
ಬೆಂಗಳೂರು, ಸೆಪ್ಟೆಂಬರ್ 03: ಶಾರ್ಟ್ಸರ್ಕ್ಯೂಟ್ನಿಂದ ಮನೆಗೆ ಬೆಂಕಿ (fire) ಹೊತ್ತಿಕೊಂಡು ಮಗು ಸಾವನ್ನಪ್ಪಿರುವಂತಹ (death) ಘಟನೆ ನಗರದ ಸ್ಯಾಂಕಿ ರಸ್ತೆಯ ಸಮ್ಮಿಟ್ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ. ನೇಪಾಳ ಮೂಲದ ಪುಷ್ಕರ್ ಕುಮಾರ್, ಜ್ಯೋತಿಕುಮಾರಿ ದಂಪತಿಯ 18 ತಿಂಗಳ ಪುತ್ರಿ ಅನು ಮೃತ ಮಗು. ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಪುತ್ರಿ ಅನು ಸೇರಿದಂತೆ ಪುಷ್ಕರ್ ಕುಮಾರ್, ಜ್ಯೋತಿಕುಮಾರಿ ದಂಪತಿ ಕಳೆದ 8 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು. ಅಪಾರ್ಟ್ಮೆಂಟ್ನ 10X10 ಅಳತೆ ರೂಮ್ನಲ್ಲಿ ವಾಸವಿದ್ದರು. ಮಗುವನ್ನು ಮನೆಯಲ್ಲೇ ಬಿಟ್ಟು ಪೋಷಕರು ಕೆಲಸಕ್ಕೆ ಹೋಗಿದ್ದರು. ಈ ವೇಳೆ ಶಾರ್ಟ್ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡು ದುರಂತ ಸಂಭವಿಸಿದೆ.
ಹೈಡ್ರಾಲಿಕ್ ಎಲಿವೇಟರ್ಗೆ ಸಿಲುಕಿ ಯುವಕ ಸಾವನ್ನಪ್ಪಿರುವಂತಹ ಘಟನೆ ಚಿಕ್ಕಜಾಲ ಎಂವಿಐಟಿ ಕಾಲೇಜು ರಸ್ತೆಯಲ್ಲಿರುವ ಜಸ್ಟ್ ಬೇಕ್ನಲ್ಲಿ ನಡೆದಿದೆ. ಬಿಹಾರ ಮೂಲದ 20 ವರ್ಷದ ಭೂಪೇಂದ್ರ ಚೌಧರಿ ಮೃತ ಯುವಕ.
ಇದನ್ನೂ ಓದಿ: ವಿಜಯಪುರ: ಮಹಾದೇವ ಭೈರಗೊಂಡ ಪರಮಾಪ್ತ ರೌಡಿಶೀಟರ್ ಭೀಮನಗೌಡ ಗುಂಡಿನ ದಾಳಿಗೆ ಬಲಿ
ಭೂಪೇಂದ್ರ ಚೌಧರಿ 3 ತಿಂಗಳ ಹಿಂದೆಯಷ್ಟೇ ಜಸ್ಟ್ ಬೇಕ್ಗೆ ಕೆಲಸಕ್ಕೆ ಸೇರಿದ್ದ. ಬಿಸ್ಕತ್ ಸಾಗಿಸುವಾಗ ಎರಡನೇ ಫ್ಲೋರ್ನಲ್ಲಿ ತಲೆ ಹೊರಗೆ ಮಾಡಿದ್ದ, ಈ ವೇಳೆ ಹೈಡ್ರಾಲಿಕ್ ಎಲಿವೇಟರ್ಗೆ ಸಿಲುಕಿ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದ ಎಡೆಹಳ್ಳಿ ಗ್ರಾಮದಲ್ಲಿ ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ ಮಾಡಿರುವಂತಹ ಘಟನೆ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ರಂಜಿತಾ(28) ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಇದನ್ನೂ ಓದಿ: 1ನೇ ಕ್ಲಾಸ್ ವಿದ್ಯಾರ್ಥಿಗಳ ಗಲಾಟೆ ಸಾವಿನಲ್ಲಿ ಅಂತ್ಯ: ಮಕ್ಕಳು ತಂದಿಟ್ಟ ಜಗಳದಲ್ಲಿ ಹೋಯ್ತು ತಂದೆಯ ಜೀವ
ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಂಜಿತಾಗೆ ಈಗಾಗಲೇ ಒಂದು ಮದುವೆ ಆಗಿ ವಿಚ್ಛೇದನವಾಗಿತ್ತು. ಕಳೆದ ನಾಲ್ಕು ತಿಂಗಳ ಹಿಂದೆ ಎರಡನೇ ಮದುವೆ ಆಗಿದ್ದು, ಹಬ್ಬಕ್ಕೆ ತವರು ಮನೆಗೆ ಬಂದಿದ್ದಳು. ಈ ನಡುವೆ ಗಂಡ ಜೊತೆ ಜಗಳವಾಗಿದೆ. ಇದರಿಂದ ಬೇಸತ್ತು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.