AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಅನಧಿಕೃತ ಪಿಜಿಗಳಿಗೆ ಬ್ರೇಕ್ ಹಾಕಲು ಸಜ್ಜಾದ ಪಾಲಿಕೆ, ರೂಲ್ಸ್ ಬ್ರೇಕ್ ಮಾಡಿದ ಪಿಜಿಗಳಿಗೆ ಬೀಳಲಿದೆ ಬೀಗ

ಇತ್ತೀಚೆಗೆ ಬೆಂಗಳೂರಿನ ಹೆಚ್​ಎಸ್​ಆರ್ ಲೇಔಟ್​ನ ಲೇಡೀಸ್ ಪಿಜಿಯ ಓರ್ವ ಯುವತಿ ನಗ್ನವಾಗಿ ಓಡಾಡಿದ್ದ ವಿಡಿಯೋ ವೈರಲ್​ ಆಗಿತ್ತು. ಪಿಜಿಯಿಂದ ಅಕ್ಕಪಕ್ಕದ ಜನರಿಗೆ ತೊಂದರೆಯಾಗುತ್ತಿದೆ ಎಂಬ ಮಾತು ಕೇಳಿಬಂದಿತ್ತು. ಹಾಗಾಗಿ ಇದೀಗ ಅನಧಿಕೃತ ಪಿಜಿಗಳು ಮತ್ತು ಅವುಗಳಿಂದ ಉಂಟಾಗುತ್ತಿರುವ ಸಮಸ್ಯೆಗಳಿಂದಾಗಿ ಬಿಬಿಎಂಪಿ ಕಠಿಣ ಕ್ರಮಕ್ಕೆ ಮುಂದಾಗಿದೆ.

ಬೆಂಗಳೂರಿನಲ್ಲಿ ಅನಧಿಕೃತ ಪಿಜಿಗಳಿಗೆ ಬ್ರೇಕ್ ಹಾಕಲು ಸಜ್ಜಾದ ಪಾಲಿಕೆ, ರೂಲ್ಸ್ ಬ್ರೇಕ್ ಮಾಡಿದ ಪಿಜಿಗಳಿಗೆ ಬೀಳಲಿದೆ ಬೀಗ
ಪಿಜಿ, ಬಿಬಿಎಂಪಿ
ಶಾಂತಮೂರ್ತಿ
| Updated By: ಗಂಗಾಧರ​ ಬ. ಸಾಬೋಜಿ|

Updated on:May 08, 2025 | 8:48 AM

Share

ಬೆಂಗಳೂರು, ಮೇ 08: ಹೆಚ್​​ಎಸ್​ಆರ್ ಲೇಔಟ್​ನ ಲೇಡೀಸ್ ಪಿಜಿ (PG) ಅವಾಂತರ ಬಳಿಕ ಎಚ್ಚೆತ್ತ ಪಾಲಿಕೆ, ಇದೀಗ ರಾಜಧಾನಿಯ ಪಿಜಿಗಳ ಮೇಲೆ ಕ್ರಮ ಕೈಗೊಳ್ಳೋಕೆ ಸಜ್ಜಾಗಿದೆ. ಬೆಂಗಳೂರಿನ ಅನಧಿಕೃತ ಪಿಜಿಗಳು ಹಾಗೂ ನಿಯಮಗಳನ್ನ ಉಲ್ಲಂಘಿಸುವ ಪಿಜಿಗಳಿಗೆ ಚಾಟಿ ಬೀಸಲು ಪಾಲಿಕೆ (BBMP) ಸಜ್ಜಾಗಿದೆ. ನಗರದ ಪಿಜಿಗಳಿಗೆ ಕಡಿವಾಣ ಹಾಕುವುದಕ್ಕೆ ಹೊರಟಿರುವ ಬಿಬಿಎಂಪಿ, ಇದೀಗ ರೂಲ್ಸ್ ಪಾಲಿಸದ ಪಿಜಿಗಳನ್ನ ಬಂದ್ ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಇತ್ತೀಚೆಗಷ್ಟೇ ಹೆಚ್​ಎಸ್​ಆರ್ ಲೇಔಟ್​ನ ಲೇಡೀಸ್ ಪಿಜಿಯಲ್ಲಿ ಯುವತಿ ನಗ್ನವಾಗಿ ಓಡಾಡುವ ವಿಷಯ ಸಖತ್ ಸದ್ದುಮಾಡಿತ್ತು. ಅಲ್ಲದೇ ಪಿಜಿಯಿಂದ ಅಕ್ಕಪಕ್ಕದ ನಿವಾಸಿಗಳಿಗೆ ಸಮಸ್ಯೆಯಾಗುತ್ತಿದೆ ಅನ್ನೋ ದೂರುಗಳು ಕೂಡ ಕೇಳಿಬಂದಿತ್ತು. ಸದ್ಯ ಈ ಘಟನೆ ಬಳಿಕ ಎಚ್ಚೆತ್ತ ಪಾಲಿಕೆ ಇದೀಗ ರಾಜಧಾನಿಯ ಅನಧಿಕೃತ ಪಿಜಿಗಳಿಗೆ ಬಿಸಿಮುಟ್ಟಿಸೋಕೆ ಸಜ್ಜಾಗಿದೆ. ರಾಜಧಾನಿಯ ಪಿಜಿಗಳಿಗೆ ಈಗಾಗಲೇ ಕೆಲ ಮಾರ್ಗಸೂಚಿಗಳನ್ನ ಹೊರಡಿಸಿದ್ದ ಪಾಲಿಕೆ, ಇದೀಗ ರೂಲ್ಸ್ ಬ್ರೇಕ್ ಮಾಡುತ್ತಿರುವ ಪಿಜಿಗಳನ್ನ ಬಂದ್ ಮಾಡಿಸುವುದಕ್ಕೆ ಸಜ್ಜಾಗಿವೆ. ಸದ್ಯ ಈಗಾಗಲೇ 1200 ಅನಧಿಕೃತ ಪಿಜಿಗಳನ್ನ ಗುರುತಿಸಿರುವ ಪಾಲಿಕೆ, ರೂಲ್ಸ್ ಮೀರಿದ ಪಿಜಿಗಳಿಗೆ ಬೀಗ ಜಡಿಯೋಕೆ ಪ್ಲಾನ್ ಮಾಡಿದೆ.

ಇದನ್ನೂ ಓದಿ: ಮೆಟ್ರೋ ನಿಲ್ದಾಣದಲ್ಲಿ ಕ್ಯೂ.ಆರ್ ಟಿಕೆಟ್ ಯಂತ್ರಗಳ ವ್ಯವಸ್ಥೆ: ಜಸ್ಟ್​​ ಎರಡು ಹಂತದಲ್ಲಿ ಟಿಕೆಟ್​​ ಕೈಗೆ

ಇದನ್ನೂ ಓದಿ
Image
ಮೆಟ್ರೋ ನಿಲ್ದಾಣದಲ್ಲಿ ಕ್ಯೂ.ಆರ್ ಟಿಕೆಟ್ ಯಂತ್ರಗಳ ವ್ಯವಸ್ಥೆ
Image
ಬೆಂಗಳೂರು ಸೇರಿ ಕರ್ನಾಟಕದ 15ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇಂದು ಸಾಧಾರಣ ಮಳೆ
Image
ಸಿಎಂ ವಿರುದ್ಧ ಮುಡಾ ಕೇಸ್: ಕಾಲಾವಕಾಶ ಕೋರಿದ ಲೋಕಾಯುಕ್ತ ಪೊಲೀಸ್
Image
ಥೂ...ಛೀ..ಬೆಂಗಳೂರಿನಲ್ಲಿ ಬೆತ್ತಲೆಯಾಗಿ ಓಡಾಡಿದ ಯುವತಿ, ವಿಡಿಯೋ ವೈರಲ್

ಇನ್ನು ಬಿಬಿಎಂಪಿಯ ವಿವಿಧ ವಲಯಗಳಲ್ಲಿ ಈಗಾಗಲೇ ನಿಯಮ ಮೀರಿದ ಪಿಜಿಗಳಿಗೆ ಬೀಗ ಜಡಿಯೋ ಎಚ್ಚರಿಕೆ ಪಾಲಿಕೆ ನೀಡಿದೆ. ಇತ್ತ ಪಿಜಿಗಳಿಂದ ಏರಿಯಾ ನಿವಾಸಿಗಳು, ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಗಮನಹರಿಸೋಕೆ ತಯಾರಿ ನಡೆಸಿದೆ. ಸದ್ಯ ಈಗಾಗಲೇ ಪಿಜಿಗಳಿಗೆ ಹೊರಡಿಸಿದ್ದ ಕೆಲ ರೂಲ್ಸ್​ಗಳನ್ನ ಹಲವು ಪಿಜಿ ಮಾಲೀಕರು ವಿರೋಧಿಸಿದ್ದರು. ಆದರೆ ಇದೀಗ ನಿಯಮ ಪಾಲಿಸದ ಪಿಜಿಗಳಿಗೆ ಬಿಸಿ ಮುಟ್ಟಿಸೋಕೆ ಪಾಲಿಕೆ ಚಿಂತನೆ ನಡೆಸಿದೆ. ಸದ್ಯ ರಾಜಧಾನಿಯ ಪಿಜಿಗಳಿಗೆ ನೀಡಿದ್ದ ಗೈಡ್ ಲೈನ್​​ಗಳೇನು ಅನ್ನೋದನ್ನ ನೋಡೋದಾದರೆ..

ಪಿಜಿಗಳಿಗೆ ಪಾಲಿಕೆ ರೂಲ್ಸ್ ಗಳೇನು?

  • ಸಿಸಿಟಿವಿ ಅಳವಡಿಕೆ ಕಡ್ಡಾಯ, 90 ದಿನಗಳ ಡೇಟಾ ಸಿಗುವ ವ್ಯವಸ್ಥೆ ಇರಬೇಕು.
  • ಪ್ರತಿಯೊಬ್ಬ ನಿವಾಸಿಗೆ ವಾಸಕ್ಕೆ ತಲಾ 70 ಚದರ ಅಡಿಗಳ ಕನಿಷ್ಠ ಜಾಗವಿರುವುದನ್ನ ಖಚಿತಪಡಿಸಿಕೊಳ್ಳಬೇಕು.
  • ಸ್ವಚ್ಛ ಹಾಗೂ ನೈರ್ಮಲ್ಯತೆ ಹೊಂದಿರುವ ಸ್ನಾನಗೃಹಗಳು ಮತ್ತು ಶೌಚಾಲಯ ಇರಬೇಕು.
  • ಕಡ್ಡಾಯವಾಗಿ FSSAI ಇಲಾಖೆಯಿಂದ ಲೈಸನ್ಸ್‌ ಪಡೆದಿರಬೇಕು.
  • ಸುರಕ್ಷತಾ ದೃಷ್ಟಿಯಿಂದ ಕನಿಷ್ಟ ಪಕ್ಷ 01 ಸಿಬ್ಬಂದಿಯನ್ನಾದರೂ ಕಡ್ಡಾಯವಾಗಿ 24*7 ಸೇವೆಯಡಿಯಲ್ಲಿ ನಿಯೋಜಿಸಬೇಕು.

ಇದನ್ನೂ ಓದಿ: ಛೀ..ಥೂ…ಬೆಂಗಳೂರಿನಲ್ಲಿ ಬೆತ್ತಲೆಯಾಗಿ ಓಡಾಡಿದ ಯುವತಿ, ವಿಡಿಯೋ ವೈರಲ್

ಸದ್ಯ ಈ ನಿಯಮಗಳಷ್ಟೇ ಅಲ್ಲದೇ ಪಿಜಿಯಿಂದ ಅಕ್ಕಪಕ್ಕದ ನಿವಾಸಿಗಳಿಗೆ ಕಿರಿಕಿರಿಯಾಗದಂತೆ ಗಮನ ಹರಿಸುವ ಹೊಣೆಯನ್ನ ಕೂಡ ಪಿಜಿಗಳು ಪಾಲಿಸೋಕೆ ಪಾಲಿಕೆ ಸೂಚನೆ ನೀಡಿದೆ. ಅಲ್ಲದೇ ಪಿಜಿಗಳ ನಿವಾಸಿಗಳಿಂದ ಸಾರ್ವಜನಿಕರ ಹಿತ ಹಾಳಾಗ್ತಿರೋ ಬಗ್ಗೆ ದೂರುಗಳು ಬರುತ್ತಿರುವ ಬೆನ್ನಲ್ಲೆ ಕೋಲಿವಿಂಗ್ ಪಿಜಿಗಳ ಮೇಲೂ ಕಣ್ಣೀಡೋಕೆ ಪಾಲಿಕೆ ಸಜ್ಜಾಗಿದೆ. ಸದ್ಯ ಪಾಲಿಕೆಯ ಈ ಚಿಂತನೆಯಿಂದ ರಾಜಧಾನಿಯ ಕೋಲಿವಿಂಗ್ ಪಿಜಿಗಳು, ಹದ್ದುಮೀರಿದ ಪಿಜಿಗಳಿಗೆ ಎಷ್ಟರಮಟ್ಟಿಗೆ ಬ್ರೇಕ್ ಬೀಳುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:46 am, Thu, 8 May 25

‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ಅಪ್ರಾಪ್ತೆಯ ಕೊರಳಿಗೆ ಚಾಕು ಹಿಡಿದ ಪಾಗಲ್ ಪ್ರೇಮಿ,
ಅಪ್ರಾಪ್ತೆಯ ಕೊರಳಿಗೆ ಚಾಕು ಹಿಡಿದ ಪಾಗಲ್ ಪ್ರೇಮಿ,
ಸಿಎಂ ಗಾದಿಗಾಗಿ ತಿಕ್ಕಾಟ ಜೋರಾಗಿರುವ ಸೂಚನೆಗಳು ಸ್ಪಷ್ಟ!
ಸಿಎಂ ಗಾದಿಗಾಗಿ ತಿಕ್ಕಾಟ ಜೋರಾಗಿರುವ ಸೂಚನೆಗಳು ಸ್ಪಷ್ಟ!
ಕಲಬುರಗಿ ಜಿಲ್ಲೆಯ ಹಲವಾರು ಕಡೆ ತುಂಬಿ ಹರಿಯುತ್ತಿರುವ ಹಳ್ಳಕೊಳ್ಳಗಳು
ಕಲಬುರಗಿ ಜಿಲ್ಲೆಯ ಹಲವಾರು ಕಡೆ ತುಂಬಿ ಹರಿಯುತ್ತಿರುವ ಹಳ್ಳಕೊಳ್ಳಗಳು