Mantri Mall: ಬಿಬಿಎಂಪಿ ಅಧಿಕಾರಿಗಳಿಂದ ಬೆಂಗಳೂರಿನ ಮಂತ್ರಿ ಮಾಲ್ಗೆ ಮತ್ತೆ ಬಿತ್ತು ಬೀಗ
ತೆರಿಗೆ ಪಾವತಿಸದ ಹಿನ್ನೆಲೆ ಈ ಹಿಂದೆ ಅಂದರೆ ನವೆಂಬರ್ 15ಕ್ಕೆ ಅಧಿಕಾರಿಗಳು ಮಾಲ್ಗೆ ಬೀಗ ಹಾಕಿದ್ದರು. ಹಿಂದೆ ಬೀಗ ಹಾಕಿದ್ದಾಗ 5 ಕೋಟಿ ತೆರಿಗೆ ಪಾವತಿಸಿದ್ದ ಮಾಲ್ ಮಾಲೀಕರು, ಬಳಿಕ ಬಾಕಿ ತೆರಿಗೆ ಪಾವತಿಗೆ ಸಮಯ ಕೇಳಿತ್ತು.
ಬೆಂಗಳೂರು: ನಗರದ ಪ್ರತಿಷ್ಠಿತ ಮಂತ್ರಿ ಮಾಲ್ಗೆ (Mantri Mall) ಮತ್ತೆ ಬೀಗ ಬಿದ್ದಿದೆ. ಬಿಬಿಎಂಪಿಗೆ (BBMP) ಸುಮಾರು 27 ಕೋಟಿ ತೆರಿಗೆ ಪಾವತಿಸದ ಹಿನ್ನೆಲೆ ಬೀಗ ಹಾಕಲಾಗಿದೆ. 3 ವರ್ಷದಿಂದ ಮಂತ್ರಿ ಮಾಲ್ ಬಿಬಿಎಂಪಿಗೆ ಒಟ್ಟು 27 ಕೋಟಿ ತೆರಿಗೆಯನ್ನು ಪಾವತಿಸಿಲ್ಲ. ಪದೇಪದೆ ನೋಟಿಸ್ ಜಾರಿ ಮಾಡಿದರೂ ತೆರಿಗೆ ಪಾವತಿಸಿಲ್ಲ. ಹೀಗಾಗಿ ಇಂದು (ಡಿಸೆಂಬರ್ 6) ಮತ್ತೆ ಬಿಬಿಎಂಪಿ ಪಶ್ಚಿಮ ವಲಯದ ಅಧಿಕಾರಿಗಳು ಮಾಲ್ಗೆ ಬೀಗ ಜಡಿದಿದ್ದಾರೆ.
ಮಂತ್ರಿ ಮಾಲ್ಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಹಾಕುತ್ತಿರುವುದು ಇದು ಮೊದಲೇನಲ್ಲ. ಮೂರ್ನಾಲ್ಕು ಬಾರಿ ಬೀಗ ಹಾಕಿದ್ದಾರೆ. ಈ ವೇಳೆ ಮಾಲ್ ಮಾಲೀಕರು ಸಮಯವನ್ನು ಕೇಳಿದ್ದರು. ತೆರಿಗೆ ಪಾವತಿಸದ ಹಿನ್ನೆಲೆ ಈ ಹಿಂದೆ ಅಂದರೆ ನವೆಂಬರ್ 15ಕ್ಕೆ ಅಧಿಕಾರಿಗಳು ಮಾಲ್ಗೆ ಬೀಗ ಹಾಕಿದ್ದರು. ಹಿಂದೆ ಬೀಗ ಹಾಕಿದ್ದಾಗ 5 ಕೋಟಿ ತೆರಿಗೆ ಪಾವತಿಸಿದ್ದ ಮಾಲ್ ಮಾಲೀಕರು, ಬಳಿಕ ಬಾಕಿ ತೆರಿಗೆ ಪಾವತಿಗೆ ಸಮಯ ಕೇಳಿದ್ದರು. ಆಡಳಿತ ಮಂಡಳಿಗೆ ಕೊಟ್ಟ ಸಮಯಾವಕಾಶ ಮುಕ್ತಾಯಗೊಂಡಿದ್ದರಿಂದ ಬೀಗ ಹಾಕಲಾಗಿತ್ತು.
ಮಂತ್ರಿಮಾಲ್ಗೆ 15 ದಿನ ಕಾಲಾವಕಾಶ ನೀಡಿದ್ದ ಬಿಬಿಎಂಪಿ ಈ ಹಿಂದೆ 15 ದಿನಗಳೊಳಗೆ ತೆರಿಗೆ ಪಾವತಿಸುವಂತೆ ಮಾಲ್ಗೆ ಗಡುವು ನೀಡಲಾಗಿತ್ತು. 15 ದಿನದೊಳಗೆ ತೆರಿಗೆ ಪಾವತಿಸುವುದಾಗಿ ಮಾಲೀಕರು ಮನವಿ ಮಾಡಿದ್ದರು. ಬಿಬಿಎಂಪಿ ಆಯುಕ್ತರ ಬಳಿ ಮಂತ್ರಿಮಾಲ್ ಮಾಲೀಕ ಮನವಿ ಮಾಡಿಕೊಂಡಿದ್ದರಂತೆ. ಹೀಗಾಗಿ ಬಿಬಿಎಂಪಿ 15 ದಿನಗಳ ಕಾಲಾವಕಾಶ ನೀಡಿತ್ತು. ನವೆಂಬರ್ ತಿಂಗಳ ಅಂತ್ಯದೊಳಗೆ ತೆರಿಗೆ ಪಾವತಿಸುವಂತೆ ಸೂಚನೆ ನೀಡಲಾಗಿತ್ತು. ಆದರೆ ಇನ್ನು ಉಳಿದ ಬಾಕಿ ತೆರಿಗೆ ಹಣ ನೀಡದ ಕಾರಣ ಇಂದು ಮತ್ತೆ ಬೀಗ ಹಾಕಲಾಗಿದೆ.
ಈ ಹಿಂದೆ ಸ್ಥಳಕ್ಕೆ ಬಂದಿದ್ದ ಬಿಬಿಎಂಪಿ ಅಧಿಕಾರಿಗಳು ಹಣ ಕಟ್ಟದೇ ಇದ್ರೆ ಮಂತ್ರಿಮಾಲ್ ಬಾಗಿಲು ಹಾಕಿಸುವ ಎಚ್ಚರಿಕೆ ನೀಡಿದ್ದರು. ಮಂತ್ರಿಮಾಲ್ನಿಂದ ಮೂರು ವರ್ಷದಿಂದ 27 ಕೋಟಿ ತೆರಿಗೆ ಕಟ್ಟಿಲ್ಲ. ಕಳೆದ ಬಾರಿ 5 ಕೋಟಿ ಕಟ್ಟಿದ್ದರು. ಉಳಿದ ಹಣ ನೀಡುವುದಾಗಿ ಹೇಳಿದ್ದರು.
ಮಲ್ಲೇಶ್ವರದಲ್ಲಿರುವ ಮಂತ್ರಿ ಮಾಲ್ಗೆ ಸೆಪ್ಟೆಂಬರ್ 30ಕ್ಕೆ ಬೀಗ ಹಾಕಲಾಗಿತ್ತು. ಬಿಬಿಎಂಪಿ ಜಂಟಿ ಆಯುಕ್ತ ಶಿವಸ್ವಾಮಿ ಅವರಿಂದ ಬೀಗ ಜಡಿಯುವ ಕಾರ್ಯ ನೆರವೇರಿತ್ತು.
ಇದನ್ನೂ ಓದಿ
ಬೆಂಗಳೂರಿನಲ್ಲಿ ಅಪಾರ್ಟ್ಮೆಂಟ್ 12ನೇ ಮಹಡಿಯಿಂದ ಬಿದ್ದ ವಿದ್ಯಾರ್ಥಿನಿ; ಸ್ಥಳದಲ್ಲೇ ಸಾವು
Published On - 12:04 pm, Mon, 6 December 21