ಇಂದಿನಿಂದ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆ ಆರಂಭ: ಸಂಜೆ ಸಿಎಂ ಬೊಮ್ಮಾಯಿ ಚಾಲನೆ

Basavanagudi Kadalekai Parishe: ಬಸವನಗುಡಿಯಲ್ಲಿ ಇಂದಿನಿಂದ 3 ದಿನ ಐತಿಹಾಸಿಕ ಕಡಲೆಕಾಯಿ ಪರಿಷೆ ನಡೆಯಲಿದ್ದು ಇಂದು ಸಂಜೆ 6.30 ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಪರಿಷೆಗೆ ಚಾಲನೆ ನೀಡಲಿದ್ದಾರೆ.

ಇಂದಿನಿಂದ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆ ಆರಂಭ: ಸಂಜೆ ಸಿಎಂ ಬೊಮ್ಮಾಯಿ ಚಾಲನೆ
ಬಸವನಗುಡಿ ಕಡಲೆಕಾಯಿ ಪರಿಷೆ
Edited By: ಆಯೇಷಾ ಬಾನು

Updated on: Nov 20, 2022 | 10:49 AM

ಬೆಂಗಳೂರು: ತಾಜಾ ತಾಜಾ.. ಗರಮಾ ಗರಂ ಕಳ್ಳೇಕಾಯ್ ಸವಿಯುವ ಸಮಯ ಬಂದಾಗಿದೆ. ನಗರದ ಬಸವನಗುಡಿಯಲ್ಲಿ ಇಂದಿನಿಂದ 3 ದಿನ ಐತಿಹಾಸಿಕ ಕಡಲೆಕಾಯಿ ಪರಿಷೆ ನಡೆಯಲಿದ್ದು(Basavanagudi Kadlekai Parishe) ಇಂದು ಸಂಜೆ 6.30 ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಪರಿಷೆಗೆ ಚಾಲನೆ ನೀಡಲಿದ್ದಾರೆ. ಇಂದು ಬೆಳ್ಳಗ್ಗೆ ದೊಡ್ಡ ಗಣೇಶ ಹಾಗೂ ದೊಡ್ಡ ಬಸವಣ್ಣನ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತೆ. ಬಳಿಕ ಬೆಳ್ಳಗ್ಗೆ 7:30 ಕ್ಕೆ ದೊಡ್ಡಗಣೇಶನಿಗೆ 508 ಕೆಜೆ ಕಡಲೆಕಾಯಿಂದ ಅಭಿಶೇಷ ಮಾಡಿ ನಂತರ ಬರುವಂತಹ ಭಕ್ತದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತೆ.

ಈಗಾಗಲೇ ದೇವಸ್ಥಾನದ ಸುತ್ತಲೂ ಜಾತ್ರೆಯ ವಾತಾವರಣ ಮನೆಮಾಡಿದೆ. ಕಡಲೆಕಾಯಿ ಪರಿಷೆಯಲ್ಲಿ ಲಕ್ಷಾಂತರ ಜನ ಭಾಗಿಯಾಗುವ ನಿರೀಕ್ಷೆ ಇದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಯಾವುದೇ ಹಾನಿಯಾಗದಂತೆ ಪೋಲಿಸರ ನಿಯೋಜನೆ ಮಾಡಲಾಗಿದೆ. 400 ಜನ ಪೋಲಿಸರು, 4 ಕೆಎಸ್​ಆರ್​ಪಿ ತುಕಡಿ ಹಾಗೂ 25 ರಿಂದ 30 ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗಿದೆ.

ಇದನ್ನೂ ಓದಿ: Basavanagudi Kadalekai Parishe 2022: ಬಸವನಗುಡಿ ಕಡಲೆಕಾಯಿ ಪರಿಷೆಗಿದೆ ಸಾವಿರಾರು ವರ್ಷಗಳ ಇತಿಹಾಸ

ಈ ಬಾರಿ ಒಟ್ಟು 500ಕ್ಕೂ ಹೆಚ್ಚು ಕಡಲೆಕಾಯಿ ಅಂಗಡಿಗಳನ್ನ ರೈತರು ಹಾಕಿದ್ದಾರೆ. ಕೋಲಾರ, ರಾಮನಗರ, ಚಿತ್ರದುರ್ಗ, ಆಂಧ್ರ, ತಮಿಳುನಾಡು ಸೇರಿದಂತೆ ಹಲವೆಡೆಯಿಂದ ರೈತರು ಬಂದು ಅಂಗಡಿಗಳನ್ನು ಹಾಕಿದ್ದಾರೆ. ಈ ಬಾರಿ ಪ್ಲಾಸ್ಟಿಕ್ ಮುಕ್ತ ಪರೀಷೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರತಿ ಅಂಗಡಿಗೂ ಪಾಲಿಕೆಯಿಂದ ಪರಿಸರ ಸ್ನೇಹಿ ಬ್ಯಾಗ್ ವಿತರಣೆ ಮಾಡಲಾಗಿದ್ದು ಸಾರ್ವಜನಿಕರೇ ಬ್ಯಾಗ್ ತರುವಂತೆ ಮನವಿ ಮಾಡಲಾಗಿದೆ. ಹುರಿದಿರುವ ಕಡಲೆಕಾಯಿ ಸೇರಿಗೆ 30ರೂ, ಲೀಟರ್ ಗೆ 60ರೂ ನಿಗದಿ ಮಾಡಿದ್ದು ಹಸಿ ಕಡ್ಲೆಕಾಯಿ ಸೇರಿಗೆ 30 ರೂ, ಲೀಟರ್ ಗೆ 50 ರೂ ನಿಗದಿಯಾಗಿದೆ.

ಇನ್ನು ಮೂರು ದಿನಗಳ ಕಾಲ ನಡೆಯಲಿರುವ ಕಡಲೆಕಾಯಿ ಪರಿಷೆಗೆ ಇಂದು ಭಾನುವಾರ ಆಗಿರುವ ಕಾರಣ ಹೆಚ್ಚು ಸಂಖ್ಯೆಯಲ್ಲಿ ಜನರು ಬರುವ ಸಾಧ್ಯಾತೆ ಇದೆ. ಹೀಗಾಗಿ ಬಸವನಗುಡಿ ಅಕ್ಕಪಕ್ಕದ ರಸ್ತೆಗಳು ಕ್ಲೋಸ್ ಆಗಲಿವೆ.

ಕೆಂಪಾಂಬುಧಿ ಕೆರೆಯಲ್ಲಿ ತೆಪ್ಪೋತ್ಸವ

ಪರೀಷೆ ಅಂಗವಾಗಿ ಕೆಂಪಾಂಬುಧಿ ಕೆರೆಯಲ್ಲಿ ತೆಪ್ಪೋತ್ಸವಕ್ಕೆ ಸಿದ್ಧತೆ ನಡೆದಿದೆ. ಸೋಮವಾರ ರಾತ್ರಿ 7.30 ರಿಂದ 1 ಗಂಟೆಯವರೆಗೂ ತೆಪ್ಪೋತ್ಸವಕ್ಕೆ ಅವಕಾಶ ನೀಡಲಾಗಿದೆ.

ಕಡಲೆಕಾಯಿ ಪರಿಷೆ ಹಿನ್ನೆಲೆ Dodda Ganapati ದೇಗುಲದಲ್ಲಿ ಕಡಲೆಕಾಯಿ ಅಭಿಷೇಕ | Tv9 Kannada

Published On - 7:17 am, Sun, 20 November 22

Follow Us