅಧಿಸೂಚನೆ ಆಗಿರುವ ಬಗ್ಗೆ ದಾಖಲೆ ನೀಡಿದೆ. ಪೂರಕ ದಾಖಲೆ ನೀಡುವಂತೆ ವಕ್ಫ್‌ ಬೋರ್ಡ್‌ಗೆ ಸೂಚಿಸಿದ್ದೇವೆ. 40 ದಿನಗಳೊಳಗೆ ಈದ್ಗಾ ಮೈದಾನದ ವಿವಾದ ಬಗೆಹರಿಸುತ್ತೇವೆ. ಈದ್ಗಾ ಮೈದಾನದ ಜಾಗ ಅಧಿಕೃತವಾಗಿ ಯಾರಿಗೂ ಸೇರಿದ್ದಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೊಲಂಬಿಯಾ ಜೈಲಿನಲ್ಲಿ ಬೆಂಕಿ ಅನಾಹುತ : 51 ಕೈದಿಗಳು ಸಾವು, 24 ಮಂದಿಗೆ ಗಾಯ

ಇದನ್ನೂ ಓದಿ
ಕೊಲಂಬಿಯಾ ಜೈಲಿನಲ್ಲಿ ಬೆಂಕಿ ಅನಾಹುತ : 51 ಕೈದಿಗಳು ಸಾವು, 24 ಮಂದಿಗೆ ಗಾಯ
ಇದು ಇಂಡಿಯನ್ ಬ್ಯಾಂಕ್ ಮ್ಯಾನೇಜರ್​ನ ಪ್ರೇಮಚರಿತ್ರೆ: ಡೇಟಿಂಗ್ ಆ್ಯಪ್​ನ ಆರೇಳು ಬೆಡಗಿಯರಿಗೆ ಹಣ ಸಂದಾಯ ಮಾಡಿದ ಭೂಪ
ಬೆಂಗಳೂರಿನಲ್ಲಿ ಕೊವಿಡ್​ನಿಂದ ಆಸ್ಪತ್ರೆಗೆ ಸೇರುವವರ ಸಂಖ್ಯೆಯಲ್ಲಿ ಹೆಚ್ಚಳ, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದ ತಾಂತ್ರಿಕ ಸಲಹಾ ಸಮಿತಿ
ಬಡ ಮಕ್ಕಳಿಗೆ ‘ಚಿಂದಿ ಸ್ಟಾರ್ಸ್​’ ಕಾರ್ಯಕ್ರಮದ ಮೂಲಕ ವೇದಿಕೆ ಕಲ್ಪಿಸಿದ ನಟಿ ಡಾ. ಪೂಜಾ ರಮೇಶ್​

ಜಾಗದ ದಾಖಲೆಗಳ ಪರಿಶೀಲನೆ ಮಾಡುತ್ತಿದ್ದೇವೆ. ಪೊಸಿಶನ್ ಬಿಬಿಎಂಪಿ ಹೆಸರಲ್ಲಿದೆ. ಓನರ್ ಶಿಪ್ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಇದೆಲ್ಲಾ ವಿವಾದಗಳಿಗೆ ಅಂತ್ಯ ಹಾಡಲು 45 ದಿನಗಳ ಕಾಲಾವಕಾಶ ಬೇಕು. ಆರಂಭದಿಂದ ಈ ಜಾಗ ರೆವಿನ್ಯೂ ಅಂತಿದೆ. ಯಾರ ಪ್ರಭಾವವೂ ಇಲ್ಲ. ನಮ್ಮ ಅಧಿಕಾರಿಗಳ ಮೇಲೆ ಒತ್ತಡ ಇಲ್ಲ. 1935ರಿಂದ ಮೈದಾನದ ಕುರಿತು ದಾಖಲೆ‌ಗಳನ್ನು ಎನ್ ಆರ್ ರಮೇಶ್ ಸಲ್ಲಿಸಿದ್ದಾರೆ. 1974ರಿಂದ ಮೈದಾನದಲ್ಲಿ ಜರುಗಿದ ಕಾರ್ಯಕ್ರಮಗಳ ಬಗ್ಗೆ ಪತ್ರ ಬರೆದು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಜಂಟಿ ಆಯುಕ್ತ ಹೇಳಿದ್ದಾರೆ.

ಇದನ್ನೂ ಓದಿ: ಇದು ಇಂಡಿಯನ್ ಬ್ಯಾಂಕ್ ಮ್ಯಾನೇಜರ್​ನ ಪ್ರೇಮಚರಿತ್ರೆ: ಡೇಟಿಂಗ್ ಆ್ಯಪ್​ನ ಆರೇಳು ಬೆಡಗಿಯರಿಗೆ ಹಣ ಸಂದಾಯ ಮಾಡಿದ ಭೂಪ

Published On - 10:27 am, Wed, 29 June 22