ಬೆಂಗಳೂರು ಪರಪ್ಪನ ಅಗ್ರಹಾರದಲ್ಲಿ ವಿಚಾರಣಾ ಕೈದಿ ಮೇಲೆ ಹಲ್ಲೆ ಆರೋಪ

ಬೆಂಗಳೂರು ಕೇಂದ್ರ ಕಾರಾಗೃಹ (ಪರಪ್ಪನ ಅಗ್ರಹಾರ) ಜೈಲಿನಲ್ಲಿ ಮತ್ತೊಂದು ಹಲ್ಲೆ ಪ್ರಕರಣ ಬೆಳಕಿಗೆ ಬಂದಿದೆ. ಪರಪ್ಪನ ಅಗ್ರಹಾರ ಜೈಲು ಸಿಬ್ಬಂದಿ ಮತ್ತು ಸಜಾ ಕೈದಿಗಳು ವಿಚಾರಣಾಧೀನ ಕೈದಿ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.

ಬೆಂಗಳೂರು ಪರಪ್ಪನ ಅಗ್ರಹಾರದಲ್ಲಿ ವಿಚಾರಣಾ ಕೈದಿ ಮೇಲೆ ಹಲ್ಲೆ ಆರೋಪ
ವಿಚಾರಣಾ ಕೈದಿ ಮೇಲೆ ಹಲ್ಲೆ
Follow us
ರಾಚಪ್ಪಾಜಿ ನಾಯ್ಕ್
| Updated By: ವಿವೇಕ ಬಿರಾದಾರ

Updated on:Jun 11, 2024 | 8:35 AM

ಬೆಂಗಳೂರು, ಜೂನ್​ 11: ಬೆಂಗಳೂರು ಕೇಂದ್ರ ಕಾರಾಗೃಹ (ಪರಪ್ಪನ ಅಗ್ರಹಾರ) (Bengaluru Central Jail) ಜೈಲಿನಲ್ಲಿ ಮತ್ತೊಂದು ಹಲ್ಲೆ ಪ್ರಕರಣ ಬೆಳಕಿಗೆ ಬಂದಿದೆ. ಪರಪ್ಪನ ಅಗ್ರಹಾರ ಜೈಲು ಸಿಬ್ಬಂದಿ ಮತ್ತು ಸಜಾ ಕೈದಿಗಳು (Prisoner) ವಿಚಾರಣಾಧೀನ ಕೈದಿ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ವಿಚಾರಣಾಧೀನ ಕೈದಿ ನಾಗರಾಜ್ ಹಲ್ಲೆಗೊಳಗಾದವರು. ಹಲ್ಲೆಗೊಳಗಾದ ನಾಗರಾಜ್ ಕೊಲೆ ಪ್ರಕರಣದ ಆರೋಪಿಯಾಗಿದ್ದು, ಮಂಡ್ಯದಿಂದ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್​​​ ಆಗಿದ್ದಾರೆ.

ಹೇಳಿದ ಕೆಲಸ ಮಾಡದಿದ್ದರೆ ಸಜಾ ಕೈದಿಗಳು ವಿಚಾರಣಾ ಕೈದಿಗಳು ಮೇಲೆ ಇಲ್ಲ-ಸಲ್ಲದ ಸುಳ್ಳು ಆರೋಪಗಳನ್ನು ಮಾಡುತ್ತಾರೆ. ಜೈಲು ಸಿಬ್ಬಂದಿಗೆ ಸುಳ್ಳು ಹೇಳಿ, ವಿಚಾರಣಾ ಕೈದಿಗೆ ಹಲ್ಲೆ ಮಾಡುವಂತೆ ಹಲ್ಲೆ ಮಾಡುತ್ತಾರೆ. ಸಜಾ ಕೈದಿಗಳ ಮಾತನ್ನು ನ.ಬಿ 15 ಜನ ಜೈಲು ಸಿಬ್ಬಂದಿ ನಾಗರಾಜ್​ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಅಲ್ಲದೆ ಹಲ್ಲೆ ಬಳಿಕ ಕೊಡಿಸದೆ ದರ್ಪ ಮೆರೆದಿದ್ದಾರೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರಕ್ಕೆ ಮೊಬೈಲ್ ಜಾಮರ್ ಅಳವಡಿಕೆ, ಸ್ಥಳೀಯರಿಗೆ ಸಂಕಷ್ಟ

ಜೈಲಿನಲ್ಲಿನ ಸೀನಿಯರ್​ ಕೈದಿಗಳ ವಿರುದ್ಧವೂ ದೌರ್ಜನ್ಯ, ಹಲ್ಲೆ ಆರೋಪವಿದೆ. ಕೈದಿ‌ ನಟರಾಜ್ ಎಂಬುವನು ನಾಗರಾಜ ಮೇಲ್ಲೆ ಹಲ್ಲೆ ಮಾಡಿರುವ ಹಲ್ಲೆ ಮಾಡಿದ್ದಾನೆ ಎಂಬ ಆರೋಪ ಹೊರಿಸಲಾಗಿದೆ. ಈ ಹಲ್ಲೆಗಳ ಕುರಿತು ನಾಗರಾಜ್​ ವಿಡಿಯೋ ಹೇಳಕೆ ನೀಡಿ, ತಾಯಿಗೆ ವಾಟ್ಸಪ್​ ಮೂಲಕ ಕಳುಹಿಸಿದ್ದಾರೆ.

ಜೈಲಿನಲ್ಲಿ ಮಗ ನಾಗರಾಜ್​ ಪರಿಸ್ಥಿತಿ ಕಂಡು ತಾಯಿ ಕಣ್ಣೀರು ಹಾಕಿದ್ದಾರೆ.ನ್ಯಾಯಕ್ಕಾಗಿ ವಿಡಿಯೋ ಸಮೇತ ಮಾನವಹಕ್ಕು ಆಯೋಗಕ್ಕೆ ನಾಗರಾಜ್​ ತಾಯಿ ದೂರು ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:34 am, Tue, 11 June 24