ಬೆಂಗಳೂರು, (ನವೆಂಬರ್ 06): ಬಾಬುಸಪಾಳ್ಯ ಕಟ್ಟಡ ಕುಸಿತ ದುರಂತದ ಬಳಿಕ ರಾಜಧಾನಿಯ ಅನಧಿಕೃತ ಕಟ್ಟಡಗಳಿಗೆ ಬಿಸಿ ಮುಟ್ಟಿಸೋಕೆ ಪಾಲಿಕೆ ಸಜ್ಜಾಗಿನಿಂತಿದೆ.ರಾಜಧಾನಿಯಲ್ಲಿ ಇದುವರೆಗೆ ಬರೋಬ್ಬರಿ 200 ಅನಧಿಕೃತ ಕಟ್ಟಡಗಳು ಪತ್ತೆಯಾಗಿದ್ದು, ಅದರಲ್ಲಿ ಕೆಲ ಕಟ್ಟಡಗಳ ಡೆಮಾಲಿಷನ್ ಗೆ ಪಾಲಿಕೆ ಸಜ್ಜಾಗಿದೆ. ಇತ್ತ ಶಂಕರಪುರದ ಶೃಂಗೇರಿ ಮಠದ ನೇತೃತ್ವದಲ್ಲಿ ನಡೆಯುತ್ತಿರೋ ಜ್ಞಾನೋದಯ ಪಿಯು ಕಾಲೇಜಿನ ಕಟ್ಟಡಕ್ಕೂ ಕಂಟಕ ಎದುರಾಗಿದ್ದು,ಮಠದ ಆವರಣದಲ್ಲಿರೋ ಕಟ್ಟಡ ಡೆಮಾಲಿಷನ್ ಗೆ ಬಿಬಿಎಂಪಿ ಆದೇಶ ಹೊರಡಿಸಿದೆ.
ರಾಜಧಾನಿಯ ಬಹುತೇಕ ಅನಧಿಕೃತ ಕಟ್ಟಡಗಳನ್ನ ತೆರವು ಮಾಡೋಕು ಪ್ಲಾನ್ ಮಾಡಿರೋ ಪಾಲಿಕೆ, ನಕ್ಷೆ ಅನುಮತಿ ಪಡೆಯದೇ ತಲೆ ಎತ್ತಿರೋ ಶಂಕರಪುರದ ಜ್ಞಾನೋದಯ ಪಿಯು ಕಾಲೇಜಿನ ಕಟ್ಟಡ ಡೆಮಾಲಿಷನ್ ಗೆ ಮುಹೂರ್ತ ಫಿಕ್ಸ್ ಮಾಡಿದೆ. ನಕ್ಷೆ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಈಗಾಗಲೇ ನೋಟಿಸ್ ನೀಡಿರುವ ಪಾಲಿಕೆ, ಇದೇ ನವೆಂಬರ್ 11ರಂದು ಡೆಮಾಲಿಷನ್ ಮಾಡುವುದಕ್ಕೆ ತಯಾರಿ ನಡೆಸಿದೆ.
ಇದನ್ನೂ ಓದಿ: ವೈಟ್ ಟಾಪಿಂಗ್: ಬೆಂಗಳೂರಿನ ಈ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ, ಪಾರ್ಕಿಂಗ್ ನಿಷೇಧ
ಇನ್ನು ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ಈ ಕಟ್ಟಡಕ್ಕೆ ಬಿಬಿಎಂಪಿಯ ನಕ್ಷೆ ಅನುಮೋದನೆ ಪಡೆಯದಿರೋದು ಇದೀಗ ಕಟ್ಟಡಕ್ಕೆ ಕಂಟಕ ತಂದಿಟ್ಟಿದೆ. ಇತ್ತ ಶೃಂಗೇರಿಯ ಶಾರದ ಮಠದ ಅಧೀನದಲ್ಲಿ ನಡೆಯುತ್ತಿರೋ ಈ ಶಿಕ್ಷಣ ಸಂಸ್ಥೆಯ ಕಟ್ಟಡಕ್ಕೆ ಡೆಮಾಲಿಷನ್ ಆದೇಶ ಕೊಟ್ಟಿರೋದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತವಾಗ್ತಿದೆ. ಚಾಮರಾಜಪೇಟೆಯ ಸುತ್ತಮುತ್ತ ನೂರಾರು ಅನಧಿಕೃತ ಕಟ್ಟಡ ಇದೆ. ಆದ್ರೆ ಅದನ್ನೆಲ್ಲ ಕೈಹಾಕುವ ಧೈರ್ಯ ಮಾಡದ ಸರ್ಕಾರ ಹಾಗೂ ಪಾಲಿಕೆ, ಮಠದ ಅಧೀನದಲ್ಲಿರೋ ಶಿಕ್ಷಣ ಕೇಂದ್ರದ ಮೇಲೆ ಕಣ್ಣಿಟ್ಟಿರುವುದು ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಇದೇ ಕಟ್ಟಡ ನಿರ್ಮಾಣದ ವೇಳೆ ಇಡೀ ಕಟ್ಟಡವನ್ನ ಬಿಬಿಎಂಪಿಯ ನಕ್ಷೆ ಅನುಮತಿಯಿಲ್ಲದೇ ಕಟ್ಟಲಾಗ್ತಿದೆ,ಇದರಿಂದ ವಿದ್ಯಾರ್ಥಿಗಳ ಜೀವಕ್ಕೆ ಕುತ್ತು ಬರೋ ಸಾಧ್ಯತೆಯಿದೆ ಎಂದು ಸಾಮಾಜಿಕ ಹೋರಾಟಗಾರರೊಬ್ಬರು ಏಕಾಂಗಿ ಹೋರಾಟ ನಡೆಸಿದ್ರು. ಅಲ್ಲದೇ ಕಟ್ಟಡ ತೆರವಿಗೆ ಬಿಬಿಎಂಪಿಯ ಮುಖ್ಯ ಆಯುಕ್ತರಿಗೂ ಪತ್ರ ಬರೆದಿದ್ದರು, ಇದೆಲ್ಲದರ ಪರಿಣಾಮ ಇದೀಗ ಮಠದ ಅಧಿನದಲ್ಲಿರೋ ಶಿಕ್ಷಣ ಸಂಸ್ಥೆಯ ಕಟ್ಟಡ ಡೆಮಾಲಿಷನ್ ಗೆ ಮುಹೂರ್ತ ಫಿಕ್ಸ್ ಆಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ವರದಿ:ಶಾಂತಮೂರ್ತಿ,ಟಿವಿ9,ಬೆಂಗಳೂರು