Bengaluru: ಕುಸಿಯುವ ಭೀತಿಯಲ್ಲಿ ಹಲಸೂರಿನ ಅಪಾರ್ಟ್​ಮೆಂಟ್; 27 ಕುಟುಂಬಗಳ ಸ್ಥಳಾಂತರಕ್ಕೆ ಬಿಬಿಎಂಪಿ ಸೂಚನೆ

| Updated By: ganapathi bhat

Updated on: Oct 19, 2021 | 3:58 PM

ತಕ್ಷಣವೇ ನಿವಾಸಿಗಳನ್ನ ಸ್ಥಳಾಂತರಿಸದಿದ್ರೆ ಮುಂದಿನ ಅನಾಹುತಕ್ಕೆ ನೀವೇ ಹೊಣೆ ಎಂದು ಬಿಬಿಎಂಪಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. 35 ವರ್ಷದ ಹಿಂದೆ ಕೆಹೆಚ್​ಬಿ ನಿರ್ಮಿಸಿದ್ದ ಅಪಾರ್ಟ್​ಮೆಂಟ್ ಇದಾಗಿದೆ. ಈಗ ಎರಡಂತಸ್ಥಿನ ಅಪಾರ್ಟ್​ಮೆಂಟ್​ ನಿರ್ವಹಣೆ ಇಲ್ಲದೇ ಶಿಥಿಲಗೊಂಡಿದೆ. 

Bengaluru: ಕುಸಿಯುವ ಭೀತಿಯಲ್ಲಿ ಹಲಸೂರಿನ ಅಪಾರ್ಟ್​ಮೆಂಟ್; 27 ಕುಟುಂಬಗಳ ಸ್ಥಳಾಂತರಕ್ಕೆ ಬಿಬಿಎಂಪಿ ಸೂಚನೆ
ಬಿಬಿಎಂಪಿ (ಪ್ರಾತಿನಿಧಿಕ ಚಿತ್ರ)
Follow us on

ಬೆಂಗಳೂರು: ನಗರದಲ್ಲಿ ಮತ್ತೊಂದು ಕಟ್ಟಡಕ್ಕೆ ಕಂಟಕ ಎದುರಾಗಿದೆ. ಬೆಂಗಳೂರಿನ ಹಲಸೂರಿನಲ್ಲಿ ಇರುವ ಕೆಹೆಚ್​ಬಿ ಅಪಾರ್ಟ್​ಮೆಂಟ್ ಕುಸಿಯುವ ಭೀತಿಯಲ್ಲಿದೆ. ಶಿಥಿಲಗೊಂಡ ಅಪಾರ್ಟ್​ಮೆಂಟ್ ತೆರವಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೋಟಿಸ್ ನೀಡಿದೆ. ಅಪಾರ್ಟ್​ಮೆಂಟ್​ನಲ್ಲಿ 27 ಕುಟುಂಬಗಳು ವಾಸವಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಹಲಸೂರಿನಲ್ಲಿರುವ ಕೆಹೆಚ್​ಬಿ ಅಪಾರ್ಟ್​ಮೆಂಟ್​​ ಕುಸಿಯುವ ಭೀತಿಯಲ್ಲಿ ಇರುವುದರಿಂದ 27 ಕುಟುಂಬಗಳನ್ನು ಸ್ಥಳಾಂತರಿಸುವಂತೆ ಕೆಹೆಚ್​ಬಿಗೆ ನೋಟಿಸ್​ ನೀಡಲಾಗಿದೆ. ಅಪಾರ್ಟ್​ಮೆಂಟ್ ನಿವಾಸಿಗಳ ಸ್ಥಳಾಂತರಕ್ಕೆ ಸೂಚನೆ ಕೊಡಲಾಗಿದೆ. ತಕ್ಷಣವೇ ನಿವಾಸಿಗಳನ್ನ ಸ್ಥಳಾಂತರಿಸದಿದ್ರೆ ಮುಂದಿನ ಅನಾಹುತಕ್ಕೆ ನೀವೇ ಹೊಣೆ ಎಂದು ಬಿಬಿಎಂಪಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. 35 ವರ್ಷದ ಹಿಂದೆ ಕೆಹೆಚ್​ಬಿ ನಿರ್ಮಿಸಿದ್ದ ಅಪಾರ್ಟ್​ಮೆಂಟ್ ಇದಾಗಿದೆ. ಈಗ ಎರಡಂತಸ್ಥಿನ ಅಪಾರ್ಟ್​ಮೆಂಟ್​ ನಿರ್ವಹಣೆ ಇಲ್ಲದೇ ಶಿಥಿಲಗೊಂಡಿದೆ.

ಬೆಂಗಳೂರಿನ ಯಾವ ಪ್ರದೇಶದಲ್ಲಿ ಎಷ್ಟು ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದೆ? ಇಲ್ಲಿದೆ ವಿವರ
ಬೆಂಗಳೂರು ನಗರದಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಮಾಹಿತಿಯನ್ನು ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಪಡೆದುಕೊಂಡಿದೆ. ವಲಯವಾರು ಕಟ್ಟಡಗಳ ಮಾಹಿತಿಯನ್ನು ಬಿಬಿಎಂಪಿ ಪಡೆದುಕೊಂಡಿದೆ. ಬಿಬಿಎಂಪಿ ಇತ್ತೀಚೆಗಷ್ಟೆ ವಲಯವಾರು ಸರ್ವೆ ಮಾಡಿತ್ತು. ಒಟ್ಟು 568 ಕಟ್ಟಡಗಳು ಅಪಾಯದಂಚಿನಲ್ಲಿರುವ ಮಾಹಿತಿ ಲಭಿಸಿತ್ತು.

ಬೆಂಗಳೂರು ದಕ್ಷಿಣ ವಲಯ 132
ಬೆಂಗಳೂರು ಪಶ್ಚಿಮ ವಲಯ 121
ಬೆಂಗಳೂರು ಪೂರ್ವ ವಲಯ 113
ಮಹದೇವಪುರ ವಲಯ 27
ಯಲಹಂಕ ವಲಯ 144
ಆರ್.ಆರ್. ನಗರ 11
ದಾಸರಹಳ್ಳಿ 11
ಬೊಮ್ಮನಹಳ್ಳಿ 9

ಹೀಗೆ ಒಟ್ಟು 568 ಕಟ್ಟಡಗಳು ಅಪಾಯದಂಚಿನಲ್ಲಿರುವ ಬಗ್ಗೆ ಬಿಬಿಎಂಪಿಗೆ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಬಿನ್ನಿಮಿಲ್​ನ ಪೊಲೀಸ್ ಕ್ವಾರ್ಟರ್ಸ್ ಕಟ್ಟಡ ನಿರ್ಮಾಣಗೊಂಡು ಮೂರೇ ವರ್ಷಕ್ಕೆ ಕುಸಿಯುವ ಹಂತಕ್ಕೆ ತಲುಪಲು ಕಾರಣ ಇಲ್ಲಿದೆ!

ಇದನ್ನೂ ಓದಿ: ಕಮಲಾನಗರದಲ್ಲಿ ಕಟ್ಟಡ ಕುಸಿತ ಪ್ರಕರಣ: 6 ಕುಟುಂಬಗಳಿಗೆ ತಲಾ 1 ಲಕ್ಷ ರೂ ವೈಯಕ್ತಿಕ ಪರಿಹಾರ ವಿತರಿಸಿದ ಡಿ.ವಿ. ಸದಾನಂದ ಗೌಡ