ಬೆಂಗಳೂರು ಮಾಲ್​ಗಳಿಗೆ ಶೀಘ್ರ ಹೊಸ ನಿಯಮ: ತಾರತಮ್ಯ ಮಾಡಿದರೆ ಪರವಾನಗಿ ರದ್ದು

ಜಿಟಿ ಮಾಲ್​​ಗೆ ಪಂಚೆ ಧರಿಸಿ ಬಂದ ರೈತ ಫಕೀರಪ್ಪರನ್ನು ಒಳಗೆ ಬಿಡದ ಪ್ರಕರಣ ಸಾಕಷ್ಟು ಸದ್ದು ಮಾಡಿತ್ತು. ಆಸ್ತಿತೆರಿಗೆ ಕೂಡ ಬಾಕಿ ಉಳಿಸಿಕೊಂಡಿದ್ದ ಜಿಟಿ ಮಾಲ್​​ಗೆ ಬೀಗ ಬಿದ್ದಿತ್ತು. ಇದೀಗ ಈ ಘಟನೆಯಿಂದ ಎಚ್ಚೆತ್ತುಕೊಂಡ ಬಿಬಿಎಂಪಿ ಹೊಸದೊಂದು ಆದೇಶ ಹೊರಡಿಸಲು ಸಜ್ಜಾಗಿದೆ. ಬೆಂಗಳೂರಿನ ಎಲ್ಲಾ ಮಾಲ್​​​ಗಳಿಗೆ ಹೊಸ ನಿಯಮಗಳನ್ನ ರೂಪಿಸಲು ಪಾಲಿಕೆ ಸಜ್ಜಾಗಿದ್ದು, ಆ ಕುರಿತ ವಿವರ ಇಲ್ಲಿದೆ.

ಬೆಂಗಳೂರು ಮಾಲ್​ಗಳಿಗೆ ಶೀಘ್ರ ಹೊಸ ನಿಯಮ: ತಾರತಮ್ಯ ಮಾಡಿದರೆ ಪರವಾನಗಿ ರದ್ದು
ಬೆಂಗಳೂರು ಮಾಲ್​ಗಳಿಗೆ ಶೀಘ್ರ ಹೊಸ ನಿಯಮ: ತಾರತಮ್ಯ ಮಾಡಿದರೆ ಪರವಾನಗಿ ರದ್ದು
Follow us
ಶಾಂತಮೂರ್ತಿ
| Updated By: Ganapathi Sharma

Updated on: Jul 26, 2024 | 7:49 AM

ಬೆಂಗಳೂರು, ಜುಲೈ 26: ಪಂಚೆ ಹಾಕಿ ಬಂದಿದ್ದರು ಎಂಬ ಕಾರಣಕ್ಕೆ ರೈತನಿಗೆ ಅವಮಾನಿಸಿದ್ದ ಜಿಟಿ ಮಾಲ್ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಪಂಚೆ ಧರಿಸಿದ್ದ ವ್ಯಕ್ತಿಯನ್ನ ಒಳಗೆ ಬಿಡಲು ನಿರಾಕರಿಸಿದ್ದಕ್ಕಾಗಿ ಮಾಲ್ ಮಾಲೀಕರು ರೈತರ ಬಳಿ ಕ್ಷಮೆ ಕೂಡ ಕೇಳಿದ್ದರು. ಇದೀಗ ಈ ಘಟನೆ ಬಳಿಕ ಎಚ್ಚೆತ್ತ ಪಾಲಿಕೆ, ಬೆಂಗಳೂರಿನ ಮಾಲ್​​ಗಳಿಗೆ ಹೊಸ ನಿಯಮ ರೂಪಿಸಲು ಹೊರಟಿದೆ. ಡಿಸಿಎಂ ಡಿಕೆ ಶಿವಕುಮಾರ್ ಸೂಚನೆಯಂತೆ ಒಂದಷ್ಟು ನಿಯಮಗಳನ್ನ ರೆಡಿಮಾಡುತ್ತಿರುವ ಬಿಬಿಎಂಪಿ, ಇನ್ಮುಂದೆ ಮಾಲ್​​ಗಳಲ್ಲಿ ಬಟ್ಟೆ, ಜಾತಿ, ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡಿದರೆ ಬಿಸಿ ಮುಟ್ಟಿಸಲು ಮುಂದಾಗಿದೆ.

ಸದ್ಯ ಬೆಂಗಳೂರಿನ ಬಹುತೇಕ ಮಾಲ್​ಗಳಲ್ಲಿ ಉಡುಗೆ-ತೊಡುಗೆ ನೋಡಿ ಸಿಬ್ಬಂದಿ ವರ್ತನೆ ಬದಲಾಗುತ್ತಿರುವ ಬಗ್ಗೆ ಹಲವು ದೂರುಗಳು ಬಂದಿದ್ದವು. ಜೊತೆಗೆ ಜಿಟಿ ಮಾಲ್​​ನಲ್ಲಿ ನಡೆದ ಘಟನೆ ಮಾಲ್​ಗಳ ಸಂಸ್ಕೃತಿಯನ್ನು ಅನಾವರಣ ಮಾಡಿತ್ತು. ಇದೆಲ್ಲದರಿಂದ ಅಲರ್ಟ್ ಆದ ಪಾಲಿಕೆ, ಈಗ ಹೊಸ ನಿಯಮ ರೂಪಿಸಲು ಹೊರಟಿದೆ. ಇನ್ಮುಂದೆ ತಾರತಮ್ಯ ಮಾಡಿದರೆ ಆ ಮಾಲ್​​​ಗಳಲ್ಲಿರುವ ಎಲ್ಲಾ ಅಂಗಡಿಗಳ ಟ್ರೇಡ್ ಲೈಸೆನ್ಸ್ ರದ್ದು ಮಾಡಲು ಸಜ್ಜಾಗಿರುವ ಪಾಲಿಕೆ, ಶೀಘ್ರದಲ್ಲೇ ಆದೇಶ ಹೊರಡಿಸಲು ತಯಾರಿ ನಡೆಸಿದೆ.

ಮಾಲ್​​ಗಳಿಗೆ ಹೊಸ ನಿಯಮ ರೂಪಿಸುವ ಬಗ್ಗೆ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕೂಡ ಮಾಹಿತಿ ನೀಡಿದ್ದಾರೆ.

ಹೊಸ ನಿಯಮದಲ್ಲಿ ಏನೇನಿವೆ?

ಸದ್ಯ ಪಾಲಿಕೆ ಜಾರಿಗೆ ತರಲು ಹೊರಟಿರುವ ನಿಯಮಾವಳಿಗಳಲ್ಲಿ ಯಾವುದೇ ವ್ಯಕ್ತಿಯ ಮಾಲ್ ಪ್ರವೇಶಕ್ಕೆ ಅವಕಾಶ ಕೊಡಬೇಕು, ಕಾಲ ಕಾಲಕ್ಕೆ ಆಸ್ತಿ ತೆರಿಗೆ ಪಾವತಿಸಬೇಕು. ಜೊತೆಗೆ ಯಾರೇ ವ್ಯಕ್ತಿಯ ಗೌರವಕ್ಕೆ ಧಕ್ಕೆ ತರಬಾರದು ಎಂಬ ವಿಚಾರಗಳನ್ನು ಅಳವಡಿಸಲಾಗುತ್ತಿದೆ. ಈ ನಿಯಮ ಮೀರಿದರೆ ಅಂತಹ ಮಾಲ್​ಗಳ ವ್ಯಾಪಾರ-ವಹಿವಾಟಿಗೆ ಬ್ರೇಕ್ ಹಾಕಿ ಬಿಸಿ ಮುಟ್ಟಿಸಲು ಯೋಜನೆ ರೂಪಿಸಲಾಗುತ್ತಿದೆ.

ಇದನ್ನೂ ಓದಿ: ಪಂಚೆ ಪ್ರಕರಣದ ಬೆನ್ನಲ್ಲೇ ಮಾಲ್, ಪಬ್, ಶಾಪಿಂಗ್ ಕಾಂಪ್ಲೆಕ್ಸ್​​ಗಳಿಗೆ ಕಠಿಣ ನಿಯಮ ರೂಪಿಸಲು ಸಿದ್ಧತೆ

ಒಟ್ಟಿನಲ್ಲಿ ಆಧುನಿಕತೆ, ಶ್ರೀಮಂತಿಕೆ ಹೆಸರಲ್ಲಿ ಮಾಲ್​​​ಗಳಿಗೆ ಬರುವ ಗ್ರಾಹಕರಲ್ಲಿ ತಾರತಮ್ಯ ಮಾಡುವ ಕೆಲ ಮಾಲ್​​​ಗಳಿಗೆ, ಚಾಟಿ ಬೀಸಲು ಪಾಲಿಕೆ ಹೊರಟಿದೆ. ಸದ್ಯ ರಾಜಧಾನಿಯ ಮಾಲ್​​ಗಳು ಪಾಲಿಕೆಯ ಸೂಚನೆಯನ್ನು ಎಷ್ಟರಮಟ್ಟಿಗೆ ಪಾಲಿಸುತ್ತವೆ ಎಂಬುದನ್ನು ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!