AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ತಿ ಆಸೆಗಾಗಿ 25 ಮೂಳೆ ಮುರಿಯುವ ಹಾಗೆ ಗಂಡನಿಗೆ ಪತ್ನಿಯೇ ಥಳಿಸಿದ ಆರೋಪ; ಪತಿರಾಯ ಆಸ್ಪತ್ರೆಗೆ ದಾಖಲು!

ಹಲ್ಲೆ ಬಳಿಕ ಪತಿ ಚಂದ್ರನ್ ಮೃತನಾಗಿದ್ದಾನೆಂದು ಅರುಣ್ ಕುಮಾರಿ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾರೆ. ಮೂರು ದಿನ ಮನೆಯಲ್ಲಿಯೇ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಪತಿ ಚಂದ್ರನ್, ಬಳಿಕ ಎಚ್ಚರಗೊಂಡು ಕಿರುಚಾಡಿದ್ದಾರೆ. ಬಳಿಕ ಚಂದ್ರನ್​ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆಸ್ತಿ ಆಸೆಗಾಗಿ 25 ಮೂಳೆ ಮುರಿಯುವ ಹಾಗೆ ಗಂಡನಿಗೆ ಪತ್ನಿಯೇ ಥಳಿಸಿದ ಆರೋಪ; ಪತಿರಾಯ ಆಸ್ಪತ್ರೆಗೆ ದಾಖಲು!
ಪತಿ ಚಂದ್ರನ್
TV9 Web
| Updated By: preethi shettigar|

Updated on: Oct 29, 2021 | 11:58 AM

Share

ಬೆಂಗಳೂರು: ಆಸ್ತಿ ಆಸೆಗೆ ಗಂಡನಿಗೆ ಪತ್ನಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಂಗಳೂರಿನ ಕೆಆರ್ ಪುರಂನಲ್ಲಿ ನಡೆದಿದೆ. 25 ಮೂಳೆ ಮುರಿಯುವ ಹಾಗೆ ಪತ್ನಿ ಹೊಡೆದಿದ್ದು, ಗಾಯಗೊಂಡ ಪತಿ ಸುರೇಶ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಪರೇಷನ್ ಮಾಡಿದರೂ ಸುರೇಶ್ ಸರಿ ಹೋಗುವುದು ಅನುಮಾನ ಎಂದು ವೈದ್ಯರು ತಿಳಿಸಿದ್ದಾರೆ.

ಪತ್ನಿ ಅರುಣ​ ಕುಮಾರಿ ತನ್ನ ಪತಿ ಮೇಲೆಯೇ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಲ್ಲೆ ಬಳಿಕ ಪತಿ ಸುರೇಶ್ ಮೃತನಾಗಿದ್ದಾನೆಂದು ಅರುಣ ಕುಮಾರಿ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾರೆ. ಮೂರು ದಿನ ಮನೆಯಲ್ಲಿಯೇ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಪತಿ ಸುರೇಶ್, ಬಳಿಕ ಎಚ್ಚರಗೊಂಡು ಕಿರುಚಾಡಿದ್ದಾರೆ. ಬಳಿಕ ಸುರೇಶ್​ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆಸ್ತಿ ಬರೆದುಕೊಡು ಎಂದು ಪತ್ನಿ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದಳು ಎಂದು ಘಟನೆ ಬಗ್ಗೆ ವಿಡಿಯೋ ಮಾಡಿ ಸುರೇಶ್ ಅಳಲು ತೋಡಿಕೊಂಡಿದ್ದಾರೆ. ಅಲ್ಲದೇ ಹೆಂಡತಿ ಹೇಗೆಲ್ಲಾ ಹಲ್ಲೆ ನಡೆಸಿದಳು ಎಂದು ಈ ವಿಡಿಯೋದಲ್ಲಿ ಉಲ್ಲೇಖ ಮಾಡಿದ್ದಾರೆ.

ಮೊದಲ ಹೆಂಡತಿಯಿಂದ ದೂರವಾದ ಬಳಿಕ ಅರುಣ ಕುಮಾರಿ ಜೊತೆ ಸುರೇಶ್​ ಎರಡನೇ ಮದುವೆಯಾಗಿದ್ದಾರೆ. ಈ ದಂಪತಿಗೆ 15 ವರ್ಷದ ಮಗಳು ಸಹ ಇದ್ದಾಳೆ.

ಪತಿ ಸುರೇಶ್ ಹೆಸರಲ್ಲಿ ಸುಮಾರು 2 ಕೋಟಿ ರೂ. ಅಸ್ತಿ ಇದೆ. ಹೀಗಾಗಿ ಆಸ್ತಿ ತಮ್ಮ ಹೆಸರಿಗೆ ಬರೆದುಕೊಡಲು ಪತ್ನಿ ಅರುಣ​ ಕುಮಾರಿ ಕಿರುಕಳ ನೀಡುತ್ತಿದ್ದಾಳೆ ಎಂದು ಸುರೇಶ್​ ಆರೋಪ ಮಾಡಿದ್ದಾರೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಪತಿ ಸುರೇಶ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಸದ್ಯ ತಲೆಮರೆಸಿಕೊಂಡಿರುವ ಪತ್ನಿ ಅರುಣ ಕುಮಾರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಅಪಘಾತವಾದ ಬಳಿಕ ಆಸ್ಪತ್ರೆ ಸೇರಿಸಿದ್ದಾಗಿ ಪತ್ನಿ ಹೇಳಿಕೆ ತನಿಖೆ ವೇಳೆ ಪೊಲೀಸರಿಗೆ ಗೊಂದಲ ಶುರುವಾಗಿದೆ. ಹೀಗಾಗಿ ಅಪಘಾತವೋ ಅಥವಾ ಹಲ್ಲೆಯೋ ಎಂಬ ವೈದ್ಯಕೀಯ ವರದಿಗಾಗಿ ಪೊಲೀಸರು ಕಾದು ಕುಳಿತಿದ್ದಾರೆ.  ಇದಕ್ಕೆ ಕಾರಣ ಪತ್ನಿ ಹೇಳಿಕೆ. ಗಾಯಾಳುವಿನ ಪತ್ನಿಯನ್ನು ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅಪಘಾತವಾದ ಬಳಿಕ ಆಸ್ಪತ್ರೆ ಸೇರಿಸಿದ್ದಾಗಿ ಪತ್ನಿ ಅರುಣ​ ಕುಮಾರಿ ತಿಳಿಸಿದ್ದಾರೆ.

ಬಾಡಿಗೆ ಮನೆಯಲ್ಲಿ ಮಕ್ಕಳ ಜೊತೆ ವಾಸ ಮಾಡುತ್ತಿರುವುದಾಗಿ ತಿಳಿಸಿದ ಮಹಿಳೆ, ಪತಿ ಕುಡಿತದ ವ್ಯಸನಕ್ಕೆ ಬಿದ್ದು ಹಣ ಖರ್ಚು ಮಾಡುತ್ತಿದ್ದಾರೆ. ಮನೆಗೆ ಬರುವ ವೇಳೆ ಅಪಘಾತವಾಗಿತ್ತು. ಈ ವೇಳೆ ತಾನೇ ಆಸ್ಪತ್ರೆಗೆ ಕರೆದೊಯ್ದಿದ್ದೇನೆ. ಆಸ್ತಿ ಹೆಂಡತಿ, ಮಕ್ಕಳಿಗೆ ಬರೆದುಕೊಡ್ತಾರೆಂದು ಈ ಷಡ್ಯಂತರ ಮಾಡಿದ್ದಾರೆ. ಪತಿ ಮತ್ತು ಆತನ ಕುಟುಂಬಸ್ಥರು ನಾಟಕವಾಡುತಿದ್ದಾರೆ ಎಂದು ಹೇಳಿದ್ದಾರೆ.

ಸದ್ಯ ಅಪಘಾತವೋ ಅಥವಾ ಹಲ್ಲೆಯೋ ಎಂಬ ಗೊಂದಲ ಉಂಟಾಗಿದ್ದು, ಆಸ್ಪತ್ರೆ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ ಎಂದು ಕೆಆರ್ ಪುರಂ ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ತನಿಖೆಯ ವೇಳೆ ಪತಿ ಸುರೇಶ್ ನಾಟಕ ಬಯಲು ಹಳೆ ಗಾಯಗಳನ್ನು ಹೊಸ ಗಾಯಗಳಂತೆ ಬಿಂಬಿಸುತ್ತಿರುವ ಶಂಕೆ ವ್ಯಕ್ತವಾಗಿದೆ. ಈ ಹಿಂದೆಯೇ 3-4 ಆಪರೇಷನ್‌ಗೆ ಸುರೇಶ್ ಒಳಗಾಗಿದ್ದಾರೆ ಎಂಬುವುದು ಈ ವೇಳೆ ಬೆಳಕಿಗೆ ಬಂದಿದೆ. ಸದ್ಯ ಪತ್ನಿ ಅರುಣ ಕುಮಾರಿಯನ್ನು ತನಿಖೆ ಮಾಡುತ್ತಿರುವ ಪೊಲೀಸರು ಇನ್ನಷ್ಟು ಮಾಹಿತಿ ಪಡೆಯಲು ಪ್ರಯತ್ನಿಸಿದ್ದಾರೆ.

ಇದನ್ನೂ ಓದಿ: ಕಲಬುರಗಿ: ವಾಮಾಚಾರ ಮಾಡಿ ಯುವತಿ ಮದುವೆಯಾದ ಆರೋಪ! ಕುಟುಂಬಸ್ಥರಿಂದ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ

ಎಎಸ್ಐ ಮತ್ತು ಪುತ್ರನಿಂದ ಹಲ್ಲೆ ಆರೋಪ; ಮಗಳನ್ನು ಕಿಡ್ನಾಪ್ ಮಾಡಲು ಬಂದಿದ್ದಾರೆಂದು ಹಿಗ್ಗಾಮುಗ್ಗಾ ಥಳಿತ