ವೈಟ್ ಟಾಪಿಂಗ್: ಬೆಂಗಳೂರಿನ ಈ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ, ಪಾರ್ಕಿಂಗ್ ನಿಷೇಧ
ಬೆಂಗಳೂರಿನ ಹಲವು ರಸ್ತೆಗಳಲ್ಲಿ ಬಿಬಿಎಂಪಿ ವತಿಯಿಂದ ನಡೆಯುತ್ತಿರುವ ವೈಟ್ ಟಾಪಿಂಗ್ ಕಾಮಗಾರಿಯಿಂದಾಗಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ವಿದ್ಯಾನಗರ ಕ್ರಾಸ್ ಮತ್ತು ದೇವರಬೀಸನಹಳ್ಳಿ ಸಕ್ರಾ ಆಸ್ಪತ್ರೆ ರಸ್ತೆಗಳಲ್ಲಿ ಸಂಚಾರ ಸಂಪೂರ್ಣವಾಗಿ ನಿರ್ಬಂಧಿಸಲಾಗಿದ್ದು, ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ. ಪಾಟರಿ ಜಂಕ್ಷನ್ ಟ್ಯಾನರಿ ರಸ್ತೆಯಲ್ಲೂ ರೈಲ್ವೇ ಕಾಮಗಾರಿಯಿಂದಾಗಿ ಸಂಚಾರ ನಿರ್ಬಂಧವಿದೆ.
ಬೆಂಗಳೂರು, ನವೆಂಬರ್ 06: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವತಿಯಿಂದ ನಗರದ ಹಲವು ರಸ್ತೆಗಳಿಗೆ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ (Bengaluru) ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ವಿದ್ಯಾನಗರ ಕ್ರಾಸ್ನಿಂದ ಬೆಲಕಾಂ ಲೇಔಟ್ (ವೆಂಕಟೇಶ್ವರ ತಾಂತ್ರಿಕ ಕಾಲೇಜ್) ರಸ್ತೆ, ದೇವರಬೀಸನಹಳ್ಳಿ ಸಕ್ರಾ ಆಸ್ಪತ್ರೆ ಮುಖ್ಯರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ವಾಹನ ಸಂಚಾರ ನಿರ್ಬಂಧ ದಿನಾಂಕ, ಪರ್ಯಾಯ ಮಾರ್ಗ ಇಲ್ಲಿದೆ.
ವಿದ್ಯಾನಗರ ಕ್ರಾಸ್‌ನ ವಿಎನ್ಎಸ್ಐಟಿ ಕಾಲೇಜು ಕಡೆಗೆ ಹೋಗುವ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿರುವ ಕಾರಣ ವೈಟ್ ಟಾಪಿಂಗ್ (ಸಿಮೆಂಟ್ ರಸ್ತೆ) ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ 14ರವರೆಗೆ ವಿದ್ಯಾನಗರ ಕ್ರಾಸ್ ನಿಂದ ಬೆಲಕಾಂ ಲೇಔಟ್ (ವೆಂಕಟೇಶ್ವರ ತಾಂತ್ರಿಕ ಕಾಲೇಜ್)ವರೆಗೆ ಸಂಚಾರವನ್ನು ನಿರ್ಭಂದಿಸಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಪರ್ಯಾಯ ಮಾರ್ಗಗಳು
- ವಿದ್ಯಾನಗರ ಕಡೆಯಿಂದ ಉತ್ತನಹಳ್ಳಿಗೆ ಹೋಗುವ ವಾಹನಗಳು ಬಿ.ಎಂ.ಡಬ್ಲ್ಯೂ ಕಾರ್ ಶೋರೂಂ -ಶಕ್ತಿ ನಗರ- ಆಕ್ಸ್‌ಫರ್ಡ್ ಸ್ಕೂಲ್ – ಅಲ್ಲಮಾರನಹಳ್ಳಿ- ಬೆಲಿಕಾಂ ಲೇಔಟ್ ಮೂಲಕ ಉತ್ತನಹಳ್ಳಿ ಮುಖ್ಯ ರಸ್ತೆ ತಲುಪಬಹುದಾಗಿದೆ ಅಥವಾ ಚಿಕ್ಕಜಾಲ ಅಂಡರ್ ಪಾಸ್ ಮೂನ್ ಗೇಟ್ ರಸ್ತೆ- ಮಾರನಾಯಕನಹಳ್ಳಿ-ಉತ್ತನಹಳ್ಳಿ ಮುಖ್ಯರಸ್ತೆ ಮೂಲಕ ಹೋಗಬಹುದು.
- ಉತ್ತನಹಳ್ಳಿ ಮುಖ್ಯ ರಸ್ತೆ ಕಡೆಯಿಂದ ವಿದ್ಯಾನಗರಕ್ರಾಸ್ ಕಡೆಗೆ ಹೋಗುವ ವಾಹನಗಳು ಹೊಸಹಳ್ಳಿ-ಹುಣಸಮಾರನಹಳ್ಳಿ ಅಂಡರ್ ಪಾಸ್-ಸರ್ವಿಸ್ ರೋಡ್ ಮೂಲಕ ತಲುಪಬಹುದು.
- ವಿದ್ಯಾನಗರ ಕಡೆಯಿಂದ ಬಾಗಲೂರು ಇಂಡಸ್ಟ್ರೀಯಲ್ ಏರಿಯಾ ಕಡೆಗೆ ಹೋಗುವ ವಾಹನಗಳು ಚಿಕ್ಕಜಾಲ ಅಂಡರ್ಪಾಸ್, ಕೋಟೆ ಕ್ರಾಸ್, ದೊಡ್ಡ ಜಾಲ ಮೂಲಕ ಹೋಗಬಹುದು.
- ಬಸ್ಸುಗಳು ಹಾಗೂ ಭಾರಿ ಸರಕು ಸಾಗಣೆ ವಾಹನಗಳು ಬಾಗಲೂರು ಕ್ರಾಸ್ ರೇವಾ ಜಂಕ್ಷನ್-ಸಾತನೂರು-ಬಾಗಲೂರು ರಸ್ತೆ ಮಾರ್ಗವನ್ನು ಕಡ್ಡಾಯವಾಗಿ ಉಪಯೋಗಿಸತಕ್ಕದ್ದು
ದೇವರಬೀಸನಹಳ್ಳಿ ಸಕ್ತಾ ಆಸ್ಪತ್ರೆ ಮುಖ್ಯರಸ್ತೆ ಬಂದ್
ದೇವರಬೀಸನಹಳ್ಳಿ ಸಕ್ತಾ ಆಸ್ಪತ್ರೆ ಮುಖ್ಯರಸ್ತೆ (ಮಿಂತ್ರಾ ಅಪಾರ್ಟ್ ಮೆಂಟ್ ಮುಂಭಾಗದ ರಸ್ತೆಯಿಂದ ಬೆಳ್ಳಂದೂರು ಕೋಡಿವರೆಗೆ) ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನವೆಂಬರ್60 ದಿನಗಳ ಕಾಲ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಇದನ್ನೂ ಓದಿ: ಲಾಲ್ ಬಾಗ್ ಭೇಟಿ ನೀಡುವವರಿಗೆ ಕಹಿ ಸುದ್ದಿ: ಪ್ರವೇಶ ಶುಲ್ಕ, ಪಾರ್ಕಿಂಗ್ ಫೀ ಹೆಚ್ಚಳ
ವಾಹನ ಸಂಚಾರ ನಿರ್ಬಂಧಿಸಿರುವ ರಸ್ತೆ
ದೇವರಬೀಸನಹಳ್ಳಿ ಸಕ್ರಾ ಆಸ್ಪತ್ರೆ ಮುಖ್ಯರಸ್ತೆ (ಮಿಂತ್ರಾ ಅಪಾರ್ಟ್ ಮೆಂಟ್ ಮುಂಭಾಗದ ರಸ್ತೆಯಿಂದ ಬೆಳ್ಳಂದೂರು ಕೋಡಿವರೆಗೆ)
ಟ್ವಿಟರ್ ಪೋಸ್ಟ್
#ಸಂಚಾರಸಲಹೆ#TrafficAdvisory @DgpKarnataka @KarnatakaCops @CPBlr @Jointcptraffic @BlrCityPolice @blrcitytraffic @acpeasttraffic @acpwfieldtrf @halairporttrfps @mahadevapuratrf @wftrps @KRPURATRAFFIC @DCPSouthTrBCP pic.twitter.com/zdD2cGo4fG
— DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ (@DCPTrEastBCP) November 4, 2024
ಪರ್ಯಾಯ ಮಾರ್ಗ
- ಯಮಲೂರು ಕಡೆಯಿಂದ ದೇವರಬೀಸನಹಳ್ಳಿ ಮತ್ತು ಬೆಳ್ಳಂದೂರು ಕಡೆಗೆ ಸಂಚರಿಸುವವರು ಹಳೆ ವಿಮಾನ ನಿಲ್ದಾಣ ರಸ್ತೆ ಯಮಲೂರು ಜಂಕ್ಷನ್ ಮಾರತ್ತಹಳ್ಳಿ ಬ್ರಿಡ್ಜ್ – ಕಾಡುಬೀಸನಹಳ್ಳಿ ಬ್ರಿಡ್ಜ್ – ಹೊರವರ್ತುಲ ರಸ್ತೆ ಮಾರ್ಗವಾಗಿ ದೇವರಬೀಸನಹಳ್ಳಿ ಮತ್ತು ಬೆಳ್ಳಂದೂರು ಕಡೆಗೆ ಸಂಚರಿಸಬಹುದು.
- ಯಮಲೂರು ಕಡೆಯಿಂದ ಕಾಡುಬೀಸನಹಳ್ಳಿ ಮತ್ತು ದೇವರಬೀಸನಹಳ್ಳಿ ಕಡೆಗೆ ಸಂಚರಿಸುವವರು ಹಳಿ ವಿಮಾನ ನಿಲ್ದಾಣ ರಸ್ತೆ ಮಾರ್ಗವಾಗಿ ಯಮಲೂರು ಜಂಕ್ಷನ್ ಯಮಲೂರು ವಿಲೇಜ್ ಮಾರ್ಗವಾಗಿ ಯಮಲೂರು ಕೋಡಿಯಲ್ಲಿ ಎಡ ತಿರುವು ಪಡೆದು ಕರಿಯಮ್ಮನ ಅಗ್ರಹಾರ ಮೂಲಕ ಕಾಡುಬೀಸನಹಳ್ಳಿ ಮತ್ತು ದೇವರಬೀಸನಹಳ್ಳಿ ಕಡೆಗೆ ಸಂಚರಿಸಬಹುದು.
- ಯಮಲೂರು ಕಡೆಯಿಂದ ಹೊರವರ್ತುಲ ರಸ್ತೆ ಕಡೆಗೆ ಸಂಚರಿಸುವವರು ಹಳೆ ವಿಮಾನ ನಿಲ್ದಾಣ ರಸ್ತೆ, ಯಮಲೂರು ಜಂಕ್ಷನ್ ಯಮಲೂರು ವಿಲೇಜ್ ಮೂಲಕ ಯಮಲೂರು ಕೋಡಿ ಬೆಳ್ಳಂದೂರು ಕೋಡಿ ಬಲ ತಿರುವು ಪಡೆದು ಬೆಳ್ಳಂದೂರು ವಿಲೇಜ್ ಮಾರ್ಗವಾಗಿ ಹೊರವರ್ತುಲ ರಸ್ತೆ ಕಡೆಗೆ ಸಂಚರಿಸಬಹುದು.
- ದೇವರಬೀಸನಹಳ್ಳಿ ಮತ್ತು ಬೆಳ್ಳಂದೂರು ಕಡೆಯಿಂದ ನಗರದ ಕಡೆಗೆ ಸಂಚರಿಸುವವರು ಹೊರವರ್ತುಲ ರಸ್ತೆ ಕಾಡುಬೀಸನಹಳ್ಳಿ ಬ್ರಿಡ್ಜ್ ಮಾರತ್ತಹಳ್ಳಿ ಬ್ರಿಡ್ಜ್ ಮೇಲೆ ಎಡ ತಿರುವು ಪಡೆದು ಯಮಲೂರು ಜಂಕ್ಷನ್ ಹಳೆ ವಿಮಾನ ನಿಲ್ದಾಣ ರಸ್ತೆ ಮೂಲಕ ನಗರದ ಕಡೆಗೆ ಸಂಚರಿಸಬಹುದು.
- ಕಾಡುಬೀಸನಹಳ್ಳಿ ಮತ್ತು ದೇವರಬೀಸನಹಳ್ಳಿ ಕಡೆಯಿಂದ ನಗರದ ಆಗ್ರಹಾರ – ಯಮಲೂರು ಕೋಡಿಯಲ್ಲಿ ಬಲ ತಿರುವು ಪಡೆದು ಸಂಚರಿಸಬಹುದು.
- ಕಡೆಗೆ ಸಂಚರಿಸುವವರು ಕರಿಯಮ್ಮನ ಯಮಲೂರು ವಿಲೇಜ್ ಮಾರ್ಗವಾಗಿ ಯಮಲೂರು ಜಂಕ್ಷನ್ ಹಳೆ ವಿಮಾನ ನಿಲ್ದಾಣ ರಸ್ತೆ ಮಾರ್ಗವಾಗಿ ನಗರದ ಕಡೆಗೆ ಹೊರವರ್ತುಲ ರಸ್ತೆ ಕಡೆಯಿಂದ ನಗರದ ಕಡೆಗೆ ಸಂಚರಿಸುವವರು ಬೆಳ್ಳಂದೂರು ವಿಲೇಜ್ ಬೆಳ್ಳಂದೂರು ಕೋಡಿ ಎಡ ತಿರುವು ಪಡೆದು ಯಮಲೂರು ಕೋಡಿ ಯಮಲೂರು ವಿಲೇಜ್ ಮೂಲಕ ಯಮಲೂರು ಜಂಕ್ಷನ್ ಬಳಿ ಎಡ ತಿರುವು ಪಡೆದು ಹಳೆ ವಿಮಾನ ನಿಲ್ದಾಣ ರಸ್ತೆ ಮೂಲಕ ನಗರದ ಕಡೆಗೆ ಸಂಚರಿಸಬಹುದು.
ಪಾಟರಿ ಜಂಕ್ಷನ್ ಟ್ಯಾನರಿ ರಸ್ತೆ ಬಂದ್
- ಪುಲಕೇಶಿ ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಪಾಟರಿ ಜಂಕ್ಷನ್ ಟ್ಯಾನರಿ ರಸ್ತೆಯಲ್ಲಿರುವ ರೈಲ್ವೇ ಬ್ರಿಡ್ಜ್ ಬಳಿ ರೈಲ್ವೇ ಇಲಾಖೆ ವತಿಯಿಂದ ಕಾಮಗಾರಿ ಕೈಗೊಳ್ಳಲಾಗಿದೆ. ಕಾಮಗಾರಿ ಮುಕ್ತಾಯವಾಗುವವರೆಗೆ ಈ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ವಾಹನ ಸಂಚಾರ ನಿರ್ಬಂಧಿಸಿರುವ ರಸ್ತೆ
- ಶಾಂಪುರ ಮುಖ್ಯರಸ್ತೆ ಮತ್ತು ಅರೇಬಿಕ್ ಕಾಲೇಜು ಮುಖ್ಯರಸ್ತೆ ಕಡೆಯಿಂದ ಟ್ಯಾನರಿ ರಸ್ತೆಯಲ್ಲಿ ಬರುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು (ಬಿ.ಎಂ.ಟಿ.ಸಿ ಬಸ್ ಹೊರತುಪಡಿಸಿ) ಡೇವಿಸ್ ರಸ್ತೆ ಜಂಕ್ಷನ್‌ನಿಂದ ನೇತಾಜಿ ಜಂಕ್ಷನ್‌ವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
- ಬಿಎಂಟಿಸಿ ಬಸ್‌ಗಳ ಸಂಚಾರವನ್ನು ವಿವಿಯಾನಿ ರಸ್ತೆ ಜಂಕ್ಷನ್‌ನಿಂದ ನೇತಾಜಿ ಜಂಕ್ಷನ್‌ವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗ
- ವಾಹನ ಚಾಲಕರು ಮತ್ತು ಸವಾರರು ಡೇವಿಸ್ ರಸ್ತೆ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಮುಂದೆ ಸಾಗಿ ಡೇವಿಸ್ ರಸ್ತೆ ಜಾನ್ ಆರ್ಮ್ ಸ್ಟ್ರಾಂಗ್ ರಸ್ತೆ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ನೇರವಾಗಿ ಬಂದು ಪಾಟರಿ ರಸ್ತೆ ಜಂಕ್ಷನ್‌ನಲ್ಲಿ ಬಲತಿರುವು ಪಡೆದು ಮುಂದೆ ಹೊಸ ರೈಲ್ವೆ ಕೆಳಸೇತುವೆ ಮುಖಾಂತರ ನೇತಾಜಿ ಜಂಕ್ಷನ್ ಕಡೆಗೆ ಹೋಗಬಹುದಾಗಿದೆ.
- ಬಿ.ಎಂ.ಟಿ.ಸಿ ಬಸ್ ಚಾಲಕರು ವಿವಿಯಾನಿ ರಸ್ತೆ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಮುಂದೆ ಸಾಗಿ ವಿವಿಯಾಗಿ ರಸ್ತೆ ಜಾನ್ ಆರ್ಮ್ ಸ್ಟ್ರಾಂಗ್ ರಸ್ತೆ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ನೇರವಾಗಿ ಬಂದು ಪಾಟರಿ ರಸ್ತೆ ಜಂಕ್ಷನ್‌ನಲ್ಲಿ ಬಲತಿರುವು ಪಡೆದು ಮುಂದೆ ಹೊಸ ರೈಲ್ವೆ ಕೆಳಸೇತುವೆ ಮುಖಾಂತರ ನೇತಾಜಿ ಜಂಕ್ಷನ್ ಕಡೆಗೆ ಹೋಗಬಹುದಾಗಿದೆ.
- ಪಾಟರಿ ಜಂಕ್ಷನ್‌ನಲ್ಲಿ ರೈಲ್ವೆ ಬ್ರಿಡ್ಜ್ ಕಾಮಾಗಾರಿ ಮುಗಿಯುವವರೆಗೆ ಡೇವಿಸ್ ರಸ್ತೆ, ಜಾನ್ ಆರ್ಮ್ ಸ್ಟ್ರಾಂಗ್ ರಸ್ತೆ, ವಿವಿಯಾನಿ ರಸ್ತೆ ಮತ್ತು ಪಾಟರಿ ರಸ್ತೆಯಲ್ಲಿ ಎಲ್ಲಾ ಮಾದರಿಯ ವಾಹನಗಳ ಪಾರ್ಕಿಂಗ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:45 am, Wed, 6 November 24