AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಐಪಿಎಲ್ ಟ್ರೋಫಿ ಜೊತೆಗೆ ಬೆಂಗಳೂರಿಗೆ ಬಂದಿಳಿದ ಆರ್​ಸಿಬಿ ತಂಡ

RCB victory: 17 ವರ್ಷಗಳ ಬಳಿಕ ಮಿಲಿಯನ್ ಡಾಲರ್ ಟೂರ್ನಿಯನ್ನು ಗೆದ್ದ ಆರ್‌ಸಿಬಿ ತಂಡ ಬೆಂಗಳೂರಿಗೆ ಭವ್ಯವಾಗಿ ಆಗಮಿಸಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೆಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ತಂಡವನ್ನು ಸ್ವಾಗತಿಸಿದರು. ತಾಜ್ ವೆಸ್ಟ್ ಎಂಡ್‌ನಲ್ಲಿ ವಿಶ್ರಾಂತಿ ಪಡೆದ ನಂತರ, ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಗೌರವ ಸನ್ಮಾನ ನಡೆಯಲಿದೆ. ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವದ ಪರೇಡ್ ನಡೆಯಲಿದೆ.

IPL 2025: ಐಪಿಎಲ್ ಟ್ರೋಫಿ ಜೊತೆಗೆ ಬೆಂಗಳೂರಿಗೆ ಬಂದಿಳಿದ ಆರ್​ಸಿಬಿ ತಂಡ
Rcb
ಪೃಥ್ವಿಶಂಕರ
|

Updated on:Jun 04, 2025 | 3:12 PM

Share

ಬರೋಬ್ಬರಿ 17 ವರ್ಷಗಳ ಬಳಿಕ ಮಿಲಿಯನ್ ಡಾಲರ್ ಟೂರ್ನಿಯನ್ನು ಗೆದ್ದುಬೀಗಿರುವ ಆರ್​​ಸಿಬಿ ತಂಡ, ಇದೀಗ ಟ್ರೋಫಿಯೊಂದಿಗೆ ಬೆಂಗಳೂರಿನ ಹೆಚ್​ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಇಡೀ ತಂಡವನ್ನು ಸ್ವಾಗತಿಸಲು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೆಚ್​ಎಎಲ್ ವಿಮಾನ ನಿಲ್ದಾಣವನ್ನು ತಲುಪಿದ್ದಾರೆ. ಆ ಬಳಿಕ ತಂಡದ ಆಟಗಾರರು ಎರಡು ಬಸ್​ಗಳಲ್ಲಿ ತಾಜ್ ವೆಸ್ಟ್ ಎಂಡ್ ಹೋಟೆಲ್​ಗೆ ತಲುಪಲಿದ್ದಾರೆ. ಹೋಟೆಲ್​ನಲ್ಲಿ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಲ್ಲಿರುವ ಆಟಗಾರರು ಆ ನಂತರ ಟ್ರೋಫಿಯೊಂದಿಗೆ ವಿಧಾನ ಸೌಧ ತಲುಪಲಿದ್ದಾರೆ. ಅಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಂದ ಆಟಗಾರರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದ ಬಳಿಕ ಇಡೀ ತಂಡ ಚಿನ್ನಸ್ವಾಮಿ ಕ್ರೀಡಾಂಗಣವನ್ನು ತಲುಪಲಿದ್ದಾರೆ. ಅಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಪ್ರೇಕ್ಷಕಕರಿಗೆ ಬರಪೂರ ಮನರಂಜನೆ ಸಿಗಲಿದೆ.

ಪಂದ್ಯ ಹೀಗಿತ್ತು

ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 190 ರನ್ ಗಳಿಸಿತು. ವಿರಾಟ್ ಕೊಹ್ಲಿ ಹೊರತುಪಡಿಸಿ, ನಾಯಕ ರಜತ್ ಪಟಿದಾರ್ 26 ರನ್, ಲಿಯಾಮ್ ಲಿವಿಂಗ್‌ಸ್ಟೋನ್ 25 ರನ್ ಗಳಿಸಿದರು. ಜಿತೇಶ್ ಶರ್ಮಾ 24 ರನ್, ಮಯಾಂಕ್ ಅಗರ್ವಾಲ್ ಕೂಡ 24 ರನ್​ಗಳ ಕಾಣಿಕೆ ನೀಡಿದರು. ಪಂಜಾಬ್ ಕಿಂಗ್ಸ್ ಪರ, ಅರ್ಶ್‌ದೀಪ್ ಸಿಂಗ್ ನಾಲ್ಕು ಓವರ್‌ಗಳಲ್ಲಿ 40 ರನ್‌ಗಳಿಗೆ ಮೂರು ವಿಕೆಟ್ ಪಡೆದರೆ, ಕೈಲ್ ಜೇಮಿಸನ್ ನಾಲ್ಕು ಓವರ್‌ಗಳಲ್ಲಿ 48 ರನ್‌ಗಳಿಗೆ ಮೂರು ವಿಕೆಟ್ ಪಡೆದರು.

ಇದಕ್ಕೆ ಉತ್ತರವಾಗಿ, ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ ಕೇವಲ 184 ರನ್ ಗಳಿಸಿತು. ಪಂಜಾಬ್‌ ಪರ ಕೊನೆಯಲ್ಲಿ ಏಕಾಂಗಿ ಹೋರಅಟ ನಡೆಸಿದ ಶಶಾಂಕ್ ಸಿಂಗ್ 61* ರನ್‌ಗಳ ಬಿರುಗಾಳಿಯ ಇನ್ನಿಂಗ್ಸ್ ಆಡಿದರಾದರೂ ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಶಶಾಂಕ್ ಸಿಂಗ್ ಹೊರತುಪಡಿಸಿ, ಜೋಶ್ ಇಂಗ್ಲಿಸ್ 39 ರನ್, ಪ್ರಭ್ಸಿಮ್ರಾನ್ ಸಿಂಗ್ 26 ರನ್‌ಗಳ ಕೊಡುಗೆ ನೀಡಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:45 pm, Wed, 4 June 25

ಮದುವೆ ಸಮಾರಂಭದ ವೇಳೆ ಬ್ಯಾಂಕ್ವೆಟ್​ ಹಾಲ್​ನಲ್ಲಿ ಭಾರಿ ಅಗ್ನಿ ಅವಘಡ
ಮದುವೆ ಸಮಾರಂಭದ ವೇಳೆ ಬ್ಯಾಂಕ್ವೆಟ್​ ಹಾಲ್​ನಲ್ಲಿ ಭಾರಿ ಅಗ್ನಿ ಅವಘಡ
ಹಗಲಿನಲ್ಲಿ ನಿದ್ರೆ ಮಾಡಬಹುದಾ ಅಥವಾ ಮಾಡಬಾರದಾ?
ಹಗಲಿನಲ್ಲಿ ನಿದ್ರೆ ಮಾಡಬಹುದಾ ಅಥವಾ ಮಾಡಬಾರದಾ?
ಇಂದು ಈ ರಾಶಿಯವರಿಗೆ ಮುಖ್ಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಕಷ್ಟವಾಗುವುದು
ಇಂದು ಈ ರಾಶಿಯವರಿಗೆ ಮುಖ್ಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಕಷ್ಟವಾಗುವುದು
ಮುಂದುವರಿದ ಡಿನ್ನರ್ ಮೀಟಿಂಗ್: ಆರೋಗ್ಯ ಸರಿ ಇಲ್ಲದಿದ್ದರೂ ಸಿಎಂ ಭಾಗಿ
ಮುಂದುವರಿದ ಡಿನ್ನರ್ ಮೀಟಿಂಗ್: ಆರೋಗ್ಯ ಸರಿ ಇಲ್ಲದಿದ್ದರೂ ಸಿಎಂ ಭಾಗಿ
ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ