Bengaluru Air Quality: ಮಾಲಿನ್ಯ ಮುಕ್ತ ಹಾದಿಯಲ್ಲಿ ಬೆಂಗಳೂರು; ವಾಯುಗುಣಮಟ್ಟದಲ್ಲಿ ಬಾಗಲಕೋಟೆ ಉತ್ತಮ, ಬೇಲೂರು ಕಳಪೆ!

ಕರ್ನಾಟಕದಲ್ಲಿ ಮುಂಗಾರು ಮಳೆಯ ಹಿನ್ನೆಲೆಯಲ್ಲಿ ವಾಯು ಮಾಲಿನ್ಯ ಗಣನೀಯವಾಗಿ ಇಳಿಕೆಯಾಗಿದೆ. ಇಂದು ರಾಜಧಾನಿ ಬೆಂಗಳೂರಿನ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (AQI) 67 ರಷ್ಟಿದ್ದು, ಮಧ್ಯಮ ಶ್ರೇಣಿಯಲ್ಲಿದೆ. ಬಾಗಲಕೋಟೆಯಲ್ಲಿ ಅತ್ಯುತ್ತಮ ಗಾಳಿಯ ಗುಣಮಟ್ಟ ದಾಖಲಾಗಿದ್ದರೆ, ಬೇಲೂರಿನಲ್ಲಿ ಕೊಂಚ ಏರುಪೇರಾಗಿದೆ. ನಿಮ್ಮ ಏರಿಯಾದ ಸಂಪೂರ್ಣ ಏರ್ ಕ್ವಾಲಿಟಿ ಇಂಡೆಕ್ಸ್ ವಿವರಗಳು ಇಲ್ಲಿವೆ.

Bengaluru Air Quality: ಮಾಲಿನ್ಯ ಮುಕ್ತ ಹಾದಿಯಲ್ಲಿ ಬೆಂಗಳೂರು; ವಾಯುಗುಣಮಟ್ಟದಲ್ಲಿ ಬಾಗಲಕೋಟೆ ಉತ್ತಮ, ಬೇಲೂರು ಕಳಪೆ!
ವಾಯು ಗುಣಮಟ್ಟ

Updated on: Jul 14, 2026 | 7:00 AM

ಮುಖ್ಯಾಂಶಗಳು

  • ಮುಂಗಾರು ಮಳೆಯಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವಾಯು ಮಾಲಿನ್ಯ ಗಣನೀಯವಾಗಿ ನಿಯಂತ್ರಣಕ್ಕೆ ಬಂದಿದೆ.
  • ಸಿಲಿಕಾನ್ ಸಿಟಿಯ ಸರಾಸರಿ AQI 67 ದಾಖಲಾಗಿದ್ದು, ಮಧ್ಯಮ ಶ್ರೇಣಿಯಲ್ಲಿದೆ.
  • ಬಾಗಲಕೋಟೆಯಲ್ಲಿ ಗಾಳಿಯ ಗುಣಮಟ್ಟ ಉತ್ತಮವಾಗಿದ್ದರೆ, ಬೇಲೂರಿನಲ್ಲಿ ಕೊಂಚ ಕಳಪೆ ಮಟ್ಟ ತಲುಪಿದೆ.

ಬೆಂಗಳೂರು, ಜುಲೈ 14: ಕಳೆದ ಹಲವು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ವಾಯು ಗುಣಮಟ್ಟ (AQI) ಉತ್ತಮವಾಗಿದೆ. ಇಂದೂ ಸಹ ಬೆಳಗಾವಿ, ಬಾಗಲಕೋಟೆ ಜೊತೆಗೆ ಇನ್ನೂ ಹಲವು ಜಿಲ್ಲೆಗಳಲ್ಲಿ ಏರ್ ಕ್ವಾಲಿಟಿ ಸುಧಾರಿಸಿದೆ. ರಾಜ್ಯದಲ್ಲಿ ಸುರಿದ ಮುಂಗಾರು ಮಳೆಯಿಂದಾಗಿ ಗರಿಷ್ಠ ಮಟ್ಟದಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಬಂದಿದ್ದು, ಮಳೆಗಾಲ ಮುಗಿಯುವವರೆಗೂ ವಾಯು ಗುಣಮಟ್ಟ ಉತ್ತಮವಾಗಿಯೇ ಇರಲಿದೆ ಎಂದು ಹೇಳಲಾಗಿದೆ.

ಬೆಂಗಳೂರಿನ ವಾಯು ಗುಣಮಟ್ಟದ ಸ್ಥಿತಿ

ರಾಜಧಾನಿ ಬೆಂಗಳೂರಿನಲ್ಲಿ ಇಂದಿನ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕವು 67ರಷ್ಟಿದ್ದು, ಇದು ಮಧ್ಯಮ ವಿಭಾಗಕ್ಕೆ ಸೇರುತ್ತದೆ. ನಗರದ ಪ್ರಮುಖ ಮಾಲಿನ್ಯಕಾರಕವಾಗಿ PM10 ಕಣಗಳು ಕಂಡುಬಂದಿವೆ. ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ವಾಯು ಗುಣಮಟ್ಟ ಈ ಕೆಳಗಿನಂತಿದೆ.

  • ಮಾರತ್ತಹಳ್ಳಿ ಮತ್ತು ಬಿಟಿಎಂ ಲೇಔಟ್: ಇಲ್ಲಿ AQI ಮಟ್ಟವು 67 ರಿಂದ 71 ರ ಆಸುಪಾಸಿನಲ್ಲಿದ್ದು, ಮಧ್ಯಮ ಗುಣಮಟ್ಟವನ್ನು ಹೊಂದಿದೆ.
  • ಸಿಲ್ಕ್ ಬೋರ್ಡ್ (ಎಚ್‌ಎಸ್‌ಆರ್ ಲೇಔಟ್): ವಾಹನ ಸಂಚಾರ ದಟ್ಟಣೆ ಹೆಚ್ಚಿರುವ ಈ ಪ್ರದೇಶದಲ್ಲಿ ಮಾಲಿನ್ಯದ ಮಟ್ಟ ಕೊಂಚ ಹೆಚ್ಚಾಗಿ ಕಂಡುಬಂದಿದೆ.
  • ನಿಮ್ಹಾನ್ಸ್ ಮತ್ತು ಜಯನಗರ: ಈ ಭಾಗಗಳಲ್ಲಿ ಹಸಿರು ವಲಯ ಹೆಚ್ಚಿರುವುದರಿಂದ ಗಾಳಿಯ ಗುಣಮಟ್ಟವು ತುಲನಾತ್ಮಕವಾಗಿ ಅತ್ಯುತ್ತಮವಾಗಿದೆ.

ಬೆಂಗಳೂರಿನ ಇಂದಿನ ಗಾಳಿಯು ಸಾಮಾನ್ಯ ಜನರಿಗೆ ಸುರಕ್ಷಿತವಾಗಿದ್ದರೂ, ಉಸಿರಾಟದ ತೊಂದರೆ ಇರುವವರು ಹಾಗೂ ಸೂಕ್ಷ್ಮ ಆರೋಗ್ಯ ಹೊಂದಿರುವವರು ದೀರ್ಘಕಾಲದ ಹೊರಾಂಗಣ ಚಟುವಟಿಕೆಗಳ ಸಮಯದಲ್ಲಿ ಸ್ವಲ್ಪ ಜಾಗರೂಕರಾಗಿರುವುದು ಒಳ್ಳೆಯದು.

ಕರ್ನಾಟಕದ ಇತರ ಪ್ರಮುಖ ನಗರಗಳ AQI ವಿವರ

ಬಾಗಲಕೋಟೆಯಲ್ಲಿ ಗಾಳಿಯ ಗುಣಮಟ್ಟ ಅತ್ಯಂತ ಸುಧಾರಿತವಾಗಿದ್ದು, ಉತ್ತಮ ಶ್ರೇಣಿಯಲ್ಲಿದೆ. ಬೆಳಗಾವಿ ಮತ್ತು ಬಳ್ಳಾರಿ ನಗರಗಳಲ್ಲಿ ಕೈಗಾರಿಕಾ ಚಟುವಟಿಕೆಗಳಿದ್ದರೂ, ಇಂದಿನ AQI ಮಧ್ಯಮ ಮಟ್ಟದಲ್ಲಿ ದಾಖಲಾಗಿದೆ. ಭದ್ರಾವತಿಯಲ್ಲಿ ಇಲ್ಲಿಯೂ ಗಾಳಿಯ ಗುಣಮಟ್ಟ ಮಧ್ಯಮ ಶ್ರೇಣಿಯಲ್ಲೇ ಮುಂದುವರಿದಿದೆ. ಹಾಸನ ಜಿಲ್ಲೆಯ ಬೇಲೂರಿನಲ್ಲಿ ಗಾಳಿಯ ಗುಣಮಟ್ಟ ಕೊಂಚ ಕುಸಿದಿದ್ದು,ಕಳಪೆ ಮಟ್ಟವನ್ನು ತಲುಪಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us