AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ಇಂಡಿಯನ್ ಬ್ಯಾಂಕ್ ಮ್ಯಾನೇಜರ್​ನ ಪ್ರೇಮಚರಿತ್ರೆ: ಡೇಟಿಂಗ್ ಆ್ಯಪ್​ನ ಆರೇಳು ಬೆಡಗಿಯರಿಗೆ ಹಣ ಸಂದಾಯ ಮಾಡಿದ ಭೂಪ

ವಿದ್ಯಾರ್ಥಿ ತಾಯಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಶಿಕ್ಷಕನನ್ನು ಅಮಾನತ್ತು ಮಾಡಿರುವಂತಹ ಘಟನೆ ಜಿಲ್ಲೆಯ ಮಧುಗಿರಿ ತಾಲ್ಲೂಕಿನ ದೊಡ್ಡಹಟ್ಟಿಯಲ್ಲಿ ನಡೆದಿದೆ. ಸುರೇಶ್ ಅಮಾನತ್ತಾದ ದೊಡ್ಡಹಟ್ಟಿ ಸರ್ಕಾರಿ ಶಾಲೆ ಶಿಕ್ಷಕ.

ಇದು ಇಂಡಿಯನ್ ಬ್ಯಾಂಕ್ ಮ್ಯಾನೇಜರ್​ನ ಪ್ರೇಮಚರಿತ್ರೆ: ಡೇಟಿಂಗ್ ಆ್ಯಪ್​ನ ಆರೇಳು ಬೆಡಗಿಯರಿಗೆ ಹಣ ಸಂದಾಯ ಮಾಡಿದ ಭೂಪ
ಮ್ಯಾನೇಜರ್ ಹರಿಶಂಕರನ್
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Jun 29, 2022 | 10:10 AM

Share

ಬೆಂಗಳೂರು: ಇದು ಇಂಡಿಯನ್ ಬ್ಯಾಂಕ್ ಮ್ಯಾನೇಜರ್ (Indian Bank Manager) ಒಬ್ಬನ ಪ್ರೇಮಚರಿತ್ರೆ. ಡೇಟಿಂಗ್ ಆ್ಯಪ್​ನ ಆರೇಳು ಬೆಡಗಿಯರಿಗೆ ಹಣ ಸಂದಾಯ ಮಾಡಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಹನುಮಂತ ನಗರ ಇಂಡಿಯನ್ ಬ್ಯಾಂಕ್ ಬ್ರ್ಯಾಂಚ್ ಮ್ಯಾನೇಜರ್ ಹರಿಶಂಕರನ್ ಕೃಷ್ಣಲೀಲೆ ಸದ್ಯ ಹೊರಬಿದ್ದಿದೆ. ವಿಚಾರಣೆ ವೇಳೆ ಆರು ಕೋಟಿ ರೂ. ಎಂಟು ಬೆಡಗಿಯರಿಗೆ ಹಣ ಸಂದಾಯ ಮಾಡಿದ್ದೆ ಎಂದು ಶಂಕರ ಹೇಳಿದ್ದ. ಕೇರಳ ಮೂಲದ ಹರಿಶಂಕರ್​ ಹೆಣ್ಣಿನ ಮೋಹ ಹೊಂದಿದ್ದು, ಇಂಡಿಯನ್ ಬ್ಯಾಂಕ್​ನ ಠೇವಣಿದಾರರಾದ ಅನಿತಾ ಎಂಬವರ ಎಫ್​ಡಿ ಅಮೌಂಟ್​ಗೆ ಗುನ್ನ ಇಟ್ಟಿದ್ದಾನೆ. ಎಫ್​ಡಿ ಮೇಲೆಯೇ 30 ಅಕೌಂಟ್ ತೆರೆದು ಸಾಲ ಮಾಡಿದ್ದು, ಸಾಲದ ಹಣವನ್ನ ಎಂಟು ಬೆಡಗಿಯರಿಗೆ ಹಂಚಿ ತಣ್ಣಗಾಗಿದ್ದ. ಇದೀಗ ವಿಚಾರಣೆ ವೇಳೆ ಬರೀ ಬೆಡಗಿಯರ ಫೋಟೋ ನೋಡಿಯೇ ಹಣ ಹಾಕಿದ್ದು. ಏನೋ ತಪ್ಪು ಮಾಡಿದೆ ಹೆಂಡತಿಗೆ ಈ ವಿಷಯ ಹೇಳಬೇಡಿ ಸಾರ್ ಅಂದಿದ್ನಂತೆ. ಪೊಲೀಸರಿಗೆ ಹರಿಶಂಕರನ ಲೀಲೆ ಕೇಳಿ ಫುಲ್ ಶಾಕ್ ಆಗಿದೆ.

ವಿದ್ಯಾರ್ಥಿ ತಾಯಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಶಿಕ್ಷಕ ಅಮಾನತ್ತು

ತುಮಕೂರು: ವಿದ್ಯಾರ್ಥಿ ತಾಯಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಶಿಕ್ಷಕನನ್ನು ಅಮಾನತ್ತು ಮಾಡಿರುವಂತಹ ಘಟನೆ ಜಿಲ್ಲೆಯ ಮಧುಗಿರಿ ತಾಲ್ಲೂಕಿನ ದೊಡ್ಡಹಟ್ಟಿಯಲ್ಲಿ ನಡೆದಿದೆ. ಸುರೇಶ್ ಅಮಾನತ್ತಾದ ದೊಡ್ಡಹಟ್ಟಿ ಸರ್ಕಾರಿ ಶಾಲೆ ಶಿಕ್ಷಕ. ಶಾಲೆಗೆ ಬರುತ್ತಿದ್ದ ವಿದ್ಯಾರ್ಥಿಗಳ ಪೋಷಕರ ಮೊಬೈಲ್ ಸಂಖ್ಯೆ ಪಡೆದು ಅಶ್ಲೀಲವಾಗಿ ಶಿಕ್ಷಕ ಮೆಸೇಜ್ ಮಾಡುತ್ತಿದ್ದ. ಶಿಕ್ಷಕ ಸುರೇಶ್ ವಿರುದ್ಧ ಗ್ರಾಮದ ಮಹಿಳೆಯರಿಂದ ಡಿಡಿಪಿಐಗೆ ದೂರು ನೀಡಲಾಗಿದೆ. ಜೊತೆಗೆ ಗ್ರಾಮದ ಯುವಕರೊಂದಿಗೆ ಶಿಕ್ಷಕ ಸುರೇಶ್ ಪ್ರತಿನಿತ್ಯ ಪಾರ್ಟಿ ಮಾಡುತ್ತಾರೆಂದು ಆರೋಪ ಮಾಡಲಾಗಿದೆ. ತನಿಖೆ ಬಳಿಕ ನಿನ್ನೆ ಶಿಕ್ಷಕ ಸುರೇಶ್​ನನ್ನ ಅಮಾನತ್ತು ಪಡಿಸಿ ಮಧುಗಿರಿ ಡಿಡಿಪಿಐ ರೇವಣಸಿದ್ದಪ್ಪರಿಂದ ಆದೇಶ ಹೊರಡಿಸಲಾಗಿದೆ.

ಹಾವು ಕಚ್ಚಿ ಶಾಲಾ ಶಿಕ್ಷಕ ಸಾವು:

ಮೈಸೂರು: ಹಾವು ಕಚ್ಚಿ ಶಾಲಾ ಶಿಕ್ಷಕ ಸಾವನ್ನಪ್ಪಿರುವಂತಹ ಘಟನೆ ಹುಣಸೂರು ತಾಲ್ಲೂಕಿನ ಕೊತ್ತೆಗಾಲ ಗ್ರಾಮದಲ್ಲಿ ಘಟನೆ ನಡೆದಿದೆ. ಧನರಾಜ್ (53) ಮೃತ ದುರ್ದೈವಿ. ತಮ್ಮ ಜಮೀನಿನಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿದೆ. ಧನರಾಜ್ ಹುಣಸೂರು ತಾಲೂಕಿನ ಹೊಸಕೊಪ್ಪಲು ಗ್ರಾಮದ ಶಾಲಾ ಶಿಕ್ಷಕರಾಗಿದ್ದರು. ಹಾವು ಕಚ್ಚಿದ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಿಕ್ಷಕ ಮೃತ ಪಟ್ಟಿದ್ದಾರೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಬಡ ಮಕ್ಕಳಿಗೆ ‘ಚಿಂದಿ ಸ್ಟಾರ್ಸ್​’ ಕಾರ್ಯಕ್ರಮದ ಮೂಲಕ ವೇದಿಕೆ ಕಲ್ಪಿಸಿದ ನಟಿ ಡಾ. ಪೂಜಾ ರಮೇಶ್​