ಅಶೋಕ್ ಕ್ಷಮೆಯಾಚನೆಗೆ ಇಂಜಿನಿಯರ್ಸ್ ಪಟ್ಟು: ಅಷ್ಟಕ್ಕೂ ವಿಪಕ್ಷ ನಾಯಕ ಹೇಳಿದ್ದೇನು?
‘ರಾಜ್ಯದ ಇಂಜಿನಿಯರ್ಗಳು ಮನೆಹಾಳರು’ ಎಂಬ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆಗೆ ಸದ್ಯ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಇಂಜಿನಿಯರ್ಗಳ ನಿಯೋಗ ವಿರೋಧ ವ್ಯಕ್ತಪಡಿಸಿದ್ದು, ಪ್ರಗತಿಯ ರೂವಾರಿಗಳನ್ನು ಮನೆಹಾಳರೆಂದು ಕರೆದಿರುವುದು ಸರಿಯಲ್ಲ. ಹೀಗಾಗಿ ಆರ್.ಅಶೋಕ್ ತಕ್ಷಣ ಇಂಜಿನಿಯರ್ಗಳಿಗೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರು, ಜುಲೈ 25: ‘ರಾಜ್ಯದ ಇಂಜಿನಿಯರ್ಗಳು ಮನೆಹಾಳರು’ ಎಂದು ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ (R Ashoka) ಹೇಳಿದ ಹೇಳಿಕೆಗೆ ಇದೀಗ ಇಂಜಿನಿಯರ್ಗಳು (Engeniers) ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ನ್ನು ಭೇಟಿಯಾಗಿ ಅಳಲು ತೋಡಿಕೊಂಡಿದ್ದಾರೆ. ರಾಜ್ಯದ ಪ್ರಗತಿಯಲ್ಲಿ ಇಂಜಿನಿಯರ್ಗಳ ಕೊಡುಗೆ ಗಣನೀಯವಾಗಿದೆ. ಅಣೆಕಟ್ಟು, ವಿದ್ಯುತ್ ಯೋಜನೆ, ಬೃಹತ್ ಕಟ್ಟಡ, ಐಟಿ-ಬಿಟಿಗೆ, ನಾಡಿನ ಅಭಿವೃದ್ಧಿಗೆ ಇಂಜಿನಿಯರ್ಗಳು ಸಾಕಷ್ಟು ಕೊಡುಗೆ ನೀಡಿದ್ದಾರೆ. ಪ್ರಗತಿಯ ರೂವಾರಿಗಳನ್ನು ಮನೆಹಾಳರೆಂದು ಕರೆದಿರುವುದು ಸರಿಯಲ್ಲ. ವಿಪಕ್ಷ ನಾಯಕ ಅಶೋಕ್ ತಕ್ಷಣ ಇಂಜಿನಿಯರ್ಗಳ ಕ್ಷಮೆಯಾಚಿಸಬೇಕು ಎಂದು ಇಂಜಿನಿಯರ್ಗಳ ನಿಯೋಗದಿಂದ ಮನವಿ ಮಾಡಿದ್ದಾರೆ. ಇಂಜಿನಿಯರ್ಗಳ ಮನವಿ ಬೆನ್ನಲ್ಲೇ ಆರ್.ಅಶೋಕ್ಗೆ ಡಿಕೆ ಶಿವಕುಮಾರ್ ಕರೆ ಮಾಡಿದ್ದು, ತಮ್ಮ ಹೇಳಿಕೆ ಹಿಂಪಡೆಯುವಂತೆ ಮನವಿ ಮಾಡಿದ್ದಾರೆ. ವಿಡಿಯೋ ನೋಡಿ.
ವರದಿ: ಈರಣ್ಣ ಬಸವ
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Jul 25, 2024 11:09 PM
Latest Videos