ಚಾಂಪಿಯನ್ ಆರ್ಸಿಬಿ ತಂಡದ ಆಟಗಾರರನ್ನು ಹೆಚ್ಎಎಲ್ ನಿಂದ ಕರೆತರಲು ವಿಶೇಷ ಬಸ್ಸುಗಳು ಸಿದ್ಧ
ವಿಧಾನ ಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಸಂಪುಟದಿಂದ ಸತ್ಕಾರದ ಬಳಿಕ ಆಟಗಾರರನ್ನು ಅಲ್ಲಿಂದ ಸುಮಾರು 6 ಗಂಟೆಗೆ ಚಿನ್ನಸ್ವಾಮಿ ಸ್ಟೇಡಿಯಂವರೆಗೆ ಮೆರವಣಿಗೆ ಬದಲು ಬಸ್ಗಳಲ್ಲಿ ಕರೆತರಲಾಗುವುದು. ಬೆಂಗಳೂರಿನ ಕ್ರಿಕೆಟ್ ಪ್ರೇಮಿಗಳಿಗೆ ತಮ್ಮ ನೆಚ್ಚಿನ ತಂಡದ ಆಟಗಾರರನ್ನು ಪ್ರತ್ಯಕ್ಷವಾಗಿ ನೋಡುವ ಅವಕಾಶ ಸಿಗಲಿದೆ. ನಗರದ ನಿವಾಸಿಗಳು ಚಾನ್ಸ್ ಮಿಸ್ ಮಾಡ್ಕೊಳ್ಳೋದು ಬೇಡ.
ಬೆಂಗಳೂರು, ಜೂನ್ 4: ಈ ಎರಡು ಬಸ್ಗಳನ್ನು ಗಮನಿಸಿ ಮಾರಾಯ್ರೇ, ಇವು ಖಂಡಿತವಾಗಿಯೂ ಸಾಮಾನ್ಯ ಬಸ್ಗಳಲ್ಲ, ಇಂದು ಗುಜರಾತಿನ ಅಹಮದಾಬಾದ್ನಿಂದ ನಗರಕ್ಕೆ ಆಗಮಿಸಲಿರುವ ಐಪಿಎಲ್ ಚಾಂಪಿಯನ್ಸ್ ಬೆಂಗಳೂರು ರಾಯಲ್ ಚಾಲೆಂಜರ್ಸ್ (Royal Challengers Bengaluru) ತಂಡದ ಸದಸ್ಯರನ್ನು ಹೆಚ್ಎಎಲ್ ವಿಮಾನ ನಿಲ್ದಾಣದಿಂದ ವಿಧಾನ ಸೌಧಕ್ಕೆ ಕರೆತರಲು ಅಣಿಯಾಗಿರುವ ಬಸ್ಗಳಿವು. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಇಂದು ಮಧ್ಯಾಹ್ನ 1.30 ಕ್ಕೆ ಆರ್ಸಿಬಿ ಆಟಗಾರರನ್ನು ಹೊತ್ತ ವಿಮಾನ ಬೆಂಗಳೂರಲ್ಲಿ ಲ್ಯಾಂಡ್ ಅಗಲಿದೆ. ಅಟಗಾರರು ವಿಧಾನ ಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು 5 ಗಂಟೆಗೆ ಭೇಟಿಯಾಗಲಿದ್ದಾರೆ ಮತ್ತು ಅಲ್ಲೇ ಆಟಗಾರರನ್ನು ಸತ್ಕರಿಸಲಾಗುವುದು.
ಇದನ್ನೂ ಓದಿ: ಕಪ್ ಗೆದ್ದು ಕೊಡ್ತೀನಿ… RCB ಅಭಿಮಾನಿಗಳ ಮುಂದಿಟ್ಟ ಶಪಥ ಈಡೇರಿಸಿದ ಕೃನಾಲ್ ಪಾಂಡ್ಯ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ