ವಿದ್ಯುತ್ ದೀಪದ ಬೆಳಕಲ್ಲಿ ಕಣ್ಮನ ಸೆಳೆದ ತುಂಗಭದ್ರಾ ಜಲಾಶಯ, ವಿಡಿಯೋ ಇದೆ ನೋಡಿ

ತುಂಗಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವ ಹಿನ್ನೆಲೆ ಡ್ಯಾಂ ನ ಮೂವತ್ಮೂರು ಕ್ರಸ್ಟ್ ಗೇಟ್​ಗಳ ಮೂಲಕ ನದಿಗೆ ನೀರು ಬಿಡಲಾಗಿದೆ. ರಾತ್ರಿ ಸಮಯದಲ್ಲಿ ಗೇಟ್​ಗಳಿಗೆ ವಿದ್ಯುತ್ ದೀಪಗಳು ಅಳವಡಿಸಲಾಗಿದ್ದು, ದುಮ್ಮಕ್ಕು ನೀರಿನಲ್ಲಿ ಕಲರಪುಲ್ ಲೈಟಿಂಗ್ ನೋಡುಗರ ಕಣ್ಮನ ಸೆಳೆಯುತ್ತಿದೆ.

ವಿದ್ಯುತ್ ದೀಪದ ಬೆಳಕಲ್ಲಿ ಕಣ್ಮನ ಸೆಳೆದ ತುಂಗಭದ್ರಾ ಜಲಾಶಯ, ವಿಡಿಯೋ ಇದೆ ನೋಡಿ
| Updated By: ಕಿರಣ್ ಹನುಮಂತ್​ ಮಾದಾರ್

Updated on:Jul 25, 2024 | 9:53 PM

ಕೊಪ್ಪಳ, ಜು.25: ಕರ್ನಾಟಕದ ಹಲವೆಡೆ ಭಾರೀ ಮಳೆ ಆಗುತ್ತಿದ್ದು, ಬಹುತೇಕ ಜಲಾಶಯಗಳು ತುಂಬಿ ಹರಿಯುತ್ತಿದೆ. ಅದರಂತೆ ಮಳೆಯಿಂದ ತುಂಗಭದ್ರಾ ಜಲಾಶಯ(Tungabhadra Dam)ಕ್ಕೆ ಜೀವಕಳೆ ಬಂದಿದೆ. ಇದೀಗ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಬಳಿಯಿರುವ ಜಲಾಶಯ ವಿದ್ಯುತ್ ದೀಪಗಳಿಂದ ಜಗಮಗಿಸಿದೆ. ಇನ್ನು ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವ ಹಿನ್ನೆಲೆ ಡ್ಯಾಂ ನ ಮೂವತ್ಮೂರು ಕ್ರಸ್ಟ್ ಗೇಟ್​ಗಳ ಮೂಲಕ ನದಿಗೆ ನೀರು ಬಿಡಲಾಗಿದೆ. ರಾತ್ರಿ ಸಮಯದಲ್ಲಿ ಗೇಟ್​ಗಳಿಗೆ ವಿದ್ಯುತ್ ದೀಪಗಳು ಅಳವಡಿಸಲಾಗಿದ್ದು, ದುಮ್ಮಕ್ಕು ನೀರಿನಲ್ಲಿ ಕಲರಪುಲ್ ಲೈಟಿಂಗ್ ನೋಡುಗರ ಕಣ್ಮನ ಸೆಳೆಯುತ್ತಿದೆ. ಇನ್ನು ಈ ಬಾರಿ ತುಂಗಭದ್ರಾ ಜಲಾಶಯ ಭರ್ತಿ ಆಗುವ ಹಂತಕ್ಕೆ ಬಂದ ಹಿನ್ನೆಲೆ ಅಧಿಕಾರಿಗಳು ಜುಲೈ ತಿಂಗಳಲ್ಲಿಯೇ ನದಿಗೆ ನೀರು ಬಿಟ್ಟಿದ್ದಾರೆ. ತುಂಗಭದ್ರಾ ಜಲಾಶಯದಿಂದ ಇಪ್ಪತ್ತು ತಿಂಗಳ ನಂತರ ನದಿಗೆ ನೀರು ಹರಿಯುತ್ತಿದ್ದಂತೆ ರೈತರು ಸಂತಸಗೊಂಡಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:03 pm, Thu, 25 July 24

Follow us