ರಸ್ತೆ ಗುಂಡಿಯಲ್ಲಿ ಬಿದ್ದು ಗಾಯ ಮಾಡ್ಕೊಂಡ ತಂಗಿಯ ಪರವಾಗಿ ಅಣ್ಣನಿಂದ ಟ್ವಿಟರ್ ವಾರ್; ಬಿಬಿಎಂಪಿ, ಸರ್ಕಾರದ ವಿರುದ್ಧ ಆಕ್ರೋಶ

Potholes: ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಬಿದ್ದು ಗಾಯಗೊಂಡ ಯುವತಿಯ ಅಣ್ಣ ಬಿಬಿಎಂಪಿ, ಸರ್ಕಾರದ ವಿರುದ್ಧ ಟ್ವಿಟರ್ನಲ್ಲಿ ವಾರ್ ಶುರು ಮಾಡಿದ್ದಾರೆ.

ರಸ್ತೆ ಗುಂಡಿಯಲ್ಲಿ ಬಿದ್ದು ಗಾಯ ಮಾಡ್ಕೊಂಡ ತಂಗಿಯ ಪರವಾಗಿ ಅಣ್ಣನಿಂದ ಟ್ವಿಟರ್ ವಾರ್; ಬಿಬಿಎಂಪಿ, ಸರ್ಕಾರದ ವಿರುದ್ಧ ಆಕ್ರೋಶ
ರಸ್ತೆ ಗುಂಡಿಯಲ್ಲಿ ಬಿದ್ದು ಗಾಯ ಮಾಡ್ಕೊಂಡ ತಂಗಿಯ ಪರವಾಗಿ ಅಣ್ಣನಿಂದ ಟ್ವಿಟರ್ ವಾರ್; ಬಿಬಿಎಂಪಿ, ಸರ್ಕಾರದ ವಿರುದ್ಧ ಆಕ್ರೋಶ
Follow us
TV9 Web
| Updated By: ಆಯೇಷಾ ಬಾನು

Updated on: Oct 29, 2021 | 12:17 PM

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಸ್ತೆ ಗುಂಡಿಗಳದ್ದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಪ್ರತಿಯೊಬ್ಬ ವಾಹನ ಸವಾರ ಪ್ರಾಣವನ್ನು ಕೈಯಲ್ಲಿಡಿದು ವಾಹನ ಸವಾರಿ ಮಾಡುವ ಪರಿಸ್ಥಿತಿ ಇದೆ. ಇದರಲ್ಲೂ ಇತ್ತೀಚೆಗೆ ರಸ್ತೆ ಗುಂಡಿ ತಪ್ಪಿಸಲು ಹೋಗಿ ಸವಾರರು ಪ್ರಾಣ ಕಳೆದುಕೊಂಡ ಘಟನೆಗಳು ಸಹ ನಡೆಯುತ್ತಿದೆ. ಸದ್ಯ ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಬಿದ್ದು ಗಾಯಗೊಂಡ ಯುವತಿಯ ಅಣ್ಣ ಬಿಬಿಎಂಪಿ, ಸರ್ಕಾರದ ವಿರುದ್ಧ ಟ್ವಿಟರ್ನಲ್ಲಿ ವಾರ್ ಶುರು ಮಾಡಿದ್ದಾರೆ.

ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿರುವ ನಿಮಿಷಾಂಬ ದೇವಸ್ಥಾನದ ಬಳಿ ಬಿದ್ದಿರುವ ಗುಂಡಿಯನ್ನು ಬಿಬಿಎಂಪಿ ಮುಚ್ಚಿಲ್ಲ. ಇದೇ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಯುವತಿಯ ಬೈಕ್ ಚಕ್ರ ಗುಂಡಿ ಒಳಗೆ ಬಿದ್ದು ಯುವತಿ ಆಯತಪ್ಪಿ ಬಿದ್ದಿದ್ದಳು. ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾಳೆ. ಹೀಗಾಗಿ ಬಿಬಿಎಂಪಿ ಹಾಗೂ ಸರ್ಕಾರದ ವಿರುದ್ಧ ಅರುಣ್ ಟ್ವಿಟರ್ ವಾರ್ ಶುರುಮಾಡಿದ್ದಾರೆ. ಟ್ವಿಟರ್ನಲ್ಲಿ ಬಿಬಿಎಂಪಿ, ಸರ್ಕಾರಕ್ಕೆ ಯುವತಿ ಅಣ್ಣ ಅರುಣ್ ತರಾಟೆಗೆ ತೆಗೆದುಕೊಂಡಿದ್ದಾರೆ.

ರಸ್ತೆ ಗುಂಡಿಗಳನ್ನು ಮುಚ್ಚಿಸುವಂತೆ ಸಿಎಂ ಬೊಮ್ಮಾಯಿಗೆ ಬಾಲಕಿ ಮನವಿ ನಗರದಲ್ಲಿ ತಗ್ಗು ಗುಂಡಿಗಳನ್ನು ಮುಚ್ಚುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಬಾಲಕಿ ಒಬ್ಬಳು ವೀಡಿಯೋ ಮೂಲಕ ಮನವಿ ಮಾಡಿದ್ದಾಳೆ. ಬೆಂಗಳೂರಿನ ಹೆಗ್ಗನಹಳ್ಳಿಯ ಸರ್ಕಾರಿ‌ ಶಾಲೆಯಲ್ಲಿ 2ನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿರೋ ಧವನಿ ಸಿಎಂಗೆ ಗುಂಡಿಗಳನ್ನು ಬೇಗ ಮುಚ್ಚಿಸಿ ಸಿಎಂ ತಾತ ಎಂದು ಕೈ ಮುಗಿದು ಮನವಿ ಮಾಡಿದ್ದಾಳೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತಗ್ಗುಗುಂಡಿಗಳನ್ನ ಮುಚ್ಚಿಸಿ, ಜನರನ್ನ ಬದುಕಿಸಿ. ತಗ್ಗು ಗುಂಡಿಗಳಿಂದ ಸುಮಾರು ಜನ ಸಾಯ್ತಿದ್ದಾರೆ. ಅವ್ರ ಸಾವಿನಿಂದ ಅವ್ರ ಕುಟುಂಬದವ್ರು ಹೇಗೆ ಜೀವನ ನಡೆಸ್ತಾರೆ. ನೀವೇ ಹೇಳಿ ತಾತ ಎಂದು ಬಾಲಕಿ ಸಿಎಂಗೆ ಪ್ರಶ್ನೆ ಮಾಡಿದ್ದಾಳೆ. ನನ್ನಂತ ಮಕ್ಕಳು, ನಮ್ ಅಪ್ಪ ಯಾವಾಗ ಬರ್ತಾರೋ, ಹೇಗೆ ಬರ್ತಾರೋ ಅಂತ ಕಾಯ್ತಾ ಇರ್ತಾರೆ ಅಲ್ವಾ. ನಾನು ಕೂಡ ನಮ್ ಅಪ್ಪ ಯಾವಾಗ ಬರ್ತಾರೋ ಅಂತ ಭಯದಿಂದ ಕಾಯ್ತಾ ಇರ್ತೇನೆ. ನಮ್ ಅಪ್ಪ-ಅಮ್ಮ‌, ನನಗೆ ಚಾಕ್ಲೇಟ್ಗೆ ಕೊಟ್ಟಿರೋ ದುಡ್ಡನ್ನ ಕೊಡ್ತೇನೆ. ಪ್ಲೀಸ್ ಗುಂಡಿ ಮುಚ್ಚಿಸಿ ಸಿಎಂ ತಾತ ಎಂದು ಮನವಿ ಮಾಡಿದ್ದಾಳೆ.

ಇದನ್ನೂ ಓದಿ: ರಸ್ತೆ ಗುಂಡಿ ಹೆಸರಿನಲ್ಲಿ ಕೋಟ್ಯಂತರ ಹಣ ಪೋಲು: ರಾಮಲಿಂಗಾರೆಡ್ಡಿ ಆರೋಪ