ಅಗ್ರಿಗೇಟರ್ ಕಂಪನಿಗಳಿಂದ ದುಪ್ಪಟ್ಟು ದರ ವಸೂಲಿ: ಆಟೋ, ಕ್ಯಾಬ್ ಪ್ರಯಾಣಿಕರಿಗೆ ಶಾಕ್​ ಮೇಲೆ ಶಾಕ್​

ಅಗ್ರಿಗೇಟರ್ ಕಂಪನಿಗಳು ಪ್ರಯಾಣಿಕರಿಂದ ದುಪ್ಪಟ್ಟು ಟಿಪ್ಸ್‌ನ್ನು ಪಡೆದುಕೊಳ್ಳುತ್ತಿವೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಪ್ರಯಾಣಿಕರು ಆಕ್ರೋಶಗೊಂಡಿದ್ದಾರೆ. ಓಲಾ, ಉಬರ್, ರ‍್ಯಾಪಿಡೋ ಮುಂತಾದ ಅಗ್ರಿಗೇಟರ್ ಕಂಪನಿಗಳು ಈ ಸಮಸ್ಯೆಗೆ ಕಾರಣವೆಂದು ಆರೋಪಿಸಲಾಗಿದೆ. ಕೇಂದ್ರ ಸರ್ಕಾರ ನೋಟಿಸ್ ನೀಡಿದ್ದರೂ, ಕಂಪನಿಗಳು ಸ್ಪಂದಿಸಿಲ್ಲ. ಸದ್ಯ ಇದು ಚರ್ಚೆಗೆ ಗ್ರಾಸವಾಗಿದೆ.

ಅಗ್ರಿಗೇಟರ್ ಕಂಪನಿಗಳಿಂದ ದುಪ್ಪಟ್ಟು ದರ ವಸೂಲಿ: ಆಟೋ, ಕ್ಯಾಬ್ ಪ್ರಯಾಣಿಕರಿಗೆ ಶಾಕ್​ ಮೇಲೆ ಶಾಕ್​
ಪ್ರಾತಿನಿಧಿಕ ಚಿತ್ರ
Edited By:

Updated on: Jun 04, 2025 | 8:26 AM

ಬೆಂಗಳೂರು, ಜೂನ್​ 04: ಅಗ್ರಿಗೇಟರ್ ಕಂಪನಿಗಳು ಪ್ರಯಾಣಿಕರಿಂದ (passengers) ದುಪ್ಪಟ್ಟು ದರವನ್ನು ವಸೂಲಿ ಮಾಡುತ್ತಾರೆ ಎನ್ನುವ ದೊಡ್ಡಮಟ್ಟದ ಆಕ್ರೋಶವಿದೆ. ಇದು ಸಾಲದೆಂದು ಇದೀಗ ಆಟೋ, ಕ್ಯಾಬ್ (cab) ಬುಕ್ ಮಾಡಬೇಕು ಅಂದರೆ 10 ರಿಂದ 100 ರೂ. ವರೆಗೆ ಟಿಪ್ಸ್ ಕೊಡಬೇಕು, ಇಲ್ಲಾಂದರೆ ಆಟೋ, ಕ್ಯಾಬ್ ಬರುವುದಿಲ್ಲ ಎಂಬ ರೂಲ್ಸ್ ಮಾಡಿದ್ದು, ಇದರ ವಿರುದ್ಧ ಪ್ರಯಾಣಿಕರು ಕೆಂಡಕಾರುತ್ತಿದ್ದಾರೆ.

ಜನರ ಅಸಹಾಕತೆಯೇ ಇವರ ಬಂಡವಾಳ

ಅರ್ಜೆಂಟಾಗಿ ಎಲ್ಲಿಗಾದರೂ ಹೋಗಬೇಕು ಅಂದಾಗಲೇ ಯಾವ ಆಟೋ, ಕ್ಯಾಬ್​ಗಳು ಸಿಗಲ್ಲ. ಅದೆಷ್ಟೋ ಜನರಿಗೆ ಈ ಅನುಭವ ಆಗಿರುತ್ತೆ. ಹೀಗಿರುವಾಗ ಟಿಪ್ಸ್​ ಅನ್ನೋ ಆ್ಯಪ್ಷನ್​ ನಿಮ್ಮ ಕಣ್ಣಿಗೆ ರಾಚುತ್ತದೆ. ಹತ್ತೋ ಇಪ್ಪತ್ತೋ ಟಿಪ್ಸ್ ಆ್ಯಡ್ ಮಾಡಿದರೆ, ಥಟ್ ಅಂತ ಡ್ರೈವರ್​ ಬರ್ತಾರೆ. ಹೀಗೆ ಜನರ ಅಸಹಾಕತೆಯನ್ನೇ ಈ ಆ್ಯಪ್​ಗಳು ಬಂಡಾವಳ ಮಾಡಿಕೊಳ್ಳುತ್ತಿವೆ. ಗ್ರಾಹಕರಿಗೆ ಗೊತ್ತೇ ಆಗದ ಹಾಗೇ ಯಾಮಾರಿಸುತ್ತಾರೆ. ಈ ಬಗ್ಗೆ ಸ್ವತಃ ಆಟೋ ಚಾಲಕರೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ‌. ನಮಗೆ ಯಾವುದೇ ಟಿಪ್ಸ್ ಬೇಡ ನಾವು ಮೀಟರ್ ಹಾಕಿಕೊಂಡು ಆಟೋ ಓಡಿಸುತ್ತೇವೆ ಇದರಿಂದ ಚಾಲಕರು ಮತ್ತು ಪ್ರಯಾಣಿಕರ ನಡುವೆ ಗಲಾಟೆ ಆಗುತ್ತಿದೆ ಎಂದು ಆಟೋ ಚಾಲಕ ಶೇಖರ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ನಗರ ಪೊಲೀಸ್​ ವ್ಯಾಪ್ತಿಗೆ ಇನ್ನೂ 3 ಠಾಣೆಗಳ ಸೇರ್ಪಡೆ, ಅಧಿಕಾರ ವ್ಯಾಪ್ತಿ ಪುನರಚನೆ

ಇದನ್ನೂ ಓದಿ
ಬೆಂಗಳೂರಿನಲ್ಲಿ ಸಂಭ್ರಮಾಚರಣೆ ವೇಳೆ ಕ್ರೌರ್ಯ, ಯುವಕನಿಗೆ ಚಾಕು ಇರಿತ
ಪಂಜಾಬ್ ವಿರುದ್ಧ RCBಗೆ ಗೆಲವು: ಸಿಎಂ ಸೇರಿದಂತೆ ಹಲವು ನಾಯಕರಿಂದ ಅಭಿನಂದನೆ
ಪಂಜಾಬ್ ವಿರುದ್ಧ RCBಗೆ ಗೆಲವು: ರಾಜ್ಯಾದ್ಯಂತ ಅಭಿಮಾನಿಗಳ ಸಂಭ್ರಮಾಚರಣೆ
ಅಗ್ರಿಗೇಟರ್ ಕಂಪನಿಗಳಿಂದದುಪ್ಪಟ್ಟು ಹಣ ವಸೂಲಿ: ಪ್ರಯಾಣಿಕರ ಆಕ್ರೋಶ

ಇನ್ನೂ ಓಲಾ, ಉಬರ್, ನಮ್ಮ ಯಾತ್ರಿ, ರ‍್ಯಾಪಿಡೋ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಈ ಟಿಪ್ಸ್ ಹೆಸರಲ್ಲಿ ವಸೂಲಿ ಬಗ್ಗೆ ಪ್ರಯಾಣಿಕರಿಂದ ಸಾಕಷ್ಟು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಅಗ್ರಿಗೇಟರ್ ಕಂಪನಿಗಳಿಗೆ ನೋಟಿಸ್ ನೀಡಿತ್ತು. ಆದರೆ ಈ ನೋಟಿಸ್​ಗೆ ಅಗ್ರಿಗೇಟರ್ ಕಂಪನಿಗಳು ಕ್ಯಾರೆ ಎಂದಿಲ್ಲ. ಈಗಲೂ ಕೂಡ ಕ್ಯಾಬ್, ಆಟೋ ಬುಕ್ ಮಾಡಬೇಕು ಅಂದರೆ ಪ್ರಯಾಣಿಕರು ಬುಕ್ ಮಾಡುವ ಮೊದಲೇ ಟಿಪ್ಸ್ ನೀಡಲೇಬೇಕು.

ಕೇಂದ್ರ ಸರ್ಕಾರದ ನೋಟಿಸ್​ಗೂ ಈ ಅಗ್ರಿಗೇಟರ್ ಕಂಪನಿಗಳು ಕ್ಯಾರೆ ಎನ್ನುತ್ತಿಲ್ಲ ಅಂದರೆ ಏನು ಅರ್ಥ ಎಂದು ಪೀಸ್ ಆಟೋ,ಕ್ಯಾಬ್ ಅಸೋಸಿಯೇಷನ್ ಅಧ್ಯಕ್ಷ​ ರಘು ನಾರಾಯಣ ಗೌಡ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಯಾಣಿಕ ಮಂಜುನಾಥ್ ಹೇಳಿದ್ದಿಷ್ಟು

ಇನ್ನು ಈ ಬಗ್ಗೆ ಪ್ರಯಾಣಿಕ ಮಂಜುನಾಥ್ ಎಂಬುವವರು ಪ್ರತಿಕ್ರಿಯಿಸಿದ್ದು, ಈ ಅಗ್ರಿಗೇಟರ್ ಕಂಪನಿಗಳು ನಮ್ಮನ್ನು ಸುಲಿ ಮಾಡುತ್ತಿದೆ. ಅರ್ಜೆಂಟ್ ಆಗಿ ಎಲ್ಲಿಗಾದರು ಹೋಗಬೇಕು ಅಂದರೆ ಟಿಪ್ಸ್ ಕೊಡಲೇಬೇಕೆಂದು ಈ ಆ್ಯಪ್​ಗಳು ಒತ್ತಾಯ ಮಾಡುತ್ತಿವೆ. ಈ ಟಿಪ್ಸ್ ಹಣವನ್ನು ಕ್ಯಾಬ್, ಆಟೋ ಚಾಲಕರಿಗೆ ಸರಿಯಾಗಿ ನೀಡ್ತಿಲ್ಲ. ಅದರಲ್ಲೂ ಕಮಿಷನ್ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ: ಆಸ್ತಿ ಮಾಲೀಕರಿಗೆ ಬಿಬಿಎಂಪಿ ಶುಭ ಸುದ್ದಿ: ಬಿ ಖಾತಾ ಬದಲಿಗೆ ಎ ಖಾತಾ ನೀಡುವ ಸುಳಿವು!

ಒಟ್ಟಿನಲ್ಲಿ ಈ ರೀತಿ ಆ್ಯಪ್​ಗಳನ್ನ ಬಳಸುತ್ತಿರುವುದು ಮಿಡಲ್ ಕ್ಲಾಸ್ ಜನರೇ. ಅವರಿಗೆ ಒಂದೊಂದು ರೂಪಾಯಿ ಕೂಡ ತುಂಬಾ ಮುಖ್ಯ. ಆದಷ್ಟು ಬೇಗ ಈ ಮಸಲತ್ತಿಗೆ ಒಂದು ಬ್ರೇಕ್ ಬಿದ್ದು, ಈ ಪ್ರಾಬ್ಲಂಗೆ ಸಲ್ಯೂಷನ್ ಸಿಕ್ಕಿದರೆ, ಎಷ್ಟೋ ಜನರಿಗೆ ಸಹಾಯ ಆಗುವುದರಲ್ಲಿ ನೋ ಡೌಟು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.