AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​ಸಿಬಿ ಐಪಿಎಲ್ ಚಾಂಪಿಯನ್: ಮೈಸೂರಿನ ಎಲ್ಲ ಇಂದಿರಾ ಕ್ಯಾಂಟೀನ್​ಗಳಲ್ಲಿ ಉಚಿತ ಹೋಳಿಗೆ ಊಟ

ಆರ್​ಸಿಬಿ ಐಪಿಎಲ್ ಚಾಂಪಿಯನ್: ಮೈಸೂರಿನ ಎಲ್ಲ ಇಂದಿರಾ ಕ್ಯಾಂಟೀನ್​ಗಳಲ್ಲಿ ಉಚಿತ ಹೋಳಿಗೆ ಊಟ

ರಾಮ್​, ಮೈಸೂರು
| Updated By: Ganapathi Sharma|

Updated on: Jun 04, 2025 | 1:06 PM

Share

ಆರ್​ಸಿಬಿ ಐಪಿಎಲ್ ಚಾಂಪಿಯನ್ ಆದ ಖುಷಿಗೆ ಕೆಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಬಸಪ್ಪ ಎಂಬವರು ಮೈಸೂರಿನ ಎಲ್ಲ ಇಂದಿರಾ ಕ್ಯಾಂಟೀನ್​ಗಳಲ್ಲಿ ಉಚಿತ ಹೋಳಿಗೆ ಊಟ ವಿತರಣೆಗೆ ವ್ಯವಸ್ಥೆ ಮಾಡಿದ್ದಾರೆ. ಮಧ್ಯಾಹ್ನ 12 ರಿಂದ ಉಚಿತ ಹೋಳಿಗೆ ಊಟ ವಿತರಣೆ ಶುರುವಾಗಿದ್ದು, ವಿಡಿಯೋ ಇಲ್ಲಿದೆ.

ಮೈಸೂರು, ಜೂನ್ 4: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ ಫೈನಲ್ ಗೆದ್ದ ಸಂಭ್ರಮದಲ್ಲಿ ಮೈಸೂರು ಇಂದಿರಾ ಕ್ಯಾಂಟೀನ್​​ನಲ್ಲಿ ಇಂದು ಉಚಿತ ಹೋಳಿಗೆ ಊಟ ವಿತರಣೆ ಮಾಡಲಾಗುತ್ತಿದೆ. 18 ವರ್ಷಗಳ ಕನಸು ನನಸಾದ ಕಾರಣ ಕೆಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಬಸಪ್ಪ ಎಂಬವರು ಉಚಿತ ಹೋಳಿಗೆ ಊಟ ವ್ಯವಸ್ಥೆ ಮಾಡಿದ್ದಾರೆ. ಮೈಸೂರು ನಗರದ ಎಲ್ಲಾ ಇಂದಿರಾ ಕ್ಯಾಂಟೀನ್​ಗಳಲ್ಲಿ ಮಧ್ಯಾಹ್ನ 12 ಗಂಟೆಯಿಂದ ಉಚಿತ ಹೋಳಿಗೆ ಊಟ ವಿತರಣೆ ನಡೆಯುತ್ತಿದೆ.

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ