ಲಾಕ್ಡೌನ್ ಸಮಯವನ್ನು 7 ವರ್ಷದ ಬಾಲಕಿ ಪುಸ್ತಕ ಬರೆಯುವ ಮೂಲಕ ಸದುಪಯೋಗ ಪಡೆದುಕೊಂಡಿದ್ದಾಳೆ. ಪುಟ್ಟ ವಯಸ್ಸಿನಲ್ಲಿಯೇ ದೊಡ್ಡ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಲಾಕ್ಡೌನ್ನ ತನ್ನ ಸಮಯವನ್ನು ಸಂಪೂರ್ಣವಾಗಿ ಪುಟ್ಟ ಬಾಲಕಿ ಬಳಸಿಕೊಂಡಿದ್ದಾಳೆ. ಕೊರೊನಾ ವೈರಸ್ ಸಾಂಕ್ರಾಮಿಕ ಸಮಯದಲ್ಲಿ L is for lockdown ಎಂಬ ಪುಸ್ತಕವನ್ನು ಬರೆದಿದ್ದಾಳೆ. ಅಮೆಜಾನ್ ಇಂಡಿಯಾದಲ್ಲಿ ಬಾಲಕಿಯ ಪುಸ್ತಕ ಬಿಡುಗಡೆಗೊಂಡಿದೆ.
7 ವರ್ಷದ ಬಾಲಕಿಯ ಹೆಸರು ಜಿಯಾ ಗಂಗಾಧರ್. ಬಾಲಕಿಯ ಪುಸ್ತಕವನ್ನು ಅಮೆಜಾನ್ನಲ್ಲಿ ಬಿಡುಗಡೆ ಮಾಡಲಾಗಿದೆ. ಪುಸ್ತಕದ ಬೆಲೆ 158 ರೂಪಾಯಿ.
ಬದಲಾಗುತ್ತಿರುವ ಕಾಲಮಾನದಲ್ಲಿ ಹಾಗೂ ಪ್ರಸ್ತುತದ ಪರಿಸ್ಥಿತಿಯಲ್ಲಿ ಅನುಭವಿಸಿದ ಭಯವನ್ನು ಮತ್ತು ತನ್ನ ಕಲಿಕೆಯನ್ನು ಪುಸ್ತಕದಲ್ಲಿ ಪ್ರಸ್ತುತ ಪಡಿಸಿದ್ದಾಳೆ. ಜಿಯಾಳ ಸಂತೋಷದ ದಿನಗಳ ಮತ್ತು ಮನೆಯಲ್ಲಿಯೇ ಕಲಿತ ಆನ್ಲೈನ್ ಸಮಯದ ಕುರಿತಾಗಿ ವಿವರಿಸಿದ್ದಾಳೆ.
ಜಿಯಾಳ ತಾಯಿ ಮಾರ್ಕೆಟಿಂಗ್ ಪ್ರೊಫೆಷನಲ್ ಆಗಿದ್ದವರು. ಪುಟ್ಟ ಮಗುವಿನ ದೈನಂದಿನ ದಿನಚರಿಯ ಪುಸ್ತಕವನ್ನು ಓದಿದ ಬಳಿಕ ಒಂದೊಳ್ಳೆಯ ಪುಸ್ತಕ ಬರೆಯುವ ಅವಳ ಆಸೆಯನ್ನು ಪ್ರೋತ್ಸಾಹಿಸಿದರು. ಪುಸ್ತಕದಲ್ಲಿ 7 ವರ್ಷದಲ್ಲಿರುವ ಮಗು ಮನೆಯಲ್ಲಿರುವಾಗ ಕಳೆದ ಕ್ಷಣದ ಬಗ್ಗೆ ವಿವರಿಸುತ್ತದೆ. ಸಂವಹನ, ಆನ್ಲೈನ್ ತರಗತಿ, ಆಟ, ಕಲಿಕೆಯ ಬಗ್ಗೆ ವಿವರಿಸಲಾಗಿದೆ.
ಲಾಕ್ಡೌನ್ ಜಾರಿಗೆ ಬಂದ ಕೂಡಲೆ ಆನ್ಲೈನ್ ಶಿಕ್ಷಣ ಜಾರಿಗೆ ಬಂದಿತು. ತರಗತಿಗಳೆಲ್ಲವೂ ಆನ್ಲೈನ್ ನಲ್ಲಿ ಪ್ರಾರಂಭವಾದವು. ಮನೆಯಲ್ಲಿ ತಂದೆ- ತಾಯಿ ಜತೆ ಇದ್ದದುದರಿಂದ ಅವರು ನನಗೆ ಸಹಾಯ ಮಾಡಿದರು ಎಂದು ಜಿಯಾ ಹೇಳಿದ್ದಾಳೆ. ಈ ಕುರಿತಂತೆ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ:
Bookmark : ಅಕ್ಷರ ಪ್ರಕಾಶನ ; ‘ಪುಸ್ತಕ ಪ್ರೀತಿ, ಓದುಗಪ್ರಜ್ಞೆ ಪೋಷಿಸುವುದೇ ನಮ್ಮ ಗುರಿ‘
Bookmark: ‘ಪುಸ್ತಕೋದ್ಯಮ ಪೂರ್ಣಪ್ರಮಾಣದ ಉದ್ಯಮವಾಗಿಲ್ಲ ಎನ್ನುವುದು ಅಭಿನಂದನೀಯ’