AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಹೊಸ ಟೆಂಡರ್: ಶೆಫ್ ಟಾಕ್ ಸಂಸ್ಥೆಗೆ ಗುಡ್ ಬೈ

ಬಾಕಿ ಬಿಲ್ ಪಾವತಿಯಾಗಿಲ್ಲ ಎಂದು ಇಂದಿರಾ ಕ್ಯಾಂಟೀನ್​ಗಳಿಗೆ ಆಹಾರ ಪೂರೈಸುವುದನ್ನು ನಿಲ್ಲಿಸಿದ್ದ ಶೆಫ್ ಟಾಕ್ ಸಂಸ್ಥೆಯ ಗುತ್ತಿಗೆಯನ್ನೇ ಇದೀಗ ಸರ್ಕಾರ ಕೈಬಿಟ್ಟಿದೆ. ಹೊಸ ಟೆಂಡರ್ ಕರೆದು ರಿವಾರ್ಡ್ಸ್ ಎಂಬ ಸಂಸ್ಥೆಗೆ ಆಹಾರ ಪೂತೈಕೆ ಹೊಣೆ ನೀಡಿದೆ. ಹೀಗಾಗಿ ಇಂದಿರಾ ಕ್ಯಾಂಟೀನ್​ಗಳು ಮತ್ತೆ ಬಾಗಿಲು ತೆರೆಯುವ ಸಾಧ್ಯತೆ ಇದೆ.

ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಹೊಸ ಟೆಂಡರ್: ಶೆಫ್ ಟಾಕ್ ಸಂಸ್ಥೆಗೆ ಗುಡ್ ಬೈ
ಇಂದಿರಾ ಕ್ಯಾಂಟೀನ್ (ಸಂಗ್ರಹ ಚಿತ್ರ)
ಶಾಂತಮೂರ್ತಿ
ಶಾಂತಮೂರ್ತಿ | Edited By: |

Updated on:Jul 26, 2024 | 10:31 AM

Share

ಬೆಂಗಳೂರು, ಜುಲೈ 26: ಇತ್ತೀಚೆಗಷ್ಟೇ ಇಂದಿರಾ ಕ್ಯಾಂಟೀನ್ ಬಂದ್ ಮಾಡಿದ್ದ ಶೆಫ್ ಟಾಕ್ ಸಂಸ್ಥೆಯನ್ನು ಕೈಬಿಟ್ಟು ಅದರ ಬದಲಿಗೆ ಕ್ಯಾಂಟೀನ್ ನಿರ್ವಹಣೆಗೆ ಹೊಸ ಟೆಂಡರ್ ಕರೆಯಲು ಸರ್ಕಾರ ಮುಂದಾಗಿದೆ. ಬಿಲ್ ಪಾವತಿಯಾಗದ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವೆಡೆ ಇಂದಿರಾ ಕ್ಯಾಂಟೀನ್​​ಗಳನ್ನು ಸಂಸ್ಥೆ ಬಂದ್ ಮಾಡಿತ್ತು. ಈ ವಿಚಾರ ಕಾಂಗ್ರೆಸ್ ಸರ್ಕಾರ ಮುಜುಗರಕ್ಕೀಡಾಗಲು ಕಾರಣವಾಗಿತ್ತು.

ಬೆಂಗಳೂರಿನ ಇಂದಿರಾ ಕ್ಯಾಂಟೀನ್​​ಗಳ ನಿರ್ವಹಣೆಗೆ ಇದೀಗ ಬಿಬಿಎಂಪಿ ಹೊಸ ಸಂಸ್ಥೆಗಳಿಗೆ ಟೆಂಡರ್ ಆಹ್ವಾನ ನೀಡಿದೆ. ಆಗಸ್ಟ್ ನಿಂದ ಹೊಸ ಟೆಂಡರ್​​ದಾರರಿಗೆ ಜವಬ್ದಾರಿ ವಹಿಸಲು ಬಿಬಿಎಂಪಿ ಸಜ್ಜಾಗಿದೆ. ಇಂದಿರಾ ಕ್ಯಾಂಟೀನ್​ಗಳಿಗೆ ಆಹಾರ ಪೂರೈಕೆಗೆ ರಾಜ್ಯ ಸರ್ಕಾರ ಹೊಸ ಗುತ್ತಿಗೆ ನೀಡಿದ್ದು, ಸದ್ಯ ಬಿಬಿಎಂಪಿಯ 6 ವಲಯಗಳ ಕ್ಯಾಂಟೀನ್​​ಗೆ ಆಹಾರ ಪೂರೈಕೆಗೆ ಟೆಂಡರ್ ಅಂತಿಮಗೊಳಿಸಿದೆ. ಒಟ್ಟು 132 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಾಲ್ಕು ಪ್ಯಾಕೇಜ್​​ನಲ್ಲಿ ಟೆಂಡರ್ ನೀಡಲಾಗಿದೆ. ಒಟ್ಟು 192 ಇಂದಿರಾ ಕ್ಯಾಂಟೀನ್‌ಗೆ ಬೆಳಗ್ಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ಪೂರೈಕೆಗೆ ಟೆಂಡರ್‌ ಅನ್ವಯವಾಗಲಿದೆ. ಈ ಪೈಕಿ ದಾಸರಹಳ್ಳಿ ಮತ್ತು ಪಶ್ಚಿಮ ವಲಯದ ಟೆಂಡರ್‌ಗೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ.

ಸತೀಶ್‌ ಕುಮಾರ್‌ ಮಾಲೀಕತ್ವದ ರಿವಾರ್ಡ್ಸ್ ಎಂಬ ಸಂಸ್ಥೆಗೆ 6 ವಲಯದ 142 ಕ್ಯಾಂಟೀನ್​​ಗಳಿಗೆ ಆಹಾರ ಪೂರೈಕೆಯ ಗುತ್ತಿಗೆಯನ್ನು ಎರಡು ವರ್ಷದ ಅವಧಿಗೆ ನೀಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚುವರಿಯಾಗಿ ನಿರ್ಮಿಸುವ 50 ಕ್ಯಾಂಟೀನ್​​ಗಳು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಿಸಲಾದ 2 ಇಂದಿರಾ ಕ್ಯಾಂಟೀನ್‌ಗೂ ಈ ಸಂಸ್ಥೆ ಆಹಾರ ಪೂರೈಕೆ ಮಾಡಬೇಕಿದೆ.

ಹತ್ತಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್‌ಗಳು ಬಂದ್

ಸರ್ಕಾರ ಕಳೆದ ಒಂದು ವರ್ಷದಿಂದ ಬಾಕಿ ಹಣ ಪಾವತಿ ಮಾಡಿಲ್ಲ ಎಂದು ಇಂದಿರಾ ಕ್ಯಾಂಟೀನ್​ಗೆ ಆಹಾರ ಪೂರೈಕೆಯ ಟೆಂಡರ್ ಪಡೆದಿದ್ದ ಶೆಫ್ ಟಾಕ್ ಸಂಸ್ಥೆ ಆಹಾರ ಪೂರೈಕೆ ಸ್ಥಗಿತಗೊಳಿಸಿತ್ತು. ಇದರಿಂದ ಪಾಲಿಕೆಯ ದಕ್ಷಿಣ ವಲಯಕ್ಕೆ ಬರುವ 11ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್‌ಗಳು ಕಳೆದ 15-20 ದಿನಗಳಿಂದ ಬಂದ್​ ಆಗಿದ್ದವು.

ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರದಲ್ಲಿರುವಾಗಲೇ ಇಂದಿರಾ ಕ್ಯಾಂಟೀನ್​ ಬಂದ್; ಗುತ್ತಿಗೆದಾರರಿಗೆ ಬರೋಬ್ಬರಿ 40 ಕೋಟಿ ಬಿಲ್ ಬಾಕಿ

ಇಂದಿರಾ ಕ್ಯಾಂಟೀನ್​​ಗಳು ಬಂದ್ ಆಗಿರುವುದು ಪ್ರತಿಪಕ್ಷಗಳಿಗೆ ಸರ್ಕಾರದ ವಿರುದ್ಧ ಹೊಸ ಅಸ್ತ್ರ ಸಿಕ್ಕಂತಾಗಿತ್ತು. ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಇಂದಿರಾ ಕ್ಯಾಂಟೀನ್​ ಸಮರ್ಪಕ ನಿರ್ವಹಣೆಯಾಗುತ್ತಿಲ್ಲ ಎಂದಿದ್ದ ಕಾಂಗ್ರೆಸ್ ಇದೀಗ ತನ್ನದೇ ಯೋಜನೆಯನ್ನು ಗ್ಯಾರಂಟಿಗಳಿಗೆ ಹಣ ಹೊಂದಿಸುವುದಕ್ಕಾಗಿ ನಿರ್ಲಕ್ಷಿಸುತ್ತಿದೆ ಎಂದು ಬಿಜೆಪಿ ಟೀಕಿಸಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:31 am, Fri, 26 July 24

Follow Us
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ