ಸಂಜೆ ಆರ್ಸಿಬಿ ಆಟಗಾರರ ವಿಕ್ಟರಿ ಪರೇಡ್ಗಾಗಿ ರೆಡಿಯಾಗುತ್ತಿರುವ ಚಿನ್ನಸ್ವಾಮಿ ಕ್ರೀಡಾಂಗಣ
ಭದ್ರತೆಯ ದೃಷ್ಟಿಯಿಂದ ಆಟಗಾರರ ವಿಜಯ ಯಾತ್ರೆಯನ್ನು ರದ್ದು ಮಾಡಲಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ. ನಗರದ ಪೊಲೀಸ್ ಕಮೀಶನರ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ತೆರೆದ ವಾಹನದಲ್ಲಿ ಮೆರವಣಿಗೆ ಮಾಡುವುದನ್ನು ರದ್ದು ಮಾಡಲಾಗಿದೆ ಎಂದು ಗೃಹ ಸಚಿವ ಹೇಳಿದ್ದಾರೆ.
ಬೆಂಗಳೂರು, ಜೂನ್ 4: ಐಪಿಎಲ್ ಚಾಂಪಿಯನ್ಸ್ ಆರ್ಸಿಬಿ ತಂಡದ ಆಟಗಾರರು, ಸಪೋರ್ಟ್ ಸ್ಟಾಫ್ ಎಲ್ಲರೂ ಬೆಂಗಳೂರಿಗೆ ಆಗಮಿಸಿದ್ದಾರೆ. ಸಾಯಂಕಾಲ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy stadium) ಅರ್ಸಿಬಿ ಗೆಲುವಿನ ಹಿನ್ನೆಲೆಯಲ್ಲಿ ವಿಜಯ ಯಾತ್ರೆ ಮತ್ತು ಸತ್ಕಾರ ಕಾರ್ಯಕ್ರಮವೊಂದನ್ನು ಏರ್ಪಡಿಸಲಾಗಿದೆ. ಆದರೆ ಆಟಗಾರರಿಗೆ ಕರ್ನಾಟಕ ಸರ್ಕಾರದಿಂದ ಸತ್ಕಾರ ನಡೆದ ನಂತರ ತೆರದ ವಾಹನದಲ್ಲಿ ಮೆರವಣಿಗೆ ಮೂಲಕ ಕರೆದೊಯ್ಯದೆ ಅದೇ ವಿಶೇಷ ಬಸ್ಗಳಲ್ಲಿ ಸ್ಟೇಡಿಯಂಗೆ ಕರೆತರಲಾಗುವುದು. ನಮ್ಮ ವರದಿಗಾರ ಹೇಳುವಂತೆ ಸಂಜೆಯ ಕಾರ್ಯಕ್ರಮಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣವನ್ನು ಅಲಂಕೃತಗೊಳಿಸಲಾಗುತ್ತಿದೆ. ವಿರಾಟ್ ಕೊಹ್ಲಿ ಸೇರಿದಂತೆ ತಂಡದ ಪ್ರಮುಖ ಆಟಗಾರರು ತಮ್ಮ ವಿಜಯಗಾಥೆಯನ್ನು ವಿವರಿಸಲಿದ್ದಾರೆ.
ಇದನ್ನೂ ಓದಿ: RCB IPL Celebration Live: ಆರ್ಸಿಬಿ ಸಂಭ್ರಮಾಚರಣೆ, ಬೆಂಗಳೂರಿನಲ್ಲಿ ಆಟಗಾರರಿಗೆ ಅಭಿನಂದನೆ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ