ಬಿಬಿಎಂಪಿ ಅಧಿಕಾರಿಗಳಿಂದ ಮಾಸ್ಕ್ ಹಾಕದವರಿಗೆ ಫೈನ್
ನಿನ್ನೆ (ನ.27) ನಡೆದ ಸಭೆಯಲ್ಲಿ ಕೊರೊನಾ ಬಗ್ಗೆ ಕಟ್ಟೆಚ್ಚರ ವಹಿಸುವಂತೆ ತಜ್ಞರು ಸರ್ಕಾರಕ್ಕೆ ಸೂಚಿಸಿದ್ದಾರೆ. ಈ ಹಿನ್ನೆಲೆ ಮುಂಜಾಗ್ರತ ಕ್ರಮವನ್ನು ತೆಗೆದುಕೊಳ್ಳಲು ಸರ್ಕಾರ ಅಧಿಕಾರಿಗಳಿಗೆ ಕೆಲ ಸಲಹೆ ನೀಡಿದೆ.
ಬೆಂಗಳೂರು: ಕೊರೊನಾ (Coronavirus) ಹೊಸ ತಳಿ ಪತ್ತೆಯಾದ ಬೆನ್ನಲೆ ಬಿಬಿಎಂಪಿ (BBMP) ಅಧಿಕಾರಿಗಳು ಫೀಲ್ಡಿಗೆ ಇಳಿದು ತಮ್ಮ ಕೆಲಸ ನಿರ್ವಹಿಸುತ್ತಿದ್ದಾರೆ. ನಿನ್ನೆ (ನ.27) ನಡೆದ ಸಭೆಯಲ್ಲಿ ಕೊರೊನಾ ಬಗ್ಗೆ ಕಟ್ಟೆಚ್ಚರ ವಹಿಸುವಂತೆ ತಜ್ಞರು ಸರ್ಕಾರಕ್ಕೆ ಸೂಚಿಸಿದ್ದಾರೆ. ಈ ಹಿನ್ನೆಲೆ ಮುಂಜಾಗ್ರತ ಕ್ರಮವನ್ನು ತೆಗೆದುಕೊಳ್ಳಲು ಸರ್ಕಾರ ಅಧಿಕಾರಿಗಳಿಗೆ ಕೆಲ ಸಲಹೆ ನೀಡಿದೆ. ಜನರಿಗೆ ಮೂರನೇ ಅಲೆ ಹಾಗೂ ಆಫ್ರೀಕಾದ ಹೊಸ ಅಲೆ ಬಗ್ಗೆ ಜಾಗೃತಿ ಮೂಡಿಸುವಂತೆ ತಿಳಿಸಿದೆ. ಮಾಸ್ಕ್ ಹಾಗೂ ಸಾಮಾಜಿಕ ಅಂತರದ ಬಗ್ಗೆ ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ. ಹೀಗಾಗಿ ಬಿಬಿಎಂಪಿ ಅಧಿಕಾರಿಗಳು ಮಾಸ್ಕ್ ಹಾಕದವರಿಗೆ ದಂಡ ಹಾಕಲು ಮುಂದಾಗಿದ್ದಾರೆ.
ತಜ್ಞರ ಸಲಹೆ ಬೆನ್ನಲೆ ಬೆಳ್ಳಂಬೆಳಗ್ಗೆ ಬಿಬಿಎಂಪಿ ಅಧಿಕಾರಿಗಳು ಕೆಆರ್ ಮಾರ್ಕೆಟ್ನಲ್ಲಿ ಕಟ್ಟೆಚ್ಚರ ವಹಿಸುತ್ತಿದ್ದಾರೆ. ದಕ್ಷಿಣ ಆಫ್ರೀಕಾದ ಹೊಸ ತಳಿ ಬಗ್ಗೆ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಜೊತೆಗೆ ಮಾಸ್ಕ್ ಹಾಕದವರಿಗೆ ಮಾರ್ಷಲ್ಸ್ ದಂಡ ವಿಧಿಸುತ್ತಿದ್ದಾರೆ.
ಸಿಎಂ ಸಭೆಯಲ್ಲಿ ತಜ್ಞರು ಹೇಳಿದ್ದೇನು? ನಿನ್ನೆ ಕೊರೊನಾ ಹೊಸ ತಳಿ ಬಗ್ಗೆ ರಾಜ್ಯದ ಮುಖ್ಯಮತ್ರಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ. ಈ ವೇಳೆ ತಜ್ಞರು ಕೆಲ ಸಲಹೆಗಳನ್ನು ನೀಡಿದ್ದಾರೆ. ದಿನಕ್ಕೆ 60,000 ರಿಂದ 80,000ಕ್ಕೆ ಟೆಸ್ಟಿಂಗ್ ಹೆಚ್ಚಿಸಬೇಕು. ಸಾರ್ವಜನಿಕ ಸಭೆ ಹಾಗು ಸಮಾರಂಭಕ್ಕೆ ಕಡ್ಡಾಯ ಕೊವಿಡ್ ರೂಲ್ಸ್ ಪಾಲನೆಯಾಗಬೇಕು. ವಿದೇಶಗಳಿಂದ ಬಂದವರಲ್ಲಿ ಪಾಸಿಟಿವ್ ಕಾಣಿಸಿಕೊಂಡರೆ ನೆಗಟಿವ್ ವರದಿ ಬರುವರೆಗೂ ಕ್ವಾರಂಟೈನ್ ಮಾಡಬೇಕು. ನೆಗಟಿವ್ ಬಂದರೆ ಒಂದು ವಾರ ಮನೆಯಲ್ಲಿಯೇ ಇರುವಂತೆ ಎಚ್ಚರ ವಹಿಸಬೇಕು ಅಂತ ತಿಳಿಸಿದ್ದಾರೆ.
ಬಿಬಿಎಂಪಿಯಲ್ಲಿ 2,800 ಸಕ್ರಿಯ ಪ್ರಕರಣಗಳ ಕಂಟ್ರೋಲ್ ಮಾಡಬೇಕು. ವಿಶೇಷ ಗುಂಪುಗಳನ್ನ ಮಾಡಿ ಕೊವಿಡ್ ಟೆಸ್ಟ್ ಹೆಚ್ಚಳ ಮಾಡಬೇಕು. ಟೆಸ್ಟಿಂಗ್ ಸಂಖ್ಯೆ ಹೆಚ್ಚಿಸಿ ರ್ಯಾಂಡಮ್ ಚೆಕ್ ಮಾಡಬೇಕು. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ, ಬೀದಿ ಬದಿ ವ್ಯಾಪಾರಿಗಳಿಗೆ, ಮಾರ್ಕೆಟ್ ವ್ಯಾಪಾರಿಗಳಿಗೆ, ಮಾಲ್, ರೆಸ್ಟೋರೆಂಟ್ ಸಿಬ್ಬಂದಿಗೆ, ಫ್ಯಾಕ್ಟರಿ, ಗಾರ್ಮೆಂಟ್ಸ್ಗಳಲ್ಲಿ ರ್ಯಾಂಡಮ್ ಚೆಕ್ ಮಾಡಬೇಕು ಅಂತ ತಿಳಿಸಿದ್ದಾರೆ.
ಇದನ್ನೂ ಓದಿ
ಹಾವೇರಿ: ಎಸಿಬಿ ಅಧಿಕಾರಿ ಎಂದು ನಗರಸಭೆ ಅಧಿಕಾರಿಗೆ ವಂಚಿಸಲು ಯತ್ನ; ಆರೋಪಿಯನ್ನು ಬಂಧಿಸಿದ ಪೊಲೀಸರು
ಮೈಸೂರಿನಲ್ಲಿ ಸಾಮೂಹಿತ ಅತ್ಯಾಚಾರ, ಶೂಟೌಟ್ ಪ್ರಕರಣ; ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ ಪೊಲೀಸರು
Published On - 9:26 am, Sun, 28 November 21