ಬೆಂಗಳೂರು: ನಮ್ಮ ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ನಾವು ನಮ್ಮ ಪರಿಸರವನ್ನು ಸದಾ ಚೆಂದಗೊಳಿಸಬೇಕು ಎಂದು ಎಷ್ಟೇ ಪಾಠ, ಜಾಗೃತಿ, ಬೀದಿ ನಾಟಕಗಳನ್ನು ಮಾಡಿದರೂ ಜನರಲ್ಲಿ ಸ್ವಲ್ಪವೂ ಈ ಬಗ್ಗೆ ಕಾಳಜಿ ಇದ್ದಂತೆ ಕಾಣುತ್ತಿಲ್ಲ. ಎಲ್ಲೆಂದರಲ್ಲಿ ಕಸ (Garbage) ಹಾಕುವುದು, ತ್ಯಾಜ್ಯ ವಿಲೇವಾರಿ ಮಾಡದೆ ನಿರ್ಲಕ್ಷ್ಯವಹಿಸುವುದು ಸರ್ವೆ ಸಾಮಾನ್ಯ ಎನ್ನುವಂತಾಗಿದೆ. ಅಧಿಕಾರಿಗಳು ಒಂದು ಕಡೆ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಇನ್ನೊಂದು ಕಡೆ ಜನ ಸಾಮಾನ್ಯರು, ಯುವಕರು ಸುತ್ತಮುತ್ತಲ್ಲ ಪರಿಸರ ಸ್ವಚ್ಛವಾಗಿಟ್ಟುಕೊಳ್ಳದೆ ನಿರ್ಲಕ್ಷಿಸಿದ್ದಾರೆ. ಇದಕ್ಕೆ ನಿದರ್ಶನ ಬೆಂಗಳೂರಿನ ವಿಶ್ವವಿದ್ಯಾಲಯದಲ್ಲಿನ (Bengaluru University) ಸುತ್ತಮುತ್ತಲ ಪರಿಸರ.
ಪಶ್ಚಿಮ ಘಟ್ಟಗಳು ಟ್ವಿಟರ್ ಖಾತೆ ಈ ಕುರಿತು ಟ್ವೀಟ್ ಮಾಡಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿರುವ ಬಾಲಕರ ವಿದ್ಯಾರ್ಥಿ ನಿಲಯದ ಸುತ್ತಮುತ್ತಲಿನ ಪರಿಸರದ ಸ್ಥಿತಿಗತಿಯ ಬಗ್ಗೆ ಆ ಮೂಲಕ ಬೆಳಕು ಚೆಲ್ಲಿದೆ. ಟ್ವೀಟ್ನಲ್ಲಿ ಬಾಲಕರ ವಸತಿ ನಿಲಯದ ಸುತ್ತ ಬಿಯರ್ ಬಾಟಲ್, ಪ್ಲಾಸ್ಟಿಕ್ ಮತ್ತು ಇನ್ನಿತರ ತ್ಯಾಜ್ಯಗಳು ಹೇಗೆ ರಾಶಿ ಹಾಕಲಾಗಿದೆ ಎನ್ನುವುದನ್ನು ಫೋಟೋ ಸಮೇತ ಹಂಚಿಕೊಳ್ಳಲಾಗಿದೆ. ಜತೆಗೆ ಟ್ವೀಟ್ನಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಸಚಿವ ಅಶ್ವತ್ ನಾರಾಯಣ್ ಮತ್ತು ಇನ್ನಿತರ ಮಾಧ್ಯಮವನ್ನು ಟ್ಯಾಗ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ಪರಿಸರ ಕಾಳಜಿಯ ಕೊರತೆಯಾದರೆ ಖಂಡಿತಾ ಮುಂದಿನ ದಿನಗಳಲ್ಲಿ ಇದು ದೊಡ್ಡ ಅನಾಹುತಕ್ಕೆ ದಾರಿಯಾಗಲಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿರುವ ಬಾಲಕರ ವಿದ್ಯಾರ್ಥಿ ನಿಲಯದ ಸುತ್ತ ಮುತ್ತಲಿನ ಪರಿಸರ.@drashwathcn @BBMPCOMM @chetanabelagere @AshwiniMS_TNIE @NammaBengaluroo @Karnataka_DIPR @NewIndianXpress @BoskyKhanna @tv9kannada @Tej_AnanthKumar
Vai: @vinodkumar10444 #Bengaluru https://t.co/40Lk2HL7QP pic.twitter.com/04aQDeHbxc— Western Ghats?ಪಶ್ಚಿಮ ಘಟ್ಟಗಳು (@TheWesternGhat) January 11, 2022
ಸಂಶಯಕ್ಕೆ ಕಾರಣವಾದ ನವಿಲಿನ ಗರಿಗಳು
ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಸತತ ಮೂರನೇ ಬಾರಿಗೆ ನವಿಲಿನ ಗರಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಆದರೆ ಈ ಬಗ್ಗೆ ನಿಖರವಾದ ಮಾಹಿತಿ ಇನ್ನು ಲಭ್ಯವಾಗಿಲ್ಲ. ಸದ್ಯ ಈ ಬಗ್ಗೆ ಸಾಕಷ್ಟು ಅನುಮಾನಗಳು ಸೃಷ್ಟಿಯಾಗಿದ್ದು, ಅಧಿಕಾರಿಗಳು ಅದರಲ್ಲೂ ಮುಖ್ಯವಾಗಿ ಅರಣ್ಯ ಇಲಾಖೆ ಸಿಬ್ಬಂದಿಗಳು ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಪಶ್ಚಿಮ ಘಟ್ಟಗಳು ಟ್ವೀಟ್ ಮಾಡಿದೆ.
ಇದನ್ನೂ ಓದಿ:
ಜಿಲ್ಲಾಸ್ಪತ್ರೆಯ ಐಸಿಯು ವಾರ್ಡ್ ಪಕ್ಕದಲ್ಲೇ ಕಸದ ರಾಶಿ; ಸಿಬ್ಬಂದಿಯ ನಿರ್ಲಕ್ಷದ ವಿರುದ್ಧ ಜನರ ಆಕ್ರೋಶ
ದೊಡ್ಡಬಳ್ಳಾಪುರದಲ್ಲಿ ಅವೈಜ್ಞಾನಿಕ ಘನತ್ಯಾಜ್ಯ ಘಟಕ: ವಿಧಾನಸಭೆಯಲ್ಲಿ ಶಾಸಕ ವೆಂಕಟರಮಣಯ್ಯ ತೀವ್ರ ಆಕ್ಷೇಪ
Published On - 11:55 am, Tue, 11 January 22