Karnataka Hijab Row: ಓಲೆ, ಜುಮುಕಿ, ಕುಂಕುಮ, ಲಿಪ್​ಸ್ಟಿಕ್​ಗೂ ಡ್ರೆಸ್​ಗೂ ಸಂಬಂಧವಿಲ್ಲ: ಬಿಸಿ ನಾಗೇಶ್

ನೂತನ ಸಮವಸ್ತ್ರ ನೀತಿ ಜಾರಿ ಬಗ್ಗೆ ಚಿಂತನೆ ಇದೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್​ ಹೇಳಿದ್ದಾರೆ. ಹೈಕೋರ್ಟ್ ಆದೇಶದ ನಂತರ ತೀರ್ಮಾನ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.

Karnataka Hijab Row: ಓಲೆ, ಜುಮುಕಿ, ಕುಂಕುಮ, ಲಿಪ್​ಸ್ಟಿಕ್​ಗೂ ಡ್ರೆಸ್​ಗೂ ಸಂಬಂಧವಿಲ್ಲ: ಬಿಸಿ ನಾಗೇಶ್
ಶಿಕ್ಷಣ ಸಚಿವ ಬಿ ಸಿ ನಾಗೇಶ್ (ಸಂಗ್ರಹ ಚಿತ್ರ)
Updated By: ganapathi bhat

Updated on: Feb 17, 2022 | 6:38 PM

ಬೆಂಗಳೂರು: ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಡ್ರಸ್​ ಕೋಡ್​ ಇಲ್ಲ. ಡ್ರೆಸ್ ಕೋಡ್ ಇರುವ ಕಾಲೇಜಿನಲ್ಲಿ ನಿಯಮ ಪಾಲಿಸಬೇಕು. ನಿನ್ನೆ ಮಲ್ಲೇಶ್ವರಂನ ಮಹಿಳಾ ಕಾಲೇಜುನಲ್ಲಿ ಪ್ರಚೋದಿಸಿದ್ದಾರೆ. ಯುವ ಕಾಂಗ್ರೆಸ್ ಕಾಂಗ್ರೆಸ್​ ಕಾರ್ಯಕರ್ತರು ಹೋಗಿದ್ದರಂತೆ. ಯಾರು ಪ್ರವೋಕ್ ಮಾಡ್ತಿದ್ದಾರೆ ಅನ್ನೋದು ತನಿಖೆಯಾಗ್ತಿದೆ. ಅಲಂಕಾರದ ವಸ್ತುಗಳ ಬಗ್ಗೆ ನಾವು ಯಾವತ್ತೂ ಮಾತಾಡಿಲ್ಲ. ಓಲೆ, ಜುಮುಕಿ, ಕುಂಕುಮ, ಲಿಫ್ಟಿಕ್​ಗೆ ಡ್ರೆಸ್​ಗೂ ಸಂಬಂಧವಿಲ್ಲ. ನೂತನ ಸಮವಸ್ತ್ರ ನೀತಿ ಜಾರಿ ಬಗ್ಗೆ ಚಿಂತನೆ ಇದೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್​ ಹೇಳಿದ್ದಾರೆ. ಹೈಕೋರ್ಟ್ ಆದೇಶದ ನಂತರ ತೀರ್ಮಾನ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.

ಹೈಸ್ಕೂಲ್ ಪ್ರಾರಂಭವಾದ ಬಳಿಕ ಕೆಲವೆಡೆ ಗೊಂದಲ ಆಗಿದೆ. ಎಲ್ಲರೂ ಹೈಕೋರ್ಟ್ ಆದೇಶವನ್ನು ಪಾಲನೆ ಮಾಡಬೇಕು. ನಿನ್ನೆ 112 ಮಕ್ಕಳು ಕಾಲೇಜಿನಿಂದ ವಾಪಸ್ ಹೋಗಿದ್ದಾರೆ. ಇವತ್ತು 38 ಮಕ್ಕಳು ಕಾಲೇಜಿನಿಂದ ವಾಪಸ್ ಹೋಗಿದ್ದಾರೆ ಎಂದು ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್​ ಮಾಹಿತಿ ನೀಡಿದ್ದಾರೆ.

ಏಕಾಏಕಿ ಹಿಜಾಬ್​ ತೆಗೆಯಿರಿ ಅಂದರೆ ಹೇಗೆ ಸಾಧ್ಯ?: ಜಮೀರ್ ಅಹ್ಮದ್

ಮುಸ್ಲಿಂ ವಿದ್ಯಾರ್ಥಿಗಳು ನೂರಾರು ವರ್ಷಗಳಿಂದ ಹಿಜಾಬ್ ಧರಿಸುತ್ತಿದ್ದಾರೆ. ಏಕಾಏಕಿ ಹಿಜಾಬ್​ ತೆಗೆಯಿರಿ ಅಂದರೆ ಹೇಗೆ ಸಾಧ್ಯ? ನಾವು ಕೋರ್ಟ್ ಆದೇಶವನ್ನ ಪಾಲನೆ ಮಾಡುತ್ತಿದ್ದೇವೆ ಎಂದು ಬೆಂಗಳೂರಿನಲ್ಲಿ ಶಾಸಕ ಜಮೀರ್ ಅಹ್ಮದ್​ ಹೇಳಿಕೆ ನೀಡಿದ್ದಾರೆ. ಕಳೆದ ತಿಂಗಳು ಕೇಸರಿ ಶಾಲು ಎಲ್ಲಿಂದ ಬಂತು? ಕೆಲವು ಕಾಲೇಜುಗಳಲ್ಲಿ ಷಡ್ಯಂತ್ರ ನಡೆಯುತ್ತಿದೆ. ಕಾಣದ ಕೈಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. ಹಲವು ವಿದ್ಯಾರ್ಥಿಗಳಿಗೆ ಒಳಗೆ ಹೋಗಲು ಬಿಡುತ್ತಿಲ್ಲ. ರಾಜ್ಯ ಸರ್ಕಾರ ಆದೇಶವನ್ನ ಹಿಂಪಡೆಯಬೇಕು. ಕೋರ್ಟ್‌ನ ಅಂತಿಮ ತೀರ್ಪಿನ ಬಗ್ಗೆ ವಿಶ್ವಾಸವಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್​​​ ಹೇಳಿದ್ದಾರೆ.

ಹಿಜಾಬ್ ಹಿಂದೆ ಇಸ್ಲಾಮಿಕ್ ಶಕ್ತಿಗಳಿವೆ: ಪ್ರಮೋದ್ ಮುತಾಲಿಕ್

ಕಾಲೇಜುಗಳಲ್ಲಿ ಹಿಜಾಬ್​, ಕೇಸರಿ ಶಾಲು ಸಂಘರ್ಷ ವಿಚಾರವಾಗಿ ಶ್ಯಾಡಂಬಿ ಗ್ರಾಮದಲ್ಲಿ ಪ್ರಮೋದ್​ ಮುತಾಲಿಕ್​ ಪ್ರತಿಕ್ರಿಯೆ ನೀಡಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶ್ಯಾಡಂಬಿ ಗ್ರಾಮದಲ್ಲಿ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್​ ಮುತಾಲಿಕ್ ಮಾತನಾಡಿದ್ದಾರೆ. ಕಾನೂನು ಉಲ್ಲಂಘಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಶಿಕ್ಷಣಕ್ಕಿಂತ ನಮಗೆ ಹಿಜಾಬ್ ಮುಖ್ಯ ಎಂದು ಹೇಳುತ್ತಿದ್ದಾರೆ. ಹಿಜಾಬ್ ಹಿಂದೆ ಇಸ್ಲಾಮಿಕ್ ಶಕ್ತಿಗಳಿವೆ. ವಿದ್ಯಾರ್ಥಿಗಳು ಮಾತ್ರವಲ್ಲದ ಅವರ ಪೋಷಕರು, SDPI, ಪಿಎಫ್ಐ ಸಂಘಟನೆ ಕಾಲೇಜು ಬಳಿ ಧರಣಿ ಮಾಡುತ್ತಿವೆ. ಸರ್ಕಾರ ಯಾಕೆ ಇಂಥವರ ಮೇಲೆ ಕ್ರಮ ತೆಗೆದುಕೊಂಡಿಲ್ಲ. ಸರ್ಕಾರ ಇವರನ್ನ ಈಗಲೇ ಹದ್ದುಬಸ್ತಿನಲ್ಲಿಡಬೇಕು. ಇಲ್ಲದಿದ್ದರೆ ನಾವೇ ಬೀದಿಗೆ ಇಳಿಯಬೇಕಾಗುತ್ತೆ ಎಂದು ಮುತಾಲಿಕ್ ಹೇಳಿದ್ದಾರೆ.

ಹಿಜಾಬ್ ವಿವಾದ: ಸಚಿವ ಡಾ. ಅಶ್ವತ್ಥ್ ನಾರಾಯಣ ಶಾಸಕ ಯು.ಟಿ.ಖಾದರ್​​ ಭೇಟಿ

ಕಾಲೇಜುಗಳಲ್ಲಿ ಹಿಜಾಬ್​, ಕೇಸರಿ ಶಾಲು ಸಂಘರ್ಷ ವಿಚಾರವಾಗಿ ಸಚಿವ ಡಾ.ಅಶ್ವತ್ಥ್ ಶಾಸಕ ಯು.ಟಿ.ಖಾದರ್​​ ಭೇಟಿಯಾಗಿದ್ದಾರೆ. ವಿಕಾಸಸೌಧದಲ್ಲಿ ಅಶ್ವತ್ಥ್​ ನಾರಾಯಣ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಪದವಿ ಕಾಲೇಜುಗಳಲ್ಲಿನ‌ ವಸ್ತ್ರಸಂಹಿತೆ ಗೊಂದಲ ಬಗ್ಗೆ ಚರ್ಚೆ ಮಾಡಲಾಗಿದೆ.

ಇದನ್ನೂ ಓದಿ: Karnataka Hijab Row: ಹಿಜಾಬ್ ಗಲಾಟೆ ನಡೆದ ಶಾಲೆಯಲ್ಲಿ ಮಕ್ಕಳಿಗೆ ಡಿಸಿ, ಎಸ್​ಪಿಯಿಂದ ಪಾಠ

ಇದನ್ನೂ ಓದಿ: Karnataka Hijab Row: ದುಪಟ್ಟಾವನ್ನೇ ಧರಿಸಲು ಅನುಮತಿಗೆ ಮನವಿ; ಹಿಜಾಬ್ ವಿವಾದ ವಿಚಾರಣೆ ನಾಳೆಗೆ ಮುಂದೂಡಿಕೆ

Published On - 4:04 pm, Thu, 17 February 22