ಸುರಕ್ಷಿತ ಮತ್ತು ಆರೋಗ್ಯಕರ ಹವಾಮಾನ ನಿರ್ಮಾಣಕ್ಕೆ ಬಿಬಿಎಂಪಿಯಿಂದ ವಿನೂತನ ಹೆಜ್ಜೆ
ಸುರಕ್ಷಿತ ಮತ್ತು ಆರೋಗ್ಯಕರ ನಗರ ನಿರ್ಮಾಣ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸೋಮವಾರ ನಗರದ ಫ್ರೀಡಂ ಪಾರ್ಕ್‌ನಲ್ಲಿ ‘ಬೆಂಗಳೂರು ಹವಾಮಾನ ಕ್ರಿಯೆ ಮತ್ತು ಮರುಚೇತರಿಕೆ ಯೋಜನೆಯನ್ನು ಬಿಡುಗಡೆ ಮಾಡಿದೆ.
ಬೆಂಗಳೂರು ನ.27: ಸುರಕ್ಷಿತ ಮತ್ತು ಆರೋಗ್ಯಕರ ನಗರ ನಿರ್ಮಾಣ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಸೋಮವಾರ ನಗರದ ಫ್ರೀಡಂ ಪಾರ್ಕ್‌ನಲ್ಲಿ ‘ಬೆಂಗಳೂರು ಹವಾಮಾನ ಕ್ರಿಯೆ ಮತ್ತು ಮರುಚೇತರಿಕೆ ಯೋಜನೆಯನ್ನು (BCPA) ಬಿಡುಗಡೆ ಮಾಡಿದೆ. ಯೋಜನೆಯು 2050 ರ ವೇಳೆಗೆ ಇಂಗಾಲದ ಪ್ರಮಾಣವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.
2019ರ ಡೇಟಾವನ್ನು ಆಧಾರವಾಗಿಟ್ಟುಕೊಂಡು 2030 ರ ವೇಳೆಗೆ ಹಸಿರುಮನೆ ಅನಿಲ (ಇಂಗಾಲದ ಡೈಆಕ್ಸೈಡ್, ಮೀಥೇನ್, ನೈಟ್ರಸ್ ಆಕ್ಸೈಡ್, ಫ್ಲೋರಿನೇಟೆಡ್ ಅನಿಲ) ಹೊರಸೂಸುವಿಕೆಯನ್ನು ಶೇ16 ರಷ್ಟು, 2040 ರ ವೇಳೆಗೆ ಶೇ 26 ರಷ್ಟು ಮತ್ತು 2019 ರ ಡೇಟಾವನ್ನು 2050 ರ ವೇಳೆಗೆ ಶೇಕಡಾ 56 ರಷ್ಟು ಕಡಿಮೆ ಮಾಡುವ ಗುರಿಯನ್ನು ಬಿಸಿಎಪಿ ಹೊಂದಿದೆ.
ವರದಿಯ ಪ್ರಕಾರ, ಹಸಿರುಮನೆ ಅನಿಲ ಹೊರಸೂಸುವಿಕೆಯು ನಗರದಲ್ಲಿ ಶೇ 68 ರಷ್ಟು ಕಾರ್ಖಾನೆ ಇತ್ಯಾದಿ ಮತ್ತು ಶೇ21 ರಷ್ಟು ಸಾಗಣೆಯಿಂದ ಮತ್ತು ಶೇ 11 ರಷ್ಟು ತ್ಯಾಜ್ಯದಿಂದ ಉಂಟಾಗುತ್ತದೆ.
ಇದನ್ನೂ ಓದಿ: ಪಿಜಿಗಳಿಗೆ ಬಿಗ್ ಶಾಕ್; ಹೊಸ ಗೈಡ್ ಲೈನ್ ಬಿಡುಗಡೆ ಮಾಡಲು ಮುಂದಾದ ಬಿಬಿಎಂಪಿ
ಬಿಸಿಎಪಿ ಅನ್ನು ಬಿಬಿಎಂಪಿ, ಕರ್ನಾಟಕ ಸರ್ಕಾರವು ವರ್ಲ್ಡ್ ರಿಸೋರ್ಸ್ ಇನ್ಸ್ಟಿಟ್ಯೂಟ್ (WRI) ಮತ್ತು C40 ದೇಶಗಳ ಸಹಯೋಗದೊಂದಿಗೆ ಸಿದ್ಧಪಡಿಸಿದೆ. ಇಂತಹ ಜಾಗತಿಕ ಗುಣಮಟ್ಟದ ಹವಾಮಾನ ಕ್ರಿಯಾ ಯೋಜನೆಯನ್ನು ಅಳವಡಿಸಿಕೊಂಡ ಭಾರತದ ಮೂರನೇ ನಗರ ಬೆಂಗಳೂರು ಎಂದು ಬಿಬಿಎಂಪಿ ಹೇಳಿದೆ. ಬಿಸಿಎಪಿ ಬಿಡುಗಡೆಗೆ ಮುನ್ನ ನಡೆದ ಸಭೆಯಲ್ಲಿ, ನಗರದಲ್ಲಿ ಹವಾಮಾನ ಬದಲಾವಣೆಯ ಪರಿಣಾಮವನ್ನು ತಗ್ಗಿಸಲು ಸರ್ಕಾರವು 269 ಕ್ರಮಗಳನ್ನು ಅಂತಿಮಗೊಳಿಸಿದೆ.
ವಿಶ್ವ ಸಂಪನ್ಮೂಲ ಸಂಸ್ಥೆ (World Resources Institute)ಗೆ ಬಿಬಿಎಂಪಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB), ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM), ಸಾರಿಗೆ ಇಲಾಖೆಗಳು, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ 25 ಕ್ಕೂ ಹೆಚ್ಚು ಸಲಹೆಗಾರರನ್ನು ಇದಕ್ಕೆ ಬಿಬಿಎಂಪಿ ನೇಮಿಸಿದೆ.
ಬಿಬಿಎಂಪಿ ಪ್ರಕಾರ, ಕಟ್ಟಡಗಳು, ಸಾರಿಗೆ, ಘನತ್ಯಾಜ್ಯ ನಿರ್ವಹಣೆ, ಗಾಳಿಯ ಗುಣಮಟ್ಟ, ನೀರು, ತ್ಯಾಜ್ಯನೀರು, ಮಳೆನೀರು ನಿರ್ವಹಣೆ, ನಗರ ಯೋಜನೆ, ಹಸಿರೀಕರಣ ಮತ್ತು ಜೈವಿಕ ವೈವಿಧ್ಯತೆಯು ಹವಾಮಾನ ಬದಲಾವಣೆ ತಗ್ಗಿಸುವ ತಂತ್ರಗಳನ್ನು ಅಭಿವೃದ್ಧಿಪಡಿಸಲು ಗುರುತಿಸಲಾದ ಕೆಲವು ಕ್ಷೇತ್ರಗಳಾಗಿವೆ.
ಬಿಬಿಎಂಪಿ ಕ್ಲೈಮೇಟ್ ಆಕ್ಷನ್ ಸೆಲ್ ಸ್ಥಾಪಿಸಲು
ಬಿಬಿಎಂಪಿಯು ಬಿಸಿಎಪಿ ಅನುಷ್ಠಾನಕ್ಕಾಗಿ ಕ್ಲೈಮೇಟ್ ಆಕ್ಷನ್ ಸೆಲ್ ಅನ್ನು ಸ್ಥಾಪಿಸುವುದಾಗಿ ಘೋಷಿಸಿತು. ಇದಕ್ಕಾಗಿ ಪ್ರತ್ಯೇಕ ಸಿಬ್ಬಂದಿ ಮತ್ತು ಇತರ ಸಂಪನ್ಮೂಲಗಳನ್ನು ನಿಯೋಜಿಸಲಾಗುವುದು ಎಂದು ಬಿಬಿಎಂಪಿ ತಿಳಿಸಿದೆ.
‘BluGreenUru’ ಅಭಿಯಾನ
ಬಿಸಿಎಪಿ ಉಪಕ್ರಮಗಳಲ್ಲಿ ಭಾಗವಹಿಸಲು ಜನರನ್ನು ಉತ್ತೇಜಿಸಲು ಬಿಬಿಎಂಪಿ ‘BluGreenUru’ ಅನ್ನು ಪ್ರಾರಂಭಿಸಿತು. ನಗರದ ನೈಸರ್ಗಿಕ ಮೂಲಸೌಕರ್ಯವನ್ನು ಸಂರಕ್ಷಿಸಲು, ಮರುಸ್ಥಾಪಿಸಲು ಸಲಹೆ ಮತ್ತು ಕೊಡುಗೆ ನೀಡಲು ಬಿಬಿಎಂಪಿ ನಾಗರಿಕರಿಗೆ ಕರೆ ನೀಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ